ಬೆಳಿಗ್ಗೆ ಬಲವಂತವಾಗಿ ಬೇಗ ಎದ್ದೇಳುವ ಅಭ್ಯಾಸವೂ ಅಪಾಯಕಾರಿಯೇ? ಸಂಶೋಧನೆ ಏನು ಹೇಳುತ್ತೆ ಗೊತ್ತಾ?

Early Waking Disadvantages: ಸಾಮಾನ್ಯವಾಗಿ ಮನೆಯಲ್ಲಿ ಹಿರಿಯರು ಮುಂಜಾನೆ ಸೂರ್ಯೋದಯವಾಗುವುದಕ್ಕೆ ಮುನ್ನವೇ ಎದ್ದೇಳಬೇಕು. ಇಲ್ಲದಿದ್ದರೆ, ಮನೆಯಲ್ಲಿ ದಾರಿದ್ರ್ಯ ಆವರಿಸುತ್ತದೆ ಎಂದು ಹೇಳುವುದನ್ನು ನಾವು ಕೇಳಿಯೇ ಇರುತ್ತೇವೆ. ಇದಲ್ಲದೆ, ಅರ್ಲಿ ಟು ಬೆಡ್, ಅರ್ಲಿ ಟು ರೈಸ್ ಎಂಬುದನ್ನು ಚಿಕ್ಕ ವಯಸ್ಸಿನಲ್ಲಿ ಒಳ್ಳೆಯ ಹವ್ಯಾಸಗಳ ಭಾಗವಾಗಿ ಶಿಕ್ಷಕರೂ ಕಲಿಸಿರುತ್ತಾರೆ. ಆದರೆ, ಬೇಗ ಎದ್ದೇಳುವುದು ಒಳ್ಳೆಯದೇ? ಬಲವಂತವಾಗಿ ಬೇಗ ಎದ್ದೇಳುವುದರಿಂದ ಇದು ನಮ್ಮ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ. ಈ ಬಗ್ಗೆ ಸಂಶೋಧನೆ ಏನು ಹೇಳುತ್ತೆ ತಿಳಿಯಿರಿ.

Written by - Yashaswini V | Last Updated : Dec 12, 2022, 10:20 AM IST
  • ಯಾವುದೇ ವ್ಯಕ್ತಿಗೆ ಆರೋಗ್ಯವಾಗಿರಲು ಉತ್ತಮ ಆಹಾರದ ಜೊತೆಗೆ ನಿದ್ರೆಯೂ ಬಹಳ ಮುಖ್ಯ.
  • ವಿಶ್ರಾಂತಿ ಸಿಗದಿದ್ದಾಗ ನಾವು ಮಾನಸಿಕವಾಗಿ ಕೆಲಸ ಮಾಡಲು ಎಷ್ಟೇ ಶಕ್ತರೆನಿಸಿದರೂ ನಮ್ಮ ದೇಹ ಅದಕ್ಕೆ ಸಹಕಾರ ನೀಡುವುದಿಲ್ಲ.
  • ದೇಹದ ಗಡಿಯಾರಕ್ಕೆ ವಿರುದ್ಧವಾಗಿ ಬೆಳಿಗ್ಗೆ ಎದ್ದೇಳಲು ಅಥವಾ ತಡರಾತ್ರಿಯವರೆಗೂ ಎಚ್ಚದಿಂದಿರಲು ಯಾರನ್ನಾದರೂ ಕೇಳಿದರೆ, ನಂತರ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಬೆಳಿಗ್ಗೆ ಬಲವಂತವಾಗಿ ಬೇಗ ಎದ್ದೇಳುವ ಅಭ್ಯಾಸವೂ ಅಪಾಯಕಾರಿಯೇ? ಸಂಶೋಧನೆ ಏನು ಹೇಳುತ್ತೆ ಗೊತ್ತಾ? title=
Early Waking Disadvantages

