ಮೌಡ್ಯಾಚರಣೆಯ ತಾಣವಾಯಿತಾ ದಕ್ಷಿಣ ಕಾಶಿ ನಂಜನಗೂಡು

ನಾಗರಿಕ ಸಮಾಜದಲ್ಲಿ ಅನಾಗರಿಕತೆಯ ಕಟ್ಟುಪಾಡು ಜೀವಂತವಾಗಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ ಎಂಬಂತಾಗಿದೆ. ಪ್ರತಿ ವರ್ಷ ಮಾರ್ಚ್ ತಿಂಗಳು ಬಂತೆಂದರೆ ಸಾಕು ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬದ ಹೆಸರಿನಲ್ಲಿ ಮೌಡ್ಯತೆ ತಾಂಡವವಾಡುತ್ತದೆ.

Written by - Zee Kannada News Desk | Last Updated : Mar 18, 2022, 07:03 PM IST
  • ನಾಗರಿಕ ಸಮಾಜದಲ್ಲಿ ಅನಾಗರಿಕತೆಯ ಕಟ್ಟುಪಾಡು ಜೀವಂತವಾಗಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ
  • ಪ್ರತಿ ವರ್ಷ ಮಾರ್ಚ್ ತಿಂಗಳು ಬಂತೆಂದರೆ ಸಾಕು ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬದ ಹೆಸರಿನಲ್ಲಿ ಮೌಡ್ಯತೆ ತಾಂಡವವಾಡುತ್ತದೆ
  • ಸರ್ಕಾರಿ ಅಧಿಕಾರಿಗಳಿಂದಲೇ ಅನಾದಿಕಾಲದ ಕಟ್ಟುಪಾಡಿಗೆ ಅನುಮತಿ ನೀಡಲಾಗುತ್ತದೆ
ಮೌಡ್ಯಾಚರಣೆಯ ತಾಣವಾಯಿತಾ ದಕ್ಷಿಣ ಕಾಶಿ ನಂಜನಗೂಡು title=
ನಂಜನಗೂಡು

ಮೈಸೂರು: ನಾಗರಿಕ ಸಮಾಜದಲ್ಲಿ ಅನಾಗರಿಕತೆಯ ಕಟ್ಟುಪಾಡು ಜೀವಂತವಾಗಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ ಎಂಬಂತಾಗಿದೆ. ಪ್ರತಿ ವರ್ಷ ಮಾರ್ಚ್ ತಿಂಗಳು ಬಂತೆಂದರೆ ಸಾಕು ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬದ ಹೆಸರಿನಲ್ಲಿ ಮೌಡ್ಯತೆ ತಾಂಡವವಾಡುತ್ತದೆ.

ಇದನ್ನೂ ಓದಿ: ಭಗವದ್ಗೀತೆ ಪಠ್ಯಕ್ರಮದಲ್ಲಿ ಸೇರ್ಪಡೆ ವಿಚಾರ: ಹೊಸದಾಗಿ ವೈಭವಿಕರಿಸೋದು ಏನೂ ಬೇಡ ಎಂದ ಡಿಕೆಶಿ

ಸರ್ಕಾರಿ ಅಧಿಕಾರಿಗಳಿಂದಲೇ ಅನಾದಿಕಾಲದ ಕಟ್ಟುಪಾಡಿಗೆ ಅನುಮತಿ ನೀಡಲಾಗುತ್ತದೆ. ಸ್ವಾತಂತ್ರ್ಯ ಪೂರ್ವದ ಸಂಪ್ರದಾಯಕ್ಕೆ ನಾಂದಿ ಹಾಡಬೇಕಾದ ಅಧಿಕಾರಿಗಳೇ ಮೌಢ್ಯತೆ ಮತ್ತು ಕಂದಾಚಾರಕ್ಕೆ ಅನುಮತಿಸುತ್ತಾರೆ ಎಂಬ ಆರೋಪ ಕೇಳಿಬಂದಿದೆ.

ನಿಜವಾಗಲೂ ಮೌಢ್ಯ ಮತ್ತು ಕಂದಾಚಾರಗಳ ಜೀವಂತಿಕೆಯನ್ನು ನಂಜನಗೂಡಿನಲ್ಲಿ ನೋಡಿದರೆ ಎಂಥವರೂ ಅವಕ್ಕಾಗುತ್ತಾರೆ. ಹೊಟ್ಟೆಗೆ ಅನ್ನ ನೀಡದೆ ಉಪವಾಸದ ಹೆಸರಿನಲ್ಲಿ ಅಪ್ರಾಪ್ತ ಬಾಲಕಿಯರಿಗೆ ಶಕ್ತಿದೇವತೆಯ ಪಟ್ಟ ಕಟ್ಟುತ್ತಾರೆ.

ಉಪವಾಸ ಇರುವ ಮಕ್ಕಳ ತಲೆ ಮೇಲೆ ಕಳಸ ಇರಿಸಿ ಮೆರವಣಿಗೆ ಮಾಡುತ್ತಾರೆ. ನಿತ್ರಾಣರಾದ ಮಕ್ಕಳು ಕಣ್ಣೀರು ಹಾಕುತ್ತಿದ್ದರೂ ಬಿಡದೇ ಮೆರವಣಿಗೆ ಮಾಡುವ ದೃಶ್ಯ ಎಂಥವರ ಕರಳನ್ನು ಚುರಕ್ ಎನಿಸದೇ ಇರದು.

ಇದನ್ನೂ ಓದಿ: Asani ಚಂಡಮಾರುತದ ಆತಂಕ, Andaman Nicobarನಲ್ಲಿ ಹೈ ಅಲರ್ಟ್ ಘೋಷಣೆ!

ಅಧಿಕಾರಿಗಳ ಕಣ್ಮುಂದೆಯೇ ಇಷ್ಟೆಲ್ಲಾ ಮೌಡ್ಯ ಮತ್ತು ಕಂದಾಚಾರ ನಡೆದರೂ ಅವರು ಮಾತ್ರ ಕಣ್ಣಿದ್ದು ಕುರುಡರಂತಿರುತ್ತಾರೆ.  ಇದಕ್ಕೆ ಅನೇಕ ಜನ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News