'ಐಟಿ ವಿಭಾಗ ಬಿಜೆಪಿ ಏಜೆಂಟ್' ಎಂದು ಆರೋಪಿಸಿ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು

ರಾಜ್ಯ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಮೇಲೆ ಮಾತ್ರ ನಡೆಯುತ್ತಿರುವ ಐಟಿ ದಾಳಿಯನ್ನು ಖಂಡಿಸಿರುವ ಕಾಂಗ್ರೆಸ್ ಪಕ್ಷವು ಐಟಿ ವಿಭಾಗವು ಬಿಜೆಪಿ ಏಜೆಂಟ್ ರೀತಿಯಲ್ಲಿ ವರ್ತಿಸುತ್ತಿದೆ ಎಂದು ಆರೋಪಿಸಿದೆ.

Updated: Apr 16, 2019 , 08:45 PM IST
 'ಐಟಿ ವಿಭಾಗ ಬಿಜೆಪಿ ಏಜೆಂಟ್' ಎಂದು ಆರೋಪಿಸಿ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು

ಬೆಂಗಳೂರು: ರಾಜ್ಯ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಮೇಲೆ ಮಾತ್ರ ನಡೆಯುತ್ತಿರುವ ಐಟಿ ದಾಳಿಯನ್ನು ಖಂಡಿಸಿರುವ ಕಾಂಗ್ರೆಸ್ ಪಕ್ಷವು ಐಟಿ ವಿಭಾಗವು ಬಿಜೆಪಿ ಏಜೆಂಟ್ ರೀತಿಯಲ್ಲಿ ವರ್ತಿಸುತ್ತಿದೆ ಎಂದು ಆರೋಪಿಸಿದೆ.

ಇಂದು ಚುನಾವಣಾ ಆಯೋಗಕ್ಕೆ ಬರೆದಿರುವ ಪತ್ರದಲ್ಲಿ ಮಂಡ್ಯ ಮತ್ತು ಹಾಸನ್ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲಿಗರಲ್ಲಿ ಭಯ ಪಡಿಸಲು ಮತ್ತು ಬಿಜೆಪಿ ಪಕ್ಷವನ್ನು ವಿರೋಧಿಸುವವರ  ಮೇಲೆ ಐಟಿ ದಾಳಿಯನ್ನು ನಡೆಸಲಾಗಿದೆ.ಆದರೆ ಬಿಜೆಪಿ ನಾಯಕರ ಮೇಲೆ ಅದು ದಾಳಿಯನ್ನು ನಡೆಸಿಲ್ಲ ಎಂದು ಉಲ್ಲೇಖಿಸಿದೆ.

ಇನ್ನು ಮುಂದುವರೆದು ಅದು "ರೇಲ್ವೆ ಇಲಾಖೆಯ ಗುತ್ತಿಗೆದಾರರು ಕೇಂದ್ರ ಸರ್ಕಾರದ  ಇತರ ಇಲಾಖೆಗಳ ಮೇಲೆಯೂ ಕೂಡ ಐಟಿ ದಾಳಿ ಮಾಡಬೇಕು ಏಕೆಂದರೆ ಈ ಎಲ್ಲ ಇಲಾಖೆಗಳಿಂದ ಬಿಜೆಪಿಗೆ ಲೋಕಸಭಾ ಚುನಾವಣೆಯಲ್ಲಿ ಹಣ ಬರುತ್ತದೆ " ಎಂದು ಚುನಾವಣಾ ಆಯೋಗಕ್ಕೆ ಆಗ್ರಹಿಸಿದೆ.