Health Tips: ಮಧುಮೇಹಿಗಳು ರಕ್ತದಲ್ಲಿನ ಸಕ್ಕರೆ ಪ್ರಮಾಣ ಹಠಾತ್ ಕಡಿಮೆಯಾದ್ರೆ ಈ 5 ಪದಾರ್ಥ ಸೇವಿಸಬೇಕು

ಮಧುಮೇಹ ರೋಗಿಗಳು ಇನ್ಸುಲಿನ್ ಮತ್ತು ಸಕ್ಕರೆಯ ಮಟ್ಟವನ್ನು ಸಮತೋಲನಗೊಳಿಸಲು ಔಷಧಿಗಳನ್ನು ತೆಗೆದುಕೊಂಡಾಗ ಅನೇಕ ಬಾರಿ ಸಕ್ಕರೆಯ ಮಟ್ಟವು ಇದ್ದಕ್ಕಿದ್ದಂತೆ ತುಂಬಾ ಕಡಿಮೆ ಆಗುತ್ತದೆ.

Written by - Puttaraj K Alur | Last Updated : Jan 26, 2022, 05:56 PM IST
  • ನೀವು ಸೇಬು, ಕಿತ್ತಳೆ, ಅನಾನಸ್ ಮತ್ತು ಕ್ರ್ಯಾನ್ಬೆರಿ ಹಣ್ಣಿನ ರಸ ಕುಡಿಯಬಹುದು
  • ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಹಠಾತ್ ಕುಸಿತ ತಪ್ಪಿಸಲು ತಾಜಾ ಹಣ್ಣು ಅಥವಾ ಒಣ ಹಣ್ಣುಗಳನ್ನು ಸೇವಿಸಬಹುದು
  • 1 ಕಪ್ ಬೆಚ್ಚಗಿನ ಹಾಲು ಕುಡಿದರೆ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಿಸಲು ಸಹಾಯ ಮಾಡುತ್ತದೆ
Health Tips: ಮಧುಮೇಹಿಗಳು ರಕ್ತದಲ್ಲಿನ ಸಕ್ಕರೆ ಪ್ರಮಾಣ ಹಠಾತ್ ಕಡಿಮೆಯಾದ್ರೆ ಈ 5 ಪದಾರ್ಥ ಸೇವಿಸಬೇಕು  title=
ರಕ್ತದಲ್ಲಿನ ಸಕ್ಕರೆ ಪ್ರಮಾಣ ಹಠಾತ್ ಕಡಿಮೆಯಾದ್ರೆ ಏನು ಮಾಡಬೇಕು?

ನವದೆಹಲಿ: ಮಧುಮೇಹಿಗಳಿಗೆ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಎಷ್ಟು ಅಪಾಯಕಾರಿಯೋ, ಹಠಾತ್ ಕಡಿಮೆಯಾದ ರಕ್ತದ ಸಕ್ಕರೆ(Low Blood Sugar)ಯು ಆತಂಕಕಾರಿ ಪರಿಸ್ಥಿತಿಯನ್ನು ಉಂಟುಮಾಡಬಹುದು. ತಜ್ಞರ ಪ್ರಕಾರ ನಮ್ಮ ದೇಹವು ಆಹಾರವನ್ನು ಗ್ಲೂಕೋಸ್ ಆಗಿ ಪರಿವರ್ತಿಸುತ್ತದೆ ಮತ್ತು ದೇಹದಲ್ಲಿ ಶಕ್ತಿಯಾಗಿ ಬಳಸುತ್ತದೆ. ಆದರೆ ದೇಹದಲ್ಲಿ ಗ್ಲೂಕೋಸ್ ಕೊರತೆ ಇದ್ದಾಗ ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ.

