Daily Horoscope: ದಿನಭವಿಷ್ಯ 08-01-2021 Today astrology

ಶ್ರೀ ಕ್ಷೇತ್ರ ಶಿರಸಿ ಮಾರಿಕಾಂಬಾದೇವಿ ತಾಯಿಯನ್ನುನೆನೆಯುತ್ತಾ ಇಂದಿನ ನಿಮ್ಮ ದಿನವನ್ನು ಆರಂಭಿಸಿ..  

Written by - Zee Kannada News Desk | Last Updated : Jan 8, 2021, 08:30 AM IST
  • ವೃಷಭ ರಾಶಿಯವರು ಮಾತಿನ ಮೇಲೆ ನಿಯಂತ್ರಣ ಹೊಂದುವ ಅಗತ್ಯವಿದೆ
  • ಕನ್ಯಾ ರಾಶಿಯವರಿಗೆ ಪ್ರೀತಿ ವಿಚಾರದಲ್ಲಿ ಸಮಸ್ಯೆ ಎದುರಾಗಬಹುದು
  • ತುಲಾ ರಾಶಿಯವರಿಗೆ ಈ ದಿನ ಸಾಕಷ್ಟು ಲಾಭವಾಗುವ ಸಾಧ್ಯತೆಯಿದೆ
Daily Horoscope: ದಿನಭವಿಷ್ಯ 08-01-2021 Today astrology title=
ಇಂದಿನ ದಿನ ಭವಿಷ್ಯ

ಶ್ರೀ ಕ್ಷೇತ್ರ ಶಿರಸಿ ಮಾರಿಕಾಂಬಾದೇವಿ ತಾಯಿಯ   ಕೃಪೆಯಿಂದ ಈ ರಾಶಿಗಳಿಗೆ ಇಂದು ಶುಭ ಮತ್ತು ಲಾಭವಾಗಲಿದೆ. ಇಂದಿನ ನಿಮ್ಮ ರಾಶಿ ಭವಿಷ್ಯ ಹೀಗಿದೆ ನೋಡಿ..

ಮೇಷ ರಾಶಿ:- ನಿಮ್ಮ ಮನಸ್ಸು ಖಿನ್ನತೆಗೆ ಒಳಗಾಗಬಹುದು. ಸಾಕಷ್ಟು ಒಂಟಿತನವನ್ನು ಅನುಭವಿಸಬಹುದು. ಪರಿಸ್ಥಿತಿ ಕ್ರಮೇಣ ತಾನಾಗಿಯೇ ಸುಧಾರಿಸುತ್ತದೆ. ಸಾಕಷ್ಟು ಜವಾಬ್ದಾರಿಗಳ ನಡುವೆ ಕೂಡಾ ನೀವು ಯಶಸ್ಸು  ಗಳಿಸಲು  ಸಾಧ್ಯವಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಹಳದಿ.

ವೃಷಭ ರಾಶಿ:- ನಿಮ್ಮ ಮಾತಿನ ಮೇಲೆ ಹೆಚ್ಚಿನ ನಿಯಂತ್ರಣ ಅಗತ್ಯವಿದೆ. ನಿಮ್ಮ ಕಠಿಣ ಮಾತು ಯಾವುದೇ ಪ್ರಮುಖ ಕೆಲಸವನ್ನು ಕೂಡ ಹಾಳು ಮಾಡುವ ಸಾಧ್ಯತೆ ಇದೆ. ನೌಕರಿ ಮಾಡುತ್ತಿದ್ದರೆ  ಕೆಲಸದ ಸ್ಥಳಗಳಲ್ಲಿ ಮುಂದಿನ ದಿನಗಳಲ್ಲಿ ಸಮಸ್ಯೆ ಎದುರಿಸಬಹುದು. ವ್ಯಾಪಾರ ಸ್ಥಳಗಳಲ್ಲಿ ಅನಗತ್ಯವಾದ ಚರ್ಚೆಯನ್ನು ಮಾಡಬೇಡಿ ಇದರಿಂದ ಸಮಯ ಹಾಳಾಗುತ್ತದೆ, ಆರೋಗ್ಯದ ದೃಷ್ಟಿಯಿಂದ ಈ ದಿನ ಉತ್ತಮವಾಗಿರುತ್ತದೆ. ನಿಮ್ಮ ಅದೃಷ್ಟದ ಸಂಖ್ಯೆ9 ನಿಮ್ಮ ಅದೃಷ್ಟದ ಬಣ್ಣ ಬಿಳಿ. 

