BJP: ಬಿಎಸ್​ವೈ ಸಂಪುಟ ಸೇರಿದ ಏಳು ಸಚಿವರು: ಯಾರಿಗೆ ಯಾವ ಖಾತೆ?

ಬಹು ನಿರೀಕ್ಷಿತ ರಾಜ್ಯ ಸಚಿವ ಸಂಪುಟ ವಿಸ್ತರಣೆ ಬುಧವಾರ ಆಗಿದ್ದು, ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ನೇತೃತ್ವದ ಸಂಪುಟದಲ್ಲಿ 'ಸಪ್ತ' ಶಾಸಕರು ಮಂತ್ರಿಗಿರಿ ಅಲಂಕರಿಸಿದ್ದಾರೆ

Last Updated : Jan 13, 2021, 06:39 PM IST
  • ಬಹು ನಿರೀಕ್ಷಿತ ರಾಜ್ಯ ಸಚಿವ ಸಂಪುಟ ವಿಸ್ತರಣೆ ಬುಧವಾರ ಆಗಿದ್ದು, ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ನೇತೃತ್ವದ ಸಂಪುಟದಲ್ಲಿ 'ಸಪ್ತ' ಶಾಸಕರು ಮಂತ್ರಿಗಿರಿ ಅಲಂಕರಿಸಿದ್ದಾರೆ.
  • ಎಸ್. ಅಂಗಾರ, ಸಿ.ಪಿ. ಯೋಗೇಶ್ವರ್, ಎಂ.ಟಿ.ಬಿ. ನಾಗರಾಜ್, ಆರ್.ಶಂಕರ್, ಅರವಿಂದ ಲಿಂಬಾವಳಿ, ಮುರುಗೇಶ ನಿರಾಣಿ, ಉಮೇಶ್ ಕತ್ತಿ ಸೇರಿ 7 ಮಂದಿ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
  • ಈ ಖಾತೆಗಳು ನೂತನ ಸಚಿವರಿಗೆ ಸಿಗಬಹುದು ಎನ್ನಲಾಗಿದೆ. ಇನ್ನು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಮಾತನಾಡಿದ ಎಂಟಿಬಿ ನಾಗರಾಜ್, ನನಗೆ ಯಾವುದೇ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ. ವಸತಿ ಖಾತೆ ಕೊಟ್ರೆ ಒಳ್ಳೆಯದು ಎಂದರು.
BJP: ಬಿಎಸ್​ವೈ ಸಂಪುಟ ಸೇರಿದ ಏಳು ಸಚಿವರು: ಯಾರಿಗೆ ಯಾವ ಖಾತೆ? title=

ಬೆಂಗಳೂರು: ಬಹು ನಿರೀಕ್ಷಿತ ರಾಜ್ಯ ಸಚಿವ ಸಂಪುಟ ವಿಸ್ತರಣೆ ಬುಧವಾರ ಆಗಿದ್ದು, ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ನೇತೃತ್ವದ ಸಂಪುಟದಲ್ಲಿ 'ಸಪ್ತ' ಶಾಸಕರು ಮಂತ್ರಿಗಿರಿ ಅಲಂಕರಿಸಿದ್ದಾರೆ.

ಎಸ್. ಅಂಗಾರ, ಸಿ.ಪಿ. ಯೋಗೇಶ್ವರ್(C.P.Yogeshwar), ಎಂ.ಟಿ.ಬಿ. ನಾಗರಾಜ್, ಆರ್.ಶಂಕರ್, ಅರವಿಂದ ಲಿಂಬಾವಳಿ, ಮುರುಗೇಶ ನಿರಾಣಿ, ಉಮೇಶ್ ಕತ್ತಿ ಸೇರಿ 7 ಮಂದಿ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಇದರ ಬೆನ್ನಲ್ಲೇ ಇವರೆಲ್ಲರಿಗೂ ವಿಧಾನಸೌಧದಲ್ಲೇ ಕೊಠಡಿ ಹಂಚಿಕೆ ಮಾಡಲಾಗಿದೆ.

