ಬೆಂಗಳೂರು : ಪ್ರಸ್ತುತ ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ವ್ಯಾಯಾಮದ ಕೊರತೆಯಿಂದಾಗಿ, ದೇಹದಲ್ಲಿ ಬೊಜ್ಜು ಬೆಳೆಯುತ್ತದೆ. ಇದಲ್ಲದೇ ಹೆಚ್ಚು ಹೊತ್ತು ಕುಳಿತಲ್ಲೇ ಕುಳಿತಿರುವುದು ಕೂಡಾ ಸಮಸ್ಯೆಗೆ ಕಾರಣವಾಗಿದೆ. ಸ್ಥೂಲಕಾಯತೆಯು ಸಮಸ್ಯೆಯಿಂದ ಬಳಲುತ್ತಿರುವವರು ಇದರಿಂದ ಪರಿಹಾರ ಪಡೆಯಲು ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ಬೇಸಿಗೆ ದೇಹದ ತೂಕ ಕಳೆದುಕೊಳ್ಳಲು ಬೆಸ್ಟ್ ಸಮಯ ಎಂದು ಹೇಳಲಾಗುತ್ತದೆ. ನೀವು ಕೂಡಾ ವೇಗವಾಗಿ ತೂಕ ಕಳೆದುಕೊಳ್ಳಬೇಕು ಎಂದು ಬಯಸುವುದಾದರೆ ನಿಯಮಿತ ವ್ಯಾಯಾಮ ಮತ್ತು ಸರಿಯಾದ ಆಹಾರದ ಹೊರತಾಗಿ, ಈ 7 ಸೂಪರ್ ಡ್ರಿಂಕ್ಸ್ ಗಳನ್ನು ಪ್ರಯತ್ನಿಸಿ.
ಗ್ರೀನ್ ಟೀ :
ಗ್ರೀನ್ ಟೀ ಉತ್ಕರ್ಷಣ ನಿರೋಧಕವಾಗಿದ್ದು ಅದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಇದರಲ್ಲಿರುವ ಕಡಿಮೆ ಕೆಫೀನ್ ಮತ್ತು ಹೆಚ್ಚಿನ ಜೀವಸತ್ವಗಳು ಮತ್ತು ಖನಿಜಗಳು ಕೊಬ್ಬು ಕರಗಿ ದೇಹ ಸಂನಗಾಗಳು ಸಹಾಯ ಮಾಡುತ್ತದೆ.
ಇದನ್ನೂ ಓದಿ : ಕಿಡ್ನಿ ಸ್ಟೋನ್ ಇದ್ದವರು ನಿತ್ಯ ಈ ಹಣ್ಣನ್ನು ತಿಂದರೆ ಔಷಧಿಯ ಅಗತ್ಯವೇ ಇರುವುದಿಲ್ಲ
ಜೀರಿಗೆ ನೀರು :
ಜೀರಿಗೆ ನೀರು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಲು ಉಪಯೋಗಿಸಬಹುದಾದ ಮನೆ ಮದ್ದು. ಜೀರಿಗೆ ಕಾಳುಗಳಲ್ಲಿರುವ ಥೈಮೋಲ್ ಎಂಬ ಪೋಷಕಾಂಶವು, ಜಠರದ ಗ್ರಂಥಿಗಳ ಸ್ರವಿಸುವಿಕೆಯನ್ನು ಹೆಚ್ಚಿಸುತ್ತದೆ. ಜೀರ್ಣಕ್ರಿಯೆ ಸರಿಯಾಗಿದ್ದರೆ ಚಯಾಪಚಯ ಕ್ರಿಯೆ ಉತ್ತಮವಾಗಿರುತ್ತದೆ. ಹೀಗಾದಾಗ ತೂಕ ಇಳಿಕೆ ಸುಲಭವಾಗುತ್ತದೆ.
