ಬೆಂಗಳೂರು : ಇಂದು ಬೆಳಗಿನ ಜಾವ ನಗರದಲ್ಲಿ ನಡೆದ ಆಫ್ಟರ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಮಾರತ್ತಹಳ್ಳಿಯ ಔಟರ್ ರಿಂಗ್ ರಸ್ತೆಯಲ್ಲಿರೋ ಐಷಾರಾಮಿ ಹೋಟೆಲ್ ನಲ್ಲಿ ಬೆಳಗಿನಜಾವ 3.30 ತನಕ ನಡೆಯುತ್ತಿದ್ದ ಪಾರ್ಟಿ ಮೇಲೆ ದಾಳಿ ನಡೆಸಿದ್ದಾರೆ. ಈ ಪಾರ್ಟಿಯನ್ನು ಸೌತ್ ಆಫ್ರಿಕಾ ಮೂಲದ ವ್ಯಕ್ತಿಯೊಬ್ಬ ಆರ್ಗನೈಸ್ ಮಾಡಿದ್ದ ಎಂದು ತಿಳಿದು ಬಂದಿದೆ.
ಪಾರ್ಟಿಯ ಮತ್ತಿನಲ್ಲಿ ಕುಣಿದು ಕುಪ್ಪಳಿಸುತ್ತಿದ್ದ 64 ಯುವಕರು ಮತ್ತು 24 ಯುವತಿಯರನ್ನು ದಾಳಿ ವೇಳೆ ಪತ್ತೆಯಾಗಿದ್ದಾರೆ. ಪಾರ್ಟಿಯುವು ಅವಧಿಗೂ ಮೀರಿ ನಡೆಯುತ್ತಿತ್ತು. ಪಾರ್ಟಿಯಲ್ಲಿ ಪತ್ತೆಯಾದವರು ಉತ್ತರ ಭಾರತ ಮೂಲದ ಯುವತಿಯರೇ ಹೆಚ್ಚು ಎಂದು ಹೇಳಲಾಗುತ್ತಿದೆ. ಆರ್ಗನೈಸರ್ ಈ ಪಾರ್ಟಿಗೆ ಯುವಕರಿಗೆ 400 ರೂ. ಮತ್ತೆ ಯುವತಿಯರಿಗೆ 300 ರೂಪಾಯಿ ಎಂಟ್ರಿ ಫೀಸ್ ಇಟ್ಟಿದ್ದ.
ಇದನ್ನೂ ಓದಿ : ನಿಮಗೆ ತೋಟಗಾರಿಕೆಯಲ್ಲಿ ಆಸಕ್ತಿ ಇದೆಯೇ? ಹಾಗಿದ್ದಲ್ಲಿ ನಿಮಗಿಲ್ಲೊಂದು ಸುವರ್ಣಾವಕಾಶ..!
ಪಾರ್ಟಿಯಲ್ಲಿ ಡ್ರಗ್ಸ್ ಇರುವ ಅನುಮಾನವಿತ್ತು. ಆದರೆ, ಹೋಟೆಲ್ ನಲ್ಲಿ ಡ್ರಗ್ಸ್ ದೊರೆತಿಲ್ಲ ಬದಲಾಗಿ ಪಾರ್ಟಿಯಲ್ಲಿದ್ದವರು ನಶೆಯಲ್ಲಿರೋ ಮಾಹಿತಿ ಸಿಕ್ಕಿದೆ. ಸಧ್ಯ ಸಿಸಿಬಿ ಪೊಲೀಸರು ಪಾರ್ಟಿಯಲ್ಲಿದ್ದವರನ್ನ ಮೆಡಿಕಲ್ ಚೆಕಪ್ ಮಾಡಿಸಲು ಮುಂದಾಗಿದ್ದಾರೆ.
ಈ ಘಟನೆ ಹೆಚ್ ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನಡೆದಿದ್ದು, ಸದ್ಯ ಸಿಸಿಬಿ ಪೊಲೀಸರು ಹೋಟೆಲ್‌ನಲ್ಲಿ ಪರಿಶೀಲನೆ ಮುಂದುವರೆಸಿದ್ದಾರೆ.
ಇದನ್ನೂ ಓದಿ : Video : ಬಸ್ - ಬೈಕ್ ನಡುವೆ ಅಪಘಾತ : ಬೆಂಕಿಗಾಹುತಿಯಾದ ಬಸ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.