Daily Horoscope: ದಿನಭವಿಷ್ಯ 4-07-2021 Today astrology

ನಿಮ್ಮ ಇಷ್ಟ ದೇವರನ್ನು ನೆನೆಸಿಕೊಂಡು ಇಂದಿನ ದಿನವನ್ನು ಆರಂಭಿಸಿ. ನಿಮ್ಮ ನಿಮ್ಮ ರಾಶಿಗನುಗುಣವಾಗಿ ನಿಮ್ಮ ದಿನ ದಿನ ಭವಿಷ್ಯ ಹೀಗಿದೆ..

Written by - Zee Kannada News Desk | Last Updated : Jul 4, 2021, 07:46 AM IST
  • ಮೇಷ ರಾಶಿಯವರು ಆರ್ಥಿಕವಾಗಿ ಸಬಲರಾಗುವ ಸಮಯವಿದು
  • ಈ ರಾಶಿಯವರು ಗೆಳೆಯರೊಂದಿಗೆ ಜಗಳವಾಡುವ ಸಾಧ್ಯತೆ ಇದೆ
  • ಕಟಕ ರಾಶಿಯವರ ಕುಟುಂಬದ ಸಂಪತ್ತು ಹೆಚ್ಚಾಗುವ ಲಕ್ಷಣ ಇದೆ.
Daily Horoscope: ದಿನಭವಿಷ್ಯ 4-07-2021 Today astrology  title=
daily horoscope 4-07-2021 (file photo)

ಬೆಂಗಳೂರು : ನಿಮ್ಮ ಇಷ್ಟ ದೇವರನ್ನು ನೆನೆಸಿಕೊಂಡು ಇಂದಿನ ದಿನವನ್ನು ಆರಂಭಿಸಿ. ನಿಮ್ಮ ನಿಮ್ಮ ರಾಶಿಗನುಗುಣವಾಗಿ ನಿಮ್ಮ ದಿನ ದಿನ ಭವಿಷ್ಯ ಹೀಗಿದೆ..

ಮೇಷ :
ಮೇಷ ರಾಶಿಯವರು ಆರ್ಥಿಕವಾಗಿ ಸಬಲರಾಗುವ ಸಮಯವಿದು. ನೀವು ವ್ಯಾಪಾರಿ ವರ್ಗಕ್ಕೆ ಸೇರಿದ್ದರೆ ಹೊಸ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದು ಒಳಿತು. ಇದರಿಂದ ನಿಮ್ಮ ವ್ಯಾಪಾರ ಉತ್ತಮವಾಗಲಿದೆ. ಮೇಷ ರಾಶಿಯವರು ಷೇರು ಮಾರುಕಟ್ಟೆಯಲ್ಲಿ ನಷ್ಟ ಅನುಭವಿಸುವ ಸಾಧ್ಯತೆಯೂ ಇರುತ್ತದೆ.

ವೃಷಭ:
ಈ ಸಂದರ್ಭದಲ್ಲಿ ಧಾರ್ಮಿಕ ಕ್ಷೇತ್ರಗಳಿಗೆ ನೀವು ಭೇಟಿ ಕೊಡಬೇಕು. ಇದರಿಂದ ನಾನಾ ಆಲೋಚನೆಗಳಿಂದ ಕೂಡಿರುವ ನಿಮ್ಮ ಮನಸ್ಸು ಉಲ್ಲಸಿತವಾಗಿ ನಿಯಂತ್ರಣಕ್ಕೆ ಬರುತ್ತದೆ. ನಿಮ್ಮ ಕಚೇರಿಯಲ್ಲಿ ನಿಮ್ಮ ಬಾಸ್ನಿಂದ ಮೆಚ್ಚುಗೆ ಪಡೆಯುತ್ತೀರಿ

ಮಿಥುನ:
ಮಿಥುನ ರಾಶಿಯವರಿಗೆ ಕೆಲಸದಲ್ಲಿ ಏಳಿಗೆ ಸಿಗಲಿದೆ. ಈ ಹಿಂದೆ ನಿಂತಿದ್ದ ಕೆಲಸಗಳು ವೃದ್ಧಿ ಕಾಣಲಿವೆ. ಹಣ ಕಳೆದುಕೊಳ್ಳುವ ಸಾಧ್ಯತೆ ಇದ್ದು ಆ ಬಗ್ಗೆ ಕೊಂಚ ಎಚ್ಚರಿಕೆ ವಹಿಸಿ. ಗೆಳೆಯರೊಂದಿಗೆ ಜಗಳ ಉಂಟಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ದೇವಸ್ಥಾನಕ್ಕೆ ಭೇಟಿ ನೀಡುವುದರಿಂದ ನಿಮ್ಮ ಮನಸ್ಸು ಶಾಂತಿ ಸಿಗಲಿದೆ.  

