Gemology: ಈ 4 ರತ್ನಗಳನ್ನು ಧರಿಸಿದ ತಕ್ಷಣ ನಿಮ್ಮ ಅದೃಷ್ಟವೇ ಬದಲಾಗುತ್ತದೆ..!

ರತ್ನದ ಆಯ್ಕೆಯನ್ನು ಸರಿಯಾದ ರೀತಿಯಲ್ಲಿ ಮಾಡಿದರೆ, ಜೀವನದ ಅನೇಕ ಸಮಸ್ಯೆಗಳು ದೂರವಾಗುತ್ತವೆ ಮತ್ತು ಅನೇಕ ಸಂದರ್ಭಗಳಲ್ಲಿ ಶುಭ ಫಲಿತಾಂಶಗಳು ದೊರೆಯುತ್ತವೆ. 

Written by - Puttaraj K Alur | Last Updated : Mar 9, 2022, 05:00 PM IST
  • ಪಚ್ಚೆ ರತ್ನವು ವೃತ್ತಿ ಪ್ರಗತಿ ಜೊತೆಗೆ ಧನಲಾಭಕ್ಕೆ ಉಪಯುಕ್ತವಾಗಿದೆ
  • ನೀಲಮಣಿ ರತ್ನ ಧರಿಸಿದ ವ್ಯಕ್ತಿಗಳು ಬಹುಬೇಗನೆ ಯಶಸ್ಸಿನ ಮೆಟ್ಟಿಲು ಏರುತ್ತಾರೆ
  • ಹುಲಿ ರತ್ನವು ಜೀವನದಲ್ಲಿನ ಅನೇಕ ಸಮಸ್ಯೆಗಳಿಗೆ ಮುಕ್ತಿ ನೀಡುತ್ತದೆ
Gemology: ಈ 4 ರತ್ನಗಳನ್ನು ಧರಿಸಿದ ತಕ್ಷಣ ನಿಮ್ಮ ಅದೃಷ್ಟವೇ ಬದಲಾಗುತ್ತದೆ..! title=
ಈ ರತ್ನಗಳು ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತವೆ

ನವದೆಹಲಿ: ರತ್ನದ ಹರಳುಗಳು ಜೀವನದ ಎಲ್ಲಾ ಅಂಶಗಳ ಮೇಲೆ ಪರಿಣಾಮ ಬೀರುತ್ತವೆ. ಜಾತಕದಲ್ಲಿನ ದುರ್ಬಲ ಗ್ರಹಗಳಿಂದ ಉತ್ತಮ ಫಲಿತಾಂಶ  ಪಡೆಯಲು, ಸರಿಯಾದ ರತ್ನವನ್ನು ಧರಿಸಲು ರತ್ನಶಾಸ್ತ್ರವು(Gemology)ಶಿಫಾರಸು ಮಾಡುತ್ತದೆ. ರತ್ನದ ಆಯ್ಕೆಯನ್ನು ಸರಿಯಾದ ರೀತಿಯಲ್ಲಿ ಮಾಡಿದರೆ, ಜೀವನದ ಅನೇಕ ಸಮಸ್ಯೆಗಳು ದೂರವಾಗುತ್ತವೆ ಮತ್ತು ಅನೇಕ ಸಂದರ್ಭಗಳಲ್ಲಿ ಶುಭ ಫಲಿತಾಂಶಗಳು ದೊರೆಯುತ್ತವೆ. ಇಂದು ನಾವು ವ್ಯಕ್ತಿಯನ್ನು ಶ್ರೀಮಂತರನ್ನಾಗಿ ಮಾಡುವ ಅಂತಹ ರತ್ನಗಳ(Importance Of Ratna)ಬಗ್ಗೆ ತಿಳಿಸಿಕೊಡಲಿದ್ದೇವೆ. ಈ ರತ್ನಗಳನ್ನು ಧರಿಸುವ ಮೊದಲು ನಿಮ್ಮ ಜಾತಕ ತಜ್ಞರಿಗೆ ತೋರಿಸಿ ನೀವು ಅವರ ಸಲಹೆ ಪಡೆಯಬೇಕು.

