ಸಿದ್ದರಾಮಯ್ಯಗೆ ಟಿಪ್ಪು ಐಕಾನ್ ಆದ್ರೆ, ಡಿಕೆಶಿಗೆ ಕುಕ್ಕರ್ ಬ್ಲಾಸ್ಟ್ ಆರೋಪಿ ಶಾರಿಖ್ ಐಕಾನ್: ಬಿಜೆಪಿ ಆರೋಪ

ಕಾಂಗ್ರೆಸ್‍ನಲ್ಲಿ ಕೇವಲ ಡಿಕೆಶಿ ಮಾತ್ರ ಉಗ್ರರ ಬೆಂಬಲಿಗ ಎಂದುಕೊಂಡರೆ ಅದು ತಪ್ಪಾಗುತ್ತದೆ. ಉಗ್ರ ಬೆಂಬಲಿಗ ಡಿಕೆಶಿ ಬೆಂಬಲಕ್ಕೆ ಮರಿ ಖರ್ಗೆಯೂ ನಿಂತಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಇಡೀ ಕಾಂಗ್ರೆಸ್ಸೇ ಒಟ್ಟಾಗಿ ಉಗ್ರರ ಪರ ಮೆಣದಬತ್ತಿಯ ಮೆರವಣಿಗೆ ಮಾಡಿದರೂ ಅಚ್ಚರಿಯೇನಿಲ್ಲ!

Written by - Puttaraj K Alur | Last Updated : Dec 17, 2022, 12:25 PM IST
  • ಸಮುದಾಯಗಳ ಓಲೈಕೆಯಲ್ಲಿ ಕಾಂಗ್ರೆಸ್ ಉಗ್ರಗಾಮಿಗಳನ್ನೂ ಮಾವನ ಮಗನಂತೆ ನೋಡುವ ಮಟ್ಟಕ್ಕೆ ಇಳಿದಿದೆ
  • ರಾಹುಲ್ ಗಾಂಧಿಯನ್ನು ಖುಷಿಪಡಿಸಲು ಡಿಕೆಶಿ ಈಗ ಉಗ್ರಗಾಮಿಗೇ ಕ್ಲೀನ್‌ಚಿಟ್‌ ಕೊಡುತ್ತಿದ್ದಾರೆ
  • ಸಿದ್ದರಾಮಯ್ಯನವರ ತುಷ್ಟೀಕರಣದ ರಾಜಕಾರಣದಿಂದ ಪಿಎಫ್‌ಐನಂಥ ಉಗ್ರಗಾಮಿ ಸಂಘಟನೆ ಬೆಳೆದು ನಿಂತಿತ್ತು
ಸಿದ್ದರಾಮಯ್ಯಗೆ ಟಿಪ್ಪು ಐಕಾನ್ ಆದ್ರೆ, ಡಿಕೆಶಿಗೆ ಕುಕ್ಕರ್ ಬ್ಲಾಸ್ಟ್ ಆರೋಪಿ ಶಾರಿಖ್ ಐಕಾನ್: ಬಿಜೆಪಿ ಆರೋಪ title=
ಡಿಕೆಶಿ ವಿರುದ್ಧ ಬಿಜೆಪಿ ಆಕ್ರೋಶ

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಹೇಗೆ ಟಿಪ್ಪು ಎಂಬ ಒಬ್ಬ ಐಕಾನ್‌ ಇದ್ದನೋ, ಹಾಗೆಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹ ತಮಗೆ ಬೇಕಾದ ಒಬ್ಬ ಐಕಾನ್‌ನನ್ನು ಹುಡುಕಿಕೊಂಡಿದ್ದಾರೆ. ಅವನೇ ಕುಕ್ಕರ್‌ ಬ್ಲಾಸ್ಟ್‌ ಆರೋಪಿ ಅಥವಾ ಡಿಕೆಶಿ ಬ್ರದರ್‌ ಶಾರಿಖ್! ಅಂತಾ ಬಿಜೆಪಿ ಟೀಕಿಸಿದೆ.

