Shraddha Walker murder case : ಶ್ರದ್ಧಾ ಕೊಲೆ ಪ್ರಕರಣ ರಾಷ್ಟ್ರ ರಾಜಧಾನಿಯನ್ನು ಬೆಚ್ಚಿ ಬೀಳಿಸಿದೆ. ಇತ್ತ ಮಗಳನ್ನು ಕಳೆದುಕೊಂಡಿರುವ ತಂದೆಯ ನೋವು ಮುಗಿಲು ಮುಟ್ಟಿದೆ. ಇದೀಗ ಶ್ರದ್ಧಾ ವಾಕರ್ ಅವರ ತಂದೆ ವಿಕಾಸ್ ವಾಕರ್, ತನ್ನ ಮಗಳ ಹಂತಕನಿಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೆ, ಈ ಘಟನೆಯ ಹಿಂದೆ “ಲವ್ ಜಿಹಾದ್” ಇದೆ ಎಂದು ಶಂಕಿಸಿದ್ದಾರೆ.
ಎಎನ್ಐ ಜೊತೆ ಮಾತನಾಡಿದ ಅವರು, ನನ್ನ ಮಗಳ ಸಾವಿನ ಹಿಂದೆ ʼನಾನು ಲವ್ ಜಿಹಾದ್ʼ ಕೈವಾಡ ಇದೆ. ಅಫ್ತಾಬ್ಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸುತ್ತೇನೆ. ದೆಹಲಿ ಪೊಲೀಸರು ಮತ್ತು ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ನಾನು ನಂಬುತ್ತೇನೆ ಎಂದು ವಿಕಾಸ್ ವಾಕರ್ ಹೇಳಿದ್ದಾರೆ. ಇನ್ನು ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಕುರಿತು ದೆಹಲಿ ಪೊಲೀಸರು ಚುರುಕು ತನಿಖೆ ನಡೆಸುತ್ತಿದ್ದಾರೆ. ಫುಡ್ ಬ್ಲಾಗ್ ಕಾಲ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದ ಅಫ್ತಾಬ್ನನ್ನು ಬಂದಿಸಿದ್ದಾರೆ. ಅಲ್ಲದೆ ಶ್ರದ್ಧಾಳನ್ನು ಕೊಲ್ಲವ ಸಂಚಿನ ಭಾಗವಾಗಿ ದೆಹಲಿಯ ಛತ್ತರ್ಪುರ ಪ್ರದೇಶದಲ್ಲಿ ಫ್ಲಾಟ್ ಅನ್ನು ಬಾಡಿಗೆಗೆ ಪಡೆದಿದ್ದನೇ ಎನ್ನುವ ಕುರಿತು ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ.
ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಪೊಲೀಸ್ ಮೂಲಗಳ ಪ್ರಕಾರ, 2022 ರಲ್ಲಿ ದೆಹಲಿಗೆ ಸ್ಥಳಾಂತರಗೊಳ್ಳುವ ಮೊದಲು, ದಂಪತಿಗಳು 2019 ರಿಂದ ಸಂಬಂಧವನ್ನು ಹೊಂದಿದ್ದರು. ಅವರು ಕೆಲವು ಸಮಯ ಮಹಾರಾಷ್ಟ್ರದಲ್ಲಿ ತಂಗಿದ್ದರು. ಅಲ್ಲದೆ, ವಿವಿಧ ಸ್ಥಳಗಳಿಗೆ ಭೇಟಿ ನೀಡುತ್ತಿದ್ದರು ಎನ್ನಲಾಗಿದೆ.
ಪೊಲೀಸರ ಪ್ರಕಾರ, ಅವರು ಮಾರ್ಚ್-ಏಪ್ರಿಲ್ನಲ್ಲಿ ಹಿಲ್ಸ್ ಸ್ಟೇಷನ್ಗಳಿಗೆ ಹೋಗಿದ್ದರು. ಇಬ್ಬರೂ ಮೇ ತಿಂಗಳಲ್ಲಿ ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದರು. ವರದಿಗಳ ಪ್ರಕಾರ, ಹಿಮಾಚಲ ಪ್ರದೇಶಕ್ಕೆ ಹೋಗಿದ್ದಾಗ ಅಫ್ತಾಬ್ಗೆ ವ್ಯಕ್ತಿಯೊಬ್ಬನ ಭೇಟಿಯಾಗಿತ್ತು. ಅದೇ ವ್ಯಕ್ತಿಯ ದೆಹಲಿ ಫ್ಲಾಟ್ನಲ್ಲಿ ಇಬ್ಬರೂ ತಂಗಿದ್ದರು. ಅಲ್ಲಿಯೂ ಜಗಳ ಮುಂದುವರೆದಿತ್ತು. ನಂತರ ಆ ಫ್ಯಾಟ್ ಬಿಟ್ಟು ಛತ್ತರ್ಪುರದಲ್ಲಿ ಅಫ್ತಾಬ್ ಫ್ಲಾಟ್ ಅನ್ನು ಬಾಡಿಗೆಗೆ ಪಡೆದರು ಎನ್ನಲಾಗಿದೆ. ಆಕೆಯನ್ನು ಮೇ 18 ರಂದು ಛತ್ತರ್ಪುರದ ಫ್ಲಾಟ್ನಲ್ಲಿ ಕತ್ತು ಹಿಸುಕಿ ಕೊಲೆ ಮಾಡಲಾಗಿತ್ತು ಎಂದು ವರದಿಯಾಗಿದೆ. ಕೊಲೆಯಾಗುವ ಕೆಲವು ದಿನಗಳ ಹಿಂದೆ ಕೊಠಡಿಯನ್ನು ಬಾಡಿಗೆಗೆ ತೆಗೆದುಕೊಳ್ಳಲಾಗಿತ್ತು ಎಂದು ಪೊಲೀಸರಿಗೆ ತಿಳಿದು ಬಂದಿದೆ.
ಇದನ್ನೂ ಓದಿ: ಶ್ರದ್ಧಾ ರುಂಡವನ್ನು ಅಫ್ತಾಬ್ ದಿನವೂ ನೋಡುತ್ತಿದ್ದ : ಹೇಗಿತ್ತು ಆ ಕರಾಳರಾತ್ರಿ...!
ಇದೇಲ್ಲ ಮಾಹಿತಿ ಆಧರಿಸಿರುವ ಪೊಲೀಸರಿಗೆ ಶ್ರದ್ಧಾಳನ್ನು ಕೊಲೆ ಮಾಡಲೆಂದೇ ಅಫ್ತಾಬ್ ಪ್ಲಾಟ್ ಖದೀರಿ ಮಾಡಿದ್ದಾನಾ ಎಂಬುದೂ ತನಿಖೆಯ ವಿಷಯವಾಗಿದೆ. ಇನ್ನು ರಾತ್ರಿ 2 ಗಂಟೆಗೆ ಸಮಯದಲ್