ಬೆಂಗಳೂರು ಉಪನಗರ ರೈಲ್ವೆ ಕಾಮಗಾರಿ: "ನಾಲ್ಕೂ ಕಾರಿಡಾರ್ ಗಳ ಕೆಲಸಗಳು 2028ಕ್ಕೆ ಪೂರ್ಣ"

ಬೆಂಗಳೂರು ಉಪನಗರ ರೈಲ್ವೆ ಯೋಜನೆಯ ಚಿಕ್ಕಬಾಣಾವಾರ- ಬೆನ್ನಿಗಾನಹಳ್ಳಿ ನಡುವಿನ ಕಾಮಗಾರಿಯನ್ನು ಸಚಿವ ಎಂ.ಬಿ.ಪಾಟೀಲ್ ಅವರು ವೀಕ್ಷಿಸಿದರು. ಸರ್ವಜ್ಞನಗರ ಶಾಸಕರು ಹಾಗೂ ಇಂಧನ ಸಚಿವರಾದ ಶ್ರೀ  ಕೆ.ಜೆ ಜಾರ್ಜ್,ಶಾಸಕ‌ರಾದ ಮುನಿರತ್ನ, ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶ್ರೀ ಗೌರವ್ ಗುಪ್ತ ಸೇರಿದಂತೆ ಇತರ ಅಧಿಕಾರಿಗಳು ಜೊತೆಗಿದ್ದರು.

Written by - Manjunath N | Last Updated : Aug 12, 2023, 01:03 AM IST
  • ಬೆಂಗಳೂರು ಉಪನಗರ ರೈಲ್ವೆ ಯೋಜನೆಯ ಚಿಕ್ಕಬಾಣಾವಾರ- ಬೆನ್ನಿಗಾನಹಳ್ಳಿ ನಡುವಿನ ಕಾಮಗಾರಿಯನ್ನು ಸಚಿವ ಎಂ.ಬಿ.ಪಾಟೀಲ್ ಅವರು ವೀಕ್ಷಿಸಿದರು.
  • ಸರ್ವಜ್ಞನಗರ ಶಾಸಕರು ಹಾಗೂ ಇಂಧನ ಸಚಿವರಾದ ಶ್ರೀ ಕೆ.ಜೆ ಜಾರ್ಜ್,ಶಾಸಕ‌ರಾದ ಮುನಿರತ್ನ,
  • ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶ್ರೀ ಗೌರವ್ ಗುಪ್ತ ಸೇರಿದಂತೆ ಇತರ ಅಧಿಕಾರಿಗಳು ಜೊತೆಗಿದ್ದರು.
ಬೆಂಗಳೂರು ಉಪನಗರ ರೈಲ್ವೆ ಕಾಮಗಾರಿ: "ನಾಲ್ಕೂ ಕಾರಿಡಾರ್ ಗಳ ಕೆಲಸಗಳು 2028ಕ್ಕೆ ಪೂರ್ಣ" title=

ಬೆಂಗಳೂರು: ಬೆಂಗಳೂರು ಉಪನಗರ ರೈಲ್ವೆ ಯೋಜನೆಯ ಚಿಕ್ಕಬಾಣಾವಾರ- ಬೆನ್ನಿಗಾನಹಳ್ಳಿ ನಡುವಿನ ಕಾಮಗಾರಿಯನ್ನು ಸಚಿವ ಎಂ.ಬಿ.ಪಾಟೀಲ್ ಅವರು ವೀಕ್ಷಿಸಿದರು. ಸರ್ವಜ್ಞನಗರ ಶಾಸಕರು ಹಾಗೂ ಇಂಧನ ಸಚಿವರಾದ ಶ್ರೀ  ಕೆ.ಜೆ ಜಾರ್ಜ್,ಶಾಸಕ‌ರಾದ ಮುನಿರತ್ನ, ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶ್ರೀ ಗೌರವ್ ಗುಪ್ತ ಸೇರಿದಂತೆ ಇತರ ಅಧಿಕಾರಿಗಳು ಜೊತೆಗಿದ್ದರು.

ಸರ್ವಜ್ಞನಗರ ವಿದಾನಸಭಾ ಕ್ಷೇತ್ರ ವ್ಯಾಪ್ತಿಯ ಲಿಂಗರಾಜಪುರದಲ್ಲಿ ರೈಲ್ವೆ ತಡೆಗೋಡೆ, ಸೋಂಪುರದಲ್ಲಿ ರೈಲ್ವೆ ಮೇಲ್ಸೇತುವೆ ಕಾಮಗಾರಿಗಳನ್ನು  ಪರಿಶೀಲಿಸುವುದರ ಜೊತೆಗೆ ಹೆಬ್ಬಾಳದಲ್ಲಿ ಉದ್ದೇಶಿತ ರೈಲ್ವೆ ನಿಲ್ದಾಣದ ಕಾಮಗಾರಿ ವೀಕ್ಷಣೆ ಮಾಡಿದರು. ಅಷ್ಟೇ ಅಲ್ಲದೆ ಯಶವಂತಪುರದಲ್ಲಿ ಪರಿವೀಕ್ಷಣೆ ನಂತರ ಕಾಂಕ್ರೀಟ್ ಮಿಕ್ಸಿಂಗ್ ಪ್ಲಾಂಟ್ ಗೆ ಚಾಲನೆ, ಗುಣಮಟ್ಟ ಪರಿಶೀಲಿಸುವ ಪ್ರಯೋಗಾಲಯವನ್ನು ಸಚಿವರು ವಿಕ್ಷಿಸಿದರು

.

ಇದೆ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು “ಚಿಕ್ಕ ಬಾಣಾವರ ಮತ್ತು ಬೆನ್ನಿಗಾನಹಳ್ಳಿ ನಡುವಿನ ಕಾರಿಡಾರ್-2 ಕಾಮಗಾರಿಗಳನ್ನು 26 ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು. ಒಟ್ಟಾರೆ ನಾಲ್ಕೂ ಕಾರಿಡಾರ್ ಗಳ ಕೆಲಸಗಳು 2026ಕ್ಕೆ ಮುಗಿಸುವ ಉದ್ದೇಶವಿದೆ. ತಡ ಅಂದರೂ 2028ರೊಳಗೆ ಪೂರ್ಣಗೊಳಿಸಲಾಗುವುದು. ಈ ಗಡುವು ಇಟ್ಟುಕೊಂಡು ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.” ಇಂಧನ ಸಚಿವರಾದ ಶ್ರೀ ಕೆಜೆ ಜಾರ್ಜ್  ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶ್ರೀ ಗೌರವ್ ಗುಪ್ತ ಸೇರಿದಂತೆ ಇತರ ಅಧಿಕಾರಿಗಳು ಜೊತೆಗಿದ್ದರು

Trending News