Horoscope Today: ಈ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ, ಆಸ್ತಿಯಲ್ಲಿ ಲಾಭವಾಗಲಿದೆ

Horoscope Today (05-11-2022): ಮೇಷ ರಾಶಿಯವರ ಆರ್ಥಿಕ ಸ್ಥಿತಿಯು ಉತ್ತಮವಾಗಿರುತ್ತದೆ. ವೃಷಭ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ. ಸೋಮವಾರದ ನಿಮ್ಮ ರಾಶಿಭವಿಷ್ಯ ಹೇಗಿದೆ ಎಂದು ತಿಳಿಯಿರಿ.

Written by - Zee Kannada News Desk | Last Updated : Dec 5, 2022, 05:52 AM IST
  • ವೃಷಭ ರಾಶಿಯವರಿಗೆ ಆಸ್ತಿಯಲ್ಲಿ ಲಾಭವಾಗಲಿದ್ದು, ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ
  • ಸಿಂಹ ರಾಶಿಯ ಜನರ ಆರೋಗ್ಯ ಹದಗೆಡಲಿದ್ದು, ಯಾರಿಗೂ ಸಾಲ ಕೊಡಬೇಡಿ
  • ತುಲಾ ರಾಶಿಯವರಿಗೆ ಸಮಾಜದಲ್ಲಿ ಬಹಳ ಗೌರವ ಸಿಗಲಿದ್ದು, ಉದ್ಯೋಗ ಬದಲಾವಣೆ ಇರುತ್ತದೆ
Horoscope Today: ಈ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ, ಆಸ್ತಿಯಲ್ಲಿ ಲಾಭವಾಗಲಿದೆ title=
ಇಂದಿನ ರಾಶಿಭವಿಷ್ಯ

Astrology Today (05-11-2022): ಮಿಥುನ ರಾಶಿಯವರಿಗೆ ಉದ್ಯೋಗ ಬದಲಾವಣೆ ಬೇಡ. ಸಿಂಹ ರಾಶಿಯವರ ಆರೋಗ್ಯ ಹದಗೆಡಲಿದೆ. ಕನ್ಯಾ ರಾಶಿಯವರು ಕೆಲಸದ ಒತ್ತಡವನ್ನು ತಪ್ಪಿಸಬೇಕು.

ಮೇಷ ರಾಶಿ: ನಿಮ್ಮ ಆರ್ಥಿಕ ಸ್ಥಿತಿಯು ಉತ್ತಮವಾಗಿರುತ್ತದೆ. ಆರೋಗ್ಯದ ಬಗ್ಗೆ ಗಮನ ನೀಡಬೇಕು. ನಿಮ್ಮ ಮಾತುಗಳನ್ನು ನಿಯಂತ್ರಿಸಿ. ದುರ್ಗಾ ದೇವಿಗೆ ಲವಂಗವನ್ನು ಅರ್ಪಿಸಿ.

ಅದೃಷ್ಟದ ಬಣ್ಣ-ಕ್ಯಾರೆಟ್

ವೃಷಭ ರಾಶಿ: ನಿಮಗೆ ಆಸ್ತಿಯಲ್ಲಿ ಲಾಭವಾಗಲಿದೆ. ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ. ಬೇರೆಡೆ ಸಾಲವಾಗಿ ನೀಡಿದ ಹಣವನ್ನು ಮರಳಿ ಪಡೆಯುವಿರಿ. ಅದೃಷ್ಟಕ್ಕಾಗಿ ನಿಮ್ಮ ಪರ್ಸ್‌ನಲ್ಲಿ ಸ್ವಲ್ಪ ಅಕ್ಕಿಯನ್ನು ಇರಿಸಿ.

ಅದೃಷ್ಟದ ಬಣ್ಣ- ನೀಲಿ

ಮಿಥುನ ರಾಶಿ: ಉದ್ಯೋಗ ಬದಲಾವಣೆ ಬೇಡ. ಮದುವೆ ನಿಶ್ಚಯವಾಗಲಿದೆ. ಆರೋಗ್ಯ ಸುಧಾರಿಸಲಿದೆ. ಪಕ್ಷಿಗಳಿಗೆ ಆಹಾರ ನೀಡಿ.

ಅದೃಷ್ಟದ ಬಣ್ಣ- ಆಕಾಶ ನೀಲಿ

ಕರ್ಕಾಟಕ ರಾಶಿ: ನಿಮಗೆ ಹೊಸ ಉದ್ಯೋಗಾವಕಾಶಗಳು ದೊರೆಯಲಿವೆ. ಶೀಘ್ರದಲ್ಲೇ ಮಗುವಿನ ಭಾಗ್ಯ ನಿಮಗೆ ದೊರೆಯಲಿದೆ. ಕೆಂಪು ಚಂದನದ ತಿಲಕವನ್ನು ಹಚ್ಚಿಕೊಳ್ಳುವುದರಿಂದ ಅದೃಷ್ಟ ಕೈಹಿಡಿಯಲಿದೆ.

ಅದೃಷ್ಟದ ಬಣ್ಣ – ಬಿಳಿ

ಇದನ್ನೂ ಓದಿ: Tips For Good Luck: ಅದೃಷ್ಟದ ಬೆಂಬಲ ಸಿಗುತ್ತಿಲ್ಲವೇ, ಮನೆಯಲ್ಲಿನ ಅಕ್ಕಿಯನ್ನು ಬಳಸಿ ಈ ಉಪಾಯ ಮಾಡಿ

ಸಿಂಹ ರಾಶಿ: ನಿಮ್ಮ ಆರೋಗ್ಯ ಹದಗೆಡಲಿದೆ. ಯಾರಿಗೂ ಸಾಲ ಕೊಡಬೇಡಿ. ಕೌಟುಂಬಿಕ ಸಮಸ್ಯೆಗಳು ಕೊನೆಗೊಳ್ಳಲಿವೆ. ದೇವಸ್ಥಾನದಲ್ಲಿ ಗೋಧಿಯನ್ನು ದಾನ ಮಾಡಿ.

