ಚಿತ್ರೀಕರಣಕ್ಕೆ ಮಕ್ಕಳ ಬಳಕೆಗೆ ಷರತ್ತು : ಕಾರ್ಮಿಕ ಇಲಾಖೆಯಿಂದ ಫಿಲಂ ಚೇಂಬರ್​ಗೆ ನೋಟಿಸ್

Labor Department : ಇನ್ನು ಮುಂದೆ ಚಿತ್ರೀಕರಣಕ್ಕೆ ಮಕ್ಕಳನ್ನು ಬಳಸುವ ಮುನ್ನ ಷರತ್ತುಗಳನ್ನು ಅನುಸರಿಬೇಕು ಎಂದು ಕಾರ್ಮಿಕ ಇಲಾಖೆ ಫಿಲಂ ಚೇಂಬರ್​ಗೆ ನೋಟಿಸ್ ಒಂದನ್ನು ನೀಡಿದೆ ಆ ಕುರಿತು ಷರತ್ತುಗಳು ಇಲ್ಲಿವೆ ತಿಳಿದುಕೊಳ್ಳಿ. 

Written by - Zee Kannada News Desk | Last Updated : Feb 14, 2024, 09:00 PM IST
  • ಚಿತ್ರೀಕರಣಕ್ಕೆ ಮಕ್ಕಳನ್ನು ಬಳಸುವ ಕುರಿತಂತೆ ಕಾರ್ಮಿಕ ಇಲಾಖೆ ಫಿಲಂ ಚೇಂಬರ್​ಗೆ ಕೆಲವೊಂದು ಷರತ್ತುಗಳನ್ನು ವಿಧಿಸಿದೆ.
  • ಶೂಟಿಂಗ್ ಸಮಯದಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸಬೇಕು
  • ಚಿತ್ರೀಕರಣ ವೇಳೆ ಬಾಲನಟರು ಇರುವಾಗ ವಿಶ್ರಾಂತಿ ಇಲ್ಲದೇ ಮೂರು ಗಂಟೆಗೂ ಅಧಿಕ ಕಾಲ ನಿರಂತರವಾಗಿ ಶೂಟಿಂಗ್ ಮಾಡುವಂತಿಲ್ಲ.
ಚಿತ್ರೀಕರಣಕ್ಕೆ ಮಕ್ಕಳ ಬಳಕೆಗೆ ಷರತ್ತು : ಕಾರ್ಮಿಕ ಇಲಾಖೆಯಿಂದ ಫಿಲಂ ಚೇಂಬರ್​ಗೆ ನೋಟಿಸ್ title=

Conditions for use of children for filming:  ಚಿತ್ರೀಕರಣಕ್ಕೆ ಬಳಸುವ ಮುನ್ನ ಕೆಲವೊಂದು ಷರತ್ತುಗಳನ್ನು ಅನುಸರಿಸುವಂತೆ ಕಾರ್ಮಿಕ ಇಲಾಖೆ ಫಿಲಂ ಚೇಂಬರ್​ಗೆ ಸುತ್ತೋಲೆಯನ್ನು ರವಾನಿಸಿದೆ. 

ಷರತ್ತುಗಳು : 

  • 5 ಗಂಟೆಗೂ ಹೆಚ್ಚು ಕಾಲ ಶೂಟಿಂಗ್ ಮಕ್ಕಳನ್ನು ಶೂಟಿಂಗ್ ಮಾಡುವಂತಿಲ್ಲ 
  • ಚಿತ್ರೀಕರಣ ವೇಳೆ ಬಾಲನಟರು ಇರುವಾಗ ವಿಶ್ರಾಂತಿ ಇಲ್ಲದೇ ಮೂರು ಗಂಟೆಗೂ ಅಧಿಕ ಕಾಲ ನಿರಂತರವಾಗಿ ಶೂಟಿಂಗ್ ಮಾಡುವಂತಿಲ್ಲ.
  • ಶೂಟಿಂಗ್ ಸ್ಪಾಟ್ ನಲ್ಲಿ ಮಕ್ಕಳ ದೈಹಿಕ ಮತ್ತು ಮಾನಸಿಕ ಅರೋಗ್ಯಕ್ಕೆ ಪೂರಕವಾದ ಸೌಲಭ್ಯ ಇರಬೇಕು.
  • ಶೂಟಿಂಗ್ ಸಮಯದಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸಬೇಕು 

ಇದನ್ನು ಓದಿ : Poisonous plant: ವಿಶ್ವದ ಅತ್ಯಂತ ಅಪಾಯಕಾರಿ ಸಸ್ಯ, ಮುಟ್ಟಿದ ತಕ್ಷಣ ಸಾವು ಖಚಿತ.!

