ಸದ್ಯದಲ್ಲೇ ಬಸ್ ಪ್ರಯಾಣಿಕರ ಜೇಬಿಗೆ ಕತ್ತರಿ..!

ದುಬಾರಿ ದುನಿಯಾದಲ್ಲಿ ಜೀವನ ಮಾಡೋಕೆ ಕಷ್ಟ ಆಗ್ಬಿಟ್ಟಿದೆ.ಪೆಟ್ರೋಲ್- ಡೀಸೆಲ್, ಅಡುಗೆ ಎಣ್ಣೆ ಕರೆಂಟ್ ಹೀಗೆ ಬೆಲೆ ಏರಿಕೆ ಜನಸಾಮಾನ್ಯರನ್ನ ಹಿಂಡಿ ಹಿಪ್ಪೆ ಮಾಡ್ತಿದೆ.

Written by - Manjunath Hosahalli | Edited by - Manjunath N | Last Updated : Jul 7, 2022, 07:06 PM IST
  • ನಿಜ ಸದ್ಯ ಡೀಸೆಲ್ ದರ ಏರಿಕೆಯಿಂದ ನಿಗಮಕ್ಕೆ ಪ್ರತಿನಿತ್ಯ ಲಕ್ಷಾಂತರ ರೂ ಹೆಚ್ಚುವರಿ ಹೊರೆಯಾಗ್ತಿದೆ.
  • ಬಲ್ಕ್ ಡೀಸೆಲ್ ದರವೂ ದುಪ್ಪಟ್ಟಾಗಿದೆ.
ಸದ್ಯದಲ್ಲೇ ಬಸ್ ಪ್ರಯಾಣಿಕರ ಜೇಬಿಗೆ ಕತ್ತರಿ..! title=

ಬೆಂಗಳೂರು: ದುಬಾರಿ ದುನಿಯಾದಲ್ಲಿ ಜೀವನ ಮಾಡೋಕೆ ಕಷ್ಟ ಆಗ್ಬಿಟ್ಟಿದೆ.ಪೆಟ್ರೋಲ್- ಡೀಸೆಲ್, ಅಡುಗೆ ಎಣ್ಣೆ ಕರೆಂಟ್ ಹೀಗೆ ಬೆಲೆ ಏರಿಕೆ ಜನಸಾಮಾನ್ಯರನ್ನ ಹಿಂಡಿ ಹಿಪ್ಪೆ ಮಾಡ್ತಿದೆ. ಇದ್ರ ನಡುವೆ ಇದೀಗ ಕೆಎಸ್ಆರ್ಟಿಸಿ ಬಸ್ ದರ ಪರಿಷ್ಕರಣೆಗೆ ಮತ್ತೆ ಕಸರತ್ತು ಆರಂಭಿಸಿದೆ.ನಷ್ಟದಲ್ಲಿರೋ ನಿಗಮವನ್ನು ಮೇಲೆತ್ತಲು ಪ್ರಯಾಣ ಏರಿಕೆ ಅಗತ್ಯ ಎಂದಿರುವ ನಿಗಮ, ದುಬಾರಿ ಪ್ರಸ್ತಾವನೆಗೆ ಒಂದೆರಡು ದಿನಗಳಲ್ಲಿ ಸಿಎಂ ಅಸ್ತು ಅಂದ್ರೆ ಬಸ್ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳೋದು ಪಕ್ಕಾ ಆಗಿದೆ.

