ಜೋತು ಬಿದ್ದ ಶರೀರವನ್ನು ಸ್ಲಿಮ್-ಟ್ರಿಮ್ ಆಗಿಸಲು ಈ ರೀತಿ ಹೆಸರು ಬೆಳೆಯನ್ನು ನಿಮ್ಮ ಊಟದಲ್ಲಿ ಶಾಮೀಲುಗೊಳಿಸಿ!

Weight Loss Tips: ಹೆಸರು ಬೆಳೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಫೈಬರ್ ಅಂಶವಿರುತ್ತದೆ. ಇದನ್ನು ಸೇವಿಸಿದ ಬಳಿಕ ದೀರ್ಘಕಾಲದವರೆಗೆ ನಿಮಗೆ ಹಸಿವಿನ ಅನುಭವ ಉಂಟಾಗುವುದಿಲ್ಲ ಮತ್ತು ನೀವು ಅತಿಯಾಗಿ ತಿನ್ನುವುದನ್ನು ತಪ್ಪಿಸುವಿರಿ.  

Written by - Nitin Tabib | Last Updated : Jul 28, 2023, 07:32 PM IST
  • ತೂಕವನ್ನು ಕಾಪಾಡಿಕೊಳ್ಳಲು ನೀವು ಮೂಂಗ್ ದಾಲ್ ಸೂಪ್ ಅನ್ನು ಸಹ ಸೇವಿಸಬಹುದು. ಇದನ್ನು ತಯಾರಿಸುವುದು ಕೂಡ ತುಂಬಾ ಸುಲಭ.
  • ಇದಕ್ಕಾಗಿ, ನೆನೆಸಿದ ಮೂಂಗ್ ದಾಲ್ಗೆ ಬೆಳ್ಳುಳ್ಳಿ, ಶುಂಠಿ, ಉಪ್ಪು, ಜೀರಿಗೆ, ಇಂಗು ಮತ್ತು ಮಸಾಲೆ ಸೇರಿಸಿ ಮತ್ತು ಕುದಿಸಿ.
  • ನಂತರ ಅದರಲ್ಲಿ ಸ್ವಲ್ಪ ಕರಿಮೆಣಸನ್ನು ಪುಡಿಮಾಡಿ ಹಾಕಿ. ಇದನ್ನು ನಿಯಮಿತವಾಗಿ ಕುಡಿಯುವುದರಿಂದ ತೂಕವನ್ನು ಇಳಿಕೆ ಮಾಡಿಕೊಳ್ಳಬಹುದು.
ಜೋತು ಬಿದ್ದ ಶರೀರವನ್ನು ಸ್ಲಿಮ್-ಟ್ರಿಮ್ ಆಗಿಸಲು ಈ ರೀತಿ ಹೆಸರು ಬೆಳೆಯನ್ನು ನಿಮ್ಮ ಊಟದಲ್ಲಿ ಶಾಮೀಲುಗೊಳಿಸಿ! title=

Moong Dal For Weight Loss: ಗಂಟೆಗಟ್ಟಲೆ ಜಿಮ್‌ನಲ್ಲಿ ಬೆವರು ಹರಿಸಿದರೂ ತೂಕ ಇಳಿಕೆ ಯಾಗುತ್ತಿಲ್ಲ ಎಂದಾದಲ್ಲಿ ನಿಮ್ಮ ಆಹಾರದ ಬಗ್ಗೆ ನೀವು ಗಮನ ಹರಿಸಬೇಕು. ಇದಕ್ಕಾಗಿ ಮೂಂಗ್ ದಾಲ್ ಅಥವಾ ಹೆಸರು ಬೆಳೆಯನ್ನು ನೀವು  ನಿಮ್ಮ ಆಹಾರದಲ್ಲಿ ಸೇರಿಸಿ. ಇದು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ವಿಟಮಿನ್ ಬಿ 6, ವಿಟಮಿನ್ ಸಿ, ಕಬ್ಬಿಣ, ಫೈಬರ್, ಪೊಟ್ಯಾಸಿಯಮ್, ತಾಮ್ರ, ರಂಜಕ, ರೈಬೋಫ್ಲಾವಿನ್, ಮೆಗ್ನೀಸಿಯಮ್ ಮತ್ತು ಇತರ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಸಹ ಸಹಕಾರಿ. ತೂಕ ಇಳಿಕೆಗೂ ಕೂಡ ಸಹಾಯ ಮಾಡಬಲ್ಲದು. ಹೆಸರು ಬೆಳೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಫೈಬರ್ (Lifestyle Tips) ಅಂಶವಿರುತ್ತದೆ. ಇದನ್ನು ಸೇವಿಸಿದ ಬಳಿಕ ದೀರ್ಘಕಾಲದವರೆಗೆ ನಿಮಗೆ ಹಸಿವಿನ ಅನುಭವ ಉಂಟಾಗುವುದಿಲ್ಲ ಮತ್ತು ನೀವು ಅತಿಯಾಗಿ ತಿನ್ನುವುದನ್ನು ತಪ್ಪಿಸುವಿರಿ. ಮೂಂಗ್ ದಾಲ್ ಅನ್ನು ನಿಮ್ಮ ಆಹಾರದಲ್ಲಿ ಹಲವು ವಿಧಗಳಲ್ಲಿ ಸೇರಿಸಿಕೊಳ್ಳಬಹುದು, ಬನ್ನಿ ತಿಳಿಯೋಣ

