ಇಂದಿನಿಂದ ಡಿಸೆಂಬರ್ 3 ರವರೆಗೆ 4 ರಾಶಿಯವರ ಸರ್ವ ಇಚ್ಛೆ ಈಡೇರಿಸುತ್ತಾನೆ ಬುಧ .!

ಬುಧವು ಬಹಳ ಕಡಿಮೆ ಸಮಯದ ಅಂತರದಲ್ಲಿ ರಾಶಿಯನ್ನು ಬದಲಿಸುತ್ತಾನೆ. ಆದರೆ ಈ ಗ್ರಹದ ರಾಶಿ ಪರಿವರ್ತನೆ ಮಾತ್ರ ಪ್ರತಿಯೊಂದು ರಾಶಿಯ ಮೇಲೆ ದೊಡ್ಡ ಪ್ರಭಾವ ಬೀರುತ್ತದೆ. 

Written by - Ranjitha R K | Last Updated : Nov 14, 2022, 02:49 PM IST
  • ಬುಧ ಗ್ರಹವನ್ನು ಗ್ರಹಗಳ ರಾಜಕುಮಾರ ಎಂದು ಹೇಳಲಾಗುತ್ತದೆ.
  • ಬುಧವು ಬಹಳ ಕಡಿಮೆ ಸಮಯದ ಅಂತರದಲ್ಲಿ ರಾಶಿಯನ್ನು ಬದಲಿಸುತ್ತಾನೆ.
  • ಈ ರಾಶಿಯ ಮೇಲೆ ಬುಧ ಸಂಕ್ರಮಣದ ಶುಭ ಪರಿಣಾಮ
ಇಂದಿನಿಂದ ಡಿಸೆಂಬರ್ 3 ರವರೆಗೆ  4 ರಾಶಿಯವರ ಸರ್ವ ಇಚ್ಛೆ ಈಡೇರಿಸುತ್ತಾನೆ ಬುಧ .!    title=
Mercury Transit effects (file photo)

ಬೆಂಗಳೂರು : ವೈದಿಕ ಜ್ಯೋತಿಷ್ಯದಲ್ಲಿ, ಬುಧ ಗ್ರಹವನ್ನು ಗ್ರಹಗಳ ರಾಜಕುಮಾರ ಎಂದು ಹೇಳಲಾಗುತ್ತದೆ. ಇದು ಬುದ್ಧಿವಂತಿಕೆ, ಸಂಪತ್ತು, ವ್ಯವಹಾರ, ಸಂವಹನದ ಅಂಶವಾಗಿದೆ. ಬುಧವು ಬಹಳ ಕಡಿಮೆ ಸಮಯದ ಅಂತರದಲ್ಲಿ ರಾಶಿಯನ್ನು ಬದಲಿಸುತ್ತಾನೆ. ಆದರೆ, ಈ ಗ್ರಹದ ರಾಶಿ ಪರಿವರ್ತನೆ ಮಾತ್ರ ಪ್ರತಿಯೊಂದು ರಾಶಿಯ ಮೇಲೆ ದೊಡ್ಡ ಪ್ರಭಾವ ಬೀರುತ್ತದೆ. ಇಂದು, ಬುಧ ಸಂಕ್ರಮಿಸುವ ಮೂಲಕ ವೃಶ್ಚಿಕ ರಾಶಿಯನ್ನು ಪ್ರವೇಶಿಸಿದ್ದಾನೆ. ಇದು 4 ರಾಶಿಯ ಜನರ ಮೇಲೆ ಬಹಳ ಮಂಗಳಕರ ಪರಿಣಾಮವನ್ನು  ಉಂಟು ಮಾಡುತ್ತದೆ. 