ಹೌದು..ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರೋ ಹೊತ್ತಿನಲ್ಲಿ ಬಸ್ ದರ ಏರಿಕೆಗೆ ಕಸರತ್ತು ಆರಂಭವಾಗಿದೆ.ಈಗಾಗಲೇ ನಿರಂತರ ಬೆಲೆ ಏರಿಕೆಯಿಂದ ಜನಸಾಮಾನ್ಯರು ಅಂತೂ ರೋಸಿಹೋಗಿದ್ದಾರೆ. ಬ್ಯಾಗಲ್ಲಿ ದುಡ್ಡು ತೆಗೆದುಕೊಂಡು ಹೋಗಿ ಜೇಬಲ್ಲಿ ವಸ್ತು ತರೋ ಸ್ಥಿತಿ ಬಂದು ಬಿಟ್ಟಿದೆ. ಅದ್ರಲ್ಲೂ ಸಗಟು ಡೀಸೆಲ್ ಹಾಗೂ ಪೆಟ್ರೋಲ್ ದರ ದಿನದಿನವೂ ಏರುತ್ತಲೇ ಸಾಗ್ತಿದೆ.ಇದ್ರ ಮಧ್ಯೆ ಕೆಎಸ್ಆರ್ಟಿಸಿ ದರ ಏರಿಕೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.ಕಳೆದ ಬಾರಿ ಶೇ 20 ರಷ್ಟು ದರ ಏರಿಕೆಗೆ ಪ್ರಸ್ತಾವನೆ ಕಳಿಸಿದ್ದ ನಿಗಮ ಇದೀಗ ಬರೊಬ್ಬರಿ  ಶೇಕಡಾ 38 ರಷ್ಟು ದರ ಏರಿಕೆಗೆ ಬೇಡಿಕೆ ಇಟ್ಟಿದೆ.

ಇದನ್ನೂ ಓದಿ : Railway Recruitment 2022 : SSLC ಪಾಸಾದವರಿಗೆ ಸಿಹಿ ಸುದ್ದಿ : ರೈಲ್ವೆಯಲ್ಲಿ 1600 ಕ್ಕೂ ಹೆಚ್ಚು ಖಾಲಿ ಹುದ್ದೆಗಳಿಗೆ ಅರ್ಜಿ!

ಒಂದೆರಡು ದಿನಗಳಲ್ಲಿ ಬಸ್ ಟಿಕೆಟ್ ಏರಿಕೆ ಸಂಭವ;

ನಿಜ ಸದ್ಯ ಡೀಸೆಲ್ ದರ ಏರಿಕೆಯಿಂದ ನಿಗಮಕ್ಕೆ ಪ್ರತಿನಿತ್ಯ ಲಕ್ಷಾಂತರ ರೂ ಹೆಚ್ಚುವರಿ ಹೊರೆಯಾಗ್ತಿದೆ. ಬಲ್ಕ್ ಡೀಸೆಲ್ ದರವೂ ದುಪ್ಪಟ್ಟಾಗಿದೆ. ಹೀಗಾಗಿ ನಿಗಮ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಕಳೆದ ಮೂರು ನಾಲ್ಕು ವರ್ಷದಿಂದ ಟಿಕೆಟ್ ದರ ಏರಿಕೆಯೂ ಆಗಿಲ್ಲ. ಬಸ್ ಬಿಡಿಭಾಗಗಳು ಬಹಳಷ್ಟು ದುಬಾರಿಯಾಗಿದೆ.ಜೊತೆಗೆ ಬಸ್ ಪ್ರಯಾಣಿಕರ ಸಂಖ್ಯೆ ಕುಸಿದಿದೆ. ಇದರಿಂದ ಟಿಕೆಟ್ ರೆವೆನ್ಯೂ ಕಲೆಕ್ಷನ್ ಸಹ ಪಾತಾಳಕ್ಕೆ ಇಳಿದಿದೆ. ಹೀಗಾಗಿ ದರ ಏರಿಕೆ ಮಾಡದಿದ್ರೆ ನಾವು ಬಸ್ ರಸ್ತೆಗಿಳಿಸೋದು ಕಷ್ಟ.ಸದ್ಯದ ಆರ್ಥಿಕ ಸಂಕಷ್ಟದಿಂದ ಹೊರಬರಲು ಕನಿಷ್ಠ 38ಶೇಕಡಾ ದರ ಏರಿಕೆ ಮಾಡಬೇಕೆಂದು ಕೆಎಸ್ ಆರ್ ಟಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಸಿಎಂ ಕಡೆಯಿಂದ ಅಸ್ತು ಭಾಗ್ಯ ಬಾಕಿ;

