ಜುಲೈ 12 ರಿಂದ ಈ ರಾಶಿಯವರು ಜಾಗರೂಕರಾಗಿರಬೇಕು, ಶನಿ ದೇವ ನೀಡಲಿದ್ದಾನೆ ಸಂಕಷ್ಟ

ಜುಲೈ 12 ರಂದು ಹಿಮ್ಮುಖ ಸ್ಥಿತಿಯಲ್ಲಿಯೇ ಶನಿ ದೇವ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಇದಾದ ನಂತರ ಶನಿದೇವನು 17 ಜನವರಿ 2023 ರವರೆಗೆ ಮಕರ ರಾಶಿಯಲ್ಲಿ ಇರುತ್ತಾನೆ. 

Written by - Ranjitha R K | Last Updated : Jun 17, 2022, 01:33 PM IST
  • ಜುಲೈ ತಿಂಗಳು ಅತ್ಯಂತ ವಿಶೇಷವಾಗಿರಲಿದೆ.
  • ಶನಿದೇವನು ತನ್ನ ರಾಶಿಯನ್ನು ಬದಲಾಯಿಸುತ್ತಾನೆ.
  • ಜನವರಿ 2023 ರವರೆಗೆ ಮಕರ ರಾಶಿಯಲ್ಲಿ ಇರುತ್ತಾನೆ
ಜುಲೈ 12 ರಿಂದ ಈ ರಾಶಿಯವರು ಜಾಗರೂಕರಾಗಿರಬೇಕು, ಶನಿ ದೇವ ನೀಡಲಿದ್ದಾನೆ ಸಂಕಷ್ಟ   title=
Shani transit effect (file photo)

ಬೆಂಗಳೂರು : ಗ್ರಹಗಳು ಮತ್ತು ನಕ್ಷತ್ರಪುಂಜಗಳ ಸ್ಥಾನದ ದೃಷ್ಟಿಯಿಂದ ಜುಲೈ ತಿಂಗಳು ಅತ್ಯಂತ ವಿಶೇಷವಾಗಿರಲಿದೆ. ಜುಲೈನಲ್ಲಿ ಶನಿದೇವನು ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಶನಿ ದೇವನು ಪ್ರಸ್ತುತ ಕುಂಭ ರಾಶಿಯಲ್ಲಿದ್ದಾನೆ. 30 ವರ್ಷಗಳ ನಂತರ ಏಪ್ರಿಲ್ 29 ಶನಿ ಮಹಾತ್ಮ ಕುಂಭ ರಾಶಿ ಪ್ರವೇಶಿಸಿದ್ದ. ಜೂನ್ 5 ರಿಂದ, ಶನಿಯು ಕುಂಭ ರಾಶಿಯಲ್ಲಿ ಹಿಮ್ಮುಖ ಚಲನೆಯಲ್ಲಿದ್ದಾನೆ. ಜುಲೈ 12 ರಂದು ಹಿಮ್ಮುಖ ಸ್ಥಿತಿಯಲ್ಲಿಯೇ ಶನಿ ದೇವ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಇದಾದ ನಂತರ ಶನಿದೇವನು 17 ಜನವರಿ 2023 ರವರೆಗೆ ಮಕರ ರಾಶಿಯಲ್ಲಿ ಇರುತ್ತಾನೆ. 

ಮೇಷ - ಶನಿ ದೇವನ ಹಿಮ್ಮುಖ ಚಲನೆಯ ಪರಿಣಾಮ ಜುಲೈ ತಿಂಗಳಿನಿಂದ  ನಿಮ್ಮ ಆರ್ಥಿಕ ಸ್ಥಿತಿ ಹದಗೆಡಬಹುದು. ಹಣಕಾಸಿನ ವಿಚಾರದಲ್ಲಿ ತೊಂದರೆ ಎದುರಿಸಬಹುದು. ಆರೋಗ್ಯ ಸಮಸ್ಯೆಗಳು ಕೂಡಾ ತಲೆದೋರಬಹುದು. ಶನಿಯು ಹಿಮ್ಮುಖ ಚಲನೆಯಲ್ಲಿ ಇರುವಾಗ ಆರೋಗ್ಯ ಮತ್ತು ಸಂಪತ್ತು ಎರಡರ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅಗತ್ಯ. ಶನಿ ದೇವರ ಕಕೃಪೆಗಾಗಿ ಆಂಜನೇಯ ಮತ್ತು ಶನಿ ದೇವರನ್ನು ಪೂಜಿಸಿ. 

ಇದನ್ನೂ ಓದಿ : ಭಾಗ್ಯ ಬೆಳಗುತ್ತಲೇ ಹುಟ್ಟುತ್ತಾರೆ ಈ ಅಕ್ಷರದಿಂದ ಹೆಸರು ಆರಂಭವಾಗುವವರು.. !ಪ್ರತಿ ಹಂತದಲ್ಲೂ ಸಿಗುತ್ತದೆ ಯಶಸ್ಸು

ಸಿಂಹ ರಾಶಿ- ಸಿಂಹ ರಾಶಿಯವರು ವೃತ್ತಿ ಜೀವನದಲ್ಲಿ ತೊಂದರೆಗಳನ್ನು ಎದುರಿಸಬೇಕಾಗಬಹುದು. ಕಚೇರಿಯಲ್ಲಿ ನಿಮ್ಮ ವಿರುದ್ದ ಮಾಡುವ  ಪಿತೂರಿಗೆ ಬಲಿಯಾಗಬಹುದು. ವ್ಯಾಪಾರಿಗಳು ಲಾಭ ಗಳಿಸಲು ಕಷ್ಟಪಡಬೇಕಾಗಬಹುದು. ಸಾಲ ಪಡೆಯುವ ಅವಕಾಶವಿರಬಹುದು. . ವಾಹನ ಬಳಸುತ್ತಿದ್ದರೆ ಎಚ್ಚರ ಇರಲಿ. 

ಧನು ರಾಶಿ - ಧನು ರಾಶಿಯವರು ಮಾನಸಿಕ ಒತ್ತಡದಿಂದ ಬಳಲಬೇಕಾಗಬಹುದು. ಕಠಿಣ ಪರಿಶ್ರಮದ ಫಲಿತಾಂಶಗಳನ್ನು ಪಡೆಯುವುದು ವಿಳಂಬವಾಗಬಹುದು. ಆತುರದ ನಿರ್ಧಾರವು ಹಾನಿಯನ್ನುಂಟುಮಾಡುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಶನಿವಾರದಂದು ಶನಿದೇವರ ದೇವಸ್ಥಾನದಲ್ಲಿ ಶನಿಗೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡುವುದರಿಂದ ಕಷ್ಟಗಳು ಪರಿಹಾರವಾಗುತ್ತದೆ. 

ಇದನ್ನೂ ಓದಿ :  Garuda Purana: ಗರುಡ ಪುರಾಣದ ಈ ಸಂಗತಿಗಳು ನೀವು ಮುಂದಿನ ಜನ್ಮದಲ್ಲಿ ಏನಾಗುವಿರಿ ಎಂಬುದನ್ನು ಹೇಳುತ್ತವೆ!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News