ಪ್ರಧಾನಿ ಮೋದಿ ಆಡಳಿತದಲ್ಲಿ ಸೈನಿಕರಿಗೆ ರಕ್ಷಣೆ ಇಲ್ಲ, ಗಡಿಗಳು ಸುರಕ್ಷಿತವಾಗಿಲ್ಲ: ಕಾಂಗ್ರೆಸ್

Parliament security lapse: ಪುಲ್ವಾಮ ದಾಳಿಗೂ ಮೊದಲು ಇಂಟಲಿಜೆನ್ಸ್ ಎಚ್ಚರಿಕೆ ನೀಡಿದ್ದರೂ ಸಹ ದುರಂತ ನಡೆಯಲು ಅನುವು ಮಾಡಿಕೊಡಲಾಗಿತ್ತು. ಈಗ ಖಲಿಸ್ತಾನಿ ಉಗ್ರರು ದಾಳಿ ಮಾಡುವ ಸುಳಿವು ನೀಡಿದ್ದರೂ ಸಹ ಭದ್ರತೆಯನ್ನು ಬಿಗಿಗೊಳಿಸದೆ ದಾಳಿಗೆ ಅನುವು ಮಾಡಿಕೊಡಲಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.

Written by - Puttaraj K Alur | Last Updated : Dec 14, 2023, 03:41 PM IST
  • ಪ್ರಧಾನಿ ಮೋದಿ ಆಡಳಿತದಲ್ಲಿ ಸೈನಿಕರಿಗೆ ರಕ್ಷಣೆ ಇಲ್ಲ, ಗಡಿಗಳು ಸುರಕ್ಷಿತವಾಗಿಲ್ಲ
  • ದೇಶದ ಮಹಿಳೆಯರಿಗೆ ರಕ್ಷಣೆ ಇಲ್ಲ, ರೈತರು, ವಿದ್ಯಾರ್ಥಿಗಳಿಗೆ ರಕ್ಷಣೆ ಇಲ್ಲ & ಈಗ ಸಂಸತ್ತಿಗೇ ರಕ್ಷಣೆ ಇಲ್ಲ
  • ಪ್ರಧಾನಿ ಮೋದಿ "ಚೌಕಿದಾರ್" ಆಗಿದ್ದು ಅದಾನಿ-ಅಂಬಾನಿಗಳಿಗೆ ಮಾತ್ರವೇ ಬಿಜೆಪಿ? ಎಂದು ಪ್ರಶ್ನಿಸಿದ ಕಾಂಗ್ರೆಸ್
ಪ್ರಧಾನಿ ಮೋದಿ ಆಡಳಿತದಲ್ಲಿ ಸೈನಿಕರಿಗೆ ರಕ್ಷಣೆ ಇಲ್ಲ, ಗಡಿಗಳು ಸುರಕ್ಷಿತವಾಗಿಲ್ಲ: ಕಾಂಗ್ರೆಸ್ title=
ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಆಕ್ರೋಶ!

ಬೆಂಗಳೂರು: ಇತ್ತೀಚೆಗಷ್ಟೇ ಉದ್ಘಾಟನೆಯಾಗಿದ್ದ ನೂತನ ಸಂಸತ್​ ಭವನದಲ್ಲಿ ಬುಧವಾರ ಭಾರೀ ಭದ್ರತಾ ಲೋಪವಾಗಿರುವ ವಿಚಾರಕ್ಕೆ ಸಂಬಂಧಿಸಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಮತ್ತು ಬಿಜೆಪಿ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ.

ಈ ಬಗ್ಗೆ ಗುರುವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಪುಲ್ವಾಮ ದಾಳಿಗೂ ಮೊದಲು ಇಂಟಲಿಜೆನ್ಸ್ ಎಚ್ಚರಿಕೆ ನೀಡಿದ್ದರೂ ಸಹ ದುರಂತ ನಡೆಯಲು ಅನುವು ಮಾಡಿಕೊಡಲಾಗಿತ್ತು. ಈಗ ಖಲಿಸ್ತಾನಿ ಉಗ್ರರು ದಾಳಿ ಮಾಡುವ ಸುಳಿವು ನೀಡಿದ್ದರೂ ಸಹ ಭದ್ರತೆಯನ್ನು ಬಿಗಿಗೊಳಿಸದೆ ದಾಳಿಗೆ ಅನುವು ಮಾಡಿಕೊಡಲಾಗಿದೆ’ ಎಂದು ಟೀಕಿಸಿದೆ.

