Akshaya Tritiya 2022: ಐವತ್ತು ವರ್ಷಗಳ ಬಳಿಕ ಅಕ್ಷಯ ತೃತೀಯದಂದು ರೂಪುಗೊಳ್ಳುತ್ತಿದೆ ವಿಶೇಷ ಯೋಗ

ಅಕ್ಷಯ ತೃತೀಯ ಮುಹೂರ್ತ: ಆಭರಣಗಳನ್ನು ಕೊಳ್ಳಲು ಮತ್ತು ಯಾವುದೇ ಒಳ್ಳೆಯ ಕೆಲಸಗಳನ್ನು ಆರಂಭಿಸಲು ಅಕ್ಷಯ ತೃತೀಯ ದಿನವನ್ನು ತುಂಬಾ ಒಳ್ಳೆಯ ದಿನ ಎಂದು ಪರಿಗಣಿಸಲಾಗುತ್ತದೆ. 2022ರ ಅಕ್ಷಯ ತೃತೀಯ ದಿನದಂದು, 30 ವರ್ಷಗಳ ನಂತರ, ನಕ್ಷತ್ರಪುಂಜಗಳ ಅತ್ಯಂತ ಮಂಗಳಕರ ಸಂಯೋಜನೆ ರೂಪುಗೊಳ್ಳುತ್ತಿದೆ. ಇದಲ್ಲದೆ, 50 ವರ್ಷಗಳ ನಂತರ ಗ್ರಹಗಳ ಮಹಾನ್ ಯೋಗ ರೂಪುಗೊಳ್ಳುತ್ತಿದೆ. ಹಾಗಾಗಿ ಈ ಬಾರಿಯ ಅಕ್ಷಯ ತೃತೀಯ ಇನ್ನೂ ವಿಶೇಷವಾಗಿದೆ. ಅಕ್ಷಯ ತೃತೀಯ ದಿನದಂದು ಮಾಡಿದ ಕೆಲಸವು ತುಂಬಾ ಫಲಪ್ರದವಾಗಿರುತ್ತದೆ ಎಂಬ ನಂಬಿಕೆ ಇದೆ.

Written by - Yashaswini V | Last Updated : Apr 22, 2022, 12:57 PM IST
  • ಸಂಸ್ಕೃತ ಭಾಷೆಯಲ್ಲಿ "ಅಕ್ಷಯ" ಎಂದರೆ "ಶಾಶ್ವತ" "ತೃತೀಯ" ಎಂದರೆ "ಶುಕ್ಲ ಪಕ್ಷದ ಮೂರನೇ ದಿನ" ಎಂದು ಅರ್ಥ
  • ಹಿಂದೂ ಧರ್ಮದಲ್ಲಿ ಅಕ್ಷಯ ತೃತೀಯವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.
  • ಅಕ್ಷಯ ತೃತೀಯ ದಿನದಂದು ಯಾವುದೇ ಮುಹೂರ್ತವನ್ನು ತೆಗೆದುಕೊಳ್ಳದೆಯೂ ಶುಭ ಕಾರ್ಯವನ್ನು ಮಾಡಬಹುದು.
Akshaya Tritiya 2022: ಐವತ್ತು ವರ್ಷಗಳ ಬಳಿಕ ಅಕ್ಷಯ ತೃತೀಯದಂದು ರೂಪುಗೊಳ್ಳುತ್ತಿದೆ ವಿಶೇಷ ಯೋಗ  title=
Akshaya Tritiya 2022

ಅಕ್ಷಯ ತೃತೀಯ ಮುಹೂರ್ತ: ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯಾವನ್ನು ಅಕ್ಷಯ ತೃತೀಯ ಎಂದು ಕರೆಯಲಾಗುತ್ತದೆ. ಸಂಸ್ಕೃತ ಭಾಷೆಯಲ್ಲಿ "ಅಕ್ಷಯ" ಎಂದರೆ "ಶಾಶ್ವತ" ಎಂದೂ ಮತ್ತು "ತೃತೀಯ" ಎಂದರೆ "ಶುಕ್ಲ ಪಕ್ಷದ ಮೂರನೇ ದಿನ" ಎಂದು ಅರ್ಥ. ಹಿಂದೂ ಧರ್ಮದಲ್ಲಿ ಅಕ್ಷಯ ತೃತೀಯವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿನವನ್ನು ಆಭರಣಗಳನ್ನು ಕೊಳ್ಳಲು, ಹೊಸ ಕೆಲಸ ಆರಂಭಿಸಲು, ವಿವಾಹ, ಗೃಹ ಪ್ರವೇಶ ಮುಂತಾದ ಶುಭ ಕಾರ್ಯಗಳಿಗೆ ತುಂಬಾ ಮಂಗಳಕರ ದಿನ. ಈ ದಿನ ಆರಂಭಿಸುವ ಅಥವಾ ಮಾಡುವ ಯಾವುದೇ ಕೆಲಸದಲ್ಲಿ ಏಳ್ಗೆ, ಸಮೃದ್ಧಿ ಪ್ರಾಪ್ತಿಯಾಗಲಿದೆ ಎಂದು ಹೇಳಲಾಗುತ್ತದೆ. 