Early Waking Disadvantages: ನಿತ್ಯ ಬೆಳಿಗ್ಗೆ ಬೇಗ ಎದ್ದೇಳುವುದು ಆರೋಗ್ಯಕ್ಕೆ ಒಳ್ಳೆಯದು. ಯಾವ ವ್ಯಕ್ತಿ ಬೆಳಿಗ್ಗೆ ಬೇಗ ಎದ್ದು ತನ್ನ ವಿದ್ಯಾಭ್ಯಾಸ, ಕೆಲಸದತ್ತ ಗಮನ ಹರಿಸುತ್ತಾನೋ ಆತ ಜೀವನದಲ್ಲಿ ಬಹಳ ಉತ್ತುಂಗಕ್ಕೆ ಏರುತ್ತಾನೆ ಎಂದು ಹೇಳುವುದನ್ನು ಸಾಮಾನ್ಯವಾಗಿ ಕೇಳಿಯೇ ಇರುತ್ತೇವೆ. ಆದರೆ, ನಾವು ಬೇಗ ಎದ್ದೇಳುವುದಕ್ಕೂ, ಜೀವನದಲ್ಲಿ ಯಶಸ್ಸನ್ನು ಸಾಧಿಸುವುದಕ್ಕೂ  ಸಂಬಂಧವಿದೆಯೇ? ಅಷ್ಟಕ್ಕೂ ಮುಂಜಾನೆ ಬೇಗ ಎದ್ದೇಳಬೇಕು ಎನ್ನುವುದು ತಪ್ಪಲ್ಲ. ಆದರೆ, ಬಲವಂತವಾಗಿ ಬೇಗ ಎದ್ದೇಳುವುದು ಎಷ್ಟು ಸರಿ? ಇದರಿಂದ ಆಗುವ ಅನುಕೂಲ ಮತ್ತು ಅನಾನುಕೂಲಗಳ ಬಗ್ಗೆ ಸಂಶೋಧನೆ ಏನು ಹೇಳುತ್ತದೆ ಎಂದು ತಿಳಿಯಿರಿ.

ವಾಸ್ತವವಾಗಿ, ವಿದ್ಯಾರ್ಥಿಗಳಿಗೆ ಮುಂಜಾನೆ ಬೇಗ ಎದ್ದು ಬ್ರಾಹ್ಮಿ ಮುಹೂರ್ತದಲ್ಲಿ ಓದುವಂತೆ ಸಲಹೆ ನೀಡಲಾಗುತ್ತದೆ. ಕಾರಣ, ಬೆಳಗಿನ ಜಾವದಲ್ಲಿ ಸದ್ದುಗದ್ದಲಗಳು ಕಡಿಮೆ ಇರುತ್ತದೆ. ಮಾತ್ರವಲ್ಲ, ನಿದ್ರೆ ಮುಗಿಸಿ ಎದ್ದಾಗ ಮೈಂಡ್ ಫ್ರೆಶ್ ಆಗಿರುತ್ತದೆ. ಈ ಸಮಯದಲ್ಲಿ ಓದಿವುದರಿಂದ ಜ್ಞಾನಾರ್ಜನೆ ಆಗುತ್ತದೆ ಎಂಬುದು ಒಂದು ವಾದ. ಆದರೆ, ಕೆಲವರಿಗೆ ಬೆಳಿಗ್ಗೆ ಬೇಗನೆ ಏಳಲು ಸಾಧ್ಯವಿಲ್ಲ, ಬೇಕಿದ್ದರೆ ಇಡೀ ರಾತ್ರಿ ಕುಳಿತು ಓದು ಎಂದರೂ ಓದುತ್ತಾರೆ.  

ಬೆಳಿಗ್ಗೆ ತಡವಾಗಿ ಏಳುವವರಿಗಿಂತ ಮುಂಜಾನೆಯಲ್ಲಿ ಬೇಗ ಏಳುವವರು ಜೀವನದಲ್ಲಿ ಯಶಸ್ವಿಯಾಗುತ್ತಾರೆ ಎಂಬುದು ಹಲವರ ನಂಬಿಕೆ. ಆದರೆ, ಫಿಟ್ನೆಸ್ ಬಗ್ಗೆ ಗಮನ ಇರುವವರಿಗೆ ಮುಂಜಾನೆ ಬೇಗ ಏಳಲು ಇಷ್ಟಪಡುತ್ತಾರೆ. ಅವರಲ್ಲೂ, ಒಂದು ಕಾಲು ಭಾಗದ ಜನರಷ್ಟೇ ಈ ಬಗ್ಗೆ ಒಲವು ಹೊಂದಿರುತ್ತಾರೆ. ಆದರೆ, ನಮ್ಮಲ್ಲಿ ಬಹುತೇಕ ಜನರಿಗೆ ತಡರಾತ್ರಿವರೆಗೂ ನಿದ್ರೆ ಬರುವುದೇ ಇಲ್ಲ. ಅದಕ್ಕಿಂತ ಹೆಚ್ಚಾಗಿ, ಅವರು ಹಗಲಿನಲ್ಲಿ ಹೆಚ್ಚು ಕೆಲಸ ಮಾಡುವುದಕ್ಕಿಂತ ರಾತ್ರಿ ವೇಳೆ ತಮ್ಮ ಕೆಲಸಗಳನ್ನು ಬೇಗ ಮುಗಿಸಬಹುದು ಎಂಬ ಮನೋಭಾವದವರು.  