ಅದೃಷ್ಟದ ಬಣ್ಣ- ಅರಿಶಿನ

ಕನ್ಯಾ ರಾಶಿ: ನೀವು ದೂರ ಪ್ರಯಾಣ ಹೋಗುವಿರಿ. ಕೆಲಸದ ಒತ್ತಡವನ್ನು ಆದಷ್ಟು ತಪ್ಪಿಸಿ. ಆರ್ಥಿಕ ಲಾಭಗಳು ಕಡಿಮೆಯಾಗಲಿವೆ. ಹಣವನ್ನು ದಾನ ಮಾಡಿ.

ಅದೃಷ್ಟದ ಬಣ್ಣ- ನೇರಳೆ

ತುಲಾ ರಾಶಿ: ಸಮಾಜದಲ್ಲಿ ನಿಮಗೆ ಬಹಳ ಗೌರವ ಸಿಗಲಿದೆ. ಉದ್ಯೋಗ ಬದಲಾವಣೆ ಇರುತ್ತದೆ. ದೂರದ ಪ್ರಯಾಣವನ್ನು ತಪ್ಪಿಸಿ. ಆರೋಗ್ಯದ ದೃಷ್ಟಿಯಿಂದ ಸ್ವಲ್ಪ ಮಜ್ಜಿಗೆ ಸೇವಿಸಿ.

ಅದೃಷ್ಟದ ಬಣ್ಣ - ಬಿಳಿ

ವೃಶ್ಚಿಕ ರಾಶಿ: ನಿಮ್ಮ ಆರೋಗ್ಯವು ಶೀಘ್ರವಾಗಿ ಸುಧಾರಿಸುತ್ತದೆ. ವಾಹನ ಖರೀದಿ ಮಾಡುವಿರಿ. ಕಲಿಕೆಯತ್ತ ಗಮನ ಹರಿಸಿ. ಕೆಂಪು ಬಟ್ಟೆಗಳನ್ನು ದಾನ ಮಾಡಿ.

ಅದೃಷ್ಟದ ಬಣ್ಣ- ಕೆಂಪು

ಇದನ್ನೂ ಓದಿ: Basil Benefits : ಅಪ್ಪಿತಪ್ಪಿಯೂ ಈ ತುಳಸಿಯನ್ನು ಮನೆಯಲ್ಲಿ ನೆಡಬೇಡಿ? ದರಿದ್ರ ಹೆಚ್ಚಾಗುತ್ತದೆ

ಧನು ರಾಶಿ: ಸ್ನೇಹಿತರಿಂದ ನಿಮಗೆ ಗೌರವ ಸಿಗಲಿದೆ. ಯಾರಿಗೂ ಸಾಲ ಕೊಡಬೇಡಿ. ಮಕ್ಕಳಿಂದ ಸಂತಸ ಸಿಗಲಿದೆ. ಸಿಹಿತಿಂಡಿ ತಿಂದ ನಂತರ ಮನೆಯಿಂದ ಹೊರಡಬೇಕು.

ಅದೃಷ್ಟದ ಬಣ್ಣ- ಮರೂನ್

ಮಕರ ರಾಶಿ: ನಿಮಗೆ ಕಣ್ಣಿನ ಸಮಸ್ಯೆ ಕಾಡಲಿದೆ. ಹಳೆಯ ವಿವಾದಗಳಿಂದ ಮುಕ್ತಿ ದೊರೆಯಲಿದೆ. ದೇವರನ್ನು ನಂಬಿ ಭಕ್ತಿಯಿಂದ ಪೂಜಿಸಬೇಕು. ಶಿವಲಿಂಗಕ್ಕೆ ಕಪ್ಪು ಎಳ್ಳನ್ನು ಅರ್ಪಿಸಬೇಕು.

ಅದೃಷ್ಟದ ಬಣ್ಣ- ನೀಲಿ

ಕುಂಭ ರಾಶಿ: ನಿಮಗೆ ವ್ಯವಹಾರದಲ್ಲಿ ಯಶಸ್ಸು ಸಿಗಲಿದೆ. ಆಸ್ತಿ ಖರೀದಿ ಸಾಧ‍್ಯತೆ ಇದೆ. ಹಿರಿಯರ ಸಲಹೆ ಪಡೆಯಿರಿ. ಹನುಮಂತನಿಗೆ ಲಡ್ಡೂಗಳನ್ನು ಅರ್ಪಿಸಿ.

ಅದೃಷ್ಟದ ಬಣ್ಣ- ಕಂದು

ಮೀನ ರಾಶಿ: ನಿಮ್ಮ ಹೊಟ್ಟೆಯ ಸಮಸ್ಯೆ ಕೊನೆಗೊಳ್ಳುತ್ತದೆ. ಸಮಯಕ್ಕೆ ಸರಿಯಾಗಿ ಮನೆಗೆ ತಲುಪಿ. ಕೆಲಸದ ಕ್ಷೇತ್ರದಲ್ಲಿ ಬದಲಾವಣೆಗಳಿರಬಹುದು. ಅರಿಶಿನವನ್ನು ದಾನ ಮಾಡಿ.

ಅದೃಷ್ಟದ ಬಣ್ಣ- ಮರೂನ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News