ದಿನಾಂಕ: 06-11-2022 ವಾರ: ಭಾನುವಾರ ತಿಥಿ: ತ್ರಯೋದಶಿ ಯೋಗ: ವಜ್ರ ಕರಣ: ತೈತಲ ನಕ್ಷತ್ರ: ರೇವತಿ ಪಕ್ಷ: ಶುಕ್ಲಪಕ್ಷ
ದಿನಭವಿಷ್ಯ 06-11-2022: ವೃಷಭ ರಾಶಿಯವರಿಗೆ ಶತ್ರುವಿನ ಕಡೆಯವರಿಂದ ಸಮಸ್ಯೆ ಇರಲಿದೆ. ಕಟಕ ರಾಶಿಯವರಿಗೆ ಕೆಲಸದಲ್ಲಿ ಅಡೆತಡೆಗಳು ಇರುತ್ತವೆ. ಭಾನುವಾರದ ನಿಮ್ಮ ರಾಶಿಭವಿಷ್ಯ ಹೇಗಿದೆ ಎಂದು ತಿಳಿಯಿರಿ.
ಮೇಷ ರಾಶಿ: ಸ್ತ್ರೀಯರಿಗೆ ಇಷ್ಟಾರ್ಥ ಸಿದ್ಧಿಯಾಗಲಿದೆ. ಪುರುಷರಿಗೆ ಕೆಲಸದ ನಿಮಿತ್ತ ಪ್ರಯಾಣ. ಮನೆ ಬದಲಾವಣೆ ಸಾಧ‍್ಯತೆ. ಧಾರ್ಮಿಕ ಕಾರ್ಯಕ್ರಮಕ್ಕಗಾಗಿ ಹಣ ಸಹಾಯ ಮಾಡುವ ಸಂಭವ.
ವೃಷಭ ರಾಶಿ: ಶತ್ರುವಿನ ಕಡೆಯವರಿಂದ ನಿಮಗೆ ಸಮಸ್ಯೆ. ಗೌಪ್ಯವಾದ ಸ್ಥಳಗಳಿಗೆ ಭೇಟಿ. ಕೆಲಸ-ಕಾರ್ಯಗಳಲ್ಲಿ ಶುಭವಾಗುವ ಸಂಭವ.
ಮಿಥುನ ರಾಶಿ: ಕೈಗೆ ಬಂದದ್ದು ಬಾಯಿಗೆ ಬರದೇ ಹೋಗಬಹುದು. ನಿಮಗೆ ನರಗಳ ಸಮಸ್ಯೆ ಕಾಡಬಹುದು. ಸಂಗಾತಿಯೊಡನೆ ಕಲಹವಿರುತ್ತದೆ.
ಕಟಕ ರಾಶಿ: ಕೆಲಸದಲ್ಲಿ ಅಡೆತಡೆಗಳು ಇರುತ್ತವೆ. ದೇವರಲ್ಲಿ ಭಕ್ತಿ, ಮನೆಯಲ್ಲಿ ಸ್ವಲ್ಪ ಕಿರಿಕಿರಿ. ತಂದೆಯವರಿಗೆ ಸ್ವಲ್ಪ ತೊಂದರೆ ಆಗಬಹುದು.
ಇದನ್ನೂ ಓದಿ: ಮೀನ ರಾಶಿಗೆ ಗುರುವಿನ ಪ್ರವೇಶ: ಈ 4 ರಾಶಿಯವರ ಅದೃಷ್ಟವೇ ಬದಲಾಗಲಿದೆ, ಹಣದ ಮಳೆಯಾಗಲಿದೆ!
ಮೀನ ರಾಶಿ: ಮಕ್ಕಳಿಗೆ ಶುಭ ಸಮಯ. ಮಂದಗತಿಯಲ್ಲಿ ನಿರ್ಧಾರ ಮಾಡುವ ಸಂಭವ. ವಾಹನ ಸುಖ ಸಿಗಲಿದೆ.