ಮೂಂಗ್ ದಾಲ್ ಚೀಲಾ
ಮೂಂಗ್ ದಾಲ್ ನ ಚೀಲಾ ತಯಾರಿಸಿ ನೀವು ತಿನ್ನಬಹುದು. ಇದು ತಿನ್ನಲು ತುಂಬಾ ರುಚಿಯಾಗಿರುತ್ತದೆ, ಇದು ಆರೋಗ್ಯಕ್ಕೂ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಇದಕ್ಕಾಗಿ ಹೆಸರು ಬೆಳೆಯನ್ನು ರಾತ್ರಿ ಇಡೀ ನೀರಿನಲ್ಲಿ ನೆನೆಸಿಡಿ. ಬೆಳಗ್ಗೆ ಅದರ ನೀರನ್ನು ಫಿಲ್ಟರ್ ಮಾಡಿ ಮತ್ತು ಬೆಳೆಯನ್ನು     ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಈಗ ಅದನ್ನು ಒಂದು ಬಟ್ಟಲಿನಲ್ಲಿ ಹೊರತೆಗೆಯಿರಿ. ಅದಕ್ಕೆ ಕತ್ತರಿಸಿದ ಈರುಳ್ಳಿ, ಹಸಿಮೆಣಸಿನಕಾಯಿ, ಶುಂಠಿ, ಕೊತ್ತಂಬರಿ ಸೊಪ್ಪು, ಉಪ್ಪು, ಚಾಟ್ ಮಸಾಲ ಸೇರಿಸಿ. ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಬೆರೆಸಿದಾಗ ಉತ್ತಮವಾದ ಹಿಟ್ಟು ಸಿದ್ಧವಾಗುತ್ತದೆ. ಈಗ ಗ್ಯಾಸ್ ಮೇಲೆ ತವೆ ಇಟ್ಟುಕೊಳ್ಳಿ. ತವೆ ಮೇಲೆ ಸ್ವಲ್ಪ ಹಿಟ್ಟನ್ನು ಸುರಿಯಿರಿ ಮತ್ತು ಅದನ್ನು ಎರಡೂ ಬದಿಗಳಿಂದ ಹುರಿದು ಚೀಲ ಮಾಡಿ. ಮೂಂಗ್ ದಾಲ್ ಚೀಲವನ್ನು ಬೆಳಗಿನ ಉಪಾಹಾರಕ್ಕಾಗಿ ಪ್ರತಿದಿನ ಸೇವಿಸಬಹುದು.

ಇದನ್ನೂ ಓದಿ-ನೀವೂ ನಿಮ್ಮ ಕಿವಿಗಳನ್ನು ಸ್ವಚ್ಛಗೊಳಿಸಲು ಕಾಟನ್ ಬಡ್ಸ್ ಬಳಸುತ್ತೀರಾ? ಈ ವರದಿಯನ್ನೊಮ್ಮೆ ಓದಿ!

ಮೂಂಗ್ ದಾಲ್‌ನ ಮೊಳಕೆ ಕಾಳುಗಳು
ನೀವು ಮೊಳಕೆಯೊಡೆದ ಹೆಸರುಬೇಳೆಯನ್ನು ಸಹ ಸೇವಿಸಬಹುದು. ಇದನ್ನು ಮಾಡಲು ಹೆಚ್ಚು ಶ್ರಮ ಬೇಕಾಗುವುದಿಲ್ಲ. ಇದಕ್ಕಾಗಿ ಹೆಸರು ಬೆಳೆಯನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ. ಮರುದಿನ ಅದನ್ನು ಶುದ್ಧ ನೀರಿನಿಂದ ಚೆನ್ನಾಗಿ ಸ್ವಚ್ಛಗೊಳಿಸಿ. ನಿಮಗೆ ಬೇಕಾದರೆ ಮೂಂಗ್ ದಾಲ್ ಚಾಟ್ ಮಾಡಿ ಅದೇ ಸಮಯದಲ್ಲಿ ತಿನ್ನಬಹುದು. ಆದರೆ ನೀವು ಮೊಳಕೆಯೊಡೆದ ಕಾಳನ್ನು ಸೇವಿಸಲು ಬಯಸಿದರೆ, ಅದನ್ನು ಬಟ್ಟೆಯಲ್ಲಿ ಕಟ್ಟಿ 2 ದಿನಗಳವರೆಗೆ ಇರಿಸಿ. ಈಗ ಮೊಳಕೆಯೊಡೆದ ಮೂಂಗ್ ದಾಲ್ ಅನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಳ್ಳಿ. ಕತ್ತರಿಸಿದ ಈರುಳ್ಳಿ, ಟೊಮೆಟೊ, ಸೌತೆಕಾಯಿ, ಹಸಿರು ಮೆಣಸಿನಕಾಯಿ, ನಿಂಬೆ ರಸ, ಕಪ್ಪು ಉಪ್ಪು, ಚಾಟ್ ಮಸಾಲಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅದರ ಮೇಲೆ ಹಸಿರು ಕೊತ್ತಂಬರಿ ಸೊಪ್ಪನ್ನು ಹಾಕಿ ಪ್ರತಿದಿನ ಸೇವಿಸಿ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಸಹ ಆರೋಗ್ಯಕರವಾಗಿರಿಸುತ್ತದೆ ಮತ್ತು ನೀವು ಹೆಚ್ಚು ಹಸಿವನ್ನು ಅನುಭವಿಸುವುದಿಲ್ಲ.

ಇದನ್ನೂ ಓದಿ-ಆರೋಗ್ಯವಂತ-ದಟ್ಟವಾದ ಕಪ್ಪುಕೂದಲು ಪಡೆಯಬೇಕೆ? ಈ ಎಲೆಗಳ ಮಾಸ್ಕ್ ರಾಮಬಾಣ!

ಮೂಂಗ್ ದಾಲ್ ಸೂಪ್
ತೂಕವನ್ನು ಕಾಪಾಡಿಕೊಳ್ಳಲು ನೀವು ಮೂಂಗ್ ದಾಲ್ ಸೂಪ್ ಅನ್ನು ಸಹ ಸೇವಿಸಬಹುದು. ಇದನ್ನು ತಯಾರಿಸುವುದು ಕೂಡ ತುಂಬಾ ಸುಲಭ. ಇದಕ್ಕಾಗಿ, ನೆನೆಸಿದ ಮೂಂಗ್ ದಾಲ್ಗೆ  ಬೆಳ್ಳುಳ್ಳಿ, ಶುಂಠಿ, ಉಪ್ಪು, ಜೀರಿಗೆ, ಇಂಗು ಮತ್ತು ಮಸಾಲೆ ಸೇರಿಸಿ ಮತ್ತು ಕುದಿಸಿ. ನಂತರ ಅದರಲ್ಲಿ ಸ್ವಲ್ಪ ಕರಿಮೆಣಸನ್ನು ಪುಡಿಮಾಡಿ ಹಾಕಿ. ಇದನ್ನು ನಿಯಮಿತವಾಗಿ ಕುಡಿಯುವುದರಿಂದ ತೂಕವನ್ನು ಇಳಿಕೆ ಮಾಡಿಕೊಳ್ಳಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News