KS Eshwarappa: ಕಾಡು ಪ್ರಾಣಿಗಳು ಸಿಂಹ ಕಂಡು ಹೆದರಿವೆ: ಕಾಂಗ್ರೆಸ್ ನಾಯಕರಿಗೆ ಈಶ್ವರಪ್ಪ ಟಾಂಗ್

KS Eshwarappa: ತಮ್ಮನ್ನು ಸಿಂಹ ಎಂದು ಕರೆದುಕೊಳ್ಳುವ ಜೊತೆಗೆ ಕಾಂಗ್ರೆಸ್ ನಾಯಕರನ್ನು ಕಾಡು ಪ್ರಾಣಿಗಳಿಗೆ ಹೋಲಿಕೆ ಮಾಡಿದ ಸಚಿವ ಕೆ.ಎಸ್. ಈಶ್ವರಪ್ಪ.

Written by - Prashobh Devanahalli | Edited by - Yashaswini V | Last Updated : Feb 22, 2022, 02:03 PM IST
  • ತಮ್ಮನ್ನು ಸಿಂಹ ಎಂದು ಕರೆದುಕೊಳ್ಳುವ ಜೊತೆಗೆ ಕಾಂಗ್ರೆಸ್ ನಾಯಕರನ್ನು ಕಾಡು ಪ್ರಾಣಿಗಳಿಗೆ ಹೋಲಿಕೆ ಮಾಡಿದ ಸಚಿವ ಕೆ.ಎಸ್. ಈಶ್ವರಪ್ಪ.
  • ಕಾಡು ಪ್ರಾಣಿಗಳಿಗೆ ಸಿಂಹ ಕಂಡ್ರೆ ಭಯ
  • ಹಾಗಾಗಿ ಕಾಡು ಪ್ರಾಣಿಗಳು ಸಿಂಹ ಕಂಡು ಹೆದರಿವೆ ಎಂದು ಕಾಂಗ್ರೆಸ್ ನಾಯಕರಿಗೆ ಈಶ್ವರಪ್ಪ ಟಾಂಗ್
KS Eshwarappa: ಕಾಡು ಪ್ರಾಣಿಗಳು ಸಿಂಹ ಕಂಡು ಹೆದರಿವೆ: ಕಾಂಗ್ರೆಸ್ ನಾಯಕರಿಗೆ ಈಶ್ವರಪ್ಪ ಟಾಂಗ್ title=
Minister KS Eshwarappa statement on congress leaders

ಬೆಂಗಳೂರು: ಅಧಿವೇಶನ ಕಲಾಪ ಮುಗಿಸಿ ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ತಮ್ಮನ್ನು ಸಿಂಹ ಎಂದು ಕರೆದುಕೊಳ್ಳುವ ಜೊತೆಗೆ ಕಾಂಗ್ರೆಸ್ ನಾಯಕರನ್ನು ಕಾಡು ಪ್ರಾಣಿಗಳಿಗೆ ಹೋಲಿಕೆ ಮಾಡಿದ್ದಾರೆ.

ವಾಸ್ತವವಾಗಿ, ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ಹೇಳಿಕೆಯನ್ನು  ಖಂಡಿಸಿ ಉಭಯ ಸದನದಲ್ಲಿ ಕಾಂಗ್ರೆಸ್ ಪ್ರತಿಭಟನೆ (Congress Protest) ನಡೆಸುತ್ತಿದೆ. ಈಶ್ವರಪ್ಪ ಅವರನ್ನು ಮಂತ್ರಿಮಂಡಲದಿಂದ ವಜಾ ಮಾಡುವವರೆಗೂ ಅಹೋರಾತ್ರಿ ಧರಣಿಯನ್ನು ಕೈಬಿಡುವುದಿಲ್ಲ ಎಂಬ ಸ್ಪಷ್ಟ ನಿಲುವನ್ನು ತಾಳಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಕೆ.ಎಸ್.ಈಶ್ವರಪ್ಪ, ಕಾಂಗ್ರೆಸ್ ನಾಯಕರು  ಪದೇ ಪದೇ ನನ್ನ ಹೆಸರು ಹೇಳಿ ಜಪ ಮಾಡ್ತಿದ್ದಾರೆ. ಕಾಡು ಪ್ರಾಣಿಗಳಿಗೆ ಸಿಂಹ ಕಂಡ್ರೆ ಭಯ, ಹಾಗಾಗಿ ಕಾಡು ಪ್ರಾಣಿಗಳು ಸಿಂಹ ಕಂಡು ಹೆದರಿವೆ ಎಂದು ಹೇಳಿದರು.

