ಈ ದಿನ ಪೊರಕೆ ಖರೀದಿಸಿದರೆ ಮನೆಯಲ್ಲಿ ಶಾಶ್ವತವಾಗಿ ನೆಲೆಸುತ್ತಾಳಂತೆ ಮಹಾಲಕ್ಷ್ಮೀ

ಪೊರಕೆಗೆ ಸಂಬಂಧಿಸಿದ ಅನೇಕ ನಿಯಮಗಳನ್ನು ಶಾಸ್ತ್ರಗಳಲ್ಲಿ ಹೇಳಲಾಗಿದೆ . ಪೊರಕೆಯ ಮೇಲೆ ತಪ್ಪಿಯೂ ಕೂಡಾ ಕಾಲಿಡಬಾರದು. ಅಲ್ಲದೆ, ಅದನ್ನು ಮನೆಯ ಬಾಗಿಲಲ್ಲಿ ಇಡಬಾರದು.

Written by - Zee Kannada News Desk | Last Updated : Feb 23, 2022, 11:59 AM IST
  • ಪೊರಕೆಯು ಲಕ್ಷ್ಮೀ ದೇವಿಯ ಸಂಕೇತವಾಗಿದೆ
  • ಪೊರಕೆಗೆ ಸಂಬಂಧಿಸಿದಂತೆ ಕೆಲವು ವಿಶೇಷ ನಿಯಮಗಳಿವೆ
  • ಯಾವ ದಿನ ಪೊರಕೆ ಖರೀದಿಸಬೇಕು ತಿಳಿಯಿರಿ
 ಈ ದಿನ ಪೊರಕೆ ಖರೀದಿಸಿದರೆ ಮನೆಯಲ್ಲಿ ಶಾಶ್ವತವಾಗಿ ನೆಲೆಸುತ್ತಾಳಂತೆ ಮಹಾಲಕ್ಷ್ಮೀ  title=
ಪೊರಕೆಗೆ ಸಂಬಂಧಿಸಿದಂತೆ ಕೆಲವು ವಿಶೇಷ ನಿಯಮಗಳಿವೆ (file photo)

ನವದೆಹಲಿ : ಪೊರಕೆಯು ಸಾಮಾನ್ಯವಾಗಿ ಪ್ರತಿಯೊಂದು ಮನೆಯಲ್ಲೂ ಬಳಸುವ ಒಂದು ವಸ್ತುವಾಗಿದೆ. ಮನೆಯ ಕಸ ಹೊರ ಹಾಕಲು ಬಳಸುವ ಪೊರಕೆಯನ್ನು   ಹುಲ್ಲು, ಪ್ಲಾಸ್ಟಿಕ್,  ಅಥವಾ ಫೈಬರ್ನಿಂದ ತಯಾರಿಸಲಾಗುತ್ತದೆ. ಪೊರಕೆಗೆ ಸಂಬಂಧಿಸಿದ ಅನೇಕ ನಿಯಮಗಳನ್ನು ಶಾಸ್ತ್ರಗಳಲ್ಲಿ ಹೇಳಲಾಗಿದೆ (best day to buy broom). ಪೊರಕೆಯ ಮೇಲೆ ತಪ್ಪಿಯೂ ಕೂಡಾ ಕಾಲಿಡಬಾರದು. ಅಲ್ಲದೆ, ಅದನ್ನು ಮನೆಯ ಬಾಗಿಲಲ್ಲಿ ಇಡಬಾರದು. ಇದಲ್ಲದೇ ಪೊರಕೆಗೆ ಸಂಬಂಧಿಸಿದಂತೆ ಕೆಲವು ವಿಶೇಷ ನಿಯಮಗಳಿವೆ. 

