ಬೆಂಗಳೂರು : ಆತ ಯೂತ್ ಕಾಂಗ್ರೆಸ್‌ನ ಅಧ್ಯಕ್ಷ. ಸದಾ ಯಾವಾಗಲು ಸುದ್ದಿಯಲ್ಲಿರ್ತಾನೆ. ಆತನಿಗಾಗಿ ಇಂದು ಖುದ್ದು ಅಸ್ಸಾಂ ಪೊಲೀಸರು ಟೀಂ ಮಾಡ್ಕೊಂಡು ಬೆಂಗಳೂರಿಗೆ ಬಂದಿದ್ರು. ಆದ್ರೆ ಆತ ಮನೆಯಲ್ಲಿ ಇರಲಿಲ್ಲ ಅಂತಾ ನೋಟೀಸ್ ಅಂಟಿಸಿ ವಾಪಸ್ ಆಗಿದ್ದಾರೆ. ಹಾಗಾದ್ರೆ ಈತನಿಗಾಗಿ ಅಸ್ಸಾಂ ಪೊಲೀಸರು ಯಾಕೆ ಬಂದಿದ್ರು. ಆತ ಮಾಡಿರುವ ಗನಾಂದಾರಿ ಕೆಲಸ ಆದ್ರು ಏನೂ ಅಂತಾ ಈ ಸ್ಟೋರಿ ಓದಿದ್ರೆ ಗೊತ್ತಾಗುತ್ತೆ.
ಶ್ರೀನಿವಾಸ್ ಭದ್ರಾವತಿ. ಈತ ಇತ್ತೀಚೆಗೆ ಸಾಕಷ್ಟು ಸುದ್ದಿಯಾಗಿದ್ದ ಮನುಷ್ಯ. ಯೂತ್ ಕಾಂಗ್ರೆಸ್‌ಗೆ ಈತ ರಾಷ್ಟ್ರೀಯ ಅಧ್ಯಕ್ಷ. ಇದೀಗ ಈತನ ಮೇಲೆ ಗಂಭೀರವಾದ ಆರೋಪವೊಂದು ಕೇಳಿ ಬಂದಿದ್ದು, ಇದಕ್ಕಾಗಿ ಅಂತ ಅಸ್ಸಾಂ ಪೊಲೀಸರೇ ಖುದ್ದು ಬೆಂಗಳೂರಿಗೆ ಎಂಟ್ರಿ ಕೊಟ್ಟು ಹೋಗಿದ್ದಾರೆ. ಹೌದು.. ಶ್ರೀನಿವಾಸ್ ಭದ್ರಾವತಿ ಈತ ಕಳೆದ ಆರು ತಿಂಗಳ ಹಿಂದೆ ಅಸ್ಸಾಂ ರಾಜ್ಯ ಗುವಾಹಟಿ ಜಿಲ್ಲೆಯ ದಿಸ್ ಪೂರ್ ಎಂಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರ ಚೊತೆಯಲ್ಲಿ ಅಸಭ್ಯವಾಗಿ ವರ್ತಿಸಿದ್ದಲ್ಲದೇ, ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ: ಚುನಾವಣೆಯ ಕಾವಿನ ನಡುವೆಯೇ ಎಣ್ಣೆಗೆ ಸಕತ್ ಡಿಮ್ಯಾಂಡ್
ಹೀಗಾಗಿ ಬೆಂಗಳೂರಿನ ಬಸವೇಶ್ವರ ನಗರದಲ್ಲಿನ ಶ್ರೀನಿವಾಸ್ ರವರ ಮೆನೆಗೆ ಇದೀಗ ನೋಟೀಸ್ ಅಂಟಿಸಿ ಪೊಲೀಸರು ತೆರಳಿದ್ದಾರೆ. ಇದೀಗ ಎರಡರಿಂದ ಮೂರು ನೋಟೀಸ್ ಸಹ ಪೊಲೀಸರು ನೀಡಲಿದ್ದು, ಆದಾಗಿಯು ಈತ ಅಸ್ಸಾಂ ಪೊಲೀಸರ ಮುಂದೆ ತನೆಖೆಗೆ ಹಾಜರಾಗಿಲ್ಲವಾದಲ್ಲಿ ಶ್ರೀನಿವಾಸ್ ಗೆ ಮುಂದಿನ ದಿನಗಳಲ್ಲಿ ಸಂಕಷ್ಟ ಎದುರಾಗೋದ್ರಲ್ಲಿ ಡೌಟಿಲ್ಲ.. ಇದಕ್ಕಾಗಿಯೇ ಖುದ್ದು ಜಂಟಿ ಪೊಲೀಸ್ ಅಧಿಕಾರಿ ಪ್ರತೀಕ್ ರವರೇ ಇಂದು ಫೀಲ್ಡ್ ಗೆ ಇಳಿದು ಆತನಿಗಾಗಿ ಹುಡುಕಾಟ ನಡೆಸಿದ್ದಾರೆ.