ಮಧುಮೇಹ ರೋಗಿಗಳು(Diabetes) ಇನ್ಸುಲಿನ್ ಮತ್ತು ಸಕ್ಕರೆಯ ಮಟ್ಟವನ್ನು ಸಮತೋಲನಗೊಳಿಸಲು ಔಷಧಿಗಳನ್ನು ತೆಗೆದುಕೊಂಡಾಗ ಅನೇಕ ಬಾರಿ ಸಕ್ಕರೆಯ ಮಟ್ಟವು ಇದ್ದಕ್ಕಿದ್ದಂತೆ ತುಂಬಾ ಕಡಿಮೆ ಆಗುತ್ತದೆ. ಕಡಿಮೆ ರಕ್ತದಲ್ಲಿನ ಸಕ್ಕರೆಯ ಮಟ್ಟದಿಂದ ಹೆದರಿಕೆ, ತಲೆತಿರುಗುವಿಕೆ, ತಲೆನೋವು ಮತ್ತು ನಿದ್ರೆಯ ತೊಂದರೆಗಳಂತಹ ಲಕ್ಷಣಗಳು ಕಂಡುಬರುತ್ತವೆ. ಅದೇ ರೀತಿ ಕೆಲವು ಸಂದರ್ಭಗಳಲ್ಲಿ ಗಂಭೀರ ಪರಿಸ್ಥಿತಿ ಕೂಡ ಉದ್ಭವಿಸಬಹುದು. ಕಡಿಮೆ ರಕ್ತದ ಸಕ್ಕರೆಯ ಸಮಸ್ಯೆಯು ಆಗಾಗ ಆಗುತ್ತಿರುತ್ತದೆ. ಆದ್ದರಿಂದ ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸಲು ನೀವು ಏನು ಸೇವಿಸಬೇಕು ಅನ್ನೋದನ್ನು ತಿಳಿದುಕೊಳ್ಳಿರಿ.   

ಇದನ್ನೂ ಓದಿ: ಪ್ರತಿನಿತ್ಯ ಅರಿಶಿನ ಹಾಲು ಕುಡಿಯುತ್ತೀರಾ? ಮೊದಲು ಈ ಸುದ್ದಿ ಓದಿ

ಹಣ್ಣಿನ ರಸವನ್ನು ಕುಡಿಯಿರಿ

ನೀವು ಸೇಬು, ಕಿತ್ತಳೆ, ಅನಾನಸ್ ಮತ್ತು ಕ್ರ್ಯಾನ್ಬೆರಿ(Cranberry) ಹಣ್ಣಿನ ರಸವನ್ನು ಕುಡಿಯಬಹುದು. ಇದರ ನಂತರ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸಿ. ಆದರೆ ಹೆಚ್ಚು ರಸವನ್ನು ಸೇವಿಸಬಾರದು ಎಂಬುದನ್ನು ನೆನಪಿನಲ್ಲಿಡಿ. ಸಕ್ಕರೆ ಮಟ್ಟ(Type 2 Diabetes)ವನ್ನು ಯಾವಾಗಲೂ ಸಮತೋಲನದಲ್ಲಿ ಇರಿಸಿ. ಅದರ ಇಳಿಕೆಯನ್ನು ಪರಿಶೀಲಿಸುತ್ತಿರಿ ಮತ್ತು ನಿಯಮಿತವಾಗಿ ಹೆಚ್ಚಿಸಲು ಪ್ರಯತ್ನಿಸಿರಿ.

