Remdesivir ಕದಿಯಲು ಬಂದು ಪೊಲೀಯೋ ಲಸಿಕೆ ಲಪಟಾಯಿಸಿದ ಖದೀಮರು..!

ಬಹು ಅಮೂಲ್ಯ ಜೀವ ರಕ್ಷಕ ಔಷಧ ರೆಮಿಡಿಸಿವರ್ ಕದಿಯಲು ಕಳೆದ ರಾತ್ರಿ ಕಳ್ಳರು ಅಥಣಿಯ ತಾಲೂಕು ಆಸ್ಪತ್ರೆಗೆ (Hospital) ನುಗ್ಗಿದ್ದಾರೆ.  ಬಹುಶಃ ಕಳ್ಳರಿಗೆ ಇಂಗ್ಲಿಷ್ ಓದಲು ಬರುತ್ತಿರಲಿಲ್ಲವೋ ಗೊತ್ತಿಲ್ಲ.  

Written by - Ranjitha R K | Last Updated : May 7, 2021, 12:29 PM IST
  • ಅಥಣಿಯಲ್ಲಿ ರೆಮಿಡಿಸಿವರ್‍ಗಾಗಿ ಬಂದು ಪೊಲೀಯೋ ಲಸಿಕೆ ಕದ್ದ ಕಳ್ಳರು
  • ರೆಮಿಡಿಸಿವರ್ ಅಲ್ಲ ಎಂದು ಗೊತ್ತಾಗುತಿದ್ದಂತೆ ಪೊಲೀಯೋ ಲಸಿಕೆಗಳನ್ನು ರಸ್ತೆಯಲ್ಲಿ ಚೆಲ್ಲಿದ ಖದೀಮರು
  • ಅಥಣಿ ಪೊಲೀಸರಿಂದ ಪರಿಶೀಲನೆ, ಕಳ್ಳರಿಗಾಗಿ ಶೋಧ
Remdesivir  ಕದಿಯಲು ಬಂದು ಪೊಲೀಯೋ ಲಸಿಕೆ ಲಪಟಾಯಿಸಿದ ಖದೀಮರು..! title=
ಅಥಣಿಯಲ್ಲಿ ರೆಮಿಡಿಸಿವರ್ ಗಾಗಿ ಬಂದು ಪೊಲೀಯೋ ಲಸಿಕೆ ಕದ್ದ ಕಳ್ಳರು (file photo)

ಅಥಣಿ : ದೇಶವೇ ಕರೋನಾ (Coronavirus) ಉರಿಯಲ್ಲಿ ಬೇಯುತ್ತಿರುವಾಗ ಅದಲ್ಲೂ ಲಾಭ ಮಾಡಿಕೊಳ್ಳುವ ಸಾಕಷ್ಟು ಮಂದಿಯನ್ನು ನಾವು ನೋಡುತ್ತೇವೆ. ಜೀವ ರಕ್ಷಕ ರೆಮಿಡಿಸಿವರನ್ನು (Remdesivir) ಕಾಳಸಂತೆಯಲ್ಲಿ ಮಾರುವವರು, ಆಕ್ಸಿಜನ್ ಸಿಲಿಂಡರ್ ಎಂದು ಕೊಂಡು ಅಗ್ನಿ ಶಾಮಕ ಸಿಲಿಂಡರ್ ಕೊಡುವವರು, ನಕಲಿ ರೆಮಿಡಿಸಿವರ್ ಮಾರುವವರನ್ನು ನಾವು ನೋಡುತ್ತಲೇ ಇದ್ದೇವೆ. 

ಅಥಣಿಯಲ್ಲಿ ರೆಮಿಡಿಸಿವರ್ ಕದಿಯಲು ಬಂದು ಬೆಸ್ತುಬಿದ್ದ ಕಳ್ಳರು.!
ಬಹು ಅಮೂಲ್ಯ ಜೀವ ರಕ್ಷಕ ಔಷಧ ರೆಮಿಡಿಸಿವರ್ (Remedisiver) ಕದಿಯಲು ಕಳೆದ ರಾತ್ರಿ ಕಳ್ಳರು ಅಥಣಿಯ ತಾಲೂಕು ಆಸ್ಪತ್ರೆಗೆ (Hospital) ನುಗ್ಗಿದ್ದಾರೆ.  ಬಹುಶಃ ಕಳ್ಳರಿಗೆ ಇಂಗ್ಲಿಷ್ ಓದಲು ಬರುತ್ತಿರಲಿಲ್ಲವೋ ಗೊತ್ತಿಲ್ಲ.  ರೆಮಿಡಿಸಿವರ್ ಅಂದು ಕೊಂಡು ಅಲ್ಲಿದ್ದ ಎಲ್ಲಾ ಪೊಲೀಯೋ ಲಸಿಕೆಗಳನ್ನು (Polio Vaccine) ಕದ್ದು ಪರಾರಿಯಾಗಿದ್ದಾರೆ.  

