ತಾಂತ್ರಿಕ ಸಲಹಾ ಸಮಿತಿ ಒಪ್ಪಿದರೆ ಶಾಲೆ ತೆರೆಯುವ ನಿರ್ಧಾರ: ಸಚಿವ ಬಿ.ಸಿ ನಾಗೇಶ್

Minister BC Nagesh: ಶಾಲೆಗಳನ್ನ ನಡೆಸಲು ತಾಂತ್ರಿಕ ಸಲಹಾ ಸಮಿತಿ‌ ಸೂಚಿಸಿದರೆ ಮಹಾನಗರಗಳಲ್ಲೂ ಶಾಲೆ ನಡೆಸಲು ಮುಂದಾಗುತ್ತೇವೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ. 

Edited by - Zee Kannada News Desk | Last Updated : Jan 20, 2022, 10:05 PM IST
  • 10, 11, 12 ಶಾಲೆಗೆ ಬರುತ್ತಿರುವ ಮಕ್ಕಳಿಗೆ ವ್ಯಾಕ್ಸಿನ್ ಕೊಡಲಾಗಿದೆ
  • ತಾಂತ್ರಿಕ ಸಲಹಾ ಸಮಿತಿ ಒಪ್ಪಿದರೆ ಶಾಲೆ ತೆರೆಯುವ ನಿರ್ಧಾರ
  • ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿಕೆ
ತಾಂತ್ರಿಕ ಸಲಹಾ ಸಮಿತಿ ಒಪ್ಪಿದರೆ ಶಾಲೆ ತೆರೆಯುವ ನಿರ್ಧಾರ: ಸಚಿವ ಬಿ.ಸಿ ನಾಗೇಶ್  title=
ಬಿ.ಸಿ ನಾಗೇಶ್

ಬೆಂಗಳೂರು: 10, 11, 12 ಶಾಲೆಗೆ ಬರುತ್ತಿರುವ ಮಕ್ಕಳಿಗೆ ವ್ಯಾಕ್ಸಿನ್ ಕೊಡಲಾಗಿದೆ. 10ನೇ ತರಗತಿ ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿಲ್ಲ. ತಾಂತ್ರಿಕ ಸಲಹಾ ಸಮಿತಿ ಜೊತೆ ಚರ್ಚೆ ಮಾಡಿಯೇ ಮುಂದಿನ ನಿರ್ಧಾರ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ (Minister BC Nagesh) ಹೇಳಿದ್ದಾರೆ. 

ಶಿಕ್ಷಣ ಇಲಾಖೆ ನೋಡಬೇಕಿರುವುದು ಮಕ್ಕಳ ಕಲಿಕೆ. ರಾಜ್ಯದ ಎಲ್ಲಾ ಜವಾಬ್ದಾರಿ ಇರುವ ಸಿಎಂ ಅವರೇ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು. ಸಿಎಂ ನಿರ್ಧಾರಕ್ಕೆ ನಾವು ಬದ್ಧ ಎಂದಿದ್ದಾರೆ. 

ಈ ಬಾರಿ ಕಳೆದ‌ ತಾಂತ್ರಿಕ ಸಭೆ ಸಿಎಂ ನೇತೃತ್ವದಲ್ಲಿ ಸೇರಿದ್ದೆವು. ಕಳೆದ ಎರಡು ಕೋವಿಡ್ (Covid) sಸಭೆ ಬಗ್ಗೆ ಚರ್ಚೆ ಮಾಡಲಾಯ್ತು. ರಾಜ್ಯದಲ್ಲಿ ಒಂದೇ ಬಾರಿ ಶಾಲೆ ಮುಚ್ಚಬಾರದು ಅಂತ ಸೂಚಿಸಲಾಗಿತ್ತು. ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿತ್ತು. ಪಾಸಿಟಿವಿಟಿ ನೋಡಿಕೊಂಡು ಶಾಲೆ ಮುಚ್ಚುವ ಯತ್ನ ಮಾಡಲಾಯ್ತು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಯಾರೋ ಮಿಸ್ ಗೈಡ್ ಮಾಡಿದ್ದಾರೆ, ಯಾವ ಗಲಾಟೆನೂ ಇಲ್ಲ, ಏನು ಇಲ್ಲ: ಕೆಪಿಸಿಸಿ ಅಧ್ಯಕ್ಷ ಡಿಕೆಶಿ

ಅವಶ್ಯಕತೆ ತಕ್ಕಂತೆ ಮಹಾನಗರ ಪ್ರದೇಶದಲ್ಲಿ ಮಾತ್ರ ಶಾಲೆ ಮುಚ್ಚಲಾಯಿತು. ಮೈಸೂರು, ಶಿವಮೊಗ್ಗ ಸೇರದಂತೆ ಕೆಲವೆಡೆ ಮಾತ್ರ ಸಮಸ್ಯೆ ಇತ್ತು. ಶೇ.80ರಷ್ಟು ಶಾಲೆಗಳು ಎಂದಿನಂತೆ ನಡೆದವು. ಪಾಸಿಟಿವ್ (Corona Positivity) ದರ ಹೆಚ್ಚಾದ್ರೂ ಮಕ್ಕಳಿಗೆ ಯಾವುದೇ ಸಮಸ್ಯೆ ಆಗಿಲ್ಲ ಎಂದು ಹೇಳಿದ್ದಾರೆ. 