Siddaramaiah: ಸಿಎಂ ಬಿಎಸ್ ವೈರನ್ನ ಕುಟುಕಿದ ಸಿದ್ದರಾಮಯ್ಯ..!

ನೂತನ ಸಚಿವರಿಗೆ ಇಂದು ಅಥವಾ ನಾಳೆ ಖಾತೆ ಹಂಚಿಕೆ ಆಗಲಿದ್ದು, ಯಾರಿಗೆ ಯಾವ ಖಾತೆ ಸಿಗಲಿದೆ ಎಂಬುದರ ಸಂಭಾವ್ಯ ಪಟ್ಟಿ ಇಲ್ಲಿದೆ.

Sa Ra Mahesh: 'ಚಾಮುಂಡೇಶ್ವರಿ ಶಾಪದಿಂದಲೇ ವಿಶ್ವನಾಥ್ ಸಚಿವರಾಗಲಿಲ್ಲ'

ಪ್ರವಾಸೋದ್ಯಮ ಇಲಾಖೆ & ಸಾರ್ವಜನಿಕ ಹಾಗೂ ಸಂಪರ್ಕ ಇಲಾಖೆ-ಎಸ್. ಅಂಗಾರ

ಬೆಂಗಳೂರು ನಗರಾಭಿವೃದ್ಧಿ-ಸಿ.ಪಿ. ಯೋಗೇಶ್ವರ್

ಇಂಧನ ಇಲಾಖೆ-ಎಂ.ಟಿ.ಬಿ. ನಾಗರಾಜ್

Ramesh Jarkiholi: ಮಾರ್ಚ್- ಏಪ್ರಿಲ್‌ನಲ್ಲಿ ಮತ್ತೆ ಸಂಪುಟ ಪುನಃರಚನೆ: ಹೊಸಬಾಂಬ್ ಸಿಡಿಸಿದ ಜಾರಕಿಹೊಳಿ‌

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ-ಆರ್.ಶಂಕರ್

ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆ-ಅರವಿಂದ ಲಿಂಬಾವಳಿ

ಅಬಕಾರಿ ಖಾತೆ-ಮುರುಗೇಶ ನಿರಾಣಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ-ಉಮೇಶ್ ಕತ್ತಿ

'CD' ಇಟ್ಟುಕೊಂಡು ಸಿಎಂ ಬಿಎಸ್‌ವೈಗೆ ಬ್ಲ್ಯಾಕ್ ಮೇಲ್..!

ಈ ಖಾತೆಗಳು ನೂತನ ಸಚಿವರಿಗೆ ಸಿಗಬಹುದು ಎನ್ನಲಾಗಿದೆ. ಇನ್ನು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಮಾತನಾಡಿದ ಎಂಟಿಬಿ ನಾಗರಾಜ್, ನನಗೆ ಯಾವುದೇ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ. ವಸತಿ ಖಾತೆ ಕೊಟ್ರೆ ಒಳ್ಳೆಯದು ಎಂದರು. ಎಸ್. ಅಂಗಾರ ಮಾತನಾಡಿ, ನನಗೆ ಯಾವುದೇ ಇಲಾಖೆ ಕೊಟ್ಟರೂ ನಿಭಾಯಿಸುತ್ತೇನೆ. ನನಗೆ ಯಾವುದೇ ಖೋಟಾದಲ್ಲಿ ಸಚಿವ ಸ್ಥಾನ ಸಿಕ್ಕಿಲ್ಲ. ಪಕ್ಷ ಗುರುತಿಸಿ ಅವಕಾಶ ಕೊಟ್ಟಿದೆ. ನನಗೆ ಅವಕಾಶ ಮಾಡಿಕೊಟ್ಟವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

Kisan Maan Dhan Yojana: ರೈತರಿಗೆ ಈ ಯೋಜನೆ ಮೂಲಕ ತಿಂಗಳಿಗೆ ₹ 3 ಸಾವಿರ ಪಿಂಚಣಿ ಸೌಲಭ್ಯ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News