ಪೊರಕೆ ಲಕ್ಷ್ಮೀ ಪ್ರತೀಕ :
ಹಿಂದೂ ಧರ್ಮದಲ್ಲಿ, ಪೊರಕೆಯನ್ನು ಲಕ್ಷ್ಮೀಯ  (Godess Lakshmi) ಸಂಕೇತವೆಂದು ಪರಿಗಣಿಸಲಾಗುತ್ತದೆ.  ಈ ಕಾರಣಕ್ಕಾಗಿ ಗುರುವಾರ ಮತ್ತು ಶುಕ್ರವಾರದಂದು ಹಳೆಯ ಪೊರಕೆಯನ್ನು ಮನೆಯಿಂದ ಹೊರಗೆ ಹಾಕಬಾರದು. ಏಕೆಂದರೆ ಗುರುವಾರ ಮತ್ತು ಶುಕ್ರವಾರಗಳು ಕ್ರಮವಾಗಿ ವಿಷ್ಣು ಮತ್ತು ಲಕ್ಷ್ಮೀ ದೇವಿಗೆ ಸಂಬಂಧಿಸಿವೆ (best day to buy broom). ಈ ದಿನ, ಮನೆಯಿಂದ ಪೊರಕೆ ಹೊರ ಹಾಕಿದರೆ ಲಕ್ಷ್ಮೀ ದೇವಿಯೂ ಕೂಡಾ, ಕೋಪದಿಂದ ಮನೆಯಿಂದ ಹೊರಹೋಗುತ್ತಾಳೆ. ಇದಲ್ಲದೇ ವಿಷ್ಣುವಿನ (Lord Vishnu)ಕೃಪೆಯೂ ಸಿಗುವುದಿಲ್ಲ. ಮತ್ತೊಂದೆಡೆ, ಪೊರಕೆಯ ಮೇಲೆ ಕಾಲಿಡುವುದು ಅಥವಾ ಅದನ್ನು ದಾಟುವುದು ಅಶುಭವೆಂದು ಪರಿಗಣಿಸಲಾಗುತ್ತದೆ. 

ಇದನ್ನೂ ಓದಿ : ನಾಳೆಯಿಂದ ಶನಿದೇವನ ಕೃಪೆಯಿಂದ ಈ ಆರು ರಾಶಿಯವರಿಗೆ ಭಾರೀ ಅದೃಷ್ಟ, ಉದ್ಯೋಗದಲ್ಲಿ ಸಿಗಲಿದೆ ಬಡ್ತಿ

ಪೊರಕೆ ಖರೀದಿಸಲು ಯಾವ ದಿನ ಶುಭ ?
ಶಾಸ್ತ್ರಗಳ ಪ್ರಕಾರ, ಮಂಗಳವಾರ ಅಥವಾ ಶನಿವಾರ ಪೊರಕೆ ಖರೀದಿಸಲು ಉತ್ತಮ ಮತ್ತು ಮಂಗಳಕರ ದಿನವಾಗಿದೆ. ಹೀಗೆ ಮಾಡುವುದರಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಇದರೊಂದಿಗೆ ಸಂಪತ್ತು ಬರುತ್ತದೆ. ಅಷ್ಟೇ ಅಲ್ಲ ಲಕ್ಷ್ಮೀಯ ಕೃಪೆಯೂ ಸದಾ ಇರುತ್ತದೆ (Blessings of Lashmi). ಇನ್ನು  ಕೃಷ್ಣ ಪಕ್ಷದಲ್ಲಿ ಪೊರಕೆ ಕೊಳ್ಳುವುದು ಒಳ್ಳೆಯದು. 

ಪೊರಕೆಯನ್ನು ಎಲ್ಲಿ ಇಡಬೇಕು?
ಶಾಸ್ತ್ರಗಳ ಪ್ರಕಾರ, ಪೊರಕೆಯನ್ನು ಮನೆಯಲ್ಲಿ ಯಾರಿಗೂ ಕಾಣದಂತಹ ಸ್ಥಳದಲ್ಲಿ ಇಡಬೇಕು. ಪೊರಕೆಯನ್ನು ಹಾಸಿಗೆಯ ಕೆಳಗೆ ಇಡಬಾರದು. ಇನ್ನು ಸೂರ್ಯಾಸ್ತದ ನಂತರ ಮನೆಯ ಕಸವನ್ನು ಹೊರ ಹಾಕಬಾರದು. ಹೀಗೆ ಮಾಡುವುದರಿಂದ ಲಕ್ಷ್ಮೀ ದೇವಿಯು (Godess Lakshmi) ಕೋಪಗೊಂಡು ಮನೆಯಿಂದ ಹೊರಹೋಗುತ್ತಾಳೆ.  

ಇದನ್ನೂ ಓದಿ : Tulasi Benefits: ಮನೆಯಲ್ಲಿ ಈ ರೀತಿಯ ತುಳಸಿ ಗಿಡವನ್ನು ಎಂದಿಗೂ ಇಡಬೇಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News