ತಪ್ಪು ಮಾಡುವುದರಲ್ಲಿ ಎತ್ತಿದ ಕೈ ಈ ರಾಶಿಯವರು , ನಷ್ಟ ಅನುಭವಿಸಿದ ನಂತರವೇ ಕಲಿಯುತ್ತಾರೆ ಬುದ್ದಿ

ಈ 5 ರಾಶಿಯ (Zodiac sign) ಜನರು ತಪ್ಪುಗಳಿಂದ ಪಾಠಗಳನ್ನು ಕಲಿಯುವ ಬದಲು ಇನ್ನು ಹೆಚ್ಚು ನಾಶವನ್ನು ತಂದೊಡ್ಡಿ ಕೊಳ್ಳುತ್ತಾರೆ  

Written by - Ranjitha R K | Last Updated : Nov 30, 2021, 07:17 PM IST
  • ಜ್ಯೋತಿಷ್ಯದಲ್ಲಿ ರಾಶಿಗೆ ಅನುಗುಣವಾಗಿ ಜನರ ಗುಣ ಲಕ್ಷಣಗಳನ್ನು ಹೇಳಲಾಗುತ್ತದೆ
  • ಕೆಲವರು ಇತರರ ತಪ್ಪುಗಳಿಂದ ಪಾಠಗಳನ್ನು ಕಲಿಯುತ್ತಾರೆ.
  • ಆದರೆ ಕೆಲವರು ಎಷ್ಟೇ ತಪ್ಪು ಮಾಡಿದರೂ ಸುಧಾರಿಸುವುದಿಲ್ಲ.
ತಪ್ಪು ಮಾಡುವುದರಲ್ಲಿ ಎತ್ತಿದ ಕೈ ಈ ರಾಶಿಯವರು , ನಷ್ಟ ಅನುಭವಿಸಿದ ನಂತರವೇ ಕಲಿಯುತ್ತಾರೆ ಬುದ್ದಿ

ನವದೆಹಲಿ : ಮನುಷ್ಯರೆಂದರೆ ಮಳೆ ತಪ್ಪು ಮಾಡುವುದು ಸಹಜ.  ಕೆಲವರು ತಮ್ಮ ತಪ್ಪುಗಳಿಂದ ಪಾಠ ಕಲಿತು ಮುಂದೆ ಸಾಗುತ್ತಾರೆ. ಕೆಲವರು ಇತರರ ತಪ್ಪುಗಳಿಂದ ಪಾಠಗಳನ್ನು ಕಲಿಯುತ್ತಾರೆ. ಆದರೆ ಕೆಲವರು ಎಷ್ಟೇ ತಪ್ಪು ಮಾಡಿದರೂ   ಸುಧಾರಿಸುವುದಿಲ್ಲ. ಜ್ಯೋತಿಷ್ಯದಲ್ಲಿ ರಾಶಿಗೆ ಅನುಗುಣವಾಗಿ ಜನರ ಗುಣ ಲಕ್ಷಣಗಳನ್ನು ಹೇಳಲಾಗುತ್ತದೆ. ಈ ರಾಶಿಯವರು ತಮ್ಮ ತಪ್ಪುಗಳಿಂದ ಭಾರೀ ನಷ್ಟ ಅನುಭವಿಸಿದ ನಂತರವೇ ಪಾಠ ಕಲಿಯುತ್ತಾರೆ ಎಂದು ಹೇಳಲಾಗಿದೆ.  

ಈ 5 ರಾಶಿಯ (Zodiac sign) ಜನರು ತಪ್ಪುಗಳಿಂದ ಪಾಠಗಳನ್ನು ಕಲಿಯುವ ಬದಲು ಇನ್ನು ಹೆಚ್ಚು ನಾಶವನ್ನು ತಂದೊಡ್ಡಿ ಕೊಳ್ಳುತ್ತಾರೆ. ಅವರು ಇತರರ ಮಾತನ್ನು ಸುಲಭವಾಗಿ ಕೇಳುವುದಿಲ್ಲ. ತಮಗೆ ಬೇಕಾದಂತೆ ನಡೆದುಕೊಂಡು, ನಂತರ ದೊಡ್ಡ ನಷ್ಟವನ್ನು ಅನುಭವಿಸುತ್ತಾರೆ.   

ಮೇಷ ರಾಶಿ : ಮೇಷ ರಾಶಿಯವರು (Aries) ಯಾವುದೇ ಕೆಲಸ ಮಾಡುವ ಮುನ್ನ ಯೋಚಿಸುವುದಿಲ್ಲ. ಈ ಕಾರಣದಿಂದ ಆಗಾಗ ತಪ್ಪು ಮಾಡುತ್ತಲೇ ಇರುತ್ತಾರೆ. ಪದೇ ಪದೇ ತಪ್ಪುಗಳನ್ನು ಮಾಡುತ್ತಾರೆ. ತಮ್ಮ ತಪ್ಪನ್ನು ತಿದ್ದಿಕೊಳ್ಳುವುದೇ ಇಲ್ಲ.  