ಇದನ್ನೂ ಓದಿ- ಪಿರಿಯಡ್ಸ್ ಸಮಯದಲ್ಲಿ ಸೆಕ್ಸ್‌ ಮಾಡುವುದು ಒಳ್ಳೆಯದೇ..?

ಸಂಶೋಧನೆ ಪ್ರಕಾರ ತಡರಾತ್ರಿಯವರೆಗೆ ಜಾಗರಣೆ ಮಾಡುವವರ ಗುಣ-ಸ್ವಭಾವ:
ಸಂಶೋಧನೆಯೊಂದರ ಪ್ರಕಾರ, ತಡರಾತ್ರಿಯವರೆಗೆ ಜಾಗರಣೆ ಮಾಡುವವರ ಕಲ್ಪನಾ ಶಕ್ತಿ, ಮುಂಜಾನೆ ಬಲವಂತವಾಗಿ ಬೇಗ ಏಳುವವರ ಕಲ್ಪನಾ ಶಕ್ತಿಗಿಂತ ಹೆಚ್ಚಿರುತ್ತದೆ ಎಂದು ತಿಳಿದುಬಂದಿದೆ. ತಡರಾತ್ರಿಯವರೆಗೆ ಜಾಗರಣೆ ಮಾಡುವವರು ಏಕಾಂಗಿಯಾಗಿ ಸಮಯ ಕಳೆಯಲು ಇಷ್ಟಪಡುತ್ತಾರೆ. ತಡರಾತ್ರಿಯವರೆಗೂ ಎಚ್ಚರದಿಂದಿರುವವರಿಗೆ ಉತ್ತಮ ಜ್ಞಾಪಕ ಶಕ್ತಿ ಇರುತ್ತದೆ. ಹೊಸ ಹೊಸ ಪ್ರಯೋಗಗಳನ್ನು ಮಾಡುವುದರಲ್ಲಿಯೂ ಮುಕ್ತ ಮನಸ್ಸು ಇರುತ್ತಾರೆ. 
 
ಮುಂಜಾನೆ ಬೇಗ ಏಳುವವರ ಸ್ವಭಾವ ಹೇಗಿರುತ್ತದೆ?
ಸಂಶೋಧನೆಯೊಂದರ ಪ್ರಕಾರ, ಬೆಳಿಗ್ಗೆ ಬೇಗನೆ ಏಳುವ ಅಭ್ಯಾಸ ಹೊಂದಿರುವವರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಹೊಂದಿರುತ್ತಾರೆ. ಇಂತಹವು ಖಿನ್ನತೆಗೆ ಒಳಗಾಗುವುದು ತೀರಾ ವಿರಳ. ಈ ಜನರು ಕಡಿಮೆ ಅಲ್ಕೋಹಾಲ್ ಕುಡಿಯುತ್ತಾರೆ. ಇವರು ತುಂಬಾ ಬುದ್ಧಿವಂತರು ಮತ್ತು ಆರೋಗ್ಯವಂತರೂ ಆಗಿರುತ್ತಾರೆ. ಆದರೆ, ನಿತ್ಯ ತಮ್ಮ ದೇಹಕ್ಕೆ ಸಾಕಾಗುವಷ್ಟು ನಿದ್ರೆ ಮುಗಿಸಿ ಮುಂಜಾನೆ ಬೇಗ ಎದ್ದಾಗ ಮಾತ್ರ ಈ ಎಲ್ಲಾ ಸ್ವಭಾವಗಳನ್ನು ಅವರಲ್ಲಿ ಕಾಣಬಹುದಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ, ತಡರಾತ್ರಿಯವರೆಗೆ ಜಾಗರಣೆ ಮಾಡಿ ಮುಂಜಾನೆ ಬೇಗ ಏಳುವ ಅದರಲ್ಲೂ ಯಾವುದೋ ಕಾರಣಕ್ಕಾಗಿ ಅನಿವಾರ್ಯವಾಗಿ, ಬಲವಂತವಾಗಿ ನಿತ್ಯ ಬೆಳಿಗ್ಗೆ ಬೇಗ ಏಳುವ ಅಭ್ಯಾಸ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಸಂಶೋಧನೆ ಬಹಿರಂಗಪಡಿಸಿದೆ. 