ನಾಳೆ ತಾಂತ್ರಿಕ ಸಲಹಾ ಸಮಿತಿ (Technical Advisory Committee) ಮುಂದೆ ಶಾಲೆ ನಡೆದ ಬಗ್ಗೆ ತಿಳಿಸ್ತೇವೆ. ಸಿಲಬಸ್ ಕಂಪ್ಲೀಟ್ ಮಾಡಬೇಕಾದ ಬಗ್ಗೆ ಮಾಹಿತಿ ನೀಡ್ತೀವಿ. ಪಾಸಿಟಿವ್ ಬರೋ ಬಗ್ಗೆ, ತರಗತಿ ನಡೆಯುತ್ತಿರೋ ಬಗ್ಗೆ. ತರಗತಿ ನಡೆದು ಹಾಜರಾತಿ ಕೂಡ ಇದೆ. ಶಿಕ್ಷಣ ಇಲಾಖೆ ಶಾಲೆಗಳನ್ನ ನಡೆಸಲು ತಾಂತ್ರಿಕ ಸಲಹಾ ಸಮಿತಿ‌ ಸೂಚಿಸಿದ್ರೆ ಮಹಾನಗರಗಳಲ್ಲೂ ಶಾಲೆ ನಡೆಸಲು ಮುಂದಾಗುತ್ತೇವೆ. ಈಗಾಗಲೇ SSLC, PUC ತಾತ್ಕಾಲಿಕ ಪರೀಕ್ಷಾ ಪಟ್ಟಿ ಬಿಡುಗಡೆ ಮಾಡಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ. 

ವರ್ಗಾವಣೆ ವಿಚಾರವಾಗಿ ಮಾತನಾಡಿದ ಅವರು, ಕೌನ್ಸೆಲಿಂಗ್ ಮೂಲಕವೇ ಎಲ್ಲಾ ಪ್ರಕ್ರಿಯೆ ನಡೆದಿದೆ. ಶಿಕ್ಷಕರೇ ಉತ್ತಮ ಕೌನ್ಸೆಲಿಂಗ್ ಅಂತ ಹೇಳಿದ್ದಾರೆ ಎಂದಿದ್ದಾರೆ. 

48,000 ಜಿಲ್ಲೆಗಳ ಪೈಕಿ, 146 ಶಾಲೆಗಳು ಮಾತ್ರ ಕೊರೊನಾ ಸೋಂಕಿನಿಂದ ಬಂದ್ ಆಗಿವೆ. ನಿನ್ನೆ ಶಿಕ್ಷಣ ಇಲಾಖೆ 1,250 ಮಕ್ಕಳಿಗೆ ಪಾಸಿಟಿವ್ ಇದೆ. 892 ಪ್ರಸ್ತುತ ಪಾಸಿಟಿವ್ ಇರುವ ಮಕ್ಕಳು. 1-10ನೇ ತರಗತಿ  6,700 ಮಕ್ಕಳಿಗೆ ಸೋಂಕು ಕಾಣಿಸಿಕೊಂಡಿದೆ. ನಿನ್ನೆ ಒಂದೇ ದಿನ ಪಿಯುಸಿಯಲ್ಲಿ 166 ಮಕ್ಕಳಿಗೆ ಪಾಸಿಟಿವ್ ಬಂದಿದೆ. ಹಾವೇರಿ, ಕಲ್ಬುರಗಿ, ಬೀದರ್, ರಾಯಚೂರು, ಮಧುಗಿರಿ ಐದು ಜಿಲ್ಲೆಗಳಲ್ಲಿ ಯಾವುದೇ ಶಾಲೆ ಮುಚ್ಚಿಲ್ಲ ಎಂದು ತಿಳಿಸಿದ್ದಾರೆ.

ಮಕ್ಕಳಿಗೆ ಕೋವಿಡ್ ಸೋಂಕು ಶೇಕಡಾವಾರು:

  • 0-5 ಮಕ್ಕಳು - 1.87% ಪಾಸಿಟಿವ್
  • 6-15 ಮಕ್ಕಳು - 1.03% ಪಾಸಿಟಿವ್
  • 16-20 ಮಕ್ಕಳು - 1.90% ಪಾಸಿಟಿವ್

ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆ: ಬಂದೋಬಸ್ತ್ ನಲ್ಲಿದ್ದ 42 ಕೆಎಸ್​ಆರ್​ಪಿ ಸಿಬ್ಬಂದಿಗೆ ​ಕೊರೊನಾ ದೃಢ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News