ಇದನ್ನೂ ಓದಿ : Palmistry: ಹಸ್ತದ ಈ ಗೆರೆಗಳು ನಿಮ್ಮನ್ನು ಶ್ರೀಮಂತರನ್ನಾಗಿಸುತ್ತವೆ, ಹೇಗೆಂದು ತಿಳಿಯಿರಿ

ಮಿಥುನ: ಮಿಥುನ ರಾಶಿಯ (Gemini) ಜನರು ಯಾವಾಗಲೂ ಸಂದಿಗ್ಧ ಸ್ಥಿತಿಯಲ್ಲಿರುತ್ತಾರೆ. ಈ ಕಾರಣದಿಂದಾಗಿ, ಅವರು ಅನೇಕ ವಿಷಯಗಳಲ್ಲಿ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ತಮ್ಮ ಕೆಲಸದಲ್ಲಿ ವಿಫಲರಾಗುತ್ತಾರೆ. ಅವರು ಯಶಸ್ವಿಯಾಗುವವರೆಗೂ ತಪ್ಪುಗಳನ್ನು ಮಾಡುತ್ತಲೇ ಇರುತ್ತಾರೆ. 

ಕರ್ಕಾಟಕ: ಕರ್ಕ ರಾಶಿಯವರು (Cancer) ಜನರನ್ನು ಪರೀಕ್ಷಿಸುವಲ್ಲಿ ತಪ್ಪುಗಳನ್ನು ಮಾಡುತ್ತಾರೆ ನಂತರ  ನಷ್ಟವನ್ನು ಅನುಭವಿಸುತ್ತಾರೆ. ಮೋಸಹೋದ ನಂತರ ಮೋಸ ಮಾಡಿದವರನ್ನು ಕ್ಷಮಿಸುತ್ತಾರೆ. ತಮ್ಮ ಜೀವನದುದ್ದಕ್ಕೂ ಇದನ್ನು ಮಾಡುತ್ತಲೇ ಇರುತ್ತಾರೆ. ಆದರೆ ಜನರನ್ನು ಬಹಳ ಬೇಗನೆ ನಂಬುವ ಅಭ್ಯಾಸವನ್ನು ಬದಲಾಯಿಸುವುದಿಲ್ಲ. 

ಇದನ್ನೂ ಓದಿ: ಬಹಳ ಭಾವನಾತ್ಮಕವಾಗಿರುತ್ತಾರೆ ಈ ರಾಶಿಯವರು, ಪ್ರೇಮ ಜೀವನದ ಮೇಲೆ ಆಗಲಿದೆ ಪರಿಣಾಮ

ಕುಂಭ ರಾಶಿ : ಕುಂಭ ರಾಶಿಯ (Aquarius) ಜನರು ತುಂಬಾ ಅಹಂ ಸ್ವಭಾವದವರು. ಅವರು ಇತರರ ಮಾತು ಕೇಳಲು ಇಷ್ಟಪಡುವುದಿಲ್ಲ.  ನ್ನು ಕೇಳಲು ಅಥವಾ ಪಾಲಿಸಲು ಇಷ್ಟಪಡುವುದಿಲ್ಲ. ಅವರು ಸಾಮಾನ್ಯವಾಗಿ ದೊಡ್ಡ ನಷ್ಟವನ್ನು ಅನುಭವಿಸುತ್ತಾರೆ.  ಅಷ್ಟೇ ಅಲ್ಲ, ಒಂದೇ ಕೆಲಸವನ್ನು ಮಾಡುವುದರಲ್ಲಿ ಅನೇಕ ತಪ್ಪುಗಳನ್ನು ಮಾಡುತ್ತಲೇ ಇರುತ್ತಾರೆ. ಅಹಂಕಾರಕ್ಕೆ ಬಿದ್ದು ಇತರರ ಸಹಾಯವನ್ನು ಕೇಳುವುದಿಲ್ಲ. 

ಮೀನ: ಮೀನ ರಾಶಿಯವರು (Pisces) ಪ್ರೀತಿಯ ವಿಚಾರದಲ್ಲಿ ಹೆಚ್ಚು ತಪ್ಪುಗಳನ್ನು ಮಾಡುತ್ತಾರೆ. ಇದರಿಂದಾಗಿ ಅವರ ಪ್ರೇಮ ಜೀವನದಲ್ಲಿ ಏರಿಳಿತಗಳು ಬರುತ್ತಲೇ ಇರುತ್ತವೆ. ಆತಂಕಕಾರಿ ಸಂಗತಿಯೆಂದರೆ ಅವರು ಸರಳವಾಗಿ ಸಾಧ್ಯವಾಗದ ಅಪ್ರಾಯೋಗಿಕ ಕೆಲಸಗಳನ್ನು ಮಾಡಲು ಯೋಚಿಸುತ್ತಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ. 

More Stories

Trending News