ಸೈಟ್‍ಕೊಡದ ಬಿಲ್ಡರ್ ನಿಂದ ಪರಿಹಾರ ಕೊಡಲು ಗ್ರಾಹಕರ ಆಯೋಗದ ಆದೇಶ

ಧಾರವಾಡದ ಮರಾಠಾ ಕಾಲನಿಯ ಸುಭಾಸ ಶೆಟ್ಟಿ ಅನ್ನುವವರು ಇಲ್ಲಿಯ ವೀರಭದ್ರೇಶ್ವರ ಹೌಸಿಂಗ್ ನಿಯಮಿತ ರವರ ಜೊತೆ ಪೂರ್ಣಿಮಾ ಬಡಾವಣೆಯಲ್ಲಿ ಸೈಟ್ ಖರೀದಿಯ ಬಗ್ಗೆ 2009ನೇ ಇಸವಿಯಲ್ಲಿ ಖರೀದಿ ಒಪ್ಪಂದ ಮಾಡಿಕೊಂಡಿದ್ದರು.

Written by - Zee Kannada News Desk | Last Updated : Nov 17, 2022, 05:18 PM IST
  • ಶೇ8% ರಂತೆ ಬಡ್ಡಿ ಲೆಕ್ಕ ಹಾಕಿ ಕೊಡುವಂತೆ ಹಾಗೂ ಮಾನಸಿಕ ತೊಂದರೆಗೆ ರೂ.15,000/- ಪರಿಹಾರ
  • ಮತ್ತು ಪ್ರಕರಣದ ಖರ್ಚು ವೆಚ್ಚ ರೂ. 5,000/- ಒಂದು ತಿಂಗಳ ಒಳಗಾಗಿ ಕೊಡುವಂತೆ ಆಯೋಗ ತೀರ್ಪು ನೀಡಿದೆ.
 ಸೈಟ್‍ಕೊಡದ ಬಿಲ್ಡರ್ ನಿಂದ ಪರಿಹಾರ ಕೊಡಲು ಗ್ರಾಹಕರ ಆಯೋಗದ ಆದೇಶ title=
ಸಾಂದರ್ಭಿಕ ಚಿತ್ರ

ಧಾರವಾಡ: ಧಾರವಾಡದ ಮರಾಠಾ ಕಾಲನಿಯ ಸುಭಾಸ ಶೆಟ್ಟಿ ಅನ್ನುವವರು ಇಲ್ಲಿಯ ವೀರಭದ್ರೇಶ್ವರ ಹೌಸಿಂಗ್ ನಿಯಮಿತ ರವರ ಜೊತೆ ಪೂರ್ಣಿಮಾ ಬಡಾವಣೆಯಲ್ಲಿ ಸೈಟ್ ಖರೀದಿಯ ಬಗ್ಗೆ 2009ನೇ ಇಸವಿಯಲ್ಲಿ ಖರೀದಿ ಒಪ್ಪಂದ ಮಾಡಿಕೊಂಡಿದ್ದರು.

ಆ ಬಗ್ಗೆ ತಾನು ರೂ.55,000/- ಮುಂಗಡ ಹಣ ಕೊಟ್ಟು ಒಪ್ಪಂದ ಆಗಿದ್ದರೂ ಬಿಲ್ಡರ್ ತನಗೆ ಸೈಟ್ ಖರೀದಿ ಮಾಡಿಕೊಡದೇ ಸೇವಾ ನ್ಯೂನ್ಯತೆ ಎಸಗಿ ಮೋಸ ಮಾಡಿದ್ದಾರೆ ಅಂತಾ ಬಿಲ್ಡರ್ ಮೇಲೆ ಕ್ರಮ ಕೈಗೊಳ್ಳುವಂತೆ ಫಿರ್ಯಾದಿದಾರ ಜಿಲ್ಲಾಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಇದನ್ನೂ ಓದಿ: ಕಬ್ಬಿಗೆ ಸೂಕ್ತ ಬೆಲೆ ನಿರ್ಣಯ ಸಂಧಾನ ಸಭೆ ವಿಫಲ- ಇಂದು ಮುಧೋಳ ನಗರ ಬಂದ್

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ ಹಾಗೂ ಪಿ.ಸಿ. ಹಿರೇಮಠ ಸದಸ್ಯರು ದೂರುದಾರರಿಂದ ಮುಂಗಡವಾಗಿ ಪಡೆದ ಹಣವನ್ನು ಡೆವಲಪರ್ ತಮ್ಮ ವೈಯಕ್ತಿಕ ಅಭಿವೃದ್ಧಿಗಾಗಿ ಉಪಯೋಗಿಸಿಕೊಂಡು ಅವರಿಗೆ ಸೈಟ್ ಕೊಡದೇ ಗ್ರಾಹಕರ ರಕ್ಷಣಾ ಕಾಯಿದೆ ಅಡಿ ಸೇವಾ ನ್ಯೂನ್ಯತೆ ಎಸಗಿ ಮೋಸ ಮಾಡಿರುತ್ತಾರೆ ಅಂತಾ ಆಯೋಗ ಅಭಿಪ್ರಾಯ ಪಟ್ಟು ತೀರ್ಪು ನೀಡಿದೆ.

ಇದನ್ನು ಓದಿ : ಮತಾಂತರ ಅಲ್ಲ ಮನಸಾಂತರ: ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ತಡರಾತ್ರಿ ಪ್ರೊಟೆಸ್ಟ್

ಈ ಬಗ್ಗೆ ವೀರಭದ್ರೇಶ್ವರ ಹೌಸಿಂಗ್ ನಿಯಮಿತದ ಆಡಳಿತಗಾರ ಎನ್.ಎಸ್. ನೀರಲಗಿ ದೂರುದಾರರಿಂದ ಪಡೆದ ರೂ.55,000/- ಗಳನ್ನು ದಿ:16/10/2009 ರಿಂದ ಶೇ8% ರಂತೆ ಬಡ್ಡಿ ಲೆಕ್ಕ ಹಾಕಿ ಕೊಡುವಂತೆ ಹಾಗೂ ಮಾನಸಿಕ ತೊಂದರೆಗೆ ರೂ.15,000/- ಪರಿಹಾರ ಮತ್ತು ಪ್ರಕರಣದ ಖರ್ಚು ವೆಚ್ಚ ರೂ. 5,000/- ಒಂದು ತಿಂಗಳ ಒಳಗಾಗಿ ಕೊಡುವಂತೆ ಆಯೋಗ ತೀರ್ಪು ನೀಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News