Impact Of Social Media: ಫೇಸ್ಬುಕ್ ಸ್ನೇಹಿತರಿಂದ ಶಾಲೆಗೆ ಬಂತು 22 ಸಾವಿರ ಮೌಲ್ಯದ ಚಾಕೊಲೇಟ್, ಆರ್ಥಿಕ ಸಹಾಯ

Impact Of Social Media: ಚಾಮರಾಜನಗರ ತಾಲೂಕಿನ ಸಿದ್ದಯ್ಯನಪುರ ಶಾಲೆಯ ದೈಹಿಕ‌ ಶಿಕ್ಷಕ ನಾರಾಯಣ ಫೇಸ್ ಬುಕ್ ನಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದು ತಮ್ಮ ಎಫ್ ಬಿ ಅಂದರೆ ಫೇಸ್ ಬುಕ್  ಸ್ನೇಹಿತರ ಮೂಲಕ ಆಗಾಗ್ಗೆ ಶಾಲೆಗೆ ಸಾಧನಾ- ಸಲಕರಣೆ, ಪುಸ್ತಕಗಳನ್ನು ಕೊಡಿಸುತ್ತಾ ಬಂದಿದ್ದಾರೆ. 

Written by - Yashaswini V | Last Updated : Jun 14, 2022, 12:24 PM IST
  • ಸಾಮಾಜಿಕ ಜಾಲತಾಣಗಳನ್ನು ಒಳ್ಳೆಯ ಕಾರ್ಯಕ್ಕೆ ಬಳಸಿಕೊಂಡರೇ ಅದರಷ್ಟು ಪರಿಣಾಮಕಾರಿ ಸಾಧನಾ ಮತ್ತೊಂದಿಲ್ಲ.
  • ಚಾಮರಾಜನಗರ ತಾಲೂಕಿನ ಸಿದ್ದಯ್ಯನಪುರ ಶಾಲೆಯ ದೈಹಿಕ‌ ಶಿಕ್ಷಕ ನಾರಾಯಣ ಫೇಸ್ ಬುಕ್ ನಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ.
  • ಇವರು ಆಗಾಗ್ಗೆ ತಮ್ಮ ಎಫ್ ಬಿ ಸ್ನೇಹಿತರ ಮೂಲಕ ಶಾಲೆಗೆ ಸಾಧನಾ- ಸಲಕರಣೆ, ಪುಸ್ತಕಗಳನ್ನು ಕೊಡಿಸುತ್ತಾ ಬಂದಿದ್ದಾರೆ.
Impact Of Social Media: ಫೇಸ್ಬುಕ್ ಸ್ನೇಹಿತರಿಂದ ಶಾಲೆಗೆ ಬಂತು 22 ಸಾವಿರ ಮೌಲ್ಯದ ಚಾಕೊಲೇಟ್, ಆರ್ಥಿಕ ಸಹಾಯ title=
Social Media Impact

ಚಾಮರಾಜನಗರ:  ನಾಣ್ಯಕ್ಕೆ ಎರಡು ಮುಖ ಇರುವಂತೆ ಸೋಶಿಯಲ್ ಮೀಡಿಯಾದಲ್ಲೂ ಒಳ್ಳೆಯದು ಮತ್ತು ಕೆಟ್ಟದ್ದು ಎರಡೂ ಇರುತ್ತದೆ. ನಾವು ಅದನ್ನು ಯಾವ ರೀತಿ ಬಲಸಿಕೊಳ್ಳುತ್ತೇವೋ ಅದರ ಮೇಲೆ ಅದು ನಮಗೆ ಒಳ್ಳೆಯದೋ ಅಥವಾ ಕೆಟ್ಟದ್ದೋ ಎಂಬುದು ನಿರ್ಧಾರವಾಗುತ್ತದೆ. ಸಾಮಾಜಿಕ ಜಾಲತಾಣಗಳನ್ನು ಒಳ್ಳೆಯ ಕಾರ್ಯಕ್ಕೆ ಬಳಸಿಕೊಂಡರೇ ಅದರಷ್ಟು ಪರಿಣಾಮಕಾರಿ ಸಾಧನಾ ಮತ್ತೊಂದಿಲ್ಲ ಎಂಬುದಕ್ಕೆ  ಈ ಘಟನೆ ಒಂದು ನಿದರ್ಶನವಾಗಿದೆ.