ಅಕ್ಷಯ ತೃತೀಯ ದಿನದಂದು ಯಾವುದೇ ಮುಹೂರ್ತವನ್ನು ತೆಗೆದುಕೊಳ್ಳದೆಯೂ ಶುಭ ಕಾರ್ಯವನ್ನು ಮಾಡಬಹುದು. ಈ ಇಡೀ ದಿನ ಶುಭ ಕಾರ್ಯಗಳನ್ನು ಮಾಡಲು ಉತ್ತಮವೆಂದು ಪರಿಗಣಿಸಲಾಗಿದೆ. ಈ ವರ್ಷ ಅಕ್ಷಯ ತೃತೀಯವನ್ನು ಮೇ 3 ರಂದು ಆಚರಿಸಲಾಗುವುದು. 2022ರ ಅಕ್ಷಯ ತೃತೀಯ ದಿನದಂದು, 30 ವರ್ಷಗಳ ನಂತರ, ನಕ್ಷತ್ರಪುಂಜಗಳ ಅತ್ಯಂತ ಮಂಗಳಕರ ಸಂಯೋಜನೆ ರೂಪುಗೊಳ್ಳುತ್ತಿದೆ. ಇದಲ್ಲದೆ, 50 ವರ್ಷಗಳ ನಂತರ ಗ್ರಹಗಳ ಮಹಾನ್ ಯೋಗ ರೂಪುಗೊಳ್ಳುತ್ತಿದೆ. ಹಾಗಾಗಿ ಈ ಬಾರಿಯ ಅಕ್ಷಯ ತೃತೀಯ ಇನ್ನೂ ವಿಶೇಷವಾಗಿದೆ. 

50 ವರ್ಷಗಳ ನಂತರ ಗ್ರಹಗಳ ಮಹಾನ್ ಸಂಯೋಗ:
ಮಂಗಳ ರೋಹಿಣಿ ನಕ್ಷತ್ರಗಳ ಶುಭ ಯೋಗದಲ್ಲಿ ಈ ಬಾರಿಯ ಅಕ್ಷಯ ತೃತೀಯವನ್ನು ಆಚರಿಸಲಾಗುವುದು. ಸುಮಾರು ಮೂರು ದಶಕಗಳ ನಂತರ ನಕ್ಷತ್ರಪುಂಜಗಳ ಇಂತಹ ಮಂಗಳಕರ ಯೋಗ ರೂಪುಗೊಳ್ಳುತ್ತಿದೆ. ಇದಲ್ಲದೆ, ಐದು ದಶಕಗಳ ನಂತರ ಅಕ್ಷಯ ತೃತೀಯ ದಿನದಂದು ಗ್ರಹಗಳ ಮಹಾನ್ ಸಂಯೋಗ ಉಂಟಾಗಲಿದೆ. ಈ ದಿನದಂದು ಗ್ರಹಗಳ ಸ್ಥಾನವು ತುಂಬಾ ವಿಶೇಷವಾಗಿರುತ್ತದೆ ಎನ್ನಲಾಗಿದೆ. 