  • ನಟನೆ ಮಾಡುವ ಮಗು ನಿರಂತರವಾಗಿ 27 ದಿನ ಶೂಟಿಂಗ್ ಕೆಲಸಕ್ಕೆ ಬಳಸಬಾರದು.
  • ಶಿಕ್ಷಣದ ಹಕ್ಕು ಸಂರಕ್ಷಣೆ, ಲೈಂಗಿಕ ಅಪರಾಧಗಳಿಂದ ರಕ್ಷಣೆ ಒಳಗೊಂಡಂತೆ ಮಕ್ಕಳ ರಕ್ಷಣೆ ಕುರಿತಾಗಿ ಕಾಲ ಕಾಲಕ್ಕೆ ಜಾರಿಯಲ್ಲಿರೋ ಎಲ್ಲಾ ಕಾನೂನುಗಳ ಪಾಲನೆ ಮಾಡುವುದು.
  • ಮಗು ಶಾಲೆಯ ಪಾಠ ಪ್ರವಚನಗಳಿಗೆ ಗೈರಾಗದಂತೆ ಶಿಕ್ಷಣದಲ್ಲಿ ನಿರಂತರವಾಗಿ ಮುಂದವರಿಯಲು ಅಗತ್ಯವಿರೋ ಎಲ್ಲಾ ಸೌಲಭ್ಯಗಳನ್ನು ಒದಗಿಸುವುದು.
  • ಮಗುವಿನ ರಕ್ಷಣೆ, ಪೋಷಣೆ ಮತ್ತು ಹಿತಾಸಕ್ತಿಯನ್ನು ಕಾಪಾಡಲು ನಿರ್ಮಾಣ ಅಥವಾ ಕಾರ್ಯಕ್ರಮದಲ್ಲಿ ತೊಡಗಿರುವ ಪ್ರತಿ 5 ಮಕ್ಕಳಿಗೆ ಒಬ್ಬರಂತೆ ಜವಾಬ್ದಾರಿ ವ್ಯಕ್ತಿಯನ್ನು ನೇಮಿಸುವುದು..
  • ಶೂಟಿಂಗ್ ಸ್ಥಳದಲ್ಲಿ ಎಚ್ಚರಿಕೆ ವಹಿಸುವಂತೆ ಕ್ರಮ ಕೈಗೊಳ್ಳಬೇಕು

ಇದನ್ನು ಓದಿ : ರಾಜ್ಯಸಭಾ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಕಾಂಗ್ರೆಸ್: ಸೋನಿಯಾ ಗಾಂಧಿ ಸೇರಿ 4 ಮಂದಿ ಹೆಸರು ಘೋಷಣೆ

  • ಯಾವುದೇ ಮಗುವಿನ ಒಪ್ಪಿಗೆ ಮತಯ್ತು ಇಚ್ಛೆಗೆ ವಿರುದ್ಧವಾಗಿ ಯಾವುದೇ ಧ್ವನಿ, ದೃಶ್ಯ ಮತ್ತು ಕ್ರೀಡಾ ಚಟುವಟಿಕೆ ಅನೌಪಾಚಾರಿಕ ಮನರಂಜನಾ ಚಟುವಟಿಕೆ ಒಳಗೊಂಡಂತೆ ಅವುಗಳಲ್ಲಿ ಭಾಗವಹಿಸುವಂತೆ ಮಾಡಬಾರದು.
  • ಯಾವುದೇ ವಾಣಿಜ್ಯ ಪರ ಕಾರ್ಯಕ್ರಮದಲ್ಲಿ ಮಗು ಭಾಗವಹಿಸುವುದಿದ್ದರೆ ಆ ಚಟುವಟಿಕೆ ನಡೆಯುವ ಪ್ರದೇಶದ ಜಿಲ್ಲಾ ದಂಡಾಧಿಕಾರಿಗಳ ಪೂರ್ವಾನುಮತಿಯನ್ನು ಪಡೆದುಕೊಳ್ಳಬೇಕು 
  • ಈ ವೇಳೆ ಮಕ್ಕಳ ಪಟ್ಟಿ ಮತ್ತು ಪೋಷಕರ ಒಪ್ಪಿಗೆ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು.
  • ಚಿತ್ರೀಕರಣ ಸಮಯದಲ್ಲಿ ಮಕ್ಕಳ ದುರುಪಯೋಗ ಪ್ರಕರಣ, ನಿರ್ಲಕ್ಷ್ಯ ಅಥವಾ ಶೋಷಣೆ ನಡೆಯದಂತೆ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಂಡಿರಬೇಕು.
  • ಕಾರ್ಯಕ್ರಮದಿಂದ ಬರುವ ಒಟ್ಟು ಆದಾಯದ ಕನಿಷ್ಠ ಶೇ.20ರಷ್ಟನ್ನು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಮಗುವಿನ ಹೆಸರಿನಲ್ಲಿ ನಿಶ್ಚಿತವ ಠೇವಣಿಯ ಖಾತೆ ತೆರೆದು ಇಡಬೇಕು. ಅದನ್ನು ಮಗು ಪ್ರಾಯಸ್ಥನಾದಾಗ ಪಡೆಯಲು ಅವಕಾಶ ಕಲ್ಪಿಸುವುದು.

ಹೀಗೆ ಹಲವಾರು ಷರತ್ತುಗಳನ್ನು ಈ ಸುತ್ತೋಲೆಯು ಒಳಗೊಂಡಿದ್ದು,  ಚಿತ್ರೀಕರಣಕ್ಕೆ ಮಕ್ಕಳನ್ನು ಬಳಸುವ ಕುರಿತಂತೆ  ಕಾರ್ಮಿಕ ಇಲಾಖೆ ಫಿಲಂ ಚೇಂಬರ್​ಗೆ ಕೆಲವೊಂದು ಷರತ್ತುಗಳನ್ನು ವಿಧಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News