ಸೌತೆಕಾಯಿ ನೀರು :
ಸೌತೆಕಾಯಿ ನೀರು ಶುದ್ಧತೆ, ತಂಪು ಮತ್ತು ನಿರ್ವಿಶೀಕರಣದ ಸಂಕೇತವಾಗಿದೆ. ಬೇಸಿಗೆ ರಿಫ್ರೆಶ್ ಡ್ರಿಂಕ್ಸ್ ತಯಾರಿಸುವುದಾದರೆ ಒಂದು ಲೋಟ ಸೌತೆಕಾಯಿ ನೀರಿಗಿಂತ ಉತ್ತಮ ಆಯ್ಕೆ ಮತ್ತೊಂದಿಲ್ಲ. ಇದು ಆರೋಗ್ಯಕ್ಕೆ ಒಳ್ಳೆಯದು ತೂಕ ಇಳಿಕೆಗೂ ಸಹಕಾರಿ.
ನಿಂಬೆ ರಸ :
ನಿಂಬೆ ರಸ ದೇಹದಿಂದ ವಿಷಕಾರಿ ವಸ್ತುಗಳನ್ನು ಹೊರ ಹಾಕಲು ಸಹಾಯ ಮಾಡುತ್ತದೆ. ದೇಹದಲ್ಲಿರುವ ಹೆಚ್ಚುವರಿ ಕೊಬ್ಬನ್ನು ಕೂಡಾ ಬರ್ನ್ ಮಾಡುತ್ತದೆ. ಇದರಿಂದಾಗಿ ಸುಲಭವಾಗಿ ತೂಕ ಕಡಿಮೆಯಾಗುತ್ತದೆ. ಅಲ್ಲದೆ, ಇದು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಹೆಚ್ಚು ಪರಿಣಾಮಕಾರಿಯಾಗಿದೆ.
ಇದನ್ನೂ ಓದಿ : Curry Leaves: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿಂದ್ರೆ ಈ 5 ಕಾಯಿಲೆ ಬರುವುದಿಲ್ಲ
ಮಜ್ಜಿಗೆ :
ಮಜ್ಜಿಗೆ ಬೇಸಿಗೆಯ ದಿನದಲ್ಲಿ ಸೇವಿಸಲೇ ಬೇಕಾದ ಪಾನೀಯ. ಮಜ್ಜಿಗೆ ಒಂದು ಆರೋಗ್ಯಕರ ಪಾನೀಯವಾಗಿದ್ದು, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದು ಕರುಳಿನ ಮೈಕ್ರೋಬಯೋಟಾವನ್ನು ಸುಧಾರಿಸುವ ಆರೋಗ್ಯಕರ ಬ್ಯಾಕ್ಟೀರಿಯಾವನ್ನು ಹೊಂದಿರುತ್ತದೆ.
ಕಿತ್ತಳೆ ರಸ :
ಈ ಬೇಸಿಗೆಯಲ್ಲಿ ಅತ್ಯುತ್ತಮ ಡಿಟಾಕ್ಸ್ ವಾಟರ್ ಎಂದರೆ ಅದು ಕಿತ್ತಳೆ ರಸ. ಇದು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿದ್ದು, ಚಯಾಪಚಯವನ್ನು ಹೆಚ್ಚಿಸುತ್ತದೆ. ಚಯಾಪಚಯ ಉತ್ತಮಗೊಂಡರೆ ದೇಹ ತೂಕ ಕಳೆದುಕೊಳ್ಳುವುದು ಕಷ್ಟವಲ್ಲ.
ಸೇಬು ಮತ್ತು ಚಕ್ಕೆ ನೀರು :
ಸೇಬಿನಲ್ಲಿ ಅಧಿಕ ಪ್ರಮಾಣದಲ್ಲಿ ಫೈಬರ್ ಇರುತ್ತದೆ. ಚಕ್ಕೆ ದೇಹದ ಚಯಾಪಚಯವನ್ನು ಹೆಚ್ಚಿಸುವ ಉತ್ತಮ ಮಸಾಲೆಯಾಗಿದೆ. ಅದಕ್ಕಾಗಿಯೇ ಸೇಬು ಮತ್ತು ಚಕ್ಕೆ ನೀರಿನೊಂದಿಗೆ ಬೆರೆಸಿ ಸೇವಿಸಿದರೆ, ಚಯಾಪಚಯವು ಉತ್ತಮವಾಗಿರುತ್ತದೆ ಮತ್ತು ಹೊಟ್ಟೆಯು ಹೆಚ್ಚು ಕಾಲದವರೆಗೆ ತುಂಬಿರುತ್ತದೆ.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.