ಬೆಂಗಳೂರು : ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಯುತ್ತಿರುವ ಪಿಎಸ್ಐ ನೇಮಕಾತಿ ಅಕ್ರಮ ಹಾಗೂ ಮರುಪರೀಕ್ಷೆ ಸೇರದಂತೆ ಹಲವು ಬೇಡಿಕೆಯನ್ನು ಮುಂದಿಟ್ಟು ಪ್ರತಿಭಟನೆ ಮಾಡುತ್ತಿರುವ ಪ್ರತಿಭಟನಾಕಾರರು, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ನೀಡಿದ್ದ ದವಸ ಧಾನ್ಯ ಇವೆಂಟ್ ಮ್ಯಾನೇಜಮೆಂಟ್ ಎಂದು ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಕಲಾಪದಲ್ಲಿ ಮಾತು ಹೀಗಿತ್ತು :
ಸಿದ್ದರಾಮಯ್ಯ: ನಾನು ಇವತ್ತು ಬೆಳಗ್ಗೆ ಫ್ರೀಡಂ ಪಾರ್ಕ್ ಗೆ ಹೋಗಿದ್ದೆ. FDA, SDA ಇಂಜಿನಿಯರ್ಸ್, ಪೊಲೀಸ್ ಕಾನ್ ಸ್ಟೇಬಲ್, KPTCL ಮತ್ತು ಪಿಎಸ್ಐ ಪರೀಕ್ಷೆ ಬರೆದು ಸೆಲೆಕ್ಟ್ ಆಗಿದ್ದವರು ಇದ್ರು. ಅವರು ಹೇಳಿದ್ರು ನಮಗೆ ಲಂಚ ಕೊಟ್ಟು ಉದ್ಯೋಗ ತೆಗೆದುಕೊಳ್ಳಲು ಆಗಲ್ಲ. ನಮ್ಮ ತಂದೆ ತಾಯಿಗಳು ಅವರು ಬೆಳೆದಿರುವ ಧವಸ ಧಾನ್ಯಗಳು ಕೊಟ್ಟು ಕಳುಹಿಸಿದ್ದಾರೆ.ಅವರಿಗೆ ಕೊಟ್ಟು ಬಿಡಿ ಎಂದು ಹೇಳಿದ್ರು.
ಸಿದ್ದರಾಮಯ್ಯ: ನಾನು ಬೆಳಗ್ಗೆ ಅದನ್ನ ತಂದು ಇಟ್ಟಿದ್ದೆ ಯಾರೋ ಅದನ್ನು ಇಲ್ಲದಂತೆ ಮಾಡಿದ್ದಾರೆ.ನಿಮ್ಮ ಮೂಲಕ ಅವರಿಗೆ ಸರ್ಕಾರಕ್ಕೆ ತಲುಪಿಸೋಣ ಎಂದು ಕೊಂಡಿದ್ದೆ.
ಸ್ಪೀಕರ್: ನಮ್ಮ ನಿಯಮಾವಳಿಗಳ ಪ್ರಕಾರ ಸದನದ ಒಳಗೆ ತರಬಾರದು. ರಾಜೇಗೌಡ್ರ ಅದನ್ನು ತಂದು ಕೊಡುವುದು ನಿಯಮ ಬಾಹಿರ.
ಸಿದ್ಧರಾಮಯ್ಯ - ಈಗ ಕೊಡ್ಲಾ ನಿಮ್ಮ ಕೈಗೆ?.
ಸ್ವೀಕರ್: ನೀವು ಕಳುಹಿಸಿದ್ರೆ ತೆಗೆದುಕೊಳ್ಳುತ್ತೇನೆ, ನೀವು ತಂದಿದ್ದೀರಾ ಎಂದು ನಮಗೆ ಮಾಹಿತಿ ಬಂತು.
ಸಿದ್ದರಾಮಯ್ಯ : ನಾನು ತರಲು ಹೋಗಿರಲಿಲ್ಲ
ಸ್ಪೀಕರ್ :ಅವರು ಕೊಟ್ಟಿರುವುದೆಲ್ಲಾ ತಂದು ಬಿಡುವುದಾ?
ಸಿಎಂ ಬೊಮ್ಮಾಯಿ: ಇವೆಂಟ್ ಮ್ಯಾನೇಜ್ಮೆಂಟ್ ಚೆನ್ನಾಗಿ ಮಾಡಿದ್ದಾರೆ.