ಇದನ್ನೂ ಓದಿ : Complete Lock Down : ಮೇ 10 ರಿಂದ 25 ರವರೆಗೆ ರಾಜ್ಯದಲ್ಲಿ ಸಂಪೂರ್ಣ 'ಲಾಕ್ ಡೌನ್'!

ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿತ್ತು ಪೊಲೀಯೋ ವ್ಯಾಕ್ಸಿನ್ :
ತಡರಾತ್ರಿ ಆದ ಮೇಲೆ ತಾವು ಕದ್ದಿರುವುದು ರೆಮಿಡಿಸಿವರ್ ಲಸಿಕೆ ಅಲ್ಲ, ಪೊಲೀಯೋ ಲಸಿಕೆ ಅನ್ನೋದು ಕಳ್ಳರಿಗೆ ಗೊತ್ತಾಗಿದೆ. ಅಲ್ಲೇ ಸಂಗಮೇಶ್ವರ ನಗರ ರಸ್ತೆಯಲ್ಲಿ ಎಲ್ಲಾ ಪೊಲೀಯೋ ಲಸಿಕೆಗಳನ್ನು ಚೆಲ್ಲಿ ಪರಾರಿಯಾಗಿದ್ದಾರೆ ಕಳ್ಳರು. ಬೆಳಗ್ಗೆ ಜನ ಎದ್ದು ನೋಡುವಾಗ ರಸ್ತೆ ತುಂಬಾ ಪೊಲೀಯೋ ಲಸಿಕೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ತಕ್ಷಣ ಆರೋಗ್ಯ ಅಧಿಕಾರಿಗಳು ಮತ್ತು ಪೊಲೀಸರು (police) ಸ್ಥಳಕ್ಕೆ ಭೇಟಿ ನೀಡಿದ್ದಾರೆ. ತನಿಖೆ ಮುಂದುವರಿದಿದೆ. 

ರೆಮಿಡಿಸಿವರ್ ಎಂದು ಕರೋನಾ ಲಸಿಕೆ ಕದ್ದಿದ್ದ ಖದೀಮರು :
ನಿಮಗೆ ಗೊತ್ತಿರಬಹುದು. ಈ ಹಿಂದೆ ಹರಿಯಾಣದಲ್ಲಿ ರೆಮಿಡಿಸಿವರ್ ಎಂದು ಕೊಂಡು ಕಳ್ಳರು ಕೊವಿಡ್ ಲಸಿಕೆಯನ್ನು (COVID Vaccine) ಕದ್ದು ಪರಾರಿಯಾಗಿದ್ದರು. ಮರುದಿನ ಅವರಿಗೆ ತಾವು ಕದ್ದಿದ್ದು ಕೊವಿಡ್ ಲಸಿಕೆ ಎಂಬುದು ಗೊತ್ತಾಗಿದೆ. ಕೂಡಲೇ ಅದನ್ನೊಂದು ಬ್ಯಾಗ್ ನಲ್ಲಿ ಹಾಕಿ ಆಸ್ಪತ್ರೆ ಪಕ್ಕ ಅಂಗಡಿಯಲ್ಲಿ ಇಟ್ಟು ಹೋದ ಕಳ್ಳರು, `ಕ್ಷಮಿಸಿ ಬಿಡಿ ಅದು ಕೊವಿಡ್ ಲಸಿಕೆ ಎಂದು ಗೊತ್ತಿರಲಿಲ್ಲ' ಎಂದು ಚೀಟಿ ಅಂಟಿಸಿ, ಕಣ್ಮರೆಯಾಗಿದ್ದರು.

ಇದನ್ನೂ ಓದಿ : BS Yediyurappa : ರಾಜ್ಯದಲ್ಲಿ ಲಾಕ್ ಡೌನ್ ಅನಿವಾರ್ಯ : ಸಿಎಂ ಯಡಿಯೂರಪ್ಪ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News