Congress: ಅಹಿಂದ ಪ್ರಯೋಗಕ್ಕೆ ಸಿದ್ದರಾಮಯ್ಯ ಸಜ್ಜು: ಕಾಂಗ್ರೆಸ್‌ನಲ್ಲಿ ವಿರೋಧ ವ್ಯಕ್ತ!

ರಾಜ್ಯದಲ್ಲಿ ಮತ್ತೆ ಅಹಿಂದ ಚರ್ಚೆ ತೀವ್ರಗೊಂಡಿದೆ. ಮೀಸಲಾತಿ ತಂತ್ರಕ್ಕೆ ಪ್ರತಿತಂತ್ರವಾಗಿ ಅಹಿಂದವನ್ನು ಬಳಕೆ ಮಾಡಲು ಸಿದ್ದರಾಮಯ್ಯ ಮುಂದಾಗಿದ್ದಾರೆ.

Last Updated : Feb 12, 2021, 12:30 PM IST
  • ರಾಜ್ಯದಲ್ಲಿ ಮತ್ತೆ ಅಹಿಂದ ಚರ್ಚೆ ತೀವ್ರಗೊಂಡಿದೆ. ಮೀಸಲಾತಿ ತಂತ್ರಕ್ಕೆ ಪ್ರತಿತಂತ್ರವಾಗಿ ಅಹಿಂದವನ್ನು ಬಳಕೆ ಮಾಡಲು ಸಿದ್ದರಾಮಯ್ಯ ಮುಂದಾಗಿದ್ದಾರೆ.
  • ಈ ಕುರಿತಾಗಿ ಆರಂಭಿಕ ಹಂತದ ತಯಾರಿಗಳು ನಡೆಯುತ್ತಿವೆ. ಆದರೆ ಅಹಿಂದದ ಬಗ್ಗೆ ಕಾಂಗ್ರೆಸ್‌ನಲ್ಲಿ ಅಪಸ್ವರ ತೀವ್ರಗೊಳ್ಳುತ್ತಿವೆ.
  • ಅಷ್ಟಕ್ಕೂ ಅಹಿಂದ ಆರಂಭಗೊಂಡಿದ್ದು ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಹಾಗೂ ದಲಿತರ ಐಕ್ಯ ರಾಜಕೀಯ ಉದ್ದೇಶದಿಂದ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲ ವರ್ಗಗಳಿಗೆ ಆದ್ಯತೆ ನೀಡಬೇಕು ಎಂಬ ನಿಲುವಿಗೆ ಅಹಿಂದ ವಿರುದ್ಧವಾಗಿದೆ
Congress: ಅಹಿಂದ ಪ್ರಯೋಗಕ್ಕೆ ಸಿದ್ದರಾಮಯ್ಯ ಸಜ್ಜು: ಕಾಂಗ್ರೆಸ್‌ನಲ್ಲಿ ವಿರೋಧ ವ್ಯಕ್ತ! title=

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಅಹಿಂದ ಚರ್ಚೆ ತೀವ್ರಗೊಂಡಿದೆ. ಮೀಸಲಾತಿ ತಂತ್ರಕ್ಕೆ ಪ್ರತಿತಂತ್ರವಾಗಿ ಅಹಿಂದವನ್ನು ಬಳಕೆ ಮಾಡಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ಈ ಕುರಿತಾಗಿ ಆರಂಭಿಕ ಹಂತದ ತಯಾರಿಗಳು ನಡೆಯುತ್ತಿವೆ. ಆದರೆ ಅಹಿಂದದ ಬಗ್ಗೆ ಕಾಂಗ್ರೆಸ್‌ನಲ್ಲಿ ಅಪಸ್ವರ ತೀವ್ರಗೊಳ್ಳುತ್ತಿವೆ. ಕಾಂಗ್ರೆಸ್ ಒಂದು ಬಣ ಅಹಿಂದಗೆ ವಿರೋಧ ವ್ಯಕ್ತಪಡಿಸಿದೆ.

ಅಷ್ಟಕ್ಕೂ ಅಹಿಂದ ಆರಂಭಗೊಂಡಿದ್ದು ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಹಾಗೂ ದಲಿತರ ಐಕ್ಯ ರಾಜಕೀಯ ಉದ್ದೇಶದಿಂದ. ಆದರೆ ಕಾಂಗ್ರೆಸ್(Congress) ಪಕ್ಷದಲ್ಲಿ ಎಲ್ಲ ವರ್ಗಗಳಿಗೆ ಆದ್ಯತೆ ನೀಡಬೇಕು ಎಂಬ ನಿಲುವಿಗೆ ಅಹಿಂದ ವಿರುದ್ಧವಾಗಿದೆ ಎಂಬುವುದು ಕೆಲವರ ಅಭಿಪ್ರಾಯವಾಗಿದೆ.