ಮಿಥುನ ರಾಶಿ:- ಈ ದಿನ ನಿಮಗೆ ಉತ್ತಮವಾಗಿರುತ್ತದೆ ಹಾಗೂ ಸಂತೋಷದಿಂದ ಕೂಡ ಇರುತ್ತೀರಿ. ಕೆಲಸದ ಬಗ್ಗೆ ಮಾತನಾಡುವುದಾದರೆ ಹೆಚ್ಚು ಮೆಚ್ಚುಗೆಯನ್ನು ಪಡೆಯುತ್ತೀರಿ. ಹಿರಿಯ ಅಧಿಕಾರಿಗಳು ಕೆಲಸವನ್ನು ಜವಾಬ್ದಾರಿಗಳನ್ನು ಕೊಡುತ್ತಾರೆ. ವ್ಯವಹಾರಗಳಲ್ಲಿ ಹಣಕಾಸಿನ ಬಿಕ್ಕಟ್ಟನ್ನು ತಪ್ಪಿಸಲು ನಿಮ್ಮ ಖರ್ಚುಗಳಿಗೆ ಕಡಿವಾಣ ಹಾಕ ಬೇಕಾಗುತ್ತದೆ.  ದಾನ ಧರ್ಮಗಳಲ್ಲಿ ಸಾಕಷ್ಟು ಖರ್ಚು ಮಾಡುತ್ತೀರಿ ಮತ್ತು ಪುಣ್ಯ ಕಾರ್ಯಗಳಿಗೆ ಹಣವನ್ನು ಖರ್ಚು ಮಾಡುತ್ತೀರಿ. ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಕೇಸರಿ.

ಕಟಕ ರಾಶಿ:- ನೀವು ಕೆಲಸವನ್ನು ಮಾಡುತ್ತಿದ್ದರೆ  ಕಚೇರಿಯಲ್ಲಿ ನಿಮ್ಮ ಕೆಲಸದ ದಕ್ಷತೆಯನ್ನು ಪರೀಕ್ಷಿಸಲು ದೊಡ್ಡ ಕೆಲಸವನ್ನು ಕೊಡಬಹುದು ನೀವು ಈ ಕೆಲಸವನ್ನು ಯಶಸ್ವಿಯಾಗಿ ಸರಿಯಾದ ಸಮಯಕ್ಕೆ ಪೂರ್ಣಗೊಳಿಸಿದರೆ ಮುಂಬರುವ ಸಮಯದಲ್ಲಿ ದೊಡ್ಡ ಪ್ರಗತಿ ನಿರೀಕ್ಷಣೆ ಮಾಡಬಹುದು. ಆರ್ಥಿಕವಾಗಿ ನಿಮಗೆ ಅದು ಸಹಾಯವಾಗಬಹುದು. ಆರೋಗ್ಯದ ದೃಷ್ಟಿಯಿಂದ ಈ ದಿನ ನಿಮಗೆ ಉತ್ತಮವಾಗಿರುತ್ತದೆ., ನಿಮ್ಮ ಅದೃಷ್ಟ ಸಂಖ್ಯೆ2 ನಿಮ್ಮ ಅದೃಷ್ಟದ ಬಣ್ಣ ಕೇಸರಿ

ಇದನ್ನೂ ಓದಿ : ವಿಸ್ಮಯ ತಾಣ ಈ ಶಿವ ದೇಗುಲ, ನಿತ್ಯ 3 ಬಾರಿ ಬಣ್ಣ ಬದಲಾಯಿಸುತ್ತದೆ ಇಲ್ಲಿನ ಶಿವಲಿಂಗ

ಸಿಂಹರಾಶಿ :- ನಿಮ್ಮ ವೈಯಕ್ತಿಕ ಜೀವನಗಳಲ್ಲಿ ಹೆಚ್ಚಿನ ತಾಳ್ಮೆ ಇವತ್ತು ಹೊಂದಿರಬೇಕಾಗುತ್ತದೆ. ಕುಟುಂಬ ಸದಸ್ಯರೊಡನೆ ಮನಸ್ತಾಪ ಇರುತ್ತದೆ. ಉದ್ಯೋಗವನ್ನು ಮಾಡುತ್ತಿದ್ದರೆ ದೊಡ್ಡ ಲಾಭವನ್ನು ಗಳಿಸಬಹುದು ವ್ಯಾಪಾರಸ್ಥರಿಗೆ ಇಂದು ಸಾಮಾನ್ಯವಾಗಿರುತ್ತದೆ.  ಕುಟುಂಬ ಜೀವನವು ಕೂಡ ಸಂತೋಷದಿಂದ ತುಂಬಿರುತ್ತದೆ ವಿದ್ಯಾರ್ಥಿಗಳಾಗಿದ್ದಾರೆ ಒಳ್ಳೆಯ ಸುದ್ದಿಗಳನ್ನು ಕೂಡ ನಿರೀಕ್ಷಿಸಬಹುದು. ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿರುತ್ತದೆ. ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಬಿಳಿ

ಕನ್ಯಾ ರಾಶಿ:- ಈ  ದಿನ  ನಿಮಗೆ ಬಹಳ ವಿಶೇಷವಾದ ದಿನವಾಗಿರುತ್ತದೆ. ನಿಮ್ಮ ಸಂಗಾತಿಯೊಡನೆ ಉತ್ತಮ ಸಂಬಂಧವನ್ನು ಹೊಂದುತ್ತೀರಿ, ಪ್ರೀತಿಯ ವಿಚಾರಕ್ಕೆ ಸಂಬಂಧಪಟ್ಟು ಕೆಲವು ಸಮಸ್ಯೆಗಳು ಎದುರಾಗಬಹುದು. ಕೆಲಸದ ಬಗ್ಗೆ ಆದಷ್ಟು ಜಾಗರೂಕರಾಗಿರಿ.  ಮುಂದಿನ ದಿನಗಳಲ್ಲಿ ಪ್ರಗತಿಯನ್ನ ಹೊಂದಬಹುದು ಎಲ್ಲರನ್ನು ನಂಬಿದರೆ ಬಹುಶಃ ಮೋಸ ಹೋಗುವ ಸಾಧ್ಯತೆ ಇದೆ,.ನಿಮ್ಮ ಅದೃಷ್ಟ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಹಳದಿ.

ತುಲಾ ರಾಶಿ:- ಈ ದಿನ ನಿಮಗೆ ಉತ್ತಮವಾಗಿರುತ್ತದೆ. ವ್ಯವಹಾರದಲ್ಲಿ ಲಾಭದ ಸ್ಥಾನವನ್ನು ಪಡೆಯುತ್ತೀರಿ. ಉತ್ತಮ ಚಿಂತಕರನ್ನು ಭೇಟಿಯಾಗುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ಸಾಕಷ್ಟು ಲಾಭವನ್ನು ಪಡೆಯುವ ಸಾಧ್ಯತೆಯಿದೆ .ನಿಮ್ಮ ಜವಾಬ್ದಾರಿಗಳು ಹೆಚ್ಚಾಗಬಹುದು. ನಿಮ್ಮ ಅದೃಷ್ಟದ ಸಂಖ್ಯೆ5 ನಿಮ್ಮ ಅದೃಷ್ಟದ ಬಣ್ಣ ನೀಲಿ

ವೃಶ್ಚಿಕ ರಾಶಿ:- ಉದ್ಯೋಗ ಸ್ಥಳದಲ್ಲಿ ಪ್ರತಿಕೂಲ ಪರಿಸ್ಥಿತಿ ಇದೆ. ಉನ್ನತ ಅಧಿಕಾರಿಗಳೊಂದಿಗೆ ವಾದ ಮಾಡುವುದನ್ನು ತಪ್ಪಿಸಿ. ವಾದ ಕೆಲಸದ ಮೇಲೆ ಪರಿಣಾಮ ಬೀರುತ್ತದೆ. ಮತ್ತೊಂದೆಡೆ ವ್ಯಾಪಾರ ಮಾಡಿದರೆ ಇದ್ದಕ್ಕಿದ್ದಂತೆ ದೊಡ್ಡ ಲಾಭವನ್ನು ಗಳಿಸಬಹುದು. ಬಹಳ ದಿನದಿಂದ ವ್ಯವಹಾರವನ್ನು ಪ್ರಾರಂಭ ಮಾಡಬೇಕೆಂದಿದ್ದರೆ ವ್ಯವಹಾರವನ್ನು ಶುರು ಮಾಡಿ,  ಒಳ್ಳೆಯದಾಗುತ್ತದೆ.  ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಕೇಸರಿ.

ಇದನ್ನೂ ಓದಿ : Numerology Horoscope 2021: ಭಾಗ್ಯಾಂಕ 6 ಇರುವವರ ಪಾಲಿಗೆ ಸಮೃದ್ಧಿ ತರಲಿದೆ 2021

ಧನಸ್ಸು ರಾಶಿ:- ಮನೆಯಲ್ಲಿರುವ ವಯಸ್ಸಾದವರ ಬಗ್ಗೆ ಕಾಳಜಿವಹಿಸಿ. ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.  ಹಣಕಾಸಿನ ವಿಚಾರದಲ್ಲಿದ ಬಗ್ಗೆ ಮಾತನಾಡುವುದಾದರೆ ಈ ದಿನ ಉತ್ತಮವಾಗಿರುತ್ತದೆ. ನೀವು ಹೆಚ್ಚು ಇಷ್ಟಪಡುವ ಕೆಲಸವನ್ನು ಮಾಡುತ್ತಿರಿ ಹಾಗೂ ಕಾರ್ಯಕ್ಷೇತ್ರದಲ್ಲಿ ಹಿರಿಯರ ಬೆಂಬಲ ಇರುತ್ತದೆ ನಿಮ್ಮ ಅದೃಷ್ಟದ 6 ಸಂಖ್ಯೆಯ ನಿಮ್ಮ ಅದೃಷ್ಟ ಬಣ್ಣ ಹಸಿರು.

