ಚೈನಾ ದೇಶದೊಂದಿಗೆ ಸಕಾರಾತ್ಮಕ ಸ್ಪರ್ಧೆ ಅನುಷ್ಠಾನಕ್ಕೆ ಸಚಿವ ಸಂಪುಟ ಒಪ್ಪಿಗೆ

ರಾಜ್ಯದ ಕಲಬುರಗಿ, ಚಿತ್ರದುರ್ಗ, ಹಾಸನ, ಕೊಪ್ಪಳ, ಮೈಸೂರು, ಒಳ್ಳಾರಿ, ಚಿಕ್ಕಬಳ್ಳಾಪುರ, ಬೀದರ್ ಮತ್ತು ತುಮಕೂರು ಜಿಲ್ಲೆಗಳಲ್ಲಿ ನಾನಾ ಉದ್ಯಮಗಳ ಸ್ಥಾಪನೆಗೆ ಅನುಕೂಲವಾಗುವಂತೆ 9 ಕ್ಲಸ್ಟರ್ ಮಾದರಿಗಳನ್ನು ರಚಿಸಲು ಒಪ್ಪಿಗೆ ನೀಡಲಾಯಿತು.  

Last Updated : Sep 7, 2018, 08:55 AM IST
ಚೈನಾ ದೇಶದೊಂದಿಗೆ  ಸಕಾರಾತ್ಮಕ ಸ್ಪರ್ಧೆ ಅನುಷ್ಠಾನಕ್ಕೆ ಸಚಿವ ಸಂಪುಟ ಒಪ್ಪಿಗೆ  title=

ಬೆಂಗಳೂರು: "ಚೈನಾ ದೇಶದೊಂದಿಗೆ ಸಕಾರಾತ್ಮಕ ಸ್ಪರ್ಧೆ" ಎಂಬ ಕಾರ್ಯಕ್ರಮವನ್ನು ಅನುಷ್ಠಾನಗಗೊಳಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. 

ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಗುರುವಾರ ನಡೆದ  ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಆಯಾಯ ಪ್ರದೇಶದ ಸಂಪನ್ಮೂಲ ಮತ್ತು ವೃತ್ತಿಕೌಶಲ್ಯಗಳನ್ನು ಆಧರಿಸಿ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲಾಗುವುದು. ರಾಜ್ಯದ ಕಲಬುರಗಿ, ಚಿತ್ರದುರ್ಗ, ಹಾಸನ, ಕೊಪ್ಪಳ, ಮೈಸೂರು, ಒಳ್ಳಾರಿ, ಚಿಕ್ಕಬಳ್ಳಾಪುರ, ಬೀದರ್ ಮತ್ತು ತುಮಕೂರು ಜಿಲ್ಲೆಗಳಲ್ಲಿ ನಾನಾ ಉದ್ಯಮಗಳ ಸ್ಥಾಪನೆಗೆ ಅನುಕೂಲವಾಗುವಂತೆ 9 ಕ್ಲಸ್ಟರ್ ಮಾದರಿಗಳನ್ನು ರಚಿಸಲು ಒಪ್ಪಿಗೆ ನೀಡಲಾಯಿತು. ಇದಕ್ಕೆ ಪೂರಕವಾಗಿ ವಿಷನ್ ಗ್ರೂಪ್ ನ್ನು ರಚಿಸಲಾಗುವುದು. ಇದಕ್ಕಾಗಿ 5000 ಕೋಟಿ ವೆಚ್ಚವಾಗುತ್ತದೆ. ಮುಂದಿನ ನಾಲ್ಕು ವರ್ಷದಲ್ಲಿ ಶೇರು ಬಂಡವಾಳದ ರೂಪದಲ್ಲಿ ಸರ್ಕಾರ 2 ಸಾವಿರ ಕೋಟಿ ನೀಡುತ್ತದೆ ಹಾಗೂ ಖಾಸಗಿ ಸಂಸ್ಥೆಗಳನ್ನು 3 ಸಾವಿರ ಕೋಟಿ ಬಂಡವಾಳ ಹೂಡಬೇಕಾಗುತ್ತದೆ ಎಂದು ಹೇಳಲಾಗಿದೆ. 

