TB Test : ಕೊರೋನಾದಿಂದ ಗುಣಮುಖರಾದವರಿಗೆ 'TB ಟೆಸ್ಟ್' ಗೆ ಒಳಗಾಗುವಂತೆ ರಾಜ್ಯ ಸರ್ಕಾರ ಒತ್ತಾಯ!

ಕೋವಿಡ್ -19 ರಿಂದ ಚೇತರಿಸಿಕೊಂಡ ಎಲ್ಲ ರೋಗಿಗಳಿಗೆ ಟಿಬಿ(Tuberculosis) ಬರುತ್ತದೆ ಎಂದಲ್ಲ, ಆದರೆ ಕೋವಿಡ್ -19 ಮತ್ತು ಟಿಬಿ ಎರಡೂ ಪ್ರಾಥಮಿಕವಾಗಿ ಶ್ವಾಸಕೋಶಗಳಿಗೆ ಸೋಂಕು ತಗುಲುವುದರಿಂದ, ಚೇತರಿಸಿಕೊಂಡ ರೋಗಿಗಳು ಸ್ವಯಂಪ್ರೇರಣೆಯಿಂದ ಟಿಬಿ ಟೆಸ್ಟ್ ಮಾಡಿಸಿಕೊಳ್ಳುವುದು ಬಹಳ ಮುಖ್ಯ ಹೇಳಿದರು.

Written by - Channabasava A Kashinakunti | Last Updated : Aug 18, 2021, 10:29 AM IST
  • ಕೋವಿಡ್ -19 ನಿಂದ ಚೇತರಿಸಿಕೊಂಡವರಲ್ಲಿ ಹೆಚ್ಚಾಗುತ್ತಿರುವ ಟಿಬಿ ರೋಗ
  • ರಾಜ್ಯ ಸರ್ಕಾರವು 'ಸ್ಪೆಷಲ್ ಟಿಬಿ ಟೆಸ್ಟ್ ಡ್ರೈವ್' ಅನ್ನು ಸಹ ಪ್ರಾರಂಭಿಸಿದೆ
  • 2017 ರಿಂದ 75 ಲಕ್ಷ ಶಂಕಿತ ಪ್ರಕರಣಗಳನ್ನು ಗುರುತಿಸಲಾಗಿದೆ
TB Test : ಕೊರೋನಾದಿಂದ ಗುಣಮುಖರಾದವರಿಗೆ 'TB ಟೆಸ್ಟ್' ಗೆ ಒಳಗಾಗುವಂತೆ ರಾಜ್ಯ ಸರ್ಕಾರ ಒತ್ತಾಯ! title=

ಬೆಂಗಳೂರು : ಕೋವಿಡ್ -19 ನಿಂದ ಚೇತರಿಸಿಕೊಂಡವರಲ್ಲಿ ಕ್ಷಯರೋಗ (TB) ರೋಗವು ಹೆಚ್ಚಾಗುತ್ತಿರುವುದರಿಂದ ಜನರಿಗೆ ಸ್ವಯಂಪ್ರೇರಣೆಯಿಂದ ಕ್ಷಯರೋಗ (ಟಿಬಿ) ಟೆಸ್ಟ್ ಮಾಡಿಸಿಕೊಳ್ಳುವಂತೆ ಒತ್ತಾಯಿಸಲಾಗುತ್ತಿದೆ.

ಇದಕ್ಕಾಗಿ ರಾಜ್ಯ ಸರ್ಕಾರವು 'ಸ್ಪೆಷಲ್ ಟಿಬಿ ಟೆಸ್ಟ್ ಡ್ರೈವ್'(Special TB Test Drive) ಅನ್ನು ಸಹ ಪ್ರಾರಂಭಿಸಿದೆ, ಇದು ಆಗಸ್ಟ್ 31 ರವರೆಗೆ ಜಾರಿ ಇರಲಿದೆ.

ಇದನ್ನೂ ಓದಿ : ಬದುಕಿದ್ದರೆ ಇದೇ ಅವಧಿಯಲ್ಲಿಯೇ ನಾನು ಸಿಎಂ ಆಗ್ತೀನಿ: ಉಮೇಶ್ ಕತ್ತಿ ಹೊಸ ಬಾಂಬ್..!

ಈ ಕುರಿತು ಮಾತನಾಡಿದ ಆರೋಗ್ಯ ಸಚಿವ ಡಾ ಕೆ ಸುಧಾಕರ್(K Sudhakar), ಕೋವಿಡ್ -19 ರಿಂದ ಚೇತರಿಸಿಕೊಂಡವರು ಸ್ವಯಂಪ್ರೇರಣೆಯಿಂದ ಕ್ಷಯರೋಗ ಟೆಸ್ಟ್ ಮಾಡಿಸಿಕೊಳ್ಳಬೇಕು. ಆರಂಭಿಕ ಹಂತದಲ್ಲಿ ರೋಗ ಪತ್ತೆಯಾದರೆ ಚಿಕಿತ್ಸೆ ಸುಲಭವಾಗುತ್ತದೆ ಎಂದು ಹೇಳಿದರು.

