Laxmi Hebbalkar: 'ರಮೇಶ್ ಜಾರಕಿಹೊಳಿಯನ್ನು ಮಂತ್ರಿ ಮಾಡಿದ್ದು ನಾನೇ'

ಗ್ರಾಮೀಣದಲ್ಲಿ ಹೆಬ್ಬಾಳಕರ್ ರನ್ನು ಗೆಲ್ಲಿಸಿದ್ದು ನಾನೇ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೆ ಅವರು ತಿರುಗೇಟು

Last Updated : Feb 24, 2021, 02:07 PM IST
  • ನಾವೇ ಮಂತ್ರಿ ಮಾಡಿದ್ದು, ನಾವೇ ಹೈಕಮಾಂಡ್‌ಗೆ ಶಿಫಾರಸು ಮಾಡಿದ್ದು
  • ಗ್ರಾಮೀಣದಲ್ಲಿ ಹೆಬ್ಬಾಳಕರ್ ರನ್ನು ಗೆಲ್ಲಿಸಿದ್ದು ನಾನೇ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೆ ಅವರು ತಿರುಗೇಟು
  • ಮಂತ್ರಿ ಮಾಡಿದ್ದೇನೆ ಎಂಬ ನನ್ನ ಹೇಳಿಕೆ, ನನ್ನನ್ನು ಗೆಲ್ಲಿಸಿದ್ದಾರೆ ಎಂಬ ಅವರ ಹೇಳಿಕೆಗೆ ಹೆಚ್ಚು ಪ್ರಾಮುಖ್ಯತೆ ನೀಡಬಾರದು.
Laxmi Hebbalkar: 'ರಮೇಶ್ ಜಾರಕಿಹೊಳಿಯನ್ನು ಮಂತ್ರಿ ಮಾಡಿದ್ದು ನಾನೇ' title=

ಬೆಳಗಾವಿ: ರಮೇಶ್ ಜಾರಕಿಹೊಳಿ ಅವರನ್ನು ಮಂತ್ರಿ ಮಾಡಿದ್ದು ನಾನೇ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹೇಳಿಕೆ ನೀಡಿದ್ದಾರೆ.

ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್(Laxmi Hebbalkar), ನಾವೇ ಮಂತ್ರಿ ಮಾಡಿದ್ದು, ನಾವೇ ಹೈಕಮಾಂಡ್‌ಗೆ ಶಿಫಾರಸು ಮಾಡಿದ್ದು ಎಂದರು.

HD Kumaraswamy: 'ಕಿಂಗ್ ಮೇಕರ್ ಸ್ಥಾನ ಕಳೆದುಕೊಳ್ಳುವ ಪ್ರಶ್ನೆಯೇ ಇಲ್ಲ'

ಗ್ರಾಮೀಣದಲ್ಲಿ ಹೆಬ್ಬಾಳಕರ್ ರನ್ನು ಗೆಲ್ಲಿಸಿದ್ದು ನಾನೇ ಎಂಬ ರಮೇಶ್ ಜಾರಕಿಹೊಳಿ(Ramesh Jarkiholi) ಹೇಳಿಕೆಗೆ ಅವರು ತಿರುಗೇಟು ನೀಡಿದರು.

JOBS: ಮೌಲಾನಾ ಆಜಾದ್ ಆಂಗ್ಲ ಮಾದರಿ ಶಾಲೆ ಅತಿಥಿ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮಂತ್ರಿ (Minister)ಮಾಡಿದ್ದೇನೆ ಎಂಬ ನನ್ನ ಹೇಳಿಕೆ, ನನ್ನನ್ನು ಗೆಲ್ಲಿಸಿದ್ದಾರೆ ಎಂಬ ಅವರ ಹೇಳಿಕೆಗೆ ಹೆಚ್ಚು ಪ್ರಾಮುಖ್ಯತೆ ನೀಡಬಾರದು. ನಾನು ಅಹಂ ಬ್ರಹ್ಮಾಸ್ಮಿ, ನಾನು ನನ್ನಿಂದ ಅಂದವರೆಲ್ಲ ಹೆಸರು ಇಲ್ಲದಂತೆ ಹೋಗಿದ್ದಾರೆ. ನಾನು ನಗಣ್ಯ, ಲಕ್ಷ್ಮೀ ಹೆಬ್ಬಾಳಕರ್ ಗೆ ಮತದಾರರು ಗೆಲ್ಲಿಸಿದ್ದಾರೆ. ಯಾಕೆ ಇಷ್ಟೊಂದು ಟಾರ್ಗೆಟ್ ಮಾಡುತ್ತಿದ್ದಾರೆ ಅಂತ ಅವರನ್ನೇ ಕೇಳಿ ಎಂದರು.

Election Commission: ರಾಜ್ಯದಲ್ಲಿ 110 ಜಿಲ್ಲಾ ಪಂ. ಕ್ಷೇತ್ರ ಹೆಚ್ಚಳ, 600 ತಾಪಂ ಕ್ಷೇತ್ರಗಳು ರದ್ದು!

ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಉದ್ಘಾಟನೆ ಕಾರ್ಯಕ್ರಮ ನಮ್ಮ ಅಧ್ಯಕ್ಷತೆಯಲ್ಲಿ ಆಗಬೇಕು. ಯಾರನ್ನೋ ಎಲ್ಲೆಲ್ಲೋ ಕರೆದುಕೊಂಡು ಹೋಗುತ್ತಾರೆ. ಅದಕ್ಕೆಲ್ಲ ನಾನು ಬಾಯಿ ಬಡಿದುಕೊಳ್ಳಲು ಆಗುತ್ತಾ? ಗೋಕಾಕ(Gokak) ಮತದಾರರು ಕೈಜೋಡಿಸುವುದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ. ನೀವು ಎಷ್ಟು ವಿರೋಧ ಮಾಡುತ್ತೀರೋ ನಾನು ಅಷ್ಟು ಗಟ್ಟಿಯಾಗುತ್ತೇನೆ. ಯಾರು ಏನೇ ಒದರಾಡಿದರೂ ದೇವಸ್ಥಾನ ಹಾಳಾಗುವುದಿಲ್ಲ ಎಂದು ಜಾರಕಿಹೊಳಿಗೆ ಹೆಬ್ಬಾಳಕರ್ ಟಾಂಗ್ ನೀಡಿದರು.

Aravind Limbavali: ಬಿಜೆಪಿ ರಾಜ್ಯ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಅರವಿಂದ ಲಿಂಬಾವಳಿ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News