ಧಾರವಾಡ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ(Pralhad Joshi)ಯವರು ಹಿರಿಯ ಸಾಹಿತಿ ಡಾ.ಚೆನ್ನವೀರ ಕಣವಿ ಆರೋಗ್ಯ(Chennaveera Kanavi Health) ವಿಚಾರಿಸಿದ್ದಾರೆ. ಮಂಗಳವಾರ(ಫೆ.15)ಮಧ್ಯಾಹ್ನ ಎಸ್ಡಿಎಂ ಆಸ್ಪತ್ರೆ(SDM Hospital)ಗೆ ಭೇಟಿ ನೀಡಿದ ಅವರು ಚನ್ನವೀರ ಕಣವಿಯವರು ಆದಷ್ಟು ಬೇಗನೆ ಗುಣಮುಖರಾಗಲಿ ಎಂದು ಹಾರೈಸಿದರು.
ಚಂಬೆಳಕಿನ ಕವಿ(Chennaveera Kanavi) ನಮಗೆಲ್ಲರಿಗೂ ಬಹಳ ಅತ್ಮಿಯರು ಆತ್ಯಂತ ಮೃದು ಸ್ವಾಭಾವದ ವ್ಯಕ್ತಿ. ಚೆನ್ನವೀರ ಕಣವಿ ಅವರು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದು, ವಯೋಸಹಜ ಕಾರಣದಿಂದ ಅವರ ಆರೋಗ್ಯದಲ್ಲಿ ತೀವ್ರತರದ ಚೇತರಿಕೆ ಕಾಣುತಿಲ್ಲವೆಂದು ಅವರು ಹೇಳಿದರು.
ಇಂದು ಧಾರವಾಡ ಸತ್ತೂರಿನ ಎಸ್.ಡಿ.ಎಂ. ಆಸ್ಪತ್ರೆಗೆ ಭೇಟಿ ನೀಡಿ, ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿರುವ ನಾಡಿನ ಸಾಹಿತಿ, ಚೆಂಬೆಳಕಿನ ಕವಿ, ಹಿರಿಯರು, ಮಾರ್ಗದರ್ಶಕರು ಹಾಗೂ ಆತ್ಮೀಯರು ಆದ ಡಾ. ಚೆನ್ನವೀರ ಕಣವಿ ಅವರ ಆರೋಗ್ಯ ವಿಚಾರಿಸಲಾಯಿತು.
ಈ ಸಂದರ್ಭದಲ್ಲಿ @DC_Dharwad ಹಾಗೂ ಆಸ್ಪತ್ರೆಯ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು. pic.twitter.com/w1gNjF4VSQ— Pralhad Joshi (@JoshiPralhad) February 15, 2022
ಇದನ್ನೂ ಓದಿ: Noise Pollution: ದೊಡ್ಡ ಗಣಪತಿ ದೇವಸ್ಥಾನದ ಗಂಟೆ ಶಬ್ದಕ್ಕೆ ನೋಟಿಸ್ ಜಾರಿ...!
ಕವಿ ನಾಡೋಜ ಡಾ.ಚನ್ನವೀರ ಕಣವಿ(Poet Chennaveera Kanavi) ಅವರು ಕಳೆದೊಂದು ತಿಂಗಳಿನಿಂದ ಎಸ್ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ನಿಂದ ಸಂಪೂರ್ಣ ಗುಣಮುಖರಾಗಿರುವ ಅವರು ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದಾರೆ. ಎಸ್ಡಿಎಂ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಡಾ.ನಿರಂಜನ ಕುಮಾರ ನೇತ್ರತ್ವದಲ್ಲಿ ಉತ್ತಮ ಚಿಕಿತ್ಸೆ ನೀಡುತ್ತಿದ್ದು, ಅವರು ಸಂಪೂರ್ಣ ಗುಣಮುಖರಾಗಲು ಎಲ್ಲ ರೀತಿಯ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ಸಚಿವರು ತಿಳಿಸಿದರು.
ಚೆನ್ನವೀರ ಕಣವಿಯವರ ಆರೋಗ್ಯ(Chennaveera Kanavi Health)ದ ಬಗ್ಗೆ ನಿಗಾ ವಹಿಸಿರುವ ವೈದ್ಯರ ತಂಡವು ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಮಾಹಿತಿ ಕೊಟ್ಟಿದ್ದಾರೆ. ಇದು ನಮಗೆ ಬಹಳ ಕಳವಳವನ್ನುಂಟು ಮಾಡಿದೆ. ಎಸ್ಡಿಎಂ ಆಸ್ಪತ್ರೆಯ ವೈದ್ಯರು ಮತ್ತು ಎಲ್ಲ ಸಿಬ್ಬಂದಿಯವರು ಶಕ್ತಿಮೀರಿ ಪ್ರಯತ್ನ ಮಾಡಿ ಕಣವಿ ಅವರು ಬೇಗ ಚೇತರಿಸಿಕೊಂಡು ಪುನಃ ಮನೆಗೆ ಬರುವಂತೆ ಮಾಡಬೇಕು ಎಂದು ಸಚಿವರು ಹೇಳಿದರು.
ಇದನ್ನೂ ಓದಿ: ಅಸಮರ್ಥ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿಕೆಶಿ ಹತಾಶೆಗೆ ಬಿದ್ದಿದ್ದಾರೆ: ಬಿಜೆಪಿ ಟೀಕೆ
ಈ ಸಂದರ್ಭದಲ್ಲಿ ಎಸ್ಡಿಎಂ ವೈದ್ಯಕೀಯ ಮಹಾವಿದ್ಯಾಲಯದ ಕುಲಪತಿ ಡಾ.ನಿರಂಜನಕುಮಾರ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ವಿವಿಧ ತಜ್ಞ ವೈದ್ಯರ ತಂಡದ ಮುಖ್ಯಸ್ಥ ಡಾ.ಕಿರಣ ಐತಾಳ, ಶ್ವಾಸಕೋಶ ತಜ್ಞ ಡಾ.ಶ್ರೀಕಾಂತ ಹಿರೇಮಠ, ಅರವಳಿಕೆ ತಜ್ಞ ಡಾ.ಶ್ರೀರಂಗ ತೋರಗಲ್ಲ, ಜನರಲ್ ಫಿಜಿಷನ್ ಡಾ. ರಾಜೇಂದ್ರ ಪಾರಿಕ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಸನಗೌಡ ಕರಿಗೌಡರ್ ಸೇರಿದಂತೆ ಅನೇಕರಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.