close

News WrapGet Handpicked Stories from our editors directly to your mailbox

ಅಭಿವೃದ್ಧಿ ಏನೇ ಇದ್ದರೂ ಕಾಂಗ್ರೆಸ್'ನಿಂದ ಮಾತ್ರ ಸಾಧ್ಯ: ಸಿದ್ದರಾಮಯ್ಯ ತಿರುಗೇಟು

ಅಭಿವೃದ್ಧಿ ಎಂಬುದೇನೇ ಇದ್ದರೂ ಅದು ಕಾಂಗ್ರೆಸ್'ನಿಂದ ಮಾತ್ರ ಸಾಧ್ಯ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 

Updated: Aug 29, 2018 , 03:22 PM IST
ಅಭಿವೃದ್ಧಿ ಏನೇ ಇದ್ದರೂ ಕಾಂಗ್ರೆಸ್'ನಿಂದ ಮಾತ್ರ ಸಾಧ್ಯ: ಸಿದ್ದರಾಮಯ್ಯ ತಿರುಗೇಟು

ಬಾಗಲಕೋಟೆ: ಬಿಜೆಪಿ ಶಾಸಕ ಶ್ರೀರಾಮುಲು ಹೇಳಿಕೆಗೆ ತಿರುಗೇಟು ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಭಿವೃದ್ಧಿ ಎಂಬುದೇನೇ ಇದ್ದರೂ ಅದು ಕಾಂಗ್ರೆಸ್'ನಿಂದ ಮಾತ್ರ ಸಾಧ್ಯ ಎಂದು ಹೇಳಿದ್ದಾರೆ. 

ಬಾದಾಮಿ ಪಟ್ಟಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀರಾಮುಲು ಅವರಿಗೆ ಭಾಷೆ, ಸಂಸ್ಕೃತಿ, ಅಭಿವೃದ್ಧಿ ಅಂದರೆ ಏನೂ ಎಂಬುದೇ ಗೊತ್ತಿಲ್ಲ. ಬಳ್ಳಾರಿ, ಮೊಳಕಾಲ್ಮೂರಿನಲ್ಲಿ ಅಷ್ಟು ವರ್ಷದಿಂದ ಯಾವ ಅಭಿವೃದ್ಧಿ ಮಾಡಿದ್ದಾರೆ? ಅಭಿವೃದ್ಧಿ ಏನೇ ಇದ್ದರೂ ಅದು ಕಾಂಗ್ರೆಸ್'ನಿಂದ ಮಾತ್ರ ಸಾಧ್ಯ ಎಂದು ತಿರುಗೇಟು ನೀಡಿದ್ದಾರೆ. ಈ ಹಿಂದೆ ಶ್ರೀರಾಮುಲು ಅವರು, ಸಿದ್ದರಾಮಯ್ಯ ಅವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದಿದ್ದರು.

ಮುಂದುವರೆದು ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ 5 ವರ್ಷ ಯಶಸ್ವಿಯಾಗಿ ಪೂರೈಸಲಿದೆ, ಯಾವುದೇ ತೊಂದರೆಯಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರಲ್ಲದೆ, ನಾನು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸಿಎಂ ಆಗುತ್ತೇನೆಂದು ಹೇಳಿದ್ದೇನೆ. ಅದನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದರು.