ಧಾರವಾಡ: ಧಾರವಾಡದ ನಿವಾಸಿಗಳಾದ ಮಧು, ಪುಷ್ಪಾ, ಸರೋಜಾ ಕಲವೆಕತಕರ್, ಎಂಬುವವರು ಧಾರವಾಡದ ಶ್ರೀ. ವೀರಭದ್ರೇಶ್ವರ ಇನ್‍ಪ್ರಾಸ್ಟ್ರಕ್ಚರ್ ಮತ್ತು ಹೌಸಿಂಗ್ ಪ್ರೈ.ಲಿ. ಇದರ ಆಡಳಿತಾತ್ಮಕ ನಿರ್ದೇಶಕರಾದ ನಾಗನಗೌಡ ಶಿವನಗೌಡ ನೀರಲಗಿ ರವರ ಜೊತೆ ಪೂರ್ಣಿಮಾ ಲೇಔಟ್‍ನಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ನ್ಯಾನೊ ಅಪಾರ್ಟಮೆಂಟ್‍ನಲ್ಲಿ ಪ್ಲ್ಯಾಟ ಕೊಡಲು ಒಪ್ಪಿ ಪ್ರತಿಯೊಬ್ಬ ದೂರುದಾರರಿಂದ ತಲಾ ರೂ.1,02,500/-ಗಳನ್ನು ಪಡೆದುಕೊಂಡು ದಿ:30/08/2010 ರಂದು ಒಪ್ಪಂದ ಮಾಡಿಕೊಂಡಿದ್ದು ಆ ಪೈಕಿ ಒಟ್ಟು ದೂರುದಾರರಿಂದ ರೂ.3,07,500/-ಮುಂಗಡವಾಗಿ ಪಡೆದುಕೊಂಡಿದ್ದರು.
ಇದನ್ನೂ ಓದಿ : Assembly Election Result 2022 : ಗುಜರಾತ್‌ನಲ್ಲಿ 1985 ರ ಕಾಂಗ್ರೆಸ್ ದಾಖಲೆ ಮುರಿದ ಬಿಜೆಪಿ!
ಮುಂಗಡ ಹಣ ಕೊಟ್ಟು ಒಪ್ಪಂದ ಆಗಿದ್ದರೂ ಬಿಲ್ಡರ್ ತಮಗೆ ಸದರಿ ಅಪಾರ್ಟಮೆಂಟ್‍ನಲ್ಲಿ ಮನೆ ನಿರ್ಮಾಣ ಮಾಡಿಕೊಡದೇ ಹಾಗೂ ಖರೀದಿ ಪತ್ರ ಬರೆದುಕೊಡದೇ ಸೇವಾ ನ್ಯೂನ್ಯತೆ ಎಸಗಿ ಮೋಸ ಮಾಡಿದ್ದಾರೆ ಅಂತಾ ಬಿಲ್ಡರ ಮೇಲೆ ಕ್ರಮ ಕೈಗೊಳ್ಳುವಂತೆ ಫಿರ್ಯಾದಿದಾರರು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಇದನ್ನೂ ಓದಿ : Gujarat Election Result 2022 : ರವೀಂದ್ರ ಜಡೇಜಾ ಪತ್ನಿ ಭರ್ಜರಿ ಗೆಲವು!
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಪ್ರಭಾರ ಅಧ್ಯಕ್ಷರಾದ ವಿಶಾಲಾಕ್ಷಿ ಅ. ಬೋಳಶೆಟ್ಟಿ ಮತ್ತು ಸದಸ್ಯ ಪ್ರಭು. ಸಿ ಹಿರೇಮಠ ದೂರುದಾರರಿಂದ ಮುಂಗಡವಾಗಿ ಪಡೆದ ಹಣವನ್ನು ಡೆವಲಪರ್ ತಮ್ಮ ವೈಯಕ್ತಿಕ ಅಭಿವೃದ್ಧಿಗಾಗಿ ಉಪಯೋಗಿಸಿಕೊಂಡು ಅವರಿಗೆ ಪ್ಲ್ಯಾಟ ದೂರುದಾರರ ಸ್ವಾಧೀನಕ್ಕೆ ಕೊಡದೇ ಗ್ರಾಹಕರ ರಕ್ಷಣಾ ಕಾಯಿದೆ ಅಡಿ ಸೇವಾ ನ್ಯೂನ್ಯತೆ ಎಸಗಿ ಮೋಸ ಮಾಡಿರುತ್ತಾರೆ ಅಂತಾ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.
ಈ ಬಗ್ಗೆ ವೀರಭದ್ರೇಶ್ವರ ಹೌಸಿಂಗ್ ಪ್ರೈ.ಲಿ. ಆಡಳಿತಗಾರ ಎನ್. ಎಸ್. ನೀರಲಗಿ ದೂರುದಾರರಿಂದ ಪಡೆದ ಒಟ್ಟು ರೂ.3,07,500/-ಗಳನ್ನು ಶೇ.8% ರಂತೆ ಬಡ್ಡಿ ಲೆಕ್ಕ ಹಾಕಿ ಹಾಗೂ ಮಾನಸಿಕ ತೊಂದರೆಗೆ ಪ್ರತಿಯೊಬ್ಬ ದೂರುದಾರರಿಗೆ ರೂ.25,000/- ಪರಿಹಾರ ಮತ್ತು ಪ್ರಕರಣದ ಖರ್ಚು ವೆಚ್ಚ ರೂ.10,000/-ಗಳನ್ನು ಈ ಆದೇಶದ ದಿನಾಂಕದಿಂದ ಒಂದು ತಿಂಗಳ ಒಳಗಾಗಿ ಕೊಡುವಂತೆ ಆಯೋಗ ತೀರ್ಪು ನೀಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.