ಈ ರಾಶಿಯ ಮೇಲೆ ಬುಧ ಸಂಕ್ರಮಣದ ಶುಭ ಪರಿಣಾಮ :
ಕರ್ಕಾಟಕ ರಾಶಿ : ಬುಧ ಗ್ರಹದ ರಾಶಿ ಪರಿವರ್ತನೆಯು ಕರ್ಕಾಟಕ ರಾಶಿಯವರಿಗೆ ಸುವರ್ಣ ದಿನಗಳನ್ನು ತೆರೆದಿಡುತ್ತದೆ. ವೃತ್ತಿಯಲ್ಲಿ ಪದೋನ್ನತಿ ಹೊಂದಬಹುದು. ಆದಾಯ ಹೆಚ್ಚಾಗಲಿದೆ. ವ್ಯಾಪಾರದಲ್ಲಿ ಲಾಭ ಇರುತ್ತದೆ. 

ಇದನ್ನೂ ಓದಿ : Pushya Nakshtra 2022: ಇಂದು ಈ ವಸ್ತುಗಳ ಖರೀದಿಯಿಂದ ಅಪಾರ ಸಂಪತ್ತು, ಸಮೃದ್ಧಿ ಪ್ರಾಪ್ತಿ

ಕನ್ಯಾ ರಾಶಿ : ಬುಧ ಸಂಕ್ರಮಣದಿಂದ ಕನ್ಯಾ ರಾಶಿಯವರ ಉತ್ಸಾಹ ಮತ್ತು ಶೌರ್ಯ ಹೆಚ್ಚುತ್ತದೆ. ಕೆಲಸದಲ್ಲಿ ಯಶಸ್ಸು ಸಿಗಲಿದೆ. ವಿದೇಶ ಪ್ರವಾಸಕ್ಕೆ ಹೋಗಬೇಕಾಗಬಹುದು. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ. 

ವೃಶ್ಚಿಕ ರಾಶಿ : ಬುಧನು ತನ್ನ ರಾಶಿಯನ್ನು ಬದಲಾಯಿಸಿದ ನಂತರ ವೃಶ್ಚಿಕ ರಾಶಿಯನ್ನು ಪ್ರವೇಶಿಸಿರುವುದರಿಂದ ವೃಶ್ಚಿಕ ರಾಶಿಯವರ ಮೇಲೆ ಬುಧ ಸಂಕ್ರಮಣದ ಗರಿಷ್ಠ ಪರಿಣಾಮ ಇರುತ್ತದೆ. ಈ ರಾಶಿಯ ಜನರು ವ್ಯಾಪಾರದಲ್ಲಿ ಹೆಚ್ಚಿನ ಲಾಭವನ್ನು ಪಡೆಯಬಹುದು. ಆರ್ಥಿಕ ಲಾಭವಾಗಲಿದೆ.  ಕುಟುಂಬದಲ್ಲಿ ಸಂತೋಷ ಇರುತ್ತದೆ. 

ಇದನ್ನೂ ಓದಿ : Chanakya Niti: ಒಂದು ಸಣ್ಣ ತಪ್ಪು ನಿಮ್ಮ ಯಶಸ್ಸಿಗೆ ಅಡ್ಡಿಯಾಗಬಹುದು, ಎಚ್ಚರ!

ಮೀನ ರಾಶಿ : ಬುಧ ಸಂಕ್ರಮಣವು ಮೀನ ರಾಶಿಯವರ ಅದೃಷ್ಟವನ್ನು ಹೆಚ್ಚಿಸಲಿದೆ.  ಈ ರಾಶಿಯವರು ಪ್ರತೀ ಕೆಲಸದಲ್ಲಿಯೂ ಯಶಸ್ಸು ಪಡೆಯಲಿದ್ದಾರೆ. ಅದೃಷ್ಟದ ನೆರವಿನಿಂದ ಎಲ್ಲಾ ಕೆಲಸಗಳು ನೆರವೇರುತ್ತವೆ. ವೃತ್ತಿ ಜೀವನದಲ್ಲಿ ದೊಡ್ಡ ಮಟ್ಟದ ಲಾಭವಾಗುವುದು.  ವ್ಯಾಪಾರದಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಆದಾಯ ದೊರೆಯಲಿದೆ. ವಿವಾಹ ಯೋಗಗಳು  ಕೂಡಿ ಬರುವುದು. 

 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News