ಮಹದಾಯಿ ನೀರಿಗಾಗಿ ಇಂದು ರಾಜ್ಯಾದ್ಯಂತ ಬಂದ್...!

ರಾಜಧಾನಿ ಬೆಂಗಳೂರಿನಲ್ಲಿ  ಭದ್ರತೆಗೆ 15 ಸಾವಿರ ಪೊಲೀಸರ ನಿಯೋಜನೆ.

Last Updated : Jan 25, 2018, 11:56 AM IST
ಮಹದಾಯಿ ನೀರಿಗಾಗಿ ಇಂದು ರಾಜ್ಯಾದ್ಯಂತ ಬಂದ್...! title=

ಬೆಂಗಳೂರು: ಮಹಾದಾಯಿ ನೀರಿಗಾಗಿ ಆಗ್ರಹಿಸಿ ಇಂದು ರಾಜ್ಯಾದ್ಯಂತ ಬಂದ್ ಕೈಗೊಳ್ಳಲಾಗಿದೆ. ಬೆಳ್ಳಿಗ್ಗೆ 6 ಗಂಟೆಯಿಂದ ಪ್ರಾರಂಭವಾಗಿರುವ ಬಂದ್ ಸಂಜೆ 6 ಗಂಟೆಯ ವರೆಗೂ ಮುಂದುವರೆಯಲಿದೆ. ಈ ಬಂದ್'ಗೆ ಕೆಲ ಸಂಘಟನೆಗಳು ಕರೆ ನೀಡಿದ್ದು, ಮತ್ತೆ ಕೆಲ ಸಂಘಟನೆಗಳು ಪರೋಕ್ಷ ಬೆಂಬಲ ವ್ಯಕ್ತಪಡಿಸಿವೆ.

ಮಹಾದಾಯಿ ವಿವಾದವನ್ನು ಬಗೆಹರಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಬೇಕೆಂದು ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಇಂದು 'ಕರ್ನಾಟಕ ಬಂದ್'ಗೆ ಕರೆ ನೀಡಿವೆ. ಸಿಲಿಕಾನ್ ಸಿಟಿ ಮತ್ತು ಉತ್ತರ ಕರ್ನಾಟಕದ ಭಾಗಗಳಲ್ಲಿ ಬಂದ್ ಬಿಸಿ ಜೋರಾಗಿದ್ದು, ರಾಜ್ಯದ ಇತರ ಭಾಗಗಳಲ್ಲಿ ಶಾಂತಿಯುತವಾಗಿ ಬಂದ್ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದು. ಏತನ್ಮಧ್ಯೆ, ಚಿಕ್ಕಬಳ್ಳಾಪುರ, ತುಮಕೂರು, ಮಂಗಳೂರು, ಉಡುಪಿ, ಹಾಸನ ಜಿಲ್ಲೆಗಳಲ್ಲಿ ಯಾವುದೇ ಸಂಘಟನೆಗಳು ಬಂದ್'ಗೆ ಬೆಂಬಲ ಸೂಚಿಸಿಲ್ಲ. 

ಹೇಗಿದೆ ಸಿಲಿಕಾನ್ ಸಿಟಿಯಲ್ಲಿ ಬಂದ್ ಪ್ರತಿಕ್ರಿಯೆ?
ಬಂದ್ ಹಿನ್ನಲೆಯಲ್ಲಿ ಮೆಜಿಸ್ಟಿಕ್ ಭಾಗದಲ್ಲಿ ಬಿಎಂಟಿಸಿ, ಕೆಎಸ್ ಆರ್ ಟಿಸಿ ವಾಹನಗಳ ಓಡಾಟ ಕೊಂಚ ಇಳಿಮುಖವಾಗಿದೆ. ದೂರದ ಊರುಗಳಿಂದ ನಗರಕ್ಕೆ ಬಂದವರು ತಮ್ಮ ಸ್ಥಳಗಳಿಗೆ ತೆರಳಲು ಬಿಎಂಟಿಸಿ ಬಸ್ಗೆ ಕಾಯುತ್ತಿದ್ದಾರೆ. ಮೆಜಿಸ್ಟಿಕ್ ಸುತ್ತಮುತ್ತಲ ಭಾಗದಲ್ಲಿ ಎಂದಿನಂತೆ ವಾಹನ ಸಂಚಾರ ಕಂಡುಬರುತ್ತಿದೆ.

ಬಂದ್ ಕರೆ ನಡುವೆಯೂ‌ ನಮ್ಮ ಮೆಟ್ರೊ ಎಂದಿನಂತೆ ಕಾರ್ಯ ನಿರ್ವಹಿಸುತ್ತಿದೆ. ನಮ್ಮ ಮೆಟ್ರೊ ಪ್ರಯಾಣಿಕರ ಸಂಖ್ಯೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಮೆಟ್ರೋದಲ್ಲಿ ಸಂಚಾರ ಯತಾಸ್ಥಿತಿಯಲ್ಲಿದೆ. ಆದರೂ ಪ್ರಯಾಣಿಕರಿಗೆ ಮತ್ತು ಸಾರ್ವಜನಿಕ ರಕ್ಷಣೆಗಾಗಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಬೆಂಗಳೂರಿನ ಮೆಜೆಸ್ಟಿಕ್ ಮತ್ತು ರೈಲ್ವೇ ನಿಲ್ದಾಣದಲ್ಲಿ ಭಿಗಿ ಭದ್ರತೆ...
ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 2 ಇನ್ಸ್‌ಪೆಕ್ಟರ್, 4 ಪಿಎಸ್ ಐ, 27 ಮಂದಿ ಪೊಲೀಸ್ ಸಿಬ್ಬಂದಿಯನ್ನು ಯೋಜನೆ ಮಾಡಲಾಗಿದ್ದು, ರೈಲ್ವೆ ನಿಲ್ದಾಣದಲ್ಲಿ ಕರವೇ ನಾರಾಯಣಗೌಡ ಬಣದಿಂದ ರೈಲು ತಡೆ ಹಿನ್ನಲೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಪಶ್ಚಿಮ ವಲಯ ಹೆಚ್ಚುವರಿ ಪೊಲೀಸ್ ಆಯುಕ್ತ ಬಿಜಯ್ ಕುಮಾರ್ ಸಿಂಗ್ ಹಾಗೂ ಡಿಸಿಪಿ ಅನುಚೇತ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್  ಏರ್ಪಡಿಸಿದ್ದು, 6 ಇನ್ಸ್‌ಪೆಕ್ಟರ್, 10 ಪಿಎಸ್ ಐ ಸೇರಿ 5 ಕೆಎಸ್ ಆರ್ ಪಿ ತುಕಡಿ ನಿಯೋಜಿಸಲಾಗಿದೆ.