Vistadome Coach : ಇನ್ನು ಸಂಪೂರ್ಣ ಗಾಜಿನ ಬೋಗಿಯಲ್ಲಿ ಕುಳಿತು ಸಹ್ಯಾದ್ರಿಯ ದರ್ಶನ ಮಾಡಿ..!

ಕಾಂಗ್ರೆಸ್ ಅಹಿಂದಾಗೆ ಕಟ್ಟು ಬಿದ್ದರೆ ಇತರ ಸಮುದಾಯಗಳು ಕಾಂಗ್ರೆಸ್‌ನಿಂದ ದೂರವಾಗುವ ಅಪಾಯ ಇದೆ ಎಂಬ ಅಭಿಪ್ರಾಯಗಳು ಕಾಂಗ್ರೆಸ್‌ನ ಕೆಲವು ಮುಖಂಡರು ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಅಹಿಂದ ಸಮಾವೇಶಕ್ಕೆ ಮುನ್ನ ಹೈಕಮಾಂಡ್ ಒಪ್ಪಿಗೆ ಪಡೆದುಕೊಳ್ಳಬೇಕಾದ ಅನಿವಾರ್ಯತೆಯೂ ಸಿದ್ದರಾಮಯ್ಯ ಅವರಿ(Siddaramaiah)ಗೆ ಎದುರಾಗಿದೆ.

ಅಧಿಕಾರಕ್ಕೇರುವ ಕನಸು ಕಾಣುವಾಗಲೆಲ್ಲಾ ಅಹಿಂದ ವರ್ಗ ನೆನಪಾಗುವುದೇಕೆ? : ಸಿದ್ದರಾಮಯ್ಯಗೆ ಬಿಜೆಪಿ ಪ್ರಶ್ನೆ

ಅಹಿಂದ ಕುರಿತಾಗಿ ಸಿದ್ದರಾಮಯ್ಯ ಇದುವರೆಗೆ ನೇರವಾಗಿ ಹೇಳಿಕೆಗಳನ್ನು ನೀಡಿಲ್ಲ. ಬದಲಾಗಿ ಅವರ ಆಪ್ತರಷ್ಟೇ ಅಹಿಂದದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ತೆರೆಮರೆಯಲ್ಲಿ ಇಂತಹದೊಂದು ಪ್ರಯತ್ನ ಜೋರಾಗಿ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಪೂರಕವಾಗಿ ಸಿದ್ದರಾಮಯ್ಯ ಅವರು ಎಚ್‌ಸಿ ಮಹದೇವಪ್ಪ(HC Mahadevappa) ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಕುತೂಹಲ ಕೆರಳಿಸಿದೆ.

New Parking Policy : ಇನ್ನು ಮನೆ ಮುಂದೆ ಕಾರು ಪಾರ್ಕಿಂಗ್ ಮಾಡಲು ಬೇಕು ಪರ್ಮಿಶನ್.!

ಒಟ್ಟಿನಲ್ಲಿ ಅಹಿಂದ ಆರಂಭಿಕ ಹಂತದಲ್ಲಿ ಚರ್ಚೆಗಳು, ತಂತ್ರಗಾರಿಕೆಗಳು ನಡೆಯುತ್ತಿರುವಾಗಲೇ ಕಾಂಗ್ರೆಸ್‌ನಲ್ಲಿ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಆದರೆ ಇದು ಎಲ್ಲಿಗೆ ಹೋಗಿ ತಲುಪಲಿದೆ ಎಂಬುವುದು ಸದ್ಯದ ಕುತೂಹಲವಾಗಿದೆ.

ಮೆಟ್ರೋದಲ್ಲಿ ಕನ್ನಡ ಬೋರ್ಡ್ ಯಾಕಿಲ್ಲ ? ಎಂದ ಸಂಸದ ಜಿ.ಸಿ.ಚಂದ್ರಶೇಖರ್ ಗೆ ಉಪರಾಷ್ಟ್ರಪತಿ ಬೆಂಬಲ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News