Omicron In Karnataka: ಕರುನಾಡಲ್ಲಿ 'ಒಮಿಕ್ರಾನ್' ಅಟ್ಟಹಾಸ..! ಗಡಿಯಲ್ಲಿ ಹೈಅಲರ್ಟ್..!

ನಿನ್ನೆ ಅಂದರೆ ಜನವರಿ 2 ರಂದು ಹೊಸದಾಗಿ 10 'ಒಮಿಕ್ರಾನ್' ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿವೆ. ಈ ಪೈಕಿ ಬೆಂಗಳೂರಿನಲ್ಲೇ 8 ಕೇಸ್ ಕನ್ಫರ್ಮ್ ಆಗಿದ್ದು, ಧಾರವಾಡದಲ್ಲಿ ಹೊಸದಾಗಿ ಇಬ್ಬರಿಗೆ 'ಒಮಿಕ್ರಾನ್' (Omicron) ಅಟ್ಯಾಕ್ ಮಾಡಿದೆ‌.   

Edited by - Yashaswini V | Last Updated : Jan 3, 2022, 12:15 PM IST
  • ಕರೋನಾವೈರಸ್ ಹೊಸ ರೂಪಾಂತರ ಓಮಿಕ್ರಾನ್ ಹೆಚ್ಚಳ
  • ಜನವರಿ 2 ರಂದು ಹೊಸದಾಗಿ 10 'ಒಮಿಕ್ರಾನ್' ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿವೆ
  • ಈ ಪೈಕಿ ಬೆಂಗಳೂರಿನಲ್ಲೇ 8 ಕೇಸ್ ಕನ್ಫರ್ಮ್
Omicron In Karnataka: ಕರುನಾಡಲ್ಲಿ 'ಒಮಿಕ್ರಾನ್' ಅಟ್ಟಹಾಸ..! ಗಡಿಯಲ್ಲಿ ಹೈಅಲರ್ಟ್..!  title=
Omicron outbreak- High alert in Karnataka border

ಬೆಂಗಳೂರು: ಒಂದೆಡೆ 3ನೇ ಅಲೆಯ (Covid Third Wave) ಭೀತಿ ಆವರಿಸಿದ್ದರೆ, ರಾಜ್ಯದಲ್ಲಿ ಸದ್ದೇ ಇಲ್ಲದೆ 'ಒಮಿಕ್ರಾನ್' (Omicron) ಹೆಮ್ಮಾರಿ ಆರ್ಭಟ ತೋರುತ್ತಿದೆ. ಜನವರಿ 2 ರಂದು ರಾಜ್ಯದಲ್ಲಿ 10 ಹೊಸ ಒಮಿಕ್ರಾನ್ ಕೇಸ್ ಪತ್ತೆಯಾಗಿದ್ದು, ಈ ಬಗ್ಗೆ ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ.

ನಿನ್ನೆ ಅಂದರೆ ಜನವರಿ 2 ರಂದು ಹೊಸದಾಗಿ 10 'ಒಮಿಕ್ರಾನ್' ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿವೆ. ಈ ಪೈಕಿ ಬೆಂಗಳೂರಿನಲ್ಲೇ 8 ಕೇಸ್ ಕನ್ಫರ್ಮ್ ಆಗಿದ್ದು, ಧಾರವಾಡದಲ್ಲಿ ಹೊಸದಾಗಿ ಇಬ್ಬರಿಗೆ 'ಒಮಿಕ್ರಾನ್' (Omicron) ಅಟ್ಯಾಕ್ ಮಾಡಿದೆ‌. ಈ ಬಗ್ಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ (Dr K. Sudhakar) ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ- Omicron Symptoms: ಓಮಿಕ್ರಾನ್‌ನ ಮೊದಲ ರೋಗಲಕ್ಷಣವನ್ನು ಧ್ವನಿ ಮೂಲಕವೂ ಗುರುತಿಸಬಹುದು

ಗಡಿಯಲ್ಲಿ ಹೈಅಲರ್ಟ್..!
ಇನ್ನು ಕರೋನಾವೈರಸ್ ಹೊಸ ರೂಪಾಂತರ ಓಮಿಕ್ರಾನ್ (Omicron) ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯದ ಗಡಿ (Karnataka Border) ಭಾಗದಲ್ಲಿ ಹೈಅಲರ್ಟ್ ಘೋಷಿಸಲಾಗಿದ್ದು, ಮಹಾರಾಷ್ಟ್ರ- ಕರ್ನಾಟಕ- ಗೋವಾ ಗಡಿ ಭಾಗದಲ್ಲಿ ಭಾರಿ ಕಟ್ಟೆಚ್ಚರ ವಹಿಸಲಾಗಿದೆ. ಬೆಳಗಾವಿ ಪೊಲೀಸರು ಚೆಕ್ ಪೋಸ್ಟ್ ನಿರ್ಮಾಣ ಮಾಡಿ ನೆರೆ ರಾಜ್ಯದಿಂದ ಬರುವ ವಾಹನಗಳನ್ನು ತೀವ್ರ ತಪಾಸಣೆ ನಡೆಸುತ್ತಿದ್ದಾರೆ. ಆರ್ ಟಿಪಿಸಿಆರ್ ವರದಿ ಇರದ ವಾಹನಗಳನ್ನು ವಾಪಸ್ ಕಳಿಸುತ್ತಿದ್ದಾರೆ.

ಇದನ್ನೂ ಓದಿ- Omicron: ಎರಡನೇ ಡೋಸ್ ಪಡೆದ ಎಷ್ಟು ತಿಂಗಳ ನಂತರ ಬೂಸ್ಟರ್ ಡೋಸ್ ತೆಗೆದುಕೊಳ್ಳಬೇಕು?

ನಿನ್ನೆ ರಾತ್ರಿ ನೆರೆ ರಾಜ್ಯದಿಂದ ಬಂದ ಬಸ್ ಪ್ರಯಾಣಿಕರಲ್ಲಿ RTPCR ರಿಪೋರ್ಟ್ ಇಲ್ಲದ ಕಾರಣ ಒಂದು ಬಸ್ ಅನ್ನು ಬೆಳಗಾವಿ ಪೊಲೀಸರು ವಾಪಸ್ ಕಳುಹಿಸಿದ್ದಾರೆ ಎಂದು ವರದಿಯಾಗಿದೆ. ಬೆಳಗಾವಿ ಜಿಲ್ಲೆ ನಿಪ್ಪಾಣಿ ಬಳಿಯ ಕುಗನ್ನೊಳ್ಳಿ ಚೆಕ್ ಪೋಸ್ಟ್ ನಲ್ಲಿ ಖಾಸಗಿ ಬಸ್ ವಾಪಸ್ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News