Interesting Facts: Tea ಕುರಿತಾದ ಈ ಸ್ವಾರಸ್ಯಕರ ಸಂಗತಿಗಳು ನಿಮಗೆ ತಿಳಿದಿವೆಯೇ?

Interesting Facts: ವಿಶ್ವದಲ್ಲಿ ಚಹಾ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಚಹಾ ಪ್ರಿಯರು ಯಾವಾಗಲೂ ಒಂದು ಕಪ್ ಚಹಾ ಸೇವಿಸಲು ಅವಕಾಶದ ಹುಡುಕಾಟದಲ್ಲಿರುತ್ತಾರೆ. ಆರೋಗ್ಯ ಸರಿಯಾಗಿಲ್ಲ ಎಂದರೆ ಚಹಾ, ಚಳಿ ಹೆಚ್ಚಾಗಿದ್ದರೆ ಹೆಚ್ಚಾಗಿದ್ದರೆ ಚಹಾ, ಕಾವು ಹೆಚ್ಚಾಗಿದ್ದರೆ ಚಹಾ, ಮಳೆ ಬೀಳುತ್ತಿದ್ದಾರೆ ಚಹಾ... ಅಂದರೆ ಪ್ರತಿಯೊಂದು ಸಂದರ್ಭಗಳಲ್ಲಿಯೂ ಕೂಡ ವಿವಿಧ ರೀತಿಯ ಚಹಾ ಇದ್ದೆ ಇದೆ.  

Written by - Nitin Tabib | Last Updated : Jan 16, 2021, 09:56 PM IST
  • ಪಾನಿ ಪುರಿ ನಂತರ ಅತಿ ಹೆಚ್ಚು ಸೇವಿಸಲಾಗುವ ಪಾನೀಯ ಎಂದರೆ ಅದು ಚಹಾ.
  • 'ದಿ ಹೊಂಗ್ ಪಾವೋ' ವಿಶ್ವದ ಅತ್ಯಂತ ದುಬಾರಿ ಟೀ.
  • ವಿಶ್ವದಲ್ಲಿ ಮೊದಲು ಟೀ ಸೇವಿಸಲು ಆರಂಭಿಸಿದವರು ಅಮೆರಿಕನ್ನರು.
Interesting Facts: Tea ಕುರಿತಾದ ಈ ಸ್ವಾರಸ್ಯಕರ ಸಂಗತಿಗಳು ನಿಮಗೆ ತಿಳಿದಿವೆಯೇ? title=
Interesting Facts About Tea (File Tea)

Interesting Facts: ಪಾನಿ ಪೂರಿ ವಿಶ್ವದಲ್ಲಿ ಅತಿ ಹೆಚ್ಚಾಗಿ ಸೇವಿಸಲ್ಪಡುವ ಪಾನೀಯವಾಗಿದೆ ಎಂಬ ಸಂಗತಿ ಎಲ್ಲರಿಗೂ ತಿಳಿದಿದೆ. ಆದರೆ, ಇದಾದ ಬಳಿಕ ಎರಡನೇ ಸ್ಥಾನದಲ್ಲಿ ಚಹಾ ಇರುವುದು ಬಹುತೇಕ ಜನರಿಗೆ ತಿಳಿದಿಲ್ಲ. ತನ್ನ ವಿವಿಧ ಪ್ರಕಾರದ ರುಚಿಗಳ ಕಾರಣ ಹಾಗೂ ಲಾಭಗಳ ಕಾರಣ ಇದು ವಿಶ್ವದ ಅತ್ಯಂತ ಪ್ರಚಲಿತ ಪೇಯ ಪದಾರ್ಥಗಳಲ್ಲಿ ಒಂದಾಗಿದೆ. ಅದರಲ್ಲೂ ವಿಶೇಷ ಎಂದರೆ ಇಡೀ ವಿಶ್ವದಲ್ಲಿ 20 ಸಾವಿರಕ್ಕೂ ಹೆಚ್ಚು ಪ್ರಕಾರದ ಚಹಾ ಸಿದ್ಧಗೊಳ್ಳುತ್ತವೆ ಎಂದರೆ ನೀವೂ ಕೂಡ ನಿಬ್ಬೇರಗಾಗುವಿರಿ. ಅಂದರೆ, ಚಹಾ ಆಯ್ಕೆಗಳ ಒಂದು ದೊಡ್ಡ ಪಟ್ಟಿಯೇ ಇದ್ದು, ಇವುಗಳಲ್ಲಿ ಬಬಲ್ ಟೀ, ಶಾಮೊಮಿಲ್ ಟೀ, ಗ್ರೀನ್ ಟೀ, ಉಲಂಗ್ ಟೀ, ಐಸ್ ಟೀ, ಸ್ವೀಟ್ ಟೀ, ಹರ್ಬಲ್ ಟೀ ಇತ್ಯಾದಿಗಳು ಶಾಮೀಲಾಗಿವೆ. ಹಾಗಾಗರೇ ಬನ್ನಿ ಚಹಾ ಕುರಿತಾದ ಕೆಲ ಸ್ವಾರಸ್ಯಕರ ಸಂಗತಿಗಳನ್ನು ತಿಳಿದುಕೊಳ್ಳೋಣ.