ಇದನ್ನೂ ಓದಿ- ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೆ ಸುಲಭ ಪರಿಹಾರ ಬಾಳೆಹಣ್ಣು

ಬಲವಂತವಾಗಿ ಬೇಗ ಏಳುವುದು ಕೂಡ ಅಪಾಯಕಾರಿ- ಸಂಶೋಧನೆ
ಯಾವುದೇ ವ್ಯಕ್ತಿಗೆ ಆರೋಗ್ಯವಾಗಿರಲು ಉತ್ತಮ ಆಹಾರದ ಜೊತೆಗೆ ನಿದ್ರೆಯೂ ಬಹಳ ಮುಖ್ಯ. ದೇಹಕ್ಕೆ ಸರಿಯಾಗಿ ವಿಶ್ರಾಂತಿ ಸಿಗದಿದ್ದಾಗ ನಾವು ಮಾನಸಿಕವಾಗಿ ಕೆಲಸ ಮಾಡಲು ಎಷ್ಟೇ ಶಕ್ತರೆನಿಸಿದರೂ ನಮ್ಮ ದೇಹ ಅದಕ್ಕೆ ಸಹಕಾರ ನೀಡುವುದಿಲ್ಲ ಎಂದು ಸಂಶೋಧನೆ ಹೇಳುತ್ತದೆ. ಬೆಳಗ್ಗೆ ಬಲವಂತವಾಗಿ ಎದ್ದೇಳುವುದರಿಂದ ಆಗುವ ಅನಾನುಕೂಲಗಳೆಂದರೆ- 
* ದೇಹದ ಗಡಿಯಾರಕ್ಕೆ ವಿರುದ್ಧವಾಗಿ ಬೆಳಿಗ್ಗೆ ಎದ್ದೇಳಲು ಅಥವಾ ತಡರಾತ್ರಿಯವರೆಗೂ ಎಚ್ಚದಿಂದಿರಲು  ಯಾರನ್ನಾದರೂ ಕೇಳಿದರೆ, ಅದು ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. 
* ಯಾವುದೇ ಕೆಲಸಕ್ಕೂ ಒಂದು ಹಂತದ ನಂತರ ದೇಹವನ್ನು ಒತ್ತಾಯಿಸುವುದು ಎಂದಿಗೂ ಉತ್ತಮ ಫಲಿತಾಂಶಗಳನ್ನು ನೀಡುವುದಿಲ್ಲ.
* ದೇಹವನ್ನು ಸಾವಯವ ರೀತಿಯಲ್ಲಿ ಓಡಿಸಲು ಅವಕಾಶ ನೀಡಿದರೆ ಮಾತ್ರ ಅದರ ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ.
* ಯಾವುದೇ ವ್ಯಕ್ತಿ ನಿತ್ಯ ತಡರಾತ್ರಿಯವರೆಗೆ ಎಚ್ಚರವಾಗಿದ್ದು, ಮುಂಜಾನೆ ಬೇಗ ಏಳುವಂತೆ ಬಲವಂತ ಮಾಡಿದರೆ ಅದು ಅವರ ಕೆಲಸದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅಂತಹ ವ್ಯಕ್ತಿಗೆ ಕೆಲಸದಲ್ಲಿ ಒಲವು ಇರುವುದಿಲ್ಲ ಅಥವಾ ಕಡಿಮೆ ಒಲವನ್ನು ಹೊಂದಿರುತ್ತಾನೆ.
* ನಿತ್ಯ ಸುಮಾರು 7-8 ಗಂಟೆಗಳವರೆಗೆ ನಿದ್ರೆ ಮಾಡದ ವ್ಯಕ್ತಿ ಯಾವುದೇ ಕೆಲಸವನ್ನೂ ಏಕ ಚಿತ್ತತೆಯಿಂದ ಮಾಡಲು ಸಾಧ್ಯವಾಗುವುದಿಲ್ಲ.
* ಸರಿಯಾಗಿ ನಿದ್ರೆ ಇಲ್ಲದಿರುವುದು ಇವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕೆಲವರಿಗೆ ಏಕಾಗ್ರತೆ ಕೊರತೆ, ತಲೆ ನೋವಿನಂತಹ ಸಮಸ್ಯೆಗಳು ಕಾಣಿಸಿಕೊಂಡರೆ, ಇನ್ನೂ ಕೆಲವರಿಗೆ ದೇಹದಲ್ಲಿ ಬೊಜ್ಜು ಹೆಚ್ಚಾಗಬಹುದು ಎಂದು ಸಂಶೋಧನೆಯಿಂದ ತಿಳಿದುಬಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News