ಈ ರತ್ನಗಳು ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತವೆ

ಪಚ್ಚೆ ರತ್ನ: ಪಚ್ಚೆ ರತ್ನ(Emerald Gemstone)ವು ಸಮಸ್ಯೆಗಳಿಂದ ರಕ್ಷಿಸಲು ತುಂಬಾ ಪರಿಣಾಮಕಾರಿಯಾಗಿದೆ. ಇದರ ಜೊತೆಗೆ ವೃತ್ತಿ ಪ್ರಗತಿ ಮತ್ತು ಹಣ-ಲಾಭಕ್ಕೆ ಉಪಯುಕ್ತವಾಗಿದೆ. ಈ ರತ್ನವನ್ನು ಧರಿಸುವುದರಿಂದ ಆತ್ಮವಿಶ್ವಾಸ ಮತ್ತು ಬುದ್ಧಿವಂತಿಕೆ ಹೆಚ್ಚಾಗುತ್ತದೆ, ವ್ಯಕ್ತಿತ್ವ ಆಕರ್ಷಕವಾಗುತ್ತದೆ. ವಿಶೇಷವಾಗಿ ಉದ್ಯಮಿಗಳಿಗೆ ಈ ರತ್ನವು ಬಹಳಷ್ಟು ಪ್ರಯೋಜನಗಳನ್ನು ನೀಡುತ್ತದೆ. ಆದರೆ ಪಚ್ಚೆಯೊಂದಿಗೆ ಮುತ್ತು, ಹವಳ ಮತ್ತು ನೀಲಮಣಿ ಧರಿಸಬಾರದು.

ಇದನ್ನೂ ಓದಿ: Sun Transit: ಆರು ದಿನಗಳ ನಂತರ ಸೂರ್ಯನಂತೆ ಹೊಳೆಯಲಿದೆ ಈ 4 ರಾಶಿಯವರ ಅದೃಷ್ಟ

ನೀಲಮಣಿ ರತ್ನ: ನೀಲಮಣಿ(Sapphire Gemstone)ಯನ್ನು ಅತ್ಯಂತ ಪರಿಣಾಮಕಾರಿ ರತ್ನವೆಂದು ಪರಿಗಣಿಸಲಾಗಿದೆ. ತಮ್ಮ ಜಾತಕದಲ್ಲಿ ನೀಲಮಣಿ ರತ್ನವನ್ನು ಹೊಂದಿರುವವರು, ಈ ರತ್ನವನ್ನು ಧರಿಸಿದ ತಕ್ಷಣ ವ್ಯತ್ಯಾಸ ಕಾಣಬಹುದು. ಇಂತಹ ವ್ಯಕ್ತಿಗಳು ವೇಗವಾಗಿ ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತಾರೆ. ಇದು ಶನಿಯ ರತ್ನವಾಗಿದ್ದು, ಸರಿಹೊಂದಿದರೆ ಬಹಳ ಕಡಿಮೆ ಸಮಯದಲ್ಲಿಯೇ ಅದೃಷ್ಟವನ್ನು ಬದಲಾಯಿಸುತ್ತದೆ. ಆದರೆ ನೀಲಮಣಿಯೊಂದಿಗೆ ಮಾಣಿಕ್ಯ, ಹವಳ ಧರಿಸಬಾರದು. ಈ ರತ್ನಗಳ ಸಂಯೋಜನೆಯು ಅಶುಭವೆಂದು ಸಾಬೀತುಪಡಿಸುತ್ತದೆ.

ಹುಲಿ ರತ್ನ: ನೀಲಮಣಿಯಂತೆ ಹುಲಿ ರತ್ನ(Tiger Ratna) ಕೂಡ ಬಹುಬೇಗ ಪರಿಣಾಮವನ್ನು ತೋರಿಸುತ್ತದೆ. ಇದನ್ನು ಧರಿಸುವುದರಿಂದ ಹಣದ ಕೊರತೆ ದೂರವಾಗುತ್ತದೆ ಮತ್ತು ಶೀಘ್ರದಲ್ಲೇ ಧನಲಾಭವಾಗುತ್ತದೆ. ಇದು ಜೀವನದ ಅನೇಕ ತೊಂದರೆಗಳನ್ನು ಸಹ ನಿವಾರಿಸುತ್ತದೆ. ಇದರೊಂದಿಗೆ ಇದು ವೃತ್ತಿಜೀವನದಲ್ಲಿ ಸಾಕಷ್ಟು ಪ್ರಗತಿಯನ್ನು ನೀಡುತ್ತದೆ.

ಇದನ್ನೂ ಓದಿ: ರಾಕ್ಷಸ ಗಣದವರಲ್ಲಿರುತ್ತದೆ ಈ ವಿಶೇಷ ಗುಣ, ಮದುವೆ ವೇಳೆ ಈ ವಿಚಾರದ ಬಗ್ಗೆ ಇರಲಿ ಎಚ್ಚರ

ಜೇಡ್ ಸ್ಟೋನ್(Jade Stone): ಜೇಡ್ ಸ್ಟೋನ್ ಹಣ ಗಳಿಸುವುದರ ಜೊತೆಗೆ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಹಸಿರು ಜೇಡ್ ಕಲ್ಲು ಧರಿಸುವುದು ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಗೆ ತುಂಬಾ ಪ್ರಯೋಜನಕಾರಿ. ಇದು ಗೌರವ-ಹಣ ಸೇರಿದಂತೆ ಎಲ್ಲವನ್ನೂ ತರುತ್ತದೆ.

(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News