ಮಾಜಿ ಸಿಎಂ ಎಸ್.ಎಂ.ಕೃಷ್ಣ ಅಳಿಯನ ಕಚೇರಿಗಳ ಮೇಲೆ ಐಟಿ ರೇಡ್

ಕಾಫಿ ಡೇ ಗ್ರೂಪ್ ಆಫ್ ಕಂಪನೀಸ್ ಸಿಇಓ ಸಿದ್ದಾರ್ಥ್ ಕಛೇರಿಗಳ ಮೇಲೆ ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳ ದಾಳಿ.

Last Updated : Sep 21, 2017, 11:03 AM IST
ಮಾಜಿ ಸಿಎಂ ಎಸ್.ಎಂ.ಕೃಷ್ಣ ಅಳಿಯನ ಕಚೇರಿಗಳ ಮೇಲೆ ಐಟಿ ರೇಡ್ title=

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಳಿಯ, ಕಾಫಿ ಡೇ ಗ್ರೂಪ್ ಆಫ್ ಕಂಪನೀಸ್ ಸಿಇಓ ಸಿದ್ದಾರ್ಥ್ ಅವರ ಯುಬಿ ಸಿಟಿ ಕಚೇರಿ ಸೇರಿದಂತೆ ಅವರ ಇನ್ನುಳಿದ ಕಚೇರಿಗಳ ಮೇಲೆ ಕಂದಾಯ ಇಲಾಖೆಯ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

ಮೂಲತಃ ಚಿಕ್ಕಮಗಳೂರಿನವರಾದ ಸಿದ್ಧಾರ್ಥ್ ಮಂಗಳೂರಿನಲ್ಲಿ ಎಕಾನಾಮಿಕ್ಸ್ ಉನ್ನತ ಪದವೀ ಪಡೆದಿದ್ದರು. ಬಳಿಕ ಎಂಬಿಎ ಮುಗಿಸಿ ಉದ್ಯಮವನ್ನು ಪ್ರಾರಂಭಿಸಿದ್ದರು. ತನ್ನ 24ನೇ ವರ್ಷದಲ್ಲೇ ಉದ್ಯಮ ಪ್ರಾರಂಭಿಸಿದ ಸಿದ್ಧಾರ್ಥ್ ಬೇರೆ ಬೇರೆ ಉದ್ಯಮಗಳ ಬಳಿಕ ಕಾಫಿ ಡೇ ಪ್ರಾರಂಭಿಸಿದ್ದರು. 

1993 ರಲ್ಲಿ ಕೆಫೆ ಕಾಫಿ ಡೇ ಶುರುಮಾಡಿದ್ದ ಸಿದ್ಧಾರ್ಥ್ 1996ರಲ್ಲಿ ಕಾಫಿಯನ್ನು ಪರಿಚಯ ಮಾಡಿದ್ದರು. ಇವರು 300 ಕೋಟಿಗೂ ಅಧಿಕ ಟರ್ನ್ ಓವರ್ ಹೊಂದಿದ್ದಾರೆ.

Trending News