ಇದನ್ನೂ ಓದಿ- #HinduBoyMurder: ಶಿವಮೊಗ್ಗದಲ್ಲಿ ಮುಸಲ್ಮಾನರು ಎಂದೂ ಕೂಡ ಬಾಲ ಬಿಚ್ಚಿರಲಿಲ್ಲ: ಸಚಿವ ಕೆ ಎಸ್ ಈಶ್ವರಪ್ಪ

ಇದೇ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಖಂಡನೆ ವಿಚಾರಕ್ಕೆ ಸಂಬಂಧಿಸಿದಂತೆಯೂ ಪ್ರತಿಕ್ರಿಯೆ ನೀಡಿದ ಸಚಿವ ಕೆ.ಎಸ್. ಈಶ್ವರಪ್ಪ (KS Eshwarappa) , ಈ ಕುರಿತಂತೆ ಸಿಎಂ ಬಸವರಾಜ್ ಎಸ್. ಬೊಮ್ಮಾಯಿ, ಸಚಿವ ಮಾಧುಸ್ವಾಮಿ ಸದನದಲ್ಲಿ ಉತ್ತರ ಕೊಟ್ಟಿದ್ದಾರೆ. ರಾಷ್ಟ್ರ ಧ್ವಜದ ಬಗ್ಗೆ ನನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ಡಿಕೆಶಿ ಶಿವಮೊಗ್ಗದಲ್ಲಿ ರಾಷ್ಟ್ರ ಧ್ವಜ ಇಳಿಸಿ, ಭಗವಧ್ವಜ ಏರಿಸಿದ್ದರು ಅಂತ ಹೇಳಿದ್ದರು. ನಾನು ಕೇಸರಿ ದ್ವಜ ಹಾರಿಸ್ತೇನೆ ಅಂತ ಹೇಳಿದ್ದೀನಾ.? ಮುಂದೆ ಹಾರಿಸಬಹುದು ಅಂತ ಹೇಳಿದ್ದೇನೆ. ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ ತಕ್ಷಣ ರಾಷ್ಟ್ರ ದ್ರೋಹಿ ಅಂತ ಅಂದೂ ಹೇಳಿದೆ, ಇಂದೂ ಹೇಳಿದ್ದೇನೆ ಎಂದರು.

ಇದನ್ನೂ ಓದಿ- 'ಬಿಜೆಪಿಗೆ ರಾಷ್ಟ್ರ ಧ್ವಜಕ್ಕಿಂತ ಸಚಿವ ಸ್ಥಾನವೇ ಮುಖ್ಯವಾದಂತಿದೆ'-ಸಿದ್ಧರಾಮಯ್ಯ

ಇನ್ನು ರಾಜಭವನಕ್ಕೆ ತೆರಳುವ ವಿಚಾರವಾಗಿ ಸ್ಪಷ್ಟನೆ ನೀಡಿದ ಸಚಿವರು,  ಕುವೆಂಪು ವಿವಿಗೆ ಸಂಬಂಧಿಸಿದಂತೆ ಚರ್ಚೆ ಮಾಡಲು ರಾಜಭವನಕ್ಕೆ ಹೋಗುತ್ತಿದ್ದೇನೆ. ಅದನ್ನು ಹೊರತುಪಡಿಸಿ ನನಗೆ ಅವರಿಂದ ನನಗೆ ಬುಲಾವ್ ಬಂದಿಲ್ಲ ಎಂದು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್

Trending News