ಜೈನ್ ಮುನಿ ಕೊಲೆಗಾರರಿಗೆ ತಕ್ಕ ಶಿಕ್ಷೆ ಆಗಲಿ: ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹ

ಹುಬ್ಬಳ್ಳಿ ತಾಲೂಕಿನ ವರೂರಿನ ಜೈನಮುನಿಯನ್ನು ಭೇಟಿಯಾದ  ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಗಣುನಂದಿ ಮಹಾರಾಜರಿಗೆ ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಜೈನ ಮುನಿ ಕಾಮಕುಮಾರ ಮಹಾರಾಜರ ಕೊಲೆ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಲೇಬೇಕು ಎಂದು ಆಗ್ರಹಿಸಿದರು. 

Written by - Yashaswini V | Last Updated : Jul 11, 2023, 03:44 PM IST
  • ಬಿಜೆಪಿಯವರು ನಾಲಾಯಕರು.
  • ಮಾತಾಡೋಕೆ ನಿಮಗೆ ನೈತಿಕತೆ ಇಲ್ಲ.
  • ನೀವು ಹಿಂದೂ ಕಾರ್ಯಕರ್ತರ ಜೊತೆ ಗಟ್ಟಿಯಾಗಿ ನಿಂತಿದ್ದರೆ ತಲೆ ಮೇಲೆ ಹೊತ್ತುಕೊಳ್ಳುತ್ತಿದ್ದೆವು- ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್
ಜೈನ್ ಮುನಿ ಕೊಲೆಗಾರರಿಗೆ ತಕ್ಕ ಶಿಕ್ಷೆ ಆಗಲಿ: ಶ್ರೀರಾಮ ಸೇನೆ ಮುಖ್ಯಸ್ಥ  ಪ್ರಮೋದ್ ಮುತಾಲಿಕ್ ಆಗ್ರಹ  title=

ಹುಬ್ಬಳ್ಳಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ಜೈನ್ ಮುನಿ ಕಾಮಕುಮಾರ ಮಹಾರಾಜರ ಕೊಲೆ ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹ ಪಡಿಸಿದರು. 

ಹುಬ್ಬಳ್ಳಿ ತಾಲೂಕಿನ ವರೂರಿನ ಜೈನಮುನಿಯನ್ನು ಭೇಟಿಯಾದ  ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಗಣುನಂದಿ ಮಹಾರಾಜರಿಗೆ ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಜೈನ ಮುನಿ ಕಾಮಕುಮಾರ ಮಹಾರಾಜರ ಕೊಲೆ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಲೇಬೇಕು ಎಂದು ಆಗ್ರಹಿಸಿದರು. 

ಕಾಂಗ್ರೆಸ್​  ಸರ್ಕಾರ ಬಂದ ಮೇಲೆ ಹಿಂದೂ ವಿರೋಧಿ ವಾತಾವರಣ ಸೃಷ್ಠಿಯಾಗಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಆತಂಕ ಇತ್ತು. ಬಿಜೆಪಿ ಸರ್ಕಾರವಿದ್ದಾಗಲೂ ಹಿಂದೂ ಕಾರ್ಯಕರ್ತರ ಹತ್ಯೆ ಆಗಿದೆ. ಅದಕ್ಕಾಗಿ ಬಿಜೆಪಿಯವರನ್ನು ಕರ್ನಾಟಕದಲ್ಲಿ ನೆಲಸಮ ಮಾಡಿದ್ದಾರೆ. ಕಾಂಗ್ರೆಸ್​​ನವರು‌ ಮುಸ್ಲಿಮರ ಪರವಾಗಿ ಇದ್ದಾರೆ ಎಂದು ಶ್ರೀರಾಮ್​ ಸೇನೆ ಸ್ಥಾಪಕ ಪ್ರಮೋದ್​ ಮುತಾಲಿಕ್  ಹೇಳಿದ್ದಾರೆ.

ಇದನ್ನೂ ಓದಿ- ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಇಲ್ಲಿ ನಿತ್ಯ ನರಕಯಾತನೆ!

ಚಿಕ್ಕೋಡಿಯ ಕಾಮಕುಮಾರ್ ನಂದಿ ಸ್ವಾಮೀಜಿ ಹತ್ಯೆ ಹಿನ್ನೆಲೆ ವರೂರಿನ ನವಗ್ರಹ ತೀರ್ಥ ಕ್ಷೇತ್ರದ ಗುಣಧರನಂದಿ ಮಹಾರಾಜ್ ಸ್ವಾಮೀಜಿಯನ್ನು ಭೇಟಿಯಾಗಿ ಪ್ರಮೋದ್ ಮುತಾಲಿಕ್ ಸಂತಾಪ ಸೂಚಿಸಿದರು. ವರೂರಿನ ನವಗ್ರಹ ತೀರ್ಥ ಕ್ಷೇತ್ರದ ಗುಣಧರನಂದಿ ಮಹಾರಾಜ್ ಸ್ವಾಮೀಜಿ ಜೊತೆಗೆ ಒಂದು ಗಂಟೆಗೂ ಅಧಿಕ ಕಾಲ ಮಾತನಾಡಿ ಕೊಲೆ ಸಂಬಂಧಿಸಿದ ನಡೆದ ಘಟನೆ ಹಾಗೂ ಕಾನೂನು ವ್ಯವಸ್ಥೆ ಕುರಿತು ಸಹ  ಪ್ರಸ್ತಾಪ ಮಾಡಿದರು‌.