ಮಕರ ರಾಶಿ :- ನೀವು ಮಾಡಿದಂತಹ ಕೆಲಸದಲ್ಲಿ ಲಾಭವನ್ನು ಪಡೆಯುತ್ತೀರಿ. ಬಹಳ ದಿನಗಳಿಂದ  ಪೂರ್ಣಗೊಳಿಸಲು ಆಗದೇ ಇದ್ದಂತಹ ವ್ಯವಹಾರವು ಇಂದು ಪೂರ್ಣಗೊಳ್ಳುತ್ತದೆ. ಕಚೇರಿಯಲ್ಲಿ ನಿಮಗೆ ಅನುಕೂಲಕರ ವಾತಾವರಣ  ಇರುತ್ತದೆ. ಪ್ರೀತಿಪಾತ್ರರೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ. ಕಾನೂನು ವಿವಾದದಲ್ಲಿ ಗೆಲ್ಲುತ್ತೀರಿ. ಕುಟುಂಬ ಜೀವನದ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ2 ನಿಮ್ಮ ಅದೃಷ್ಟದ ಬಣ್ಣ ಬಿಳಿ.

ಕುಂಭ ರಾಶಿ :- ಹಣದ ವಿಚಾರದಲ್ಲಿ ಅಷ್ಟೊಂದೇನೂ ಅನುಕೂಲಕರವಾಗಿ ಇರುವುದಿಲ್ಲ.  ನೀವು ಸಾಲ ಪಡೆದಿದ್ದರೆ ಅದನ್ನು ಮರುಪಾವತಿಸಲು ಒತ್ತಡ ಹೆಚ್ಚಾಗುತ್ತದೆ. ಉಳಿತಾಯದ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಒಳ್ಳೆಯದು.  ಹಣಕಾಸಿಗೆ ಸಂಬಂಧಪಟ್ಟ ನಿರ್ಧಾರವನ್ನು ಜಾಗರೂಕತೆಯಿಂದ ಮಾಡಿ. ಕೆಲಸದ ವಿಚಾರಕ್ಕೆ ಬಂದರೆ, ಮಿಶ್ರ ಫಲ ನೀಡುವ ದಿನವಾಗಿರುತ್ತದೆ. ಉದ್ಯೋಗದಲ್ಲಿರುವವರಿಗೆ ಕಚೇರಿಯಲ್ಲಿ ಹೆಚ್ಚುವರಿ ಕೆಲಸ ಇರಬಹುದು. ನಿಮ್ಮ ಅದೃಷ್ಟದ ಸಂಖ್ಯೆ5 ನಿಮ್ಮ ಅದೃಷ್ಟ ಬಣ್ಣ ಬಿಳಿ 

ಮೀನಾ ರಾಶಿ :- ವೈವಾಹಿಕ ಜೀವನದಲ್ಲಿ ಪ್ರಣಯದ ಮನಸ್ಥಿತಿಯಲ್ಲಿರುತ್ತೀರಿ. ಹಣದ ವಿಚಾರದಲ್ಲಿ ಈ ದಿನ ಸಾಮಾನ್ಯವಾಗಿರುತ್ತದೆ ಹಾಗೂ ಅನಾವಶ್ಯಕವಾಗಿ ಹಣ  ಖರ್ಚು ಮಾಡುವುದನ್ನು ತಪ್ಪಿಸಿಕೊಳ್ಳಿ. ಆರೋಗ್ಯದ ದೃಷ್ಟಿಯಲ್ಲಿ ಉತ್ತಮವಾಗಿರುತ್ತದೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಬಲಶಾಲಿಯಾಗಿರುತ್ತೀರಿ. ಉದ್ಯೋಗಸ್ಥರಿಗೆ ಸಂಬಳ ಹೆಚ್ಚಾಗುವ ಸಾಧ್ಯತೆ ಇದೆ. ಹಿರಿಯ ಅಧಿಕಾರಿಗಳಿಗೆ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ ನಿಮ್ಮ ಆರೋಗ್ಯದ ಕಡೆ ಹೆಚ್ಚಿನ ಕಾಳಜಿವಹಿಸಿ ನಿಮ್ಮ ಅದೃಷ್ಟದ ಸಂಖ್ಯೆ 1ನಿಮ್ಮ ಅದೃಷ್ಟದ ಬಣ್ಣ ಬಿಳಿ.

ಇದನ್ನೂ ಓದಿ : ಈ Templeನಲ್ಲಿ ರಾತ್ರಿ ತಂಗುವವರು ಕಲ್ಲಾಗುತ್ತಾರಂತೆ! ಇಲ್ಲಿದೆ ಭಯಾನಕ ರಹಸ್ಯ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News