ಇದನ್ನೂ ಓದಿ- Akshaya Tritiya 2022: ಅಕ್ಷಯ್ ತೃತಿಯಾ ಯಾವಾಗ? ವಿವಾಹಕ್ಕೆ ಅದ್ಭುತ ಯೋಗ

ಅಕ್ಷಯ ತೃತೀಯದಲ್ಲಿ, ಚಂದ್ರ ಗ್ರಹವು ತನ್ನ ಉಚ್ಛ ರಾಶಿಯಾದ ವೃಷಭ ರಾಶಿಯಲ್ಲಿಯೂ ಮತ್ತು ಶುಕ್ರ ಗ್ರಹವು ತನ್ನ ಉಚ್ಛ ರಾಶಿ ಮೀನದಲ್ಲಿ ನೆಲೆಸಲಿದ್ದಾರೆ. ಇದಲ್ಲದೆ, ಶನಿಯು ತನ್ನದೇ ಆದ ಕುಂಭ ರಾಶಿಯಲ್ಲಿ  ಇದ್ದಾನೆ ಮತ್ತು ದೇವಗುರು ಬೃಹಸ್ಪತಿ ತನ್ನದೇ ಆದ ಮೀನ ರಾಶಿಯಲ್ಲಿ ನೆಲೆಸಿರುವರು. ಅಂದರೆ, 4 ಗ್ರಹಗಳು ಅಂತಹ ಅನುಕೂಲಕರ ಸ್ಥಾನದಲ್ಲಿರುವುದು ಬಹಳ ವಿಶೇಷ ಮತ್ತು ಮಂಗಳಕರವಾಗಿದೆ. ಈ ಶುಭ ಸಂಯೋಜನೆಗಳಲ್ಲಿ ಯಾವುದೇ ಮಂಗಳ ಕಾರ್ಯಗಳನ್ನು ಮಾಡಿದರೆ ಉತ್ತಮ ಫಲಿತಾಂಶಗಳು ಪ್ರಾಪ್ತಿಯಾಗಲಿವೆ ಎಂದು ಹೇಳಲಾಗುವುದು.

ಇದನ್ನೂ ಓದಿ- ವಾಸ್ತು ಟಿಪ್ಸ್: ಮನೆಯಲ್ಲಿ ಪ್ರತಿದಿನ ಈ ಐದು ಕೆಲಸ ಮಾಡುವುದರಿಂದ ಆರ್ಥಿಕ ಪ್ರಗತಿ

ಅಕ್ಷಯ ತೃತೀಯದಂದು ನಿಮ್ಮ ಕೈಲಾದದ್ದನು ದಾನ ಮಾಡಿ:
ಅಕ್ಷಯ ತೃತೀಯ ದಿನದಂದು ದಾನ ಮಾಡುವುದರಿಂದ ಬಹಳಷ್ಟು ಪುಣ್ಯ ಸಿಗುತ್ತದೆ ಎಂಬ ನಂಬಿಕೆ ಇದೆ. ಇದಲ್ಲದೆ, ಅಗತ್ಯ ಇರುವವರಿಗೆ ನಿಮ್ಮ ಕೈಲಾದಷ್ಟು ದಾನ ಮಾಡುವುದರಿಂದ ಜೀವನದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಒಳ್ಳೆಯ ಫಲಿತಾಂಶಗಳು ಲಭಿಸಲಿದೆ ಎನ್ನಲಾಗುತ್ತದೆ. ಅಕ್ಷಯ ತೃತೀಯ ದಿನದಂದು ನೀರು ತುಂಬಿದ ಕಲಶದ ಮೇಲೆ ಹಣ್ಣುಗಳನ್ನು ಇಟ್ಟು ದಾನ ಮಾಡುವುದು ತುಂಬಾ ಶ್ರೇಯಸ್ಕರ. ಇದರಲ್ಲಿ ಒಂದು ಕಲಶವನ್ನು ನಿಮ್ಮ ಪೂರ್ವಜರ ಹೆಸರಿನಲ್ಲಿಯೂ ಇನ್ನೊಂದು ಕಲಶವನ್ನು ವಿಷ್ಣುವಿನ ಹೆಸರಿನಲ್ಲಿಯೂ ದಾನ ಮಾಡಬೇಕು. ಈ ರೀತಿ ಮಾಡುವುದರಿಂದ ಪಿತೃ ದೋಷದಿಂದ ಪರಿಹಾರ ದೊರೆಯಲಿದೆ. ಜೊತೆಗೆ ಭಗವಾನ್ ವಿಷ್ಣುವಿನ ಆಶೀರ್ವಾದಕ್ಕೂ ಭಾಜನರಾಗಬಹುದು.  ಇಂತಹ ಮನೆಯಲ್ಲಿ ಸದಾ ಸುಖ-ಶಾಂತಿ, ನೆಮ್ಮದಿ ನೆಲಸುತ್ತದೆ. ಸಂಪತ್ತು ವೃದ್ಧಿಯಾಗುತ್ತದೆ ಎನ್ನಲಾಗುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News