ರಾಜ್ಯದಲ್ಲಿ 28 ಲಕ್ಷಕ್ಕೂ ಹೆಚ್ಚು ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಕೋವಿಡ್ -19(Covid-19) ಮತ್ತು ಟಿಬಿ ಎರಡೂ ಶ್ವಾಸಕೋಶಗಳಿಗೆ ಸೋಂಕು ತಗುಲಿರುವ ಕಾರಣ ನಾವು ಈ ವಿಶೇಷ ಡ್ರೈವ್ ಅನ್ನು ಪ್ರಾರಂಭಿಸಿದ್ದೇವೆ, ಇದು ಕೊರೋನಾದಿಂದ ಚೇತರಿಸಿಕೊಂಡ ಜನರಲ್ಲಿ ಕ್ಷಯರೋಗವನ್ನು ಮೊದಲೇ ಪತ್ತೆ ಮಾಡುತ್ತದೆ ಹೇಳಿದ್ದಾರೆ.

ಇದನ್ನೂ ಓದಿ : ಸ್ವಾತಂತ್ರ್ಯ ದಿನದಂದೇ ದುರಂತ: ಧ್ವಜಸ್ತಂಬ ನಿಲ್ಲಿಸುವ ವೇಳೆ ವಿದ್ಯುತ್ ಸ್ಪರ್ಶಿಸಿ ಬಾಲಕ ಸಾವು!

ಕೋವಿಡ್ -19 ರಿಂದ ಚೇತರಿಸಿಕೊಂಡ ಎಲ್ಲ ರೋಗಿಗಳಿಗೆ ಟಿಬಿ(Tuberculosis) ಬರುತ್ತದೆ ಎಂದಲ್ಲ, ಆದರೆ ಕೋವಿಡ್ -19 ಮತ್ತು ಟಿಬಿ ಎರಡೂ ಪ್ರಾಥಮಿಕವಾಗಿ ಶ್ವಾಸಕೋಶಗಳಿಗೆ ಸೋಂಕು ತಗುಲುವುದರಿಂದ, ಚೇತರಿಸಿಕೊಂಡ ರೋಗಿಗಳು ಸ್ವಯಂಪ್ರೇರಣೆಯಿಂದ ಟಿಬಿ ಟೆಸ್ಟ್ ಮಾಡಿಸಿಕೊಳ್ಳುವುದು ಬಹಳ ಮುಖ್ಯ ಹೇಳಿದರು.

ಕೊರೋನಾ(Corona)ದಿಂದಾಗಿ ರಾಜ್ಯದಲ್ಲಿ ಕ್ಷಯರೋಗ ಪತ್ತೆ ಮಾಡಲಾಗಿದೆ. 2017 ರಿಂದ 75 ಲಕ್ಷ ಶಂಕಿತ ಪ್ರಕರಣಗಳನ್ನು ಗುರುತಿಸಲಾಗಿದೆ ಮತ್ತು ಅವುಗಳಲ್ಲಿ ಶೇ.88 ಪರೀಕ್ಷೆ ಮಾಡಲಾಗಿದೆ ಅವರಲ್ಲಿ ಸುಮಾರು 3.9% ಜನರು ಟಿಬಿಯಿಂದ ಸೋಂಕಿಗೆ ಒಳಗಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : Independence Day 2021: ‘ಅಮೃತ’ ಹೊಸ ಯೋಜನೆಗಳನ್ನು ಘೋಷಿಸಿದ ಸಿಎಂ ಬಸವರಾಜ್ ಬೊಮ್ಮಾಯಿ

ಕೊರೋನಾ ಮೂರನೆ ಅಲೆ(corona 3rd wave) ಬಗ್ಗೆ ಹೆಚ್ಚುತ್ತಿರುವ ಆತಂಕಗಳ ನಡುವೆ 'ಆರೋಗ್ಯ ನಂದನ' ಎಂಬ ಹೊಸ ಯೋಜನೆ ಒಂದಕ್ಕೆ ಚಾಲನೆ ನೀಡಿದ ಮಾತನಾಡಿದ ಸಚಿವ ಸುಧಾಕರ್, ಈ ಯೋಜನೆಯ ಅಡಿಯಲ್ಲಿ, ಕಡಿಮೆ ರೋಗನಿರೋಧಕ ಶಕ್ತಿ ಮತ್ತು ಇತರ ಸಹವರ್ತಿಗಳನ್ನು ಹೊಂದಿರುವ ಮಕ್ಕಳನ್ನು ಗುರುತಿಸಲಾಗುವುದು ಮತ್ತು ಅವರಿಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪೌಷ್ಟಿಕ ಆಹಾರ ಮತ್ತು ಪೂರಕಗಳನ್ನು ನೀಡಲಾಗುವುದು. ಅವರ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಲು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News