Daily Horoscope: ದಿನಭವಿಷ್ಯ 21-03-2021 Today astrology

ನಿಮ್ಮ ರಾಶಿಗನುಗುಣವಾಗಿ ನಿಮ್ಮ ದಿನ ಭವಿಷ್ಯ ಹೀಗಿದೆ…

Written by - Zee Kannada News Desk | Last Updated : Mar 21, 2021, 07:28 AM IST
  • ಮೇಷ ರಾಶಿಯವರು ನಿಮ್ಮ ಶಕ್ತಿಯನ್ನು ನಂಬಿ ಕೆಲಸ ಮಾಡಿ, ಮೆಚ್ಚುಗೆ ದೊರೆಯಲಿದೆ
  • ಮಿಥುನ ರಾಶಿಯವರಿಗೆ ಹಿರಿಯರಿಂದ ಕಾಲಕಾಲಕ್ಕೆ ಮಾರ್ಗದರ್ಶನ ಸಿಗಲಿದೆ
  • ಸಿಂಹ ರಾಶಿಯವರಿಗೆ ಕುಡಿತದ ಚಟವಿದ್ದರೆ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು
Daily Horoscope: ದಿನಭವಿಷ್ಯ 21-03-2021 Today astrology title=
Daily horoscope 21-03-2021 (file photo)

ಬೆಂಗಳೂರು : ಮನೆ ದೇವರನ್ನು ನೆನೆಯುತ್ತಾ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ..

ಮೇಷ ರಾಶಿ : ನಿಮ್ಮ ಗೆಳೆಯರು ನಿಮ್ಮ ಆಲೋಚನೆಗಳ ಮೇಲೆ ಗಮನಾರ್ಹ ಪ್ರಭಾವ ಬೀರಬಹುದಾದಂತಹ ಲಕ್ಷಣಗಳಿವೆ.  ಕೇವಲ ಮಾತನಾಡುವುದು ಮತ್ತು ಯಾವುದೇ ಫಲಿತಾಂಶ ನೀಡದ ಜನರನ್ನ ಮರೆತುಬಿಡಿ. ನಿಮ್ಮ ಶಕ್ತಿಯನ್ನು ನಂಬಿ ಕೆಲಸ ಮಾಡಿ. ನಿಮ್ಮ ಕೆಲಸಕ್ಕಾಗಿ ಮೆಚ್ಚುಗೆ ದೊರೆಯಲಿದೆ. ಅನ್ಯರು ದಾರಿ ತಪ್ಪಿಸಲು ಹೊಂಚು ಹಾಕುತ್ತಿರುತ್ತಾರೆ. ಅವರಿಂದ ಸ್ವಲ್ಪ ಎಚ್ಚರವಿರಲಿ.  ನಿಮ್ಮಿಂದ ನಿಮ್ಮ ಕುಟುಂಬದವರು ಒಳ್ಳೆಯ ಮಾತುಗಳನ್ನು ನಿರೀಕ್ಷಿಸುತ್ತಿರುತ್ತಾರೆ. ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಹಳದಿ

ವೃಷಭ ರಾಶಿ : ಹಳೆಯ ಸ್ನೇಹಿತರೊಂದಿಗೆ ನಿಮ್ಮ ಮಿಲನ ಚೈತನ್ಯದಾಯಕವಾಗಿರುತ್ತದೆ. ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ. ಉತ್ತಮ ಮಾನವ ಮೌಲ್ಯ ಹೊಂದಿ ಇತರರಿಗೆ ಸಹಾಯ ಮಾಡುವ ಹಾಗೂ ಮಾರ್ಗದರ್ಶನ ಮಾಡುವ ಬಯಕೆ ಹೊಂದಿರಿ. ಇದರಿಂದ ಕುಟುಂಬದಲ್ಲಿ ಸಾಮರಸ್ಯವಿರುತ್ತದೆ. ಹಠಾತ್ ಪ್ರಣಯ ಪ್ರಸಂಗಗಳು ಗೊಂದಲಕ್ಕೀಡು ಮಾಡುತ್ತದೆ. ನಿಮ್ಮ ಸಂಗಾತಿಯ ಜೊತೆಗೆ ಹದಿಹರಿಯಕ್ಕೆ ಮತ್ತೆ ಹೋಗುತ್ತೀರಿ. ಹಳೆಯ ಪ್ರಸಂಗಗಳನ್ನು ನೆನೆಸಿಕೊಳ್ಳುತ್ತೀರಿ. ನಿಮ್ಮ ಅದೃಷ್ಟದ ಸಂಖ್ಯೆ 2, ನಿಮ್ಮ ಅದೃಷ್ಟದ ಬಣ್ಣ ಕೇಸರಿ. 