- ವಿಶ್ವದ ಅತ್ಯಂತ ದುಬಾರಿ ಟೀ ಹೆಸರು ' ದಾ-ಹೊಂಗ್ ಪಾವೋ'. ಈ ಚಹಾ ಬೆಲೆ ಸುಮಾರು 8 ಕೋಟಿ ರೂ.ಗಳಾಗಿದೆ. ಇದನ್ನು ವಿಶೇಷ ರೀತಿಯಲ್ಲಿ ತಯಾರಿಸಲಾಗುತ್ತದೆ. ಈ ಚಹಾ ಎಲೆಗಳನ್ನು ಚೀನಾದ ಫುಜಿಯಾನ್ ಪ್ರಾಂತ್ಯದಲ್ಲಿರುವ ವುಯಿ ಪರ್ವತಗಳಿಂದ ತರಲಾಗುತ್ತದೆ.

ಇದನ್ನು ಓದಿ-ಆರೋಗ್ಯವನ್ನು ಸದೃಢಗೊಳಿಸಲು ಸೀಬೆಹಣ್ಣಿನ ಎಳೆಗಳಿಂದ ತಯಾರಿಸಲಾದ ಟೀ ಸೇವಿಸಿ

- ಲಿಪ್ಟನ್ ಟೀ (Tea) ವಿಶ್ವದ ಅತಿ ಹೆಚ್ಚು ಮಾರಾಟವಾಗುವ ಟೀ ಬ್ರಾಂಡ್ ಆಗಿದೆ. ವಿಶ್ವದ 100 ಕ್ಕೂ ಹೆಚ್ಚು ದೇಶಗಳಲ್ಲಿ ಈ ಬ್ರಾಂಡ್ ಮಾರಾಟ ಮಾಡಲಾಗುತ್ತದೆ. 
- ಅಮೆರಿಕನ್ನರು ವಿಶ್ವದಲ್ಲಿ ಮೊಟ್ಟಮೊದಲ ಬಾರಿಗೆ 1904 ರಲ್ಲಿ ಚಹಾ ಸ್ವಾದವನ್ನು ಸವಿದಿದ್ದಾರೆ. ಸೆಂಟ್ ಲೂಯಿ ವರ್ಡ್ ಫೆಯರ್ ವೇಳೆ ವ್ಯಕ್ತಿಯೊಬ್ಬರುತಮ್ಮ ತೋಟದಲ್ಲಿ ಬೆಳೆದ ಚಹಾ ಸ್ಯಾಂಪಲ್ ಪರಿಚಯಿಸಿದ್ದರು. ಇದಾದ ಬಳಿಕ ಇದೆ ವ್ಯಕ್ತಿ ಚಹಾದಲ್ಲಿ ಐಸ್ ಬೆರೆಸಿ ಐಸ್ ಟೀ ಪರಿಚಯಿಸಿದರು ಎನ್ನಲಾಗುತ್ತದೆ.
- ಟಿಬೆಟ್ ಜನರು ಶಕ್ತಿ ಹಾಗೂ ಕ್ಯಾಲೋರಿಗಳನ್ನು ಪಡೆಯಲು ಚಹಾದಲ್ಲಿ ಬೆಣ್ಣೆ ಬೆರೆಸಿ ಸೇವಿಸುತ್ತಾರೆ ಎಂಬ ಸಂಗತಿ ನಿಮಗೆ ತಿಳಿದಿದೆಯೇ?  ಆದರೆ, ಕೆಲ ವಿಶೇಷ ಸಂದರ್ಭಗಳಲ್ಲಿ ಮಾತ್ರ ಅವರು ಈ ರೀತಿಯ ಚಹಾ ಸೇವನೆ ಮಾಡುತ್ತಾರೆ.
- ಟೈಸಿಯೋಗ್ರಾಫಿ ಕುರಿತು ನೀವು ಎಂದಾದರು ಕೇಳಿದ್ದೀರಾ? ಚಹಾ ಎಲೆಗಳ ಬಗ್ಗೆ ಮಾಹಿತಿ ನೀಡುವವರು ಅಥವಾ ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ, ಟೀ ರೀಡಿಂಗ್ ಅನ್ನು ತೈಸಿಯೋಗ್ರಾಫಿ ಎಂದು ಕರೆಯಲಾಗುತ್ತದೆ.

ಇದನ್ನು ಓದಿ-Ginger Tea: ನೀವೂ ಶುಂಠಿ ಟೀ ಪ್ರಿಯರೇ, ಹಾಗಿದ್ದರೆ ಈ ಸುದ್ದಿಯನ್ನು ತಪ್ಪದೇ ಓದಿ!

- ಸೊಳ್ಳೆಗಳನ್ನು ಹಾಗೂ ಹುಳು-ಹುಪ್ಪಡಿಗಳನ್ನು ಓಡಿಸಲು ಕೂಡ ನೀವು ಚಹಾ ಎಲೆಗಳನ್ನು ಬಳಸಬಹುದು. 
- ಸನ್ ಬರ್ನ್ ನಿಂದಾಗುವ ಉರಿತದಿಂದ ಮುಕ್ತಿ ಪಡೆಯಲು ಕೂಡ ನೀವು ಚಹಾ ಎಲೆಗಳನ್ನು ಬಳಸಬಹುದು. ಈ ಎಲೆಗಳಲ್ಲಿ ಕಂಡುಬರುವ ಟ್ಯಾನಿನ್ ಉರಿತ ಕಡಿಮೆ ಮಾಡಲು ಸಹಾಯಕವಾಗಿವೆ.

ಇದನ್ನು ಓದಿ-  ಕರೋನಾ ಸೋಂಕಿನ ಅಪಾಯವನ್ನು ಕಡಿಮೆ ಮಾಡಲಿದೆ 1 ಕಪ್ ಚಹಾ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News