ಸಚಿವ ಸಂಪುಟ ಸಭೆಯ ಇತರ ನಿರ್ಣಯಗಳು:

  • ಹಲವು ವರ್ಷಗಳ ಬೇಡಿಕೆಯಂತೆ ಹಲವು ಸರ್ಕಾರಿ ಕಛೇರಿಗಳನ್ನು ಉತ್ತರ ಕರ್ನಾಟಕಕ್ಕೆ ಸ್ಥಳಾಂತರ ಇಂದಿನ ಸಚಿವ ಸಂಪುಟದ ಸಭೆಯಲ್ಲಿ ತತ್ವಿಕವಾಗಿ ಒಪ್ಪಿಗೆ ನೀಡಿದೆ. ಯಾವ ಜಿಲ್ಲೆಗಳಲ್ಲಿ ಯಾವ ಇಲಾಖೆಗಳನ್ನು ಸ್ಥಳಾಂತರಿಸಬೇಕು ಎಂಬುದರ ಬಗ್ಗೆ ಅಂತಿಮವಾಗಿ ತೀರ್ಮಾನಗಳ ಕೈಗೊಳ್ಳಲು ಸಚಿವ ಸಂಪುಟದ ಉಪ ಸಮಿತಿಯನ್ನು ರಚಿಸಲಾಗುವುದು ಎಂದು  ಸಚಿವ  ಕೃಷ್ಣಬೈರೇಗೌಡ ಹೇಳಿದ್ದಾರೆ.
  • ಐಇಎಸ್‍ಎ (ಇಂಡಿಯಾ ಎಲೆಕ್ಟ್ರಾನಿಕ್ ಮತ್ತು ಸೆಮಿಕಂಡ್ಟಕರ್ ಅಸೋಷಿಯೇಷನ್ ಸಂಸ್ಥೆಯ ಸಹಯೋಗದೊಂದಿಗೆ ಬೆಂಗಳೂರಿನಲ್ಲಿ ಸೆಮಿಕಂಡ್ಟಕರ್ ಫಾಭ್ಯಲೆಸ್ ಆಕ್ಸಲರೇಟರ್ ಲ್ಯಾಬ್ (ಎಸ್‍ಎಫ್‍ಎಎಲ್) ಸ್ಥಾಪನೆ. ಇದು ದೇಶದಲ್ಲೇ ಪ್ರಥಮವಾಗಿದ್ದು ಒಟ್ಟು 56.31 ಕೋಟಿ ರೂ ವೆಚ್ಚದಲ್ಲಿ ಸ್ಥಾಪನೆಯಾಗುತ್ತದೆ. ಇದರಲ್ಲಿ 21.53 ಕೋಟಿ ರೂ. ಕರ್ನಾಟಕ ಸರ್ಕಾರದ ಪಾಲು. 
  • ಬೆಟ್ತಿ ನದಿಗೆ ನಿರ್ಮಾಣ ಮಾಡಲಾಗುತ್ತಿರುವ ಸೇತುವೆಗೆ 14 ಕೋಟಿ ರೂ. ಗಳ ವೆಚ್ಚಕ್ಕೆ ಅನುಮೋದನೆ ನೀಡಲಾಗಿತ್ತು. ಇದನ್ನು 23.06 ಕೋಟಿಗೆ ಒಪ್ಪಿಗೆ ನೀಡಲಾಗಿದೆ.
  • ರಾಮನಗರ ಪಟ್ಟಣದಲ್ಲಿ ವಿವಿಧ ಇಲಾಖೆಗಳ ಕಚೇರಿ ಸಂಕೀರ್ಣಕ್ಕಾಗಿ 30 ಕೋಟಿ ರೂ.ಗಳ ವೆಚ್ಚದ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿತ್ತು. ಅದನ್ನು ಪರಿಷ್ಕøರಿಸಿ 40.17 ಕೋಟಿ ವೆಚ್ಚದ ಕಾಮಗಾರಿಗಳಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
  • ರಾಮನಗರ ಮತ್ತು ಚನ್ನಪಟ್ಟಣ ನಡುವೆ ಬರುವ 16 ಗ್ರಾಮಗಳಿಗೆ ನೆಟ್‍ಕಲ್ ಜಲಾಶಯದಿಂದ ಕುಡಿಯುವ ನೀರು ಸರಬರಾಜು ಮಾಡಲು 450 ಕೋಟಿ ರೂ ವೆಚ್ಚದ ಯೋಜನೆಗೆ ಅನುಮೋದನೆ ನೀಡಲಾಗಿದೆ.
