ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ: ರಕ್ಷಿಸಲು ಹೋದ ಮೂವರು ಸಾವು

ಕಾರಿನಲ್ಲಿದ್ದವರು ಹೊರಬರಲು ಸಾಧ್ಯವಾಗದೇ ಚೀರಾಡುತ್ತಿದ್ದುದನ್ನು ಕಂಡು ಅಲ್ಲಿದ್ದ ಮೂವರು ರಕ್ಷಿಸಲು ಹೋದ ಸಂದರ್ಭದಲ್ಲಿ ಅರಿವಿಲ್ಲದೆ ವಿದ್ಯುತ್ ತಂತಿ ತುಣಿದು ಸಾವನ್ನಪ್ಪಿದ್ದಾರೆ.

Last Updated : Jun 13, 2019, 10:23 AM IST
ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ: ರಕ್ಷಿಸಲು ಹೋದ ಮೂವರು ಸಾವು title=

ಮಂಡ್ಯ: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರಿನಲ್ಲಿದ್ದವರನ್ನು ರಕ್ಷಣೆ ಮಾಡಲು ಹೋದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಮಣಿಗೆರೆ ಬಳಿ ಬುಧವಾರ ರಾತ್ರಿ ನಡೆದಿದೆ. 

ಕೆ.ಎಂ.ದೊಡ್ಡಿ ಮಾರ್ಗವಾಗಿ ಚಲಿಸುತಿದ್ದ ಕಾರೊಂದು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ತಂತಿ ತುಂಡಾಗಿ ನೆಲಕ್ಕೆ ಬಿದ್ದಿದೆ. ಆದರೆ ಕಾರಿನಲ್ಲಿದ್ದವರು ಹೊರಬರಲು ಸಾಧ್ಯವಾಗದೇ ಚೀರಾಡುತ್ತಿದ್ದುದನ್ನು ಕಂಡು ಅಲ್ಲಿದ್ದ ಮೂವರು ರಕ್ಷಿಸಲು ಹೋದ ಸಂದರ್ಭದಲ್ಲಿ ಅರಿವಿಲ್ಲದೆ ವಿದ್ಯುತ್ ತಂತಿ ತುಣಿದು ಸಾವನ್ನಪ್ಪಿದ್ದಾರೆ.

ಘಟನೆ ನಡೆದ ವಿದ್ಯುತ್ ಕಚೇರಿಗೆ ವಿಷಯ ಮುಟ್ಟಿಸಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಿ, ಕಾರಿನಲ್ಲಿದ್ದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Trending News