ಮಿಥುನ ರಾಶಿ : ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತೀರಿ. ಇದು ಕಳೆದುಕೊಂಡ ಚೈತನ್ಯವನ್ನು ಮತ್ತೆ ಪಡೆಯಲು ಸಹಾಯ ಮಾಡುತ್ತದೆ. ಹಿರಿಯರಿಂದ ನಿಮಗೆ ಕಾಲಕಾಲಕ್ಕೆ ಮಾರ್ಗದರ್ಶನ ಸಿಗುವುದರಿಂದ ಮನೋಕಾಮನೆಗಳನ್ನು ನೆರವೇರಿಸಿಕೊಳ್ಳಲು ಸಾಕಷ್ಟು ಅವಕಾಶ ಸಿಗುತ್ತದೆ. ಇಂತಹ ಸುಂದರ ಅವಕಾಶಗಳನ್ನು ಹಾಳುಮಾಡಿಕೊಳ್ಳಬೇಡಿ. ನಿಮ್ಮ ರಹಸ್ಯಗಳನ್ನು ಗೌಪ್ಯವಾಗಿಡಿ. ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣಬಿಳಿ. 

ಇದನ್ನೂ ಓದಿVastu Tips: ಮನೆಯಲ್ಲಿ ಒಂದು ನವಿಲುಗರಿ ಇಡುವುದರಿಂದಾಗುವ ಲಾಭಗಳು
 
ಕಟಕ ರಾಶಿ : ಇಂದು ನೀವು ಸ್ಥಿರಾಸ್ತಿಯನ್ನು ಖರೀದಿಸಲು ಬಯಸುತ್ತೀರಿ, ಬ್ಯಾಂಕ್ ಕಡೆಯಿಂದಲೂ ಕೂಡ ಸಹಾಯವಾಗುತ್ತದೆ. ಇದಲ್ಲದೆ ಬೆಲೆಬಾಳುವ ವಸ್ತುಗಳನ್ನು ಖರೀದಿಸಲು ಮನಸ್ಸು ಮಾಡುವಿರಿ. ಬಾಲ್ಯದ ಸ್ನೇಹಿತರು ನಿಮಗೆ ಸಹಾಯ ಮಾಡುತ್ತಾರೆ. ನಿಮ್ಮ ಹಠಮಾರಿ ಧೋರಣೆಯಿಂದ ಸಮಯ ವ್ಯರ್ಥ ವಾಗುತ್ತದೆ. ಬ್ಯಾಂಕ್ ವ್ಯವಹಾರಗಳಲ್ಲಿ ಕಾಳಜಿವಹಿಸಿ. ಒಂದು ಸಮಯಕ್ಕೆ ಒಂದು ಕೆಲಸ ಮಾಡಿ. 2 ದೋಣಿಯಲ್ಲಿ ಯಾನ ಮಾಡುವುದು ಕಷ್ಟ. ಒಂದು ಕೆಲಸದ ನಂತರ ಮತ್ತೊಂದು ಕೆಲಸಕ್ಕೆ ಕೈ ಹಾಕಿ. ನಿಮ್ಮ ಅದೃಷ್ಟದ ಸಂಖ್ಯೆ 2 ಬಣ್ಣ ಹಸಿರು ಬಣ್ಣ. 

ಸಿಂಹ ರಾಶಿ : ಮಕ್ಕಳು ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನು ಕಾಣುತ್ತಾರೆ. ಇದರಿಂದ ಮನಸ್ಸಿಗೆ ಸಂತೋಷ ಸಿಗುತ್ತದೆ. ಕುಡಿತದ ಅಭ್ಯಾಸವನ್ನು ತೆಗೆದುಹಾಕಲು ಇಂದು ಶುಭದಿನ. ನೀವು ದಿನವು ಕುಡಿಯುತ್ತಿದ್ದರೆ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ನಿಮಗೆ ಶತ್ರುವಾಗಿ ಕಾಡುತ್ತದೆ. ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತದೆ. ಇಂದು ನೀವು ನಿಮ್ಮವರ ಸುತ್ತಲಿನ ವರ್ತನೆಯಿಂದ ಕಿರಿಕಿರಿಗೆ ಒಳಗಾಗಬಹುದು. ನಿಮಗೆ ದ್ರೋಹ ಮಾಡುವ ಜನರಿದ್ದಾರೆ ಎಚ್ಚರಿಕೆ. ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ನೇರಳೆ. 

ಕನ್ಯಾ ರಾಶಿ : ನಕಾರಾತ್ಮಕ ಆಲೋಚನೆಗಳು ಮಾನಸಿಕ ಕಾಯಿಲೆಗಳ ಆಗುವ ಮೊದಲು ಅದನ್ನು ನಿರ್ಲಕ್ಷಿಸಬೇಕು. ಅದಕ್ಕೆ ಧ್ಯಾನ ಮತ್ತು ಧರ್ಮಕಾರ್ಯಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಯೋಜಿತವಲ್ಲದ ಮೂಲದಿಂದ ಹಣದ ಲಾಭವಾಗುವುದು. ಕಠಿಣ ಪರಿಶ್ರಮದಿಂದ ಜಯವನ್ನು ಸಾಧಿಸುವುದರಿಂದ ಇವತ್ತು ನಿಮಗೆ ಆಶ್ಚರ್ಯ ಉಂಟುಮಾಡುತ್ತದೆ. ಇಂದು ನಿಮ್ಮ ದಿನ ಉತ್ತಮ ವಿಚಾರಗಳಿಂದ ತುಂಬಿರುತ್ತದೆ. ನಿಮ್ಮ ನಿರೀಕ್ಷೆಗೂ ಮೀರಿ ಆದಾಯ ಬರುತ್ತದೆ. ನಿಮ್ಮ ಸಂಗಾತಿಯು ಆತ್ಮೀಯ ಆಗಿರುತ್ತಾಳೆ. ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟದ ಬಣ್ಣ ಕೇಸರಿ ಬಣ್ಣ. 

ಇದನ್ನೂ ಓದಿRahu Planet Bad Effects: ರಾಹು ಗ್ರಹದ ನಕ್ಷತ್ರ ಪರಿವರ್ತನೆ: ಐದು ರಾಶಿಯವರಿಗೆ ಸಂಕಷ್ಟ ಮತ್ತೆ ಕೆಲವರಿಗೆ ಅದೃಷ್ಟ!
 
ತುಲಾ ರಾಶಿ : ಸಂತೋಷದ ಮೌಲ್ಯವನ್ನು ಅರ್ಥಮಾಡಿಕೊಳ್ಳಿ. ಹಣಕಾಸಿನ  ಪರಿಸ್ಥಿತಿ ಸುಧಾರಿಸಲಿದೆ. ನಿಮ್ಮ ಕುಟುಂಬದ ಸದಸ್ಯರೊಂದಿಗೆ ಉತ್ತಮವಾದ ಕ್ಷಣಗಳನ್ನು ಕಳೆಯುತ್ತೀರಿ. ನಿಮ್ಮ ಮನಸ್ಸಿಗೆ ಮೇಲೆ ಒತ್ತಡ ಇರುತ್ತದೆ. ತಾಳ್ಮೆಯಿಂದ ಇರಿ. ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣಬಿಳಿ. 

ವೃಶ್ಚಿಕ ರಾಶಿ : ಸರ್ಕಾರಿ ಕೆಲಸ ಮಾಡುವವರಿಗೆ ಸರ್ಕಾರಿ ಅಧಿಕಾರಿಗಳಿಂದ ದಿಡೀರ್ ತಪಾಸಣೆ ಉಂಟಾಗುವುದು ಜಾಗ್ರತೆಯಾಗಿರಿ. ಸೂಕ್ತ ಲೆಕ್ಕಪತ್ರಗಳನ್ನು ಹಾಗೂ ದಾಖಲೆಗಳನ್ನು ಇಟ್ಟುಕೊಳ್ಳಿ. ಶುಚಿತ್ವದ ಕಡೆ ಗಮನ ಹರಿಸಿ. ಹೆಚ್ಚು ಚಿಂತೆ ಮಾಡುವ ಅಗತ್ಯವಿಲ್ಲ. ಬಹಳ ದಿನದ ನಂತರ ನೆಮ್ಮದಿ ಶಾಂತಿ ಸಿಗುತ್ತದೆ. ನಿಮ್ಮ ಮೇಲೆ ಇದ್ದಂತಹ ಅಪವಾದ ಸುಳ್ಳು ಎಂದು ಸಾಬೀತಾಗುತ್ತದೆ. ಮನೆಯಲ್ಲಿ ನೂತನ ಸದಸ್ಯರ ಆಗಮನ. ಇಂದು ಶುಭದಿನ ನಿಮಗೆ. ನಿಮ್ಮ ಅದೃಷ್ಟ ಸಂಖ್ಯೆ 3 ನಿಮ್ಮ ಅದೃಷ್ಟದ ಬಣ್ಣ ನೀಲಿ. 

ಧನಸ್ಸು ರಾಶಿ : ನೀವು ಇಂದು ಹಣಕಾಸಿನ ವಿಚಾರದಲ್ಲಿ ಸಾಕಷ್ಟು ಜಾಗೃತಿಯನ್ನು ವಹಿಸಿ. ಹೊಸ ಹೊಸ ಯೋಜನೆಗಳು ಹಾಗೂ ವ್ಯವಹಾರಗಳಿಂದ ಮೋಸ ಹಾಗೂ ಹಣಕಾಸು ನಷ್ಟ ಉಂಟಾಗುವ ಸಾಧ್ಯತೆಗಳಿವೆ. ವೃತ್ತಿ ಕ್ಷೇತ್ರದಲ್ಲಿ ಉತ್ತಮ ಕೆಲಸಗಳನ್ನು ನಿರ್ವಹಿಸುತ್ತಿರಿ. ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುವುದು ಹಿರಿಯರ ಬೆಂಬಲ ದೊರೆಯುವುದು. ಸಂಗಾತಿ ತೋರುವ ನಿರ್ಲಕ್ಷದಿಂದ ನಿಮಗೆ ಅಸಮಾಧಾನ ಉಂಟಾಗಬಹುದು. ನಿಮ್ಮ ಪ್ರೀತಿಯ ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿರಿ. ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಹಳದಿ.   

ಇದನ್ನೂ ಓದಿ Housing - ಕಡಿಮೆ ವೆಚ್ಚದಲ್ಲಿ ಸುಂದರ ಮನೆ ನಿರ್ಮಾಣ ಹೇಗೆ ಮಾಡಬೇಕು?
 
ಮಕರ ರಾಶಿ : ಹೋಟೆಲ್ ಮತ್ತು ಆಹಾರ ಉದ್ದಿಮೆಗಳಿಂದ ನೆಮ್ಮದಿ ಸಿಗುತ್ತದೆ. ಅಹಿತಕರ ವಾತಾವರಣ ದೂರವಾಗುತ್ತದೆ. ಸಂತೋಷದ ಮಾಹಿತಿ ಸಿಗುವುದು. ಸಮಯ ವ್ಯರ್ಥ ಮಾಡದೆ ಆರೋಗ್ಯ ವಿಚಾರಿಸಿ. ಆರೋಗ್ಯದ ವಿಷಯದಲ್ಲಿ ಜಾಗ್ರತೆಯಾಗಿರಿ. ಋಣಾತ್ಮಕ ಶಕ್ತಿಗಳ ಅನುಭವವಾಗುವುದು ಜಾಗ್ರತೆಯಾಗಿರಿ. ಆಂಜನೇಯ ಸ್ವಾಮಿಯನ್ನು ಸ್ಮರಿಸಿ. ಕುಟುಂಬಕ್ಕೆ ಸ್ವಲ್ಪ ಸಮಯ ಮೀಸಲಿಟ್ಟು ಪ್ರೀತಿ ಹಂಚಿ. ಅದೃಷ್ಟದ ಸಂಖ್ಯೆ 9 ನಿಮ್ಮ ಅದೃಷ್ಟದ ಬಣ್ಣ ಕೆಂಪು.  

ಕುಂಭ ರಾಶಿ : ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರ ಸಾಮಾನ್ಯವಾಗಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನೀವು ಸ್ಪರ್ಧಿಸುತ್ತಿದ್ದರೆ ಮುಂದೆ ಒಳ್ಳೇದಾಗುವುದು. ನಿಮ್ಮ ಆದಾಯ ಮತ್ತು ಖರ್ಚು ಸಮನಾಗಿರುತ್ತದೆ. ವಿರೋಧಿಗಳನ್ನು ದ್ವೇಷಿಸುವುದನ್ನು ಮಾಡಬೇಡಿ. ಮಹತ್ತರ ಕೆಲಸ ನಿರ್ವಹಿಸಲು ಸ್ನೇಹಿತರೊಂದಿಗೆ ಇರಿ. ನಿಮ್ಮ ಅದೃಷ್ಟದ ಸಂಖ್ಯೆ 2 ಅದೃಷ್ಟದ ಬಣ್ಣ ನೇರಳೆ.  

ಮೀನ ರಾಶಿ : ಅನಗತ್ಯವಾದಂತಹ ಚರ್ಚೆಗಳಿಂದ ದೂರವಿರಿ. ಆದಷ್ಟು ತಾಳ್ಮೆಯಿಂದಿರಿ.  ಜೀವನದಲ್ಲಿ ಮುಂದುವರಿಯಲು ಒಳ್ಳೆಯ ದಿನ. ಕುಟುಂಬಕ್ಕೆ ಸಾಕಷ್ಟು ಸಮಯ ನೀಡಿ. ಹಿರಿಯರಿಗೆ ಗೌರವ ಕೊಡಿ. ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡುವಿರಿ.  ಸಂಜೆ ವೇಳೆಗೆ ಒಂದು ಉತ್ತಮ ಸುದ್ದಿ ಕೇಳುವಿರಿ. ನಿಮ್ಮ ಅದೃಷ್ಟದ ಸಂಖ್ಯೆ 3 ಅದೃಷ್ಟದ ಬಣ್ಣ ಬಿಳಿ.

ಇದನ್ನೂ ಓದಿ Holi 2021: ಹೋಳಿ ಹಬ್ಬದ ದಿನ ನಿರ್ಮಾಣಗೊಳ್ಳುತ್ತಿದೆ ಈ ಶುಭಯೋಗ, ಆದರೆ?

ಪಂಡಿತ್ ದಾಮೋದರ್ ಭಟ್  ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ, ಪ್ರೇಮ, ಮದುವೆ, ದಾಂಪತ್ಯ ಕಲಹ, ಹಣಕಾಸು ವ್ಯವಹಾರಗಳು, ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಕರೆ ಮಾಡಿ: 9008993001 Call / WhatsApp

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News