ಕೊನೆಗೂ ತಾಯಿಯ ಮಡಿಲು ಸೇರಿದ ಕಳುವಾಗಿದ್ದ ಕಂದಮ್ಮ!

ಹಾಸನ ಜಿಲ್ಲೆಯ ಅರಕಲಗೂಡು ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ಮಾರ್ಚ್ 14 ರಂದು ಆಗ ತಾನೆ ಜನಿಸಿದ್ದ ಮಗು ಕಳ್ಳತನವಾಗಿತ್ತು. 

Written by - Zee Kannada News Desk | Last Updated : Mar 23, 2022, 06:04 PM IST
  • ನವಜಾತ ಶಿಶು ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು
  • ಜನಿಸಿದ ಐದು ಗಂಟೆಯಲ್ಲಿಯೇ ಕಳ್ಳತನವಾಗಿದ್ದ ಮಗು
  • ಮಗುವನ್ನ ತಾಯಿ ಮಡಿಲು ಸೇರಿಸುವಲ್ಲಿ ಯಶಸ್ವಿಯಾದ ಪೊಲೀಸರು
ಕೊನೆಗೂ ತಾಯಿಯ ಮಡಿಲು ಸೇರಿದ ಕಳುವಾಗಿದ್ದ ಕಂದಮ್ಮ! title=
ಮಗು

ಹಾಸನ: ಜಿಲ್ಲೆಯ ಅರಕಲಗೂಡು ಸಾರ್ವಜನಿಕ ಆಸ್ಪತ್ರೆಯಲ್ಲಿ ನವಜಾತ ಶಿಶು (New Born Baby) ಕಳ್ಳತನ ಪ್ರಕರಣವನ್ನ ಪೊಲೀಸರು ಭೇದಿಸಿದ್ದಾರೆ. ಜನಿಸಿದ ಐದು ಗಂಟೆಯಲ್ಲಿಯೇ ಕಳ್ಳತನವಾಗಿದ್ದ ಮಗುವನ್ನ ತಾಯಿ ಮಡಿಲು ಸೇರಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 

ಇದನ್ನೂ ಓದಿ: ನಮ್ ಮನೆ ದೇವ್ರು ಹೆಸ್ರು ಇಟ್ಕಂಡಿದೀರಿ, ಹಿಂಗಾಡ್ತಿರಲ್ಲ; ಸದನದಲ್ಲಿ ರಾಮ ಜಪ..!

ಜಿಲ್ಲೆಯ ಅರಕಲಗೂಡು ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ಮಾರ್ಚ್ 14 ರಂದು ಆಗ ತಾನೆ ಜನಿಸಿದ್ದ ಮಗು ಕಳ್ಳತನವಾಗಿತ್ತು. ಅಸ್ಸಾಂ (Assam) ಮೂಲದ ಕೂಲಿ ಕಾರ್ಮಿಕ ದಂಪತಿಯ ಗಂಡು ಮಗುವನ್ನ ಹುಟ್ಟಿದ ದಿನದ ರಾತ್ರಿಯೇ ಕಳ್ಳತನ (Theft Case) ಮಾಡಲಾಗಿತ್ತು. ಅಸ್ಸಾಂ ಮೂಲದ ಸೂರಜ್ ಅಲಿ ಮತ್ತು ಯಾಸ್ಮಿನ್ ದಂಪತಿ ಮಗುವನ್ನ ನರ್ಸ್ ಸೋಗಿನಲ್ಲಿ ಬಂದ ಐವರ ತಂಡ, ಮಗು ಕದಿಯೋದ್ರಲ್ಲಿ ಯಶಸ್ವಿಯಾಗಿದ್ರು. ಆರೋಪಿಗಳ ಚಲನವಲನವೆಲ್ಲವೂ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. 