ಬಳಿಕ ಮಾಧ್ಯಮ ಪ್ರತಿನಿ ಧಿಗಳೊಂದಿಗೆ ಮಾತನಾಡಿದ ಅವರು ಬಿಜೆಪಿಯವರು ನಾಲಾಯಕರು. ಮಾತಾಡೋಕೆ ನಿಮಗೆ ನೈತಿಕತೆ ಇಲ್ಲ. ನೀವು ಹಿಂದೂ ಕಾರ್ಯಕರ್ತರ ಜೊತೆ ಗಟ್ಟಿಯಾಗಿ ನಿಂತಿದ್ದರೆ ತಲೆ ಮೇಲೆ ಹೊತ್ತುಕೊಳ್ಳುತ್ತಿದ್ದೆವು. ಸತ್ಯಶೋಧನೆ ಏನ್ ಮಾಡುತ್ತೀರಿ. ಕಾಂಗ್ರೆಸ್ ಮೇಲೆ ಹಾಕುತ್ತೀರಿ, ನಾಟಕ ಮಾಡುತ್ತೀರಿ ಎಂದು ವಾಗ್ದಾಳಿ ನಡೆಸಿದರು. 

ಇದೇ ವೇಳೆ ಕಾಂಗ್ರೆಸ್ ಪಕ್ಷದ ವಿರುದ್ಧವೂ ತೀವ್ರ ವಾಗ್ಧಾಳಿ ನಡೆಸಿದ ಪ್ರಮೋದ್ ಮುತಾಲಿಕ್, ಕಾಂಗ್ರೆಸ್​ನವರು‌ ಮುಸ್ಲಿಂ ಪರವಾಗಿ ಇದ್ದೀರಿ. ಯಾಕೆ ಮುಸ್ಲಿಂ ಹೆಸರು ಹೇಳುತ್ತಿಲ್ಲ. ಯಾಕೆ ಹಿಂದೂ ಹೆಸರು ಹೇಳಿದ್ರೀ. ಕಾಂಗ್ರೆಸ್ ತುಷ್ಟೀಕರಣ ಹೆಚ್ಚಾಗಿದೆ.  ನಾವು ಅನ್ಯಾಯವನ್ನು ಸಹಿಸುವುದಿಲ್ಲ. ನಾವ್ ಸುಮ್ಮನೆ ಬಿಡಲ್ಲ. ನಾವು ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ- ಶಕ್ತಿ ಯೋಜನೆ: ಬುರ್ಖಾ ಧರಿಸಿ ಬಸ್‌ನಲ್ಲಿ ಅವಳಲ್ಲ ಅವನ ಪ್ರಯಾಣ, ಮುಂದೆ...

ನಮ್ಮ ರಾಜ್ಯದಲ್ಲೂ ಉತ್ತರ ಪ್ರದೇಶದ ಮಾದರಿ ಜಾರಿಯಾಗಲಿ: 
ಕಠಿಣ ಶಿಕ್ಷೆ ಅಂದರೇ ಏನು, ನಮ್ಮ ಸಿಸ್ಟಮ್ ಸರಿ ಇಲ್ಲ. ಒಂದು ವರ್ಷದಲ್ಲಿ ಅವರು ಹೊರಗೆ ಬರುತ್ತಾರೆ. ಉತ್ತರ ಪ್ರದೇಶ ಮಾದರಿಯಲ್ಲಿ ಆರೋಪಿಗಳ ಮನೆಗೆ ಬುಲ್ಡೋಜರ್ ಹತ್ತಿಸಬೇಕು. ಕ್ರೌರ್ಯ ಕ್ರೌರ್ಯನೆ. ಯಾರೇ ಇರಲಿ ಅವರ ಮನೆ ಮೇಲೆ ಬುಲ್ಡೋಜರ್ ಹತ್ತಿಸಬೇಕು. ಸನ್ಯಾಸಿ ಕೊಲ್ಲಲು‌ ಯಾವ ಮಾನಸಿಕತಿ ಇದೆ. ಇದು ಕರ್ನಾಟಕಕ್ಕೆ ಕಳಂಕ ಎಂದರು.

ವಿಧಾನಸಭೆಯಲ್ಲಿ ನಮಾಜ್​ಗೆ ಅವಕಾಶ ಕೊಡವ ವಿಚಾರವಾಗಿ ಮಾತನಾಡಿದ ಅವರು ವಿಧಾನಸೌಧ ಏನು ಮೆಕ್ಕಾ ಮದೀನಾನಾ? ಇದನ್ನೇನು ಮೆಕ್ಕಾ ಮದೀನಾ ಅಂತಾ ತಿಳಿದುಕೊಂಡಿದ್ದೀರಾ ? ಇದು ಡೆಂಜರಸ್ ಮಾನಸಿಕತೆ. ವಿಧಾನಸೌಧ ಪವಿತ್ರ ದೇಗುಲ, ಅಲ್ಲಿ ನಮಾಜ್ ಮಾಡುತ್ತೀರಾ ನೀವು. ಕಡತದಿಂದ ಆ ಮಾತನ್ನು ವಾಪಸ್ ತಗಿಬೇಕು. ಅವರಿಗೆ ಶಿಕ್ಷೆಯಾಗಬೇಕು. ಇದೇ ಕೋಮುವಾದ. ಇದನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/38l6m8543Vk?feature=share

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News