#AntiNationalCongress ಹ್ಯಾಶ್‍ಟ್ಯಾಗ್ ಬಳಸಿ ಶನಿವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಸಮುದಾಯಗಳ ಓಲೈಕೆಯಲ್ಲಿ ಕಾಂಗ್ರೆಸ್ ಯಾವ ಮಟ್ಟಕ್ಕೆ ಇಳಿದಿದೆಯೆಂದರೆ, ಉಗ್ರಗಾಮಿಗಳನ್ನೂ ಮಾವನ ಮಗನಂತೆ ನೋಡುತ್ತದೆ. ಕಾರಣ ಇಷ್ಟೇ ಉಗ್ರಗಾಮಿ ಮಸೂದ್‌ ಅಝರ್‌ನನ್ನು "ಜೀ" ಎಂದು ಗೌರವಿಸಿದ ರಾಹುಲ್ ಗಾಂಧಿಯನ್ನು ಖುಷಿಪಡಿಸಲು ಈಗ ಡಿಕೆಶಿ ಉಗ್ರಗಾಮಿಗೇ ಕ್ಲೀನ್‌ಚಿಟ್‌ ಕೊಡುತ್ತಿದ್ದಾರೆ’ ಅಂತಾ ಕುಟುಕಿದೆ.

ಇದನ್ನೂ ಓದಿ: ಜಮೀರ್ ಕ್ಷೇತ್ರತ್ಯಾಗ; ಚಾಮರಾಜ ಪೇಟೆ ವಿಧಾನಸಭಾ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧೆ?

‘ದಿನಬೆಳಗಾದರೆ ಎಣ್ಣೆ ಸೀಗೇಕಾಯಿಯಂತೆ ಒಬ್ಬರ ಮೇಲೊಬ್ಬರು ಸಿಡಿದು ಬೀಳುತ್ತಿರುವ ಡಿಕೆಶಿ ಮತ್ತು ಸಿದ್ದರಾಮಯ್ಯ ಈಗ ಮತ್ತೆ ಒಂದಾಗಿರುವುದು ಒಂದೇ ಒಂದು ಉದ್ದೇಶಕ್ಕೆ. ಅದು ಶಾರಿಕ್‌ ಒಬ್ಬ ಅಮಾಯಕ ಎಂದು ತೋರಿಸಿ, ಅವರ ಮನೆಯ 4 ವೋಟುಗಳನ್ನು ತೆಗೆದುಕೊಳ್ಳುವುದು! ಸಿದ್ದರಾಮಯ್ಯನವರ ತುಷ್ಟೀಕರಣದ ರಾಜಕಾರಣದಿಂದ ಪಿಎಫ್‌ಐನಂಥ ಉಗ್ರಗಾಮಿ ಸಂಘಟನೆ ಬೆಳೆದು ನಿಂತಿತ್ತು.  ಈಗ ಡಿಕೆಶಿ ಶಾರಿಕ್‌ನಂಥವನನ್ನು ಬೆಂಬಲಿಸಿ ಪಿಎಫ್‌ಐ ಭಾಗ 2ನ್ನು ಬೆಳೆಸುವ ಆಲೋಚನೆಯೇನಾದ್ರೂ ಇದ್ದರೆ ಬಿಡುವುದು ಒಳ್ಳೆಯದು. ಏಕೆಂದರೆ ಸಿಎಂ ಬೊಮ್ಮಾಯಿಯವರ ಸರ್ಕಾರ ಅದನ್ನೂ ಬ್ಯಾನ್‌ ಮಾಡುತ್ತೆ’ ಅಂತಾ ಬಿಜೆಪಿ ಟ್ವೀಟ್ ಮಾಡಿದೆ.