  • ಹಲವು ಖಾಸಗಿ ಸಂಸ್ಥೆಗಳಿಗೆ ಸೋಲಾರ್ ಪ್ಲಾಂಟ್ ನಿರ್ಮಾಣ ಮಾಡಲು ನೇರವಾಗಿ ರೈತರಿಂದ ಜಮೀನು ಖರೀದಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಅದರಲ್ಲಿ ವಾಸವದತ್ತ ಸಿಮೆಂಟ್ ಕಂಪನಿಗೆ ಸೇಡಂ ನಲ್ಲಿ 665 ಎಕರೆ, ಆದಾನಿ ಗ್ರೂಪ್ ನ ಮೆ. ಮಾರ್ಧಾ ಸೋಲಾರ್ ಪ್ರೈ. ಲಿ ಇವರಿಗೆ ಕೊಪ್ಪಳ ಜಿಲ್ಲೆಯ ಯಲಬುರ್ಗಿ ತಾಲ್ಲೂಕಿನಲ್ಲಿ 44 ಎಕರೆ, ವಿಜಯಪುರದಲ್ಲಿ 255 ಎಕರೆ, ಔರಾದ ತಾಲ್ಲೂಕಿನಲ್ಲಿ 282 ಎಕರೆ.
  • ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಟಗರಾಪುರ ಮತ್ತು ಇತರೆ 19 ಗ್ರಾಮಗಳಿಗೆ ಹಾಗೂ ಯಳ್ಳಂದೂರು ತಾಲ್ಲೂಕಿನ 44 ಗ್ರಾಮಗಳಿಗೆ "ಬಹುಗ್ರಾಮ ಯೋಜನೆ" ಯಡಿ ಕುಡಿಯುವ ನೀರು ಸರಬರಾಜು ಯೋಜನೆಯನ್ನು ಡಿಬಿಓಟಿ ಆಧಾರದನ್ವಯ ಯೋಜನೆಯನ್ನು ಅನುಷ್ಠಾನಗೊಳಿಸಲು ಅನುಮೋದನೆಯನ್ನು ನೀಡಿದೆ. ಈ ಯೋಜನೆಗೆ 113.06 ಕೋಟಿ ವೆಚ್ಚ ಆಗಲಿದೆ.
  • ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ಯಲಗಟ್ಟ ಮತ್ತು ಇತರೆ 10 ಗ್ರಾಮಗಳಿಗೆ "ಬಹುಗ್ರಾಮ ಯೋಜನೆ" ಯಡಿ ಶಾಶ್ವತ ಕುಡಿಯುವ ನೀರು ಸರಬರಾಜು ಯೋಜನೆಯನ್ನು ಅನುಷ್ಟಾನಗೊಳಿಸಲು 1623.30 ಲಕ್ಷ ವೆಚ್ಚದ ಕಾಮಗಾರಿಗೆ ಅನುಮೋದನೆ ನೀಡಿದೆ.
  • ಮೊಬೈಲ್ ಆಪ್ ಮೂಲಕ ಬೆಳ ಸಮೀಕ್ಷೆ ಮಾಡಲು ಯೋಜನೆಯೊಂದನ್ನು ರೂಪಿಸಲಾಗಿದೆ. ಸರ್ಕಾರಿ ಮತ್ತು ಖಾಸಗಿ ರೈತರು ಒಳಗೊಂಡಂತೆ ಮೊಬೈಲ್ ಆಪ್‍ಗಳ ಮೂಲಕ ರೈತರು ಯಾವ ಸಂಗಾಮಿ ಬೆಳೆಗಳನ್ನು ಹಾಕಿದ್ದಾರೆ ಎಂಬುದನ್ನು ಈ ಮೂಲಕ ಮೊಬೈಲ್ ಆಪ್ ಮೂಲಕ ಖಚಿತ ಅಂಕಿ ಅಂಶಗಳನ್ನು ಸಂಗ್ರಹಿಸಬಹುದಾಗಿದೆ. 25 ಕೋಟಿ ವೆಚ್ಚದಲ್ಲಿ ಈ ಬೆಳೆ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಲಾಗುವುದು.
  • ಹಾಸನದಲ್ಲಿ ಹೊಳೇನರಸಿಪುರದ ಹರದನಹಳ್ಳಿಯಲ್ಲಿ ವಸತಿಯುಕ್ತ ಸರ್ಕಾರಿ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ಥಾಪನೆ ಮಾಡಲು 15 ಕೋಟಿ ರೂ.ಗಳ ಯೋಜನೆ ಒಪ್ಪಿಗೆ ನೀಡಲಾಗಿದೆ.

Trending News