ಸಿಂಹ ರಾಶಿ: ಹೆಣ್ಣುಮಕ್ಕಳಿಂದ ತೊಂದರೆಯಾಗಲಿದೆ. ಶರೀರದಲ್ಲಿ ವಾಯು ಸಂಬಂಧಿ ಕಾಯಿಲೆಗಳು ಆಗಬಹುದು. ಧನಪ್ರಾಪ್ತಿ ಆಗಬಹುದು. ನಾಸ್ತಿಕತೆಯಲ್ಲಿ ಒಲವು.
ಕನ್ಯಾ ರಾಶಿ: ಮನೆರಂಚನೆಗಾಗಿ ಹೆಚ್ಚು ಖರ್ಚು ಮಾಡಲಿದ್ದೀರಿ. ಉತ್ತಮ ಕೆಲಸ ಸಿಗುವ ಸಾಧ್ಯತೆ ಇದೆ. ಕುಟುಂಭದೊಂದಿಗೆ ಭೋಜನ ಕೂಟ, ಮನೆಯಲ್ಲಿ ಸಂತೋಷದ ವಾತಾವರಣ.
ತುಲಾ ರಾಶಿ: ಹೊಸದಾಗಿ ಸಾಲ ಮಾಡುವ ಯೋಚನೆ ಬರಬಹುದು. ಮನೆಯಲ್ಲಿ ಸ್ವಲ್ಪ ಗಲಾಟೆ ಸಾಧ್ಯತೆ. ನಿದ್ರಾಹೀನತೆ ಸಮಸ್ಯೆ ಕಾಡಬಹುದು.
ಇದನ್ನೂ ಓದಿ: Astro Tips: ಈ ರಾಶಿಯವರು ಎಂದಿಗೂ ಕೆಂಪು ದಾರವನ್ನು ಧರಿಸಬಾರದು..!
ವೃಶ್ಚಿಕ ರಾಶಿ: ರಹಸ್ಯ ಕಾರ್ಯಾಚರಣೆ ಮಾಡುವ ಸಂಭವ. ವಿದೇಶದಲ್ಲಿ ಸ್ನೇಹಿತರಾಗುವ ಸಂಭವ. ವಿದೇಶಿ ಸಂಸ್ಕೃತಿಗೆ ಆಕರ್ಷಣೆ.
ಧನು ರಾಶಿ: ಮನಸ್ಸಿನಲ್ಲಿ ನಿಮಗೆ ಗೊಂದಲ ಮೂಡಲಿದೆ. ಮನೆಯಲ್ಲಿ ನೆಮ್ಮದಿಯ ವಾತಾವರಣ ಇರಲಿದೆ. ಹೊಸ ವಿದ್ಯ ಕಲಿಯಲು ಆಸಕ್ತಿ ಮತ್ತು ಕೆಲಸದಲ್ಲಿ ಬಡ್ತಿ ಸಿಗಲಿದೆ.
ಮಕರ ರಾಶಿ: ವಾಸ ಸ್ಥಳದಲ್ಲಿ ಭಯದ ಚಿಂತೆ ಇರುತ್ತದೆ. ಒಡಹುಟ್ಟಿದವರಿಂದ ಸಹಾಯ ಸಿಗಲಿದೆ. ವಿದ್ಯುತ್ ಉಪಕರಣಗಳಿಂದ ತೊಂದರೆ ಸಾಧ‍್ಯತೆ.
ಕುಂಭ ರಾಶಿ: ವ್ಯಾಸಂಗದಲ್ಲಿ ನಿಮಗೆ ಒಳ್ಳೆಯ ಅವಕಾಶ ಮತ್ತು ಯಶಸ್ಸು ಸಿಗುವ ಸಂಭವ. ಧನಪ್ರಾಪ್ತಿಯಾಗಲಿದೆ. ಧೈರ್ಯವಾಗಿ ಮುನ್ನುಗ್ಗುವ ಸಾಹಸ ಪ್ರವೃತ್ತಿ ಬರಲಿದೆ.
- ಆಚಾರ್ಯ ಡಾ.ಮುರುಳಿಧರ್ (digitalguru6655@gmail.com)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.