ಇದನ್ನೂ ಓದಿ: ಪ್ರಥಮ ಬಾರಿಗೆ ಶಾಸಕನಾದ ವ್ಯಕ್ತಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಿದ ಬಿಜೆಪಿ..! ಏಕೆ ಗೊತ್ತೆ..?

‘ಪ್ರಧಾನಿ ಮೋದಿ ಆಡಳಿತದಲ್ಲಿ ಸೈನಿಕರಿಗೆ ರಕ್ಷಣೆ ಇಲ್ಲ, ಗಡಿಗಳು ಸುರಕ್ಷಿತವಾಗಿಲ್ಲ, ದೇಶದ ಮಹಿಳೆಯರಿಗೆ ರಕ್ಷಣೆ ಇಲ್ಲ, ರೈತರು, ವಿದ್ಯಾರ್ಥಿಗಳಿಗೆ ರಕ್ಷಣೆ ಇಲ್ಲ, ಈಗ ಸಂಸತ್ತಿಗೇ ರಕ್ಷಣೆ ಇಲ್ಲ. ಪ್ರಧಾನಿ ಮೋದಿ "ಚೌಕಿದಾರ್" ಆಗಿದ್ದು ಅದಾನಿ, ಅಂಬಾನಿಗಳಿಗೆ ಮಾತ್ರವೇ ಬಿಜೆಪಿ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

‘ಸಂಸತ್ ದಾಳಿ ಪ್ರಕರಣದ ಆರೋಪಿಗಳಿಗೆ ಪಾಸ್ ಒದಗಿಸಿದ್ದು ಸಂಸದ ಪ್ರತಾಪ್ ಸಿಂಹ. ಇದುವರೆಗೂ ಪ್ರತಾಪ್ ಸಿಂಹರ ವಿಚಾರಣೆ ಇಲ್ಲ. ಇದುವರೆಗೂ ಪ್ರತಾಪ್ ಸಿಂಹರ ಬಂಧನವಿಲ್ಲ. ಇದುವರೆಗೂ ಪ್ರತಾಪ್ ಸಿಂಹರನ್ನು ವಜಾಗೊಳಿಸಿಲ್ಲ. ಇದುವರೆಗೂ ಪ್ರತಾಪ್ ಸಿಂಹರ ವಿರುದ್ಧ ಸೋಕಾಲ್ಡ್ ದೇಶಭಕ್ತ ಬಿಜೆಪಿಗರ ವಾಗ್ದಾಳಿ ಇಲ್ಲ. ಮುಖ್ಯವಾಗಿ ಇದುವರೆಗೂ ಸಂಸತ್ ದಾಳಿ ವಿಚಾರದಲ್ಲಿ ಬಿಜೆಪಿ ಒಂದೂ ಟ್ವೀಟ್ ಮಾಡಿಲ್ಲ’ವೆಂದು ಕಾಂಗ್ರೆಸ್ ಟೀಕಿಸಿದೆ.

ಇದನ್ನೂ ಓದಿ: ಭಜನ್‌ಲಾಲ್‌ ಶರ್ಮಾಗೆ ರಾಜಸ್ಥಾನದ ಸಿಎಂ ಪಟ್ಟ

‘ದೇಶವೇ ಬೆಚ್ಚಿಬೀಳುವಂತಹ ಘಟನೆ ಸಂಸತ್ತಿನಲ್ಲಿ ನಡೆದಿದೆ, ದೇಶದ ಭದ್ರತೆಯನ್ನು ಅಣಕಿಸುವಂತಹ ಘಟನೆ ಅದು. ಇಡೀ ದೇಶವೇ ಸಂಸತ್ತಿನಲ್ಲಿ ನಡೆದ ಘಟನೆ ಬಗ್ಗೆ ಚರ್ಚಿಸುತ್ತಿದೆ. ಆದರೆ... ಇದುವರೆಗೂ ಕನಿಷ್ಠ ಪಕ್ಷ ಘಟನೆಯನ್ನು ಖಂಡಿಸಿಯಾದರೂ ಒಂದು ಟ್ವೀಟ್ ಮಾಡಿಲ್ಲ ಬಿಜೆಪಿ. ಇದು ವೈಫಲ್ಯವನ್ನು ಒಪ್ಪಿಕೊಳ್ಳುವ ಮೌನವೇ? ಅಥವಾ ಭಯೋತ್ಪಾದಕ ಚಟುವಟಿಕೆಯನ್ನು ಸಮರ್ಥಿಸುವ ಮೌನವೇ?’ ಎಂದು ಕಾಂಗ್ರೆಸ್ ಕುಟುಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News