ಸಿದ್ದರಾಮಯ್ಯ : ನೀವು ಮಾಡೋದು
ಬೊಮ್ಮಾಯಿ : ನೀವು ಮಾಡೋದು, ಆ ಹುಡುಗರ ಹತ್ತಿರ ತೆಗೆದು ಕೊಂಡು ಬಂದಿರುವುದು ನೀವು.
ಸಿದ್ದರಾಮಯ್ಯ : ನಮಗೆ ಇವೆಂಟ್ ಮ್ಯಾನೇಜ್ಮೆಂಟ್ ಮಾಡಲು ಬರುವುದಿಲ್ಲ, ನಾವು ಮಾಡೋದು ಇಲ್ಲ.
ಬೊಮ್ಮಾಯಿ : ನೀವು ಗ್ರೇಟ್ ಇವೆಂಟ್ ಮ್ಯಾನೇಜ್ಮೆಂಟ್ ಈಗ. ಇತ್ತೀಚೆಗೆ ಎಲ್ಲಾ ಕಲಿತು ಬಿಟ್ಟಿದ್ದೀರಾ.
ಇದನ್ನೂ ಓದಿ-ಭಯೋತ್ಪಾದಕ ಸಂಘಟನೆ ಜೊತೆ ನಂಟು: ಶಿವಮೊಗ್ಗ-ಮಂಗಳೂರಿನ ಇಬ್ಬರು ಶಂಕಿತ ಉಗ್ರರ ಬಂಧನ!
ಸಿದ್ದರಾಮಯ್ಯ: ಹೌದು ದೊಡ್ಡಬಳ್ಳಾಪುರದಲ್ಲಿ ಮತ್ತು ಸದನದಲ್ಲಿ ಯಾರನ್ನ ಅಟ್ಯಾಕ್ ಮಾಡಿದ್ದೀರ ಎಂದು ಗೊತ್ತಿದೆ. ಅದಕ್ಕೆ ನಾನು ಹೇಳ್ದೆ ಮೋರ್ ಸ್ಟ್ರಾಂಗ್, ಮೋರ್ ಎನಿಮಿಸ್..
ಇದನ್ನೂ ಓದಿ-ಇಡ್ಲಿ ವಿಚಾರಕ್ಕೆ ಗುಂಪುಗಳ ನಡುವೆ ಗ್ಯಾಂಗ್ವಾರ್: ದಾಳಿಗೆ ಕಾರು ಜಖಂ!
ಬೊಮ್ಮಾಯಿ : ಇವರಿಗೆ ಯಾಕೆ ಕೊಟ್ರು ಪೇಮೆಂಟ್? ಇವರ ಕಡೆ ಇರಬೇಕು ಅಲ್ವಾ.ನಮ್ಮ ಕಡೆ ಯಾರು ಕೊಟ್ಟಿಲ್ಲ, ಯಾರು ಬಂದಿಲ್ಲ. ಪೇಮೆಂಟ್ ಯಾರಿಗೆ ಕೊಡಬೇಕೋ ಅವರಿಗೆ ಕೊಟ್ಟಿದ್ದಾರೆ. ಇಡೀ ಸರ್ಕಾರ ಸಿದ್ದರಾಮಯ್ಯ ಗುರಿ ಇಟ್ಟುಕೊಂಡು ಎಲ್ಲಾರೂ ಹೊರಟಿದ್ದಾರೆ. ಇದರಿಂದ ಸಿದ್ದರಾಮಯ್ಯ ಮತ್ತು ನಮ್ಮ ಪಕ್ಷಕ್ಕೆ ಲಾಭ. ಸಿದ್ದರಾಮಯ್ಯ ಅಂದ್ರೆ ಅವರಿಗೆ ಲಾಭ. ನೀವು ಏನ್ ಮಾಡಿದ್ರೂ ಕೂಡ ಜನ ನಂಬಲ್ಲ. ನಿಮ್ಮನ್ನ ಬಾರೀ ನಂಬುತ್ತಾರೆ ಜನ, ನಿಮ್ಮ ಕರ್ಮ ಕಾಂಡಗಳು ಹೊರಗಡೆ ಬರುತ್ತಿದ್ದಾವೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.