ಸಿಲಿಕಾನ್ ಸಿಟಿ ಭದ್ರತೆಗೆ 15 ಸಾವಿರ ಪೊಲೀಸರ ನಿಯೋಜನೆ...
ರಾಜಧಾನಿ ಬೆಂಗಳೂರಿನಲ್ಲಿ ಬಂದ್ ಹಿನ್ನೆಲೆಯಲ್ಲಿ ಭಾರಿ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶದಲ್ಲಿ 50 ಕೆಎಸ್ಅರ್ಪಿ ತುಕಡಿ ನಿಯೋಜನೆ ಮಾಡಲಾಗಿದೆ. ರಜೆಯಲ್ಲಿದ್ದ ಪೊಲೀಸ್ ಸಿಬ್ಬಂದಿ ಸಹ ಇಂದು ಡ್ಯೂಟಿಗೆ ಹಾಜರಾಗಿದ್ದಾರೆ. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದ್ರೆ ಶಿಸ್ತು ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚನೆ ನೀಡಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ.  ಮುನ್ನೆಚ್ಚರಿಕೆಯಾಗಿ ಕ್ರಮವಾಗಿ ಕೆಲವು ರೌಡಿಗಳಿಗೆ ವಾರ್ನ್ ಮಾಡಿರುವ ಪೊಲೀಸರು, ಬಲವಂತವಾಗಿ ಅಂಗಡಿ ಬಂದ್  ಮಾಡಿಸಿ, ಗೂಂಡಾಗಿರಿ ಮಾಡಿದರೆ ಅವರ ವಿದುದ್ಧ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಎಚ್ಚರಿಸಿದ್ದಾರೆ. 

ಬಂದ್ ಬಿಸಿ ತಟ್ಟುವ ಮೊದಲೇ ತಮ್ಮ ಕೆಲಸವನ್ನು ತರಾತುರಿಯಲ್ಲಿ ಮುಗಿಸಿಕೊಳ್ಳುತ್ತಿರುವ ಜನ...
ಬಂದ್ ಕಾವೇರುವ ಮುನ್ನ ಕೆಲಸ ಮುಗಿಸಿಕೊಳ್ಳುವ ತರಾತುರಿಯಲ್ಲಿ ಬೆಂಗಳೂರಿನ ಜನ ಮುಂಜಾನೆಯೇ ದಿನಪತ್ರಿಕೆಗಳ‌ ವಿಂಗಡನೆ ಮತ್ತು ಹಂಚಿಕೆಯಲ್ಲಿ ತೊಡಗಿರುವ ನ್ಯೂಸ್ ಪೇಪರ್ ಏಜೆಂಟರು ತೊಡಗಿದ್ದರು. ಇನ್ನು ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಸಹಜವಾಗಿ ತುಂಬಿ ತುಳುಕುತ್ತಿತ್ತು.

ನಮ್ಮ ನಾಡಿನ ಜನತೆಗೆ ಅಗತ್ಯವಿರುವ ನೀರಿಗಾಗಿ ಬಂದ್ ಮಾಡೋದು ಒಳ್ಳೇದು, ಆದರೆ ಜನರ ದಿನಚರಿಗೆ ಯಾವುದೇ ತೊಂದರೆಯಾಗದಂತೆ ಶಾಂತಿಯುತವಾಗಿ ಬಂದ್ ಮಾಡಬೇಕು ಎಂದು ಕೆಲವು ಜನರು ಪ್ರತಿಕ್ರಿಯಿಸಿದ್ದಾರೆ.

ಕರವೇ ಪ್ರತಿಭಟನೆ ಸ್ವರೂಪ...
ಬಿಡಿಎ ಕಛೇರಿ ಬಳಿ ಪ್ರತಿಭಟನೆ  ಕರವೆ ಕಾರ್ಯಕರ್ತರಿಂತ ಪ್ರತಿಭಟನೆ ನಡೆಸಲಾಗುತ್ತಿದ್ದು, ಗೋವಾ ಮುಖ್ಯಮಂತ್ರಿ ಮತ್ತು ಸಚಿವನ ಭಾವಚಿತ್ರಕ್ಕೆ  ಚಪ್ಪಲಿ‌ಹಾರ ಹಾಕಿ ಪ್ರತಿಭಟನೆ ನಡೆಸಲಾಗುತ್ತಿದೆ. ವಾಹನ ತಡೆದು ನೀರು ಕೊಡುವ ಮುಖಾಂತರ ಪ್ರತಿಭಟನೆ ವಿನೂತನವಾಗಿ ಪ್ರತಿಭಟನೆ ನದೆಸುತ್ತಿದ್ದಾರೆ.

Trending News