‘ಕಾಂಗ್ರೆಸ್‍ನಲ್ಲಿ ಕೇವಲ ಡಿಕೆಶಿ ಮಾತ್ರ ಉಗ್ರರ ಬೆಂಬಲಿಗ ಎಂದುಕೊಂಡರೆ ಅದು ತಪ್ಪಾಗುತ್ತದೆ. ಉಗ್ರ ಬೆಂಬಲಿಗ ಡಿಕೆಶಿ ಬೆಂಬಲಕ್ಕೆ ಮರಿ ಖರ್ಗೆಯೂ ನಿಂತಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಇಡೀ ಕಾಂಗ್ರೆಸ್ಸೇ ಒಟ್ಟಾಗಿ ಉಗ್ರರ ಪರ ಮೆಣದಬತ್ತಿಯ ಮೆರವಣಿಗೆ ಮಾಡಿದರೂ ಅಚ್ಚರಿಯೇನಿಲ್ಲ! ಕಾಂಗ್ರೆಸ್‌ ಇದುವರೆಗೂ ಒಮ್ಮೆಯಾದರೂ ದೇಶದ ಪರವಾಗಿ ನಿಂತಿದೆಯಾ ಎಂದು ನೋಡಿದರೆ ಒಮ್ಮೆಯೂ ಇಲ್ಲ! ಸರ್ಜಿಕಲ್‌ ಸ್ಟ್ರೈಕ್‌ಗೆ ಸಾಕ್ಷಿ ಕೇಳಿದ್ರು, ಯೋಧರ ಸಾಮರ್ಥ್ಯ ಪ್ರಶ್ನಿಸಿದ್ರು, ಚೀನಾ ಜೊತೆ ವ್ಯವಹಾರ ಮಾಡಿದ್ರು, ವಿದೇಶದಲ್ಲಿ ಭಾರತವನ್ನು ತೆಗಳಿದ್ರು ಹೀಗೆ ಇಂಥವರಾ ದೇಶದ ಚುಕ್ಕಾಣಿ ಹಿಡಿಯ ಹೊರಟವರು?’ ಅಂತಾ ಬಿಜೆಪಿ ಪ್ರಶ್ನಿಸಿದೆ.

ಇದನ್ನೂ ಓದಿ: ಮತ್ತೆ ಮುಷ್ಕರಕ್ಕೆ ಸಜ್ಜಾದ ಸಾರಿಗೆ ನೌಕರರು; ಸ್ತಬ್ಧವಾಗುತ್ತಾ ಸಾರಿಗೆ ಸಂಚಾರ..?

‘ದೇಶದ ಭದ್ರತೆಯ ವಿಚಾರದಲ್ಲೂ ಗಟ್ಟಿಯಾಗಿ ನಾವು ದೇಶದ ಪರ, ಉಗ್ರನನ್ನು ಬೆಂಬಲಿಸುವ ದರ್ದು ನಮಗೆ ಬಂದಿಲ್ಲವೆಂದು ಹೇಳಲೂ ಆಗದ ಜನತಾ ದಳ ಕಾಂಗ್ರೆಸ್‌ನ ಬಿ ತಂಡವಲ್ಲದೇ ಇನ್ನೇನು? ಮತದಾರರು ನಿರ್ಧರಿಸಿದ್ದಾರೆ, ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವ ಬಿಜೆಪಿ ಸರ್ಕಾರವನ್ನು ಮತ್ತೊಮ್ಮೆ ಬೆಂಬಲಿಸಲು. ಹಾಗೇ, ಉಗ್ರರನ್ನು ಬೆಂಬಲಿಸುವ ಕಾಂಗ್ರೆಸ್‌’ಗೆ ಮುಂದಿನ ಚುನಾವಣೆಯಲ್ಲಿ ತಕ್ಕ ಶಾಸ್ತಿ ಮಾಡಲಿದ್ದಾರೆ‌’ ಅಂತಾ ಬಿಜೆಪಿ ಟೀಕಾಪ್ರಹಾರ ನಡೆಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News