ತಾಜಾ ಹಣ್ಣುಗಳು ಮತ್ತು ಒಣ ಹಣ್ಣುಗಳು

ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಹಠಾತ್ ಕುಸಿತವನ್ನು ತಪ್ಪಿಸಲು ತಾಜಾ ಹಣ್ಣುಗಳು(Diabetic Food) ಅಥವಾ ಒಣ ಹಣ್ಣುಗಳನ್ನು ಸಹ ತಿನ್ನಬಹುದು. ಬಾಳೆಹಣ್ಣು, ದ್ರಾಕ್ಷಿ, ಸೇಬು ಮತ್ತು ಕಿತ್ತಳೆಯಂತಹ ಕಾರ್ಬೋಹೈಡ್ರೇಟ್‌ಗಳಲ್ಲಿ ಸಮೃದ್ಧವಾಗಿರುವ ಹಣ್ಣುಗಳನ್ನು ಸೇವಿಸಿ. ಒಣ ಹಣ್ಣುಗಳಲ್ಲಿ ನೀವು ಒಣದ್ರಾಕ್ಷಿಗಳನ್ನು ತಿನ್ನಬಹುದು. ಇದು ರಕ್ತದಲ್ಲಿನ ಸಕ್ಕರೆಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.

ಕೊಬ್ಬು ಮುಕ್ತ ಹಾಲು ಪರಿಣಾಮಕಾರಿ

ಒಂದು ಕಪ್ ಬೆಚ್ಚಗಿನ ಹಾಲನ್ನು ಕುಡಿಯುವುದು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ(Low Blood Sugar)ವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ ಕೊಬ್ಬು ರಹಿತ ಹಾಲನ್ನು ಸೇವಿಸಿ. ಹಾಲು ವಿಟಮಿನ್ ಡಿ ಮತ್ತು ಕಾರ್ಬೋಹೈಡ್ರೇಟ್ ಗಳನ್ನು ಹೊಂದಿರುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: COVID ನಿಂದ ಚೇತರಿಸಿಕೊಂಡ ನಂತರ ಈ ತಪ್ಪನ್ನು ಮಾಡದಿರಿ, 68 ದಿನಗಳವರೆಗೆ ಉಳಿಯಲಿದೆ ಈ ಲಕ್ಷಣಗಳು

ಗ್ಲೂಕೋಸ್ ಮಾತ್ರೆಗಳು

ಕಡಿಮೆ ರಕ್ತದ ಸಕ್ಕರೆಯ ಸಮಸ್ಯೆ ಕಂಡುಬಂದರೆ ನೀವು ಗ್ಲೂಕೋಸ್ ಮಾತ್ರೆಗಳನ್ನು ತೆಗೆದುಕೊಳ್ಳಬಹುದು. ಎಷ್ಟು ಪ್ರಮಾಣದಲ್ಲಿ ತೆಗೆದುಕೊಳ್ಳಬೇಕೆಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ರಕ್ತದಲ್ಲಿನ ಸಕ್ಕರೆಯನ್ನು ಸಮತೋಲನಗೊಳಿಸಲು 15 ರಿಂದ 20 ಗ್ರಾಂ ಸಾಕು. ಇದನ್ನು ತಿಂದ ನಂತರ 10 ರಿಂದ 20 ನಿಮಿಷಗಳ ಕಾಲ ಕಾಯಿರಿ ಮತ್ತು ನಂತರ ಸಕ್ಕರೆ ಮಟ್ಟವನ್ನು ಪರೀಕ್ಷಿಸಿ.

ಮಿಠಾಯಿಗಳನ್ನು ಸೇವಿಸಿರಿ

ಅಂಟಂಟಾದ ಮಿಠಾಯಿಗಳು ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತವೆ, ಇದು ರಕ್ತದಲ್ಲಿನ ಸಕ್ಕರೆಯ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಇವು ವೇಗವಾಗಿ ರಕ್ತಪ್ರವಾಹಕ್ಕೆ ಹೀರಲ್ಪಡುತ್ತವೆ ಮತ್ತು ರಕ್ತದಲ್ಲಿನ ಸಕ್ಕರೆಯನ್ನು ಸಮತೋಲನಗೊಳಿಸುತ್ತವೆ. ಇದನ್ನು ತಿಂದ 15 ನಿಮಿಷಗಳ ನಂತರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸಿ.

(ಗಮನಿಸಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಈ ಸಲಹೆಗಳನ್ನು ಪಾಲಿಸುವ ಮೊದಲು ಕಡ್ಡಾಯವಾಗಿ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee Kannada News ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News