ಚಾಮರಾಜನಗರ ತಾಲೂಕಿನ ಸಿದ್ದಯ್ಯನಪುರ ಶಾಲೆಯ ದೈಹಿಕ‌ ಶಿಕ್ಷಕ ನಾರಾಯಣ ಫೇಸ್ ಬುಕ್ ನಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದು ತಮ್ಮ ಎಫ್ ಬಿ ಅಂದರೆ ಫೇಸ್ ಬುಕ್  ಸ್ನೇಹಿತರ ಮೂಲಕ ಆಗಾಗ್ಗೆ ಶಾಲೆಗೆ ಸಾಧನಾ- ಸಲಕರಣೆ, ಪುಸ್ತಕಗಳನ್ನು ಕೊಡಿಸುತ್ತಾ ಬಂದಿದ್ದಾರೆ. ಅದೇ ರೀತಿ, ಸೋಮವಾರ ಮೋಕ್ಷಗುಂಡಂ ಎಂಬ ಇವರ ಫೇಸ್ ಬುಕ್ ಸ್ನೇಹಿತರೊಬ್ಬರು ಬರೋಬ್ಬರಿ 22 ಸಾವಿರ ರೂ. ಮೌಲ್ಯದಷ್ಟು ಚಾಕೋಲೆಟ್ ಗಳನ್ನು ಶಾಲೆಗೆ ಕಳುಹಿಸಿಕೊಟ್ಟಿದ್ದಾರೆ. 

ಇದನ್ನೂ ಓದಿ- ಪ್ರತಿಭಟನೆ ಹೆಸರಿನಲ್ಲಿ ಕೈ ನಾಯಕರು ಈ ನೆಲದ ಕಾನೂನನ್ನು ಧಿಕ್ಕರಿಸಿದ್ದಾರೆ: ಸಚಿವ ಸುಧಾಕರ್‌

ಫೇಸ್ ಬುಕ್ ಸ್ನೇಹಿತರೊಬ್ಬರು  150, 180 ರೂ.ಮೌಲ್ಯದ ಚಾಕೊಲೇಟ್ ಗಳನ್ನು ವಿದ್ಯಾರ್ಥಿಗಳಿಗೆ ಕಳುಹಿಸಿದ್ದು ಪಿಟಿ ಟೀಚರ್ ನಾರಾಯಣ ಅವರು ಇಂದು ದಾನಿಗಳು ಕಳುಹಿಸಿ ಕೊಟ್ಟ ಚಾಕೊಲೇಟ್ ಗಳನ್ನು ವಿದ್ಯಾರ್ಥಿಗಳಿಗೆ  ಹಂಚಿದ್ದಾರೆ. ಚಾಕೊಲೆಟ್ ಸವಿದ ಶಾಲೆಯ ನೂರಾರು ಮಕ್ಕಳು ಸಖತ್ ಖುಷಿಯಾಗಿದ್ದಾರೆ.

ಆರ್ಥಿಕ ಸಮಸ್ಯೆ ಇದ್ದ ವಿದ್ಯಾರ್ಥಿಗೆ ಧನ ಸಹಾಯ:
ಚಾಮರಾಜನಗರ ತಾಲೂಕಿನ ಅಂಕಶೆಟ್ಟಿಪುರ ಕಾವ್ಯಾ ಎಂಬಾಕೆ ಎಸ್ಎಸ್ಎಲ್ಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು  ಪಿಯುಸಿಗೆ ಸೇರಲು ಆರ್ಥಿಕ  ಸಮಸ್ಯೆ ತಲೆದೂರಿತ್ತು‌. ಇದನ್ನರಿತ ನಾರಾಯಣ ಅವರು ಫೇಸ್ಬುಕ್ ಸ್ನೇಹಿತರ ಮೂಲಕ 22,500 ರೂ. ನಷ್ಟು ಹಣ, ಪುಸ್ತಕಗಳನ್ನು ಕೊಡಿಸುವ ಮೂಲಕ ಗಮನ ಸೆಳೆದಿದ್ದಾರೆ‌.

ಇದನ್ನೂ ಓದಿ- ಹೆಚ್ಚಿದ ಕೋವಿಡ್‌, ಡೆಂಗಿ ಪ್ರಕರಣ: ಆತಂಕ ಬೇಡ ಎಂದ ಆರೋಗ್ಯ ಸಚಿವರು

ಒಟ್ಟಿನಲ್ಲಿ ಯಾವುದೇ ಸಾಧನವನ್ನದರೂ ಒಳತಿಗೆ ಬಳಸಿದರೇ ಪರಿಣಾಮಕಾರಿಯಾಗಿರಲಿದೆ ಎಂಬುದಕ್ಕೆ ಶಿಕ್ಷಕರಾದ ನಾರಾಯಣ ಅವರು ನಿದರ್ಶನ ಎಂದರೂ ತಪ್ಪಾಗಲಾರದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News