ಸಾವರ್ಕರ್ ಫೋಟೋಗೆ ನಮ್ಮ ಆಕ್ಷೇಪ ಇಲ್ಲ ಆದರೆ...!

ಸಾವರ್ಕರ್ ಫೋಟೋಗೆ ನಮ್ಮ ಆಕ್ಷೇಪ ಇಲ್ಲ ! ಆದರೆ ಇತರೆ ಮಾಹನೀಯರ ಫೋಟೋ ಕೂಡ ಸಭಾಂಗಣದಲ್ಲಿ ಅಳವಡಿಕೆ ಮಾಡಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯ ಮಾಡಿದರು.‌

Written by - Prashobh Devanahalli | Edited by - Krishna N K | Last Updated : Dec 19, 2022, 01:07 PM IST
  • ಸಾವರ್ಕರ್ ಫೋಟೋಗೆ ನಮ್ಮ ಆಕ್ಷೇಪ ಇಲ್ಲ
  • ಇತರೆ ಮಾಹನೀಯರ ಫೋಟೋ ಕೂಡ ಹಾಕಿ
  • ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯ
ಸಾವರ್ಕರ್ ಫೋಟೋಗೆ ನಮ್ಮ ಆಕ್ಷೇಪ ಇಲ್ಲ ಆದರೆ...! title=

ಬೆಳಗಾವಿ : ಸಾವರ್ಕರ್ ಫೋಟೋಗೆ ನಮ್ಮ ಆಕ್ಷೇಪ ಇಲ್ಲ ! ಆದರೆ ಇತರೆ ಮಾಹನೀಯರ ಫೋಟೋ ಕೂಡ ಸಭಾಂಗಣದಲ್ಲಿ ಅಳವಡಿಕೆ ಮಾಡಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯ ಮಾಡಿದರು.‌

ಸುವರ್ಣ ಸೌಧದಲ್ಲಿ ವೀರ ಸಾವರ್ಕರ್ ಫೋಟೋ ಬಳಕೆ ವಿರೋಧಿಸಿ ಪ್ರತಿಭಟನೆ ಮಾತಾನಾಡಿದ ನಂತರ ಮಾಧ್ಯಮಗಳಿಗೆ ಮಾತಾನ್ನಾಡಿದ ಇವರು, ಇದು ಪ್ರತಿಭಟನೆ ಅಲ್ಲ, ಇದು ನಮ್ಮ ಬೇಡಿಕೆಯಾಗಿದೆ‌. ಅಸೆಂಬ್ಲಿ ಹಾಲ್ ನಲ್ಲಿ ಬಸವಣ್ಣ, ನಾರಾಯಣಗುರು,  ವಾಲ್ಮೀಕಿ, ‌ಕನಕದಾಸ ಫೋಟೋವನ್ನು ಹಾಕಿ ಎಂದರು. 

ಇದನ್ನೂ ಓದಿ: ಜನರಿಗೆ ಪರಿಹಾರ ಒದಗಿಸುವ ಅಧಿವೇಶನವಾಗಲಿದೆ: ಸಿಎಂ ಬೊಮ್ಮಾಯಿ ಭರವಸೆ

ಅಸೆಂಬ್ಲಿ ಹಾಲ್ ನಲ್ಲಿ ಫೋಟೋ ಇಡಲು ಅಸೆಂಬ್ಲಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಸ್ಪೀಕರ್. ಆಡಳಿತ ಹಾಗೂ ವಿರೋಧ ಪಕ್ಷವಾಗಿದೆ ಆದರೆ ಅದು ಮಾಡಿಲ್ಲ. ಬಿಎಸಿ ಯಲ್ಲೂ ಚರ್ಚೆ ಆಗಿಲ್ಲ.ಏಕಾಏಕಿ ಭಾವಾಚಿತ್ರ ಅಳವಡಿಕೆ ಮಾಡಿದ್ದಾರೆ.ಭಾವಾಚಿತ್ರ ಅನಾವರಣ ಕಾರ್ಯಕ್ರಮಕ್ಕೆ  ನಮಗೆ ಆಹ್ವಾನ ಇರಲಿಲ್ಲ, ಮಾಧ್ಯಮದ ಮೂಲಕ ತಿಳಿದುಕೊಂಡೆ.  ಯಾರದೇ ಫೋಟೋ ಇಡಲು ವಿರೋಧ ಇಲ್ಲ. ಆದರೆ ಚರ್ಚೆ ಆಗದೆ ಇಟ್ಟಿರುವುದಕ್ಕೆ ನಮ್ಮ ವಿರೋಧ.‌

ನಾವು ಅನೇಕ ವಿಷಯಗಳನ್ನ ಅಸೆಂಬ್ಲಿಯಲ್ಲಿ ಪ್ರಸ್ತಾಪ ಮಾಡುತ್ತೇವೆ, ಕಾನೂನು‌ ಸುವ್ಯವಸ್ಥೆ, ಭ್ರಷ್ಟಾಚಾರ ಇದನ್ನು ಡೈವರ್ಡ್ ಮಾಡಲು ಈ ರೀತಿ ಫೋಟೋ ವಿವಾದ ಮುನ್ನಲೆಗೆ‌ ತಂದಿದ್ದಾರೆ ಎಂದು ಆರೋಪಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News