ಇನ್ನು ಕಳೆದ ಆರು ತಿಂಗಳ ಹಿಂದೆ ಈ ಒಂದು ಘಟನೆ ನಡೆದಿದೆ ಎನ್ನಲಾಗಿದೆ. ಇದ್ರಿಂದ ಆಗಿನಿಂದಲು ಸಹ ಅಸ್ಸಾಂ ಪೊಲೀಸರು ಈತನಿಗಾಗಿ ಹುಡುಕಾಟ ನಡೆಸಿದ್ದರೂ ಸಹ ಯಾವುದೇ ಉತ್ತರ ನೀಡಿಲ್ಲ ಎಂದು ಹೇಳಲಾಗುತ್ತಿದೆ. ಅಸ್ಸಾಂ ಪೊಲೀಸರು ಇದೀಗ ನೋಟೀಸ್ ಮನೆಗೆ ಅಂಟಿಸಿ ಹೋಗಿದ್ದು, ಮೇ 2 ರ ಒಳಗಾಗಿ ದಿಸ್ ಪೂರ್ ಪೊಲೀಸ್ ಠಾಣೆ ಪೊಲೀಸರ ಮುಂದೆ ಹಾಜರಾಗುವಂತೆ ಸೂಚಿಸಿದ್ದಾರೆ.
ಇದನ್ನೂ ಓದಿ:Photo Gallery: ಕುಡಿಯುವ ನೀರಿನ ಪೈಪ್ ಒಡೆದು ರಸ್ತೆಗೆ ಕಾರಂಜಿ ರೀತಿ ಚಿಮ್ಮಿದ ನೀರು....!
ಹಲವಾರು ಸೆಕ್ಷನ್ ಗಳನ್ನು ಈತನ ಮೇಲೆ ಹಾಕಿದ್ದು 509, 294, 341, 352, 354, 506 ಹೀಗೆ ಹಲವಾರು ಕ್ರಿಮಿನಲ್ ಸೆಕ್ಷನ್ಸ್ ಗಳನ್ನು ಈತನ ಮೇಲೆ ಹಾಕಲಾಗಿದೆ. ಒಟ್ಟಿನಲ್ಲಿ ಸದಾ ಸುದ್ದಿಯಲ್ಲಿ ಇರುತ್ತಿದ್ದ ಈತನಿಗೆ ಇದೀಗ ಪೊಲೀಸರು ತಲಾಶ್ ನಡೆಸೋದಕ್ಕೆ ಮುಂದಾಗಿದ್ದು ಮುಂದೆ ಇನ್ನು ಯಾವ ರೀತಿಯಲ್ಲಿ ಈ ಒಂದು ಕೇಸ್ ಮುಂದುವರಿಯಲಿದೆ ಎಂದು ಕಾದು ನೋಡಬೇಕಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