ಕರ್ನಾಟಕದಲ್ಲಿ ಕಡಿಮೆಯಾಗುತ್ತಿಲ್ಲ ಕರೋನಾ ಸಾವಿನ ಸಂಖ್ಯೆ..!

ಕಳೆದ 24 ಗಂಟೆಗಳಲ್ಲಿ 16604 ಹೊಸ ಕರೋನಾ  ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 26,04,431ಕ್ಕೆ ಏರಿಕೆಯಾಗಿದೆ.   

Written by - Ranjitha R K | Last Updated : Jun 1, 2021, 04:05 PM IST
  • ರಾಜ್ಯದಲ್ಲಿ ಕರೋನಾದಿಂದ ಗುಣಮುಖರಾಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ.
  • ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 411 ಮಂದಿಯನ್ನು ಕರೋನಾ ನುಂಗಿ ಹಾಕಿದೆ
  • ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿರುವಂತೆಯೇ ಪಾಸಿಟಿವಿಟಿ ದರ ಕೂಡಾ ನಿರಂತರವಾಗಿ ಕುಸಿಯುತ್ತಿದೆ
ಕರ್ನಾಟಕದಲ್ಲಿ ಕಡಿಮೆಯಾಗುತ್ತಿಲ್ಲ ಕರೋನಾ ಸಾವಿನ ಸಂಖ್ಯೆ..! title=
ರಾಜ್ಯದಲ್ಲಿ ಕರೋನಾದಿಂದ ಗುಣಮುಖರಾಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ (photo india.com).

ಬೆಂಗಳೂರು : ರಾಜ್ಯದಲ್ಲಿ ಕರೋನಾ (Coronavirus) ಆರ್ಭಟ ನಿಧಾನವಾಗಿ ಇಳಿಮುಖವಾಗುತ್ತಿದೆ. ರಾಜ್ಯದಲ್ಲಿ ಕರೋನಾದಿಂದ ಗುಣಮುಖರಾಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಸಾವಿನ ಸಂಖ್ಯೆ ಮಾತ್ರ ಇಳಿಕೆಯಾಗುತ್ತಿಲ್ಲ.  ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 411 ಮಂದಿಯನ್ನು ಕರೋನಾ (COVID-19) ನುಂಗಿ ಹಾಕಿದೆ. ಇದರೊಂದಿಗೆ ಕರೋನಾ ರಕ್ಕಸನಿಗೆ ಬಲಿಯಾದವರ ಸಂಖ್ಯೆ 29,090ಕ್ಕೆ ಏರಿದೆ. 

ಸಾವಿನ ಸಂಖ್ಯೆಯಲ್ಲಿ ಏರಿಕೆ :
ರಾಜ್ಯದಲ್ಲಿ ಕರೋನಾ (Coronavirus) ಸಾವಿನ ಸಂಖ್ಯೆ ಶೇ. 1.10 ರಿಂದ ಶೇ.1.11ಕ್ಕೆ ಏರಿಕೆಯಾಗಿದೆ. ಜೊತೆಗೆ ಮರಣದ ದೈನಂದಿನ ಸರಾಸರಿ ಶೇ. 2.47ಕ್ಕೆ ತಲುಪಿದೆ. ಸಾವಿಗೀಡಾದವರು ಕರೋನಾ ಜೊತೆ ಶ್ವಾಸಕೋಶದ ಸೋಂಕು, ಉಸಿರಾಟದ ಸಮಸ್ಯೆ, ಬಿಪಿ (BP), ಶುಗರ್, ಹೃದಯ ಸಮಸ್ಯೆ (Heart disease) ಮುಂತಾದ ಸಮಸ್ಯೆಗಳಿಂದಲೂ ಬಳಲುತ್ತಿದ್ದರು ಎಂದು ಆರೋಗ್ಯ ಇಲಾಖೆ ತಿಳಿಸಿದೆ. 

ಇದನ್ನೂ ಓದಿ : K Sudhakar : 'ಕಣ್ಣಿಗೆ ಬ್ಲಾಕ್ ಫಂಗಸ್ ಬಂದ್ರೆ ಕಣ್ಣು ತೆಗೆಯಲೇ ಬೇಕಾಗುತ್ತದೆ'

ಸೋಂಕಿತರ ಸಂಖ್ಯೆ ಇಳಿಕೆ :
ಕಳೆದ 24 ಗಂಟೆಗಳಲ್ಲಿ 16604 ಹೊಸ ಕರೋನಾ (COVID-19) ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 26,04,431ಕ್ಕೆ ಏರಿಕೆಯಾಗಿದೆ. 

ಪಾಸಿಟಿವಿಟಿ ದರ ಇಳಿಕೆ:
ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿರುವಂತೆಯೇ ಪಾಸಿಟಿವಿಟಿ ದರ ಕೂಡಾ ನಿರಂತರವಾಗಿ ಕುಸಿಯುತ್ತಿದೆ. ಸೋಮವಾರ ರಾಜ್ಯದ ಪಾಸಿಟಿವಿಟಿ ದರ ಶೇ. 8.75 ಆಗಿತ್ತು. ಅಂದರೆ ಕರೋನಾ ಟೆಸ್ಟ್ (COVID test) ಮಾಡಿದ ನೂರು ಜನರಲ್ಲಿ ಸರಿಸುಮಾರು 9 ಜನರಲ್ಲಿ ಸೋಂಕು ಪತ್ತೆಯಾಗಿದೆ.

ಇದನ್ನೂ ಓದಿ : Siddaramaiah : ಮಾಜಿ ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಅಸ್ವಸ್ಥ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News