ಇನ್ನು  ಶೇಕಡಾ 38ರಷ್ಟು ದರ ಏರಿಕೆ ಪ್ರಸ್ತಾವನೆಗೆ ಸಿಎಂ ಹೌ ಹಾರಿದ್ದಾರೆ.ಈಗಾಗಲೇ ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಹೈರಾಣಾಗಿದ್ದಾರೆ. ಸರ್ಕಾರದ ಮೇಲೆ ಜನಾಕ್ರೋಶ ಹೆಚ್ಚಾಗಿದೆ. ಇಂಥಾ ಪರಿಸ್ಥಿತಿಯಲ್ಲಿ 38 ಶೇಕಡಾ ದಷ್ಟು ಬಸ್ ಟಿಕೆಟ್ ದರ ಏರಿಸಿದ್ರೆ ಜನ ಸುಮ್ನೆ ಬಿಡ್ತಾರಾ ಇದು ಆಗದ ಮಾತು ಎಂದು ನಿಗಮಕ್ಕೆ ಸಿಎಂ ಸ್ಪಷ್ಟವಾಗಿ ಹೇಳಿದ್ದಾರೆ. ಆದ್ರೆ ಸದ್ಯದ ನಿಗಮದ ಆರ್ಥಿಕ ಸ್ಥಿತಿಗತಿಗನುಗುಣವಾಗಿ ಕನಿಷ್ಠ ದರವಾದ್ರೂ ದರ ಏರಿಕೆ ಮಾಡ್ಲೇ ಬೇಕು ಎಂದು ನಿಗಮ ಸರ್ಕಾರದ ಮುಂದೆ ಮಂಡಿಯೂರಿದೆ. ಸಿಎಂ ಕೂಡ ದರ ಏರಿಕೆಗೆ ಸಕಾರಾತ್ಮಕ ಸ್ವಂದಿಸಿದ್ದು ಒಂದೆರಡು ದಿನಗಳಲ್ಲಿ  ಕ್ರಮದ ಭರವಸೆ ನೀಡಿದ್ದಾರೆ ಅಂತ ಕೆಎಸ್ಆರ್ಟಿಸಿ ಅಧ್ಯಕ್ಷ ಚಂದ್ರಪ್ಪ ತಿಳಿಸಿದ್ದಾರೆ‌.

ಇದನ್ನೂ ಓದಿ : IB Recruitment 2022 : ಗುಪ್ತಚರ ಇಲಾಖೆಯಲ್ಲಿ 766 ಹುದ್ದೆಗಳಿಗೆ ಅರ್ಜಿ : ಹೆಚ್ಚಿನ ಮಾಹಿತಿಗೆ ಇಲ್ಲಿ ನೋಡಿ!

ಒಟ್ಟಿನಲ್ಲಿ ಒಂದು ವೇಳೆ ಸರ್ಕಾರ ಕೆಎಸ್ಆರ್ಟಿಸಿ ಪ್ರಸ್ತಾವನೆ ಗ್ರೀನ್ ಸಿಗ್ನಲ್ ನೀಡಿದ್ರೆ ಪ್ರತಿ ಸ್ಟೇಜ್ ಆಧಾರದ ಮೇಲೆ 3 ರಿಂದ 4 ರೂ ಹೆಚ್ಚು ಸಾಧ್ಯತೆ ಇದೆ. ಕಳೆದ ಎರಡು ಬಾರಿ ದರ ಏರಿಕೆ ಪ್ರಸ್ತಾವನೆಯನ್ನೂ ಸಿಎಂ ತಿರಸ್ಕರಿಸಿದ್ರು. ಈಗ ಮತ್ತೆ ಶೇಕಡಾ 38ರಷ್ಟು ದರ ಏರಿಕೆ ಪ್ರಸ್ತಾವನೆ ಸರ್ಕಾರ ಮುಂದೆ ಇದೆ. ಆದ್ರೆ ನಿಗಮ ಮಾತ್ರ ದರ ಏರಿಕೆ ಆಗದೇ ಬಸ್ ರಸ್ತೆಗಿಳಿಸೋದು ಕಷ್ಟ ಅಂತಿದೆ. ಇದ್ರಮಧ್ಯೆ ಜನಸಾಮಾನ್ಯರು ಬಸ್ ದರವೂ ಏರಿದ್ರೆ ನಮ್ಮ ಗತಿ ಏನು ಅಂತ ಚಿಂತೆಗೀಡಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

 

Trending News