ಮಗುವಿನ ತಂದೆಯನ್ನು ಔಷಧಿ (Medicine) ತರೊದಕ್ಕೆ ಕಳಿಸಿ, ಮಗುವಿಗೆ ಡ್ರಾಪ್ಸ್ ಹಾಕಿಸೋ ನೆಪದಲ್ಲಿ ಮಗು ಎಸ್ಕೇಪ್ ಮಾಡಿದ್ರು.‌ ಇದೀಗ ಅರಕಲಗೂಡು ಪೊಲೀಸರು ಪ್ರಕರಣ ಭೇದಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಶೈಲಜಾ, ಸುಷ್ಮಾ, ಯಶ್ವಂತ್, ಅರ್ಪಿತಾ, ಸುಮಾ ಐವರನ್ನ ಬಂಧಿಸಿದ್ದಾರೆ. ಮಗು ವಾಪಸ್ಸು ಮರಳಿ ತಾಯಿ ಮಡಿಲು ಸೇರಿದ್ದಕ್ಕೆ, ಕುಟುಂಬಸ್ಥರು ಸಂತೋಷ ವ್ಯಕ್ತಪಡಿಸಿದ್ದಾರೆ. 

ಅರಕಲಗೂಡು ತಾಲೂಕಿನ ಗ್ರಾಮವೊಂದರ ಸುಶ್ಮಿತಾ ಎಂಬಾಕೆಯನ್ನು ಮೈಸೂರಿನ ಯುವಕನೊಬ್ಬನಿಗೆ ಕೊಟ್ಟ ವಿವಾಹ ಮಾಡಲಾಗಿತ್ತು.  ಆದರೆ ಆಗಿ ಹಲವು ವರ್ಷ ಕಳೆದರೂ ಸುಶ್ಮಿತಾಳಿಗೆ ಮಗು ಆಗಿರಲಿಲ್ಲ, ಇದೇ ವಿಚಾರಕ್ಕೆ ಸುಶ್ಮಿತಾ ಗಂಡನಿಗೆ ಮತ್ತೊಂದು ಮದುವೆ (Marriage) ಮಾಡಲು ಗಂಡನ ಮನೆಯವರು ತಯಾರು ಮಾಡಿದ್ರಂತೆ. ಇದ್ರಿಂದ ಆತಂಕಗೊಂಡು ತಮ್ಮ ಮನೆ ಮಗಳ ಬಾಳು ಹಾಳಾಗೊತ್ತೆ ಅಂತಾ ಸುಶ್ಮಿತ ತಾಯಿ ಶೈಲಜಾ ಹಾಗೂ ಮಗ ಯಶ್ವಂತ್, ಇನ್ನೋರ್ವ ಪುತ್ರಿ ಅರ್ಪಿತಾ ಹಾಗೂ ಸುಮಾ ಮಗುವೊಂದನ್ನ ಕದ್ದು ತಮ್ಮ ಮಗಳ ಮಡಿಲಿಗೆ ಸೇರಿಸುವ ಪ್ಲ್ಯಾನ್ ಮಾಡಿದ್ದರು. 

ಇದನ್ನೂ ಓದಿ: Ugadi 2022: ರಾಜ್ಯಾದ್ಯಂತ ಪ್ರತಿ ಯುಗಾದಿಯನ್ನ ಧಾರ್ಮಿಕ ದಿನವನ್ನಾಗಿ ಆಚರಣೆ: ಸಚಿವೆ ಶಶಿಕಲಾ ಜೊಲ್ಲೆ

ಆಗ ಇವರ ಕಣ್ಣಿಗೆ ಬೀಳೋದೆ ಈ ಅಸ್ಸಾಂ ದಂಪತಿ ಮಗು, ಅಸ್ಸಾಂ ಮೂಲದ ದಂಪತಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದ ಕಾರಣ ಈ ಮಗುವನ್ನ ನಾವು ಕದ್ದರೆ ನಮ್ಮ ಅಕ್ಕನ ಬಾಳು ಸರಿಯಾಗಲಿದೆ ಎಂಬ ಕಾರಣಕ್ಕೆ ಸುಶ್ಮಿತಾ ಮನೆಯವರು ಈ ಕೃತ್ಯ ಎಸಗುತ್ತಾರೆ. ಮೊಬೈಲ್ ಲೊಕೇಶನ್ ಹಾಗೂ ಸಿಸಿಟಿವಿ (CCTV Footage) ಆಧಾರದ ಮೇಲೆ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ. ಮಗು ಅಪಹರಣ ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ವರಿಗೂ ಜಾಮೀನು ಮಂಜೂರಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News