ವಯಸ್ಸಿಗೆ ಅನುಗುಣವಾಗಿ ರಕ್ತದೊತ್ತಡ ಹೇಗಿರಬೇಕು?

ಸಾಮಾನ್ಯವಾಗಿ ಜನರು 120/80 ಅನ್ನು ಸಾಮಾನ್ಯ ರಕ್ತದೊತ್ತಡ ಎಂದು ಪರಿಗಣಿಸುತ್ತಾರೆ. ಆದರೆ ಇದು ವಯಸ್ಸಿನ ಪ್ರಕಾರ ಪುರುಷರು ಮತ್ತು ಮಹಿಳೆಯರಲ್ಲಿ ಬದಲಾಗುತ್ತದೆ.  

Written by - Ranjitha R K | Last Updated : Nov 8, 2022, 02:49 PM IST
  • ಒತ್ತಡದ ಜೀವನಶೈಲಿಯಿಂದಾಗಿ ಜನರು ರಕ್ತದೊತ್ತಡದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
  • ದೇಹದಲ್ಲಿ ನಿಜವಾಗಿಯೂ ರಕ್ತದೊತ್ತಡ ಹೇಗಿರಬೇಕು ?
  • 120/80 ಸಾಮಾನ್ಯ ರಕ್ತದೊತ್ತಡವೇ?
 ವಯಸ್ಸಿಗೆ ಅನುಗುಣವಾಗಿ ರಕ್ತದೊತ್ತಡ ಹೇಗಿರಬೇಕು?  title=
Blood ressure (file photo)

ಬೆಂಗಳೂರು : ಒತ್ತಡದ ಜೀವನಶೈಲಿಯಿಂದಾಗಿ ಹೆಚ್ಚಿನ ಜನರು ರಕ್ತದೊತ್ತಡದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕೆಲವರು ಅಧಿಕ ರಕ್ತದೊತ್ತಡದಿಂದ ಮತ್ತು ಕೆಲವರು ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಆದರೆ, ದೇಹದಲ್ಲಿ ನಿಜವಾಗಿಯೂ ರಕ್ತದೊತ್ತಡ ಹೇಗಿರಬೇಕು? ಸಾಮಾನ್ಯವಾಗಿ ಜನರು 120/80 ಅನ್ನು ಸಾಮಾನ್ಯ ರಕ್ತದೊತ್ತಡ ಎಂದು ಪರಿಗಣಿಸುತ್ತಾರೆ. ಆದರೆ, ಇದು ವಯಸ್ಸಿನ ಪ್ರಕಾರ ಪುರುಷರು ಮತ್ತು ಮಹಿಳೆಯರಲ್ಲಿ ಬದಲಾಗುತ್ತದೆ. ಆದ್ದರಿಂದ ವಯಸ್ಸಿಗೆ ಅನುಗುಣವಾಗಿ ಪುರುಷರು ಮತ್ತು ಮಹಿಳೆಯರ ರಕ್ತದೊತ್ತಡ ಹೇಗಿರಬೇಕು  ನೋಡೋಣ. 

120/80 ಸಾಮಾನ್ಯ ರಕ್ತದೊತ್ತಡವೇ? :
ಸಾಮಾನ್ಯವಾಗಿ ಜನರು 120/80 ಸಾಮಾನ್ಯ ರಕ್ತದೊತ್ತಡ ಎಂದು  ಪರಿಗಣಿಸುತ್ತಾರೆ. ಆದರೆ, ಆರೋಗ್ಯ ತಜ್ಞರ ಪ್ರಕಾರ ಇದು ವಯಸ್ಸಿಗೆ ಅನುಗುಣವಾಗಿ ಬದಲಾಗುತ್ತದೆ. ವಯಸ್ಸಿನ ಆಧಾರದ ಮೇಲೆ ಸಾಮಾನ್ಯ ರಕ್ತದೊತ್ತಡವು 90/60 ರಿಂದ 145/90ರ ನಡುವೆ ಇರಬಹುದು. ಆದರೂ  ಇದು ದೈಹಿಕ ಸ್ಥಿತಿ ಮತ್ತು ಆರೋಗ್ಯ ಸ್ಥಿತಿಯನ್ನು ಅವಲಂಬಿಸಿರುತ್ತದೆ.

ಇದನ್ನೂ ಓದಿ : Milk Benefits : ನಿತ್ಯ ರಾತ್ರಿ ಹಾಲಿಗೆ ಈ ವಸ್ತು ಬೆರೆಸಿ ಕುಡಿಯಿರಿ! ಆಮೇಲೆ ಮ್ಯಾಜಿಕ್‌ ನೋಡಿ

ಸಾಮಾನ್ಯ ರಕ್ತದೊತ್ತಡ ಹೇಗಿರಬೇಕು? :
ತಜ್ಞರ ಪ್ರಕಾರ, ಪುರುಷರಲ್ಲಿ ರಕ್ತದೊತ್ತಡದ ವ್ಯಾಪ್ತಿಯು 90/60 ರಿಂದ 145/90 ವರೆಗೆ ಇರುತ್ತದೆ. ನವಜಾತ ಶಿಶುಗಳ ರಕ್ತದೊತ್ತಡ 90/60, 6 ತಿಂಗಳಿಂದ 2 ವರ್ಷದ ಮಕ್ಕಳು 100/70, 18 ವರ್ಷದೊಳಗಿನ ಮಕ್ಕಳು 120/80 ರಕ್ತದೊತ್ತಡ, 40 ವರ್ಷ ವಯಸ್ಸಿನವರೆಗೆ ರಕ್ತದೊತ್ತಡ 135/80 ಮತ್ತು ಅದಕ್ಕಿಂತ ಹೆಚ್ಚಿನ ಜನರ ರಕ್ತದೊತ್ತಡ 145/90 ವರೆಗೆ ಇರುತ್ತದೆ.

ಬಾಲ್ಯದಲ್ಲಿ, ಹುಡುಗಿಯರ ರಕ್ತದೊತ್ತಡವು ಹುಡುಗರಂತೆಯೇ ಇರುತ್ತದೆ. ಹದಿಹರೆಯದ ನಂತರ, ಹುಡುಗಿಯರ ರಕ್ತದೊತ್ತಡವು ಹುಡುಗರಿಗಿಂತ ಸ್ವಲ್ಪ ಕಡಿಮೆ ಆಗುತ್ತದೆ. ಆದರೆ ಋತುಬಂಧದ ನಂತರ, ಮಹಿಳೆಯರಲ್ಲಿ ರಕ್ತದೊತ್ತಡವು ಪುರುಷರಿಗಿಂತ ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ, ಪುರುಷರು ಮತ್ತು ಮಹಿಳೆಯರ ವಯಸ್ಸಿನೊಂದಿಗೆ, ರಕ್ತದೊತ್ತಡದ ವ್ಯಾಪ್ತಿಯು ಸಹ ಹೆಚ್ಚಾಗುತ್ತದೆ. ಆದರೆ, ಇದು ಸಂಪೂರ್ಣವಾಗಿ ಆರೋಗ್ಯ ಸ್ಥಿತಿಯನ್ನು ಅವಲಂಬಿಸಿರುತ್ತದೆ. 

ಇದನ್ನೂ ಓದಿ : Heart Attack Symptoms: ಹೃದಯಾಘಾತದ ಮೊದಲು ದೇಹದಲ್ಲಿ ಕಾಣಿಸುತ್ತವೆ ಈ ಲಕ್ಷಣಗಳು.. ನಿರ್ಲಕ್ಷಿಸದಿರಿ!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News