ಇದನ್ನೂ ಓದಿ : Importance Of Decorating Home: ವಿಶೇಷ ಸಂದರ್ಭಗಳಲ್ಲಿ ಮನೆಯನ್ನು ಅಲಂಕರಿಸುವುದರ ಹಿಂದಿನ ಮಹತ್ವವಿದು

ಕಟಕ:
ಕುಟುಂಬದ ಸಂಪತ್ತು ಹೆಚ್ಚಾಗುವ ಎಲ್ಲ ಲಕ್ಷಣ ಇದೆ. ಹೊಸ ಮನೆ ಕಟ್ಟಿಸುವ ಯೋಗ ನಿಮಗೆ ಬರಬಹುದು. ನಿಮಗೆ ಹಣ ಬರುವುದರಿಂದ ನೀವು ಸಾಲದಿಂದ ಮುಕ್ತರಾಗುವಿರಿ. ಸಾಮಾಜಿಕ ಕೆಲಸ ಮಾಡುವವರಿಗೆ ಗೌರವ ಹಾಗೂ ಮನ್ನಣೆ ಸಿಗಲಿದೆ.  

ಸಿಂಹ:
ನೀವು ಮಾಡುವ ಎಲ್ಲಾ ಕೆಲಸಗಳು ಕೈ ಹಿಡಿಯುತ್ತಿಲ್ಲವೇ? ಹಾಗಿದ್ದರೆ, ಇಂದಿನಿಂದ ನಿಮ್ಮ ಅದೃಷ್ಟ ಬದಲಾಗಲಿದೆ. ನೀವು ಮಾಡುವ ಕೆಲಸಗಳು ಕೈ ಹತ್ತಲಿವೆ. ಚಿಂತೆ ಕಾಡುತ್ತಿದ್ದರೆ ಅದರಿಂದ ಮುಕ್ತರಾಗಲು ಪ್ರಯತ್ನಿಸಿ. ಇಲ್ಲದಿದ್ದರೆ ಆ ಚಿಂತೆಗಳಿಂದ ನೀವು ಮುಂದಿನ ದಿನಗಳಲ್ಲಿ ತುಂಬಾ ನಷ್ಟ ಅನುಭವಿಸುತ್ತೀರಿ.  

ಕನ್ಯಾ:
ಕನ್ಯಾ ರಾಶಿಯವರಿಗೆ ಶುಭ ಕಾರ್ಯ ಮಾಡಲು ಇದು ಸುಂಸದರ್ಭ. ಶುಭಕಾರ್ಯ ಮಾಡಲು ನೀವು ಕುಟುಂಬದ ಜೊತೆ ಚರ್ಚಿಸಬಹುದು. ಅದೃಷ್ಟ ನಿಮ್ಮ ಕೈ ಹಿಡಿಯುತ್ತದೆ. ನೀವು ಆತ್ಮವಿಶ್ವಾಸದಿಂದ ವರ್ತಿಸಿದರೆ ಯಶಸ್ಸು ನಿಮ್ಮದಾಗುತ್ತದೆ.  

ಇದನ್ನೂ ಓದಿ : Astrology: ಈ ನಾಲ್ಕು ರಾಶಿಯ ಜನರ ಮೇಲೆ ಶನಿ-ಮಂಗಳರ ವಿಶೇಷ ಕೃಪೆ, ಇವರು ಭಾಗ್ಯಶಾಲಿಗಳಾಗಿರುತ್ತಾರೆ.

ತುಲಾ:
ಆಸ್ತಿ ವಿಚಾರದಲ್ಲಿ ನಿಮ್ಮ ಸಂಬಂಧಿಕರಿಂದಲೇ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ, ಆ ಬಗ್ಗೆ ಜಾಗೂರಕಾರಿ ವರ್ತಿಸಿ. ನಿಮ್ಮ ಆಪ್ತರಿಂದಲೇ ನಿಮಗೆ ನೋವು ಉಂಟಾದರೂ ಅದರ ಹಿಂದಿನ ಉದ್ದೇಶ ಒಳ್ಳೆಯದಿರುತ್ತದೆ. ಇದನ್ನು ತಪ್ಪಾಗಿ ತಿಳಿಯದಿರಿ. ಹಣ ಗಳಿಕೆ ಮಾಡುವ ಎಲ್ಲಾ ಲಕ್ಷಣಗಳಿವೆ.  

ವೃಶ್ಚಿಕ:
ಇಷ್ಟು ದಿನ ಕೈಗೂಡದ ಕೆಲಸಗಳು ಇಂದು ಕೈಗೂಡುತ್ತವೆ. ಕುಟುಂಬದಲ್ಲಿ ಶಾಂತಿ-ನೆಮ್ಮದಿ ನೆಲಸಲಿದೆ. ಈ ಮೊದಲು ನಿಮ್ಮಿಂದ ದೂರವಾದವರು ಮತ್ತೆ ನಿಮ್ಮನ್ನು ಸೇರುವ ಪ್ರಯತ್ನ ಮಾಡಬಹುದು. ಈ ಸಮಯದಲ್ಲಿ ಸರಿಯಾದ ನಿರ್ಧಾರವನ್ನು ಕೈಗೊಳ್ಳಿ.  

ಧನಸ್ಸು:
ನೀವು ಇಂದು ಅನುಭವೀ ವ್ಯಕ್ತಿಯನ್ನು ಭೇಟಿ ಮಾಡುತ್ತೀರಿ. ನಿತ್ಯ ಹೊಸ ಹೊಸ ಆಲೋಚನೆಗಳನ್ನು ಹುಟ್ಟು ಹಾಕಿದರೆ ಯಶಸ್ಸು ಗ್ಯಾರಂಟಿ. ವ್ಯಾಪಾರ ಕ್ಷೇತ್ರ ವಿಸ್ತರಿಸಲಿದೆ. ಹಣ ಗಳಿಕೆಗೆ ಸೂಕ್ತ ಸಮಯ. ದೊಡ್ಡ ರಿಸ್ಕ್ ತೆಗೆದುಕೊಂಡರೆ ದೊಡ್ಡ ಮಟ್ಟದ ಲಾಭ ಸಿಗಲಿದೆ.  

ಇದನ್ನೂ ಓದಿ : Budh Rashi Parivartan 2021: ಬುಧನ ರಾಶಿ ಪರಿವರ್ತನೆಯಿಂದ ಈ ರಾಶಿಯವರಿಗೆ ಸಿಗಲಿದೆ ಭಾರೀ ಸಫಲತೆ

ಮಕರ:
ಮಕರ ರಾಶಿಯವರಿಗೆ ಮನೆಯಲ್ಲಿ ಮದುವೆ ಪ್ರಸ್ತಾಪ ಬರಲಿದೆ. ಈ ಸಂದರ್ಭದಲ್ಲಿ ನಿಮ್ಮ ಮನದಾಳದ ಮಾತನ್ನು ಆಪ್ತರಿಗೆ ತಿಳಿಸಿದರೆ ಅವರು ಅದಕ್ಕೆ ಮನ್ನಣೆ ಕೊಡುವ ಸಾಧ್ಯತೆ ಇದೆ. ಹಣವನ್ನು ಕಳೆದುಕೊಳ್ಳುವ ಭಯ ನಿಮ್ಮನ್ನು ಕಾಡಬಹುದು. ಸ್ವಲ್ಪ ಎಚ್ಚರಿಕೆ ವಹಿಸಿದರೆ ಹಣ ಗಳಿಕೆ ಸಾಧ್ಯ.  

ಕುಂಭ:
ಈ ಮೊದಲು ಹಾಕಿದ ಶ್ರಮಕ್ಕೆ ಇಂದು ಪ್ರತಿಫಲ ಸಿಗಲಿದೆ. ನಿಮ್ಮ ಆಪ್ತರಿಗೆ ನೀವು ನೋವುಂಟು ಮಾಡುವ ಸಾಧ್ಯತೆ ಹೆಚ್ಚು. ಆ ಬಗ್ಗೆ ಆಸ್ತೆ ವಹಿಸಿ. ಆದಾಯಕ್ಕಿಂತ ಖರ್ಚು ಹೆಚ್ಚುವ ಸಾಧ್ಯತೆ ಇದೆ. 

ಮೀನ:
ಇಂದು ನಿಮ್ಮ ಕೆಲಸದಲ್ಲಿ ಸಾಕಷ್ಟು ತೊಡಕುಂಟಾಗಲಿದೆ. ಕಚೇರಿಯಲ್ಲಿ ನಿಮ್ಮ ಆಪ್ತರು ನಿಮಗೆ ತೊಂದರೆ ಉಂಟು ಮಾಡುವ ಸಾಧ್ಯತೆ ಇದೆ. ಪ್ರೀತಿಸಿದವರು ನಿಮ್ಮನ್ನು ಹುಡುಕಿ ಬರುತ್ತಾರೆ.  

ಇದನ್ನೂ ಓದಿ : ತುಳಸಿ ಎಲೆ ಕೀಳುವ ಮುನ್ನ ಈ ವಿಚಾರಗಳು ತಿಳಿದಿರಲಿ

ಪಂಡಿತ್ ದಾಮೋದರ್ ಭಟ್ ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ, ಪ್ರೇಮ, ಮದುವೆ, ದಾಂಪತ್ಯ ಕಲಹ, ಹಣಕಾಸು ವ್ಯವಹಾರಗಳು, ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಕರೆ ಮಾಡಿ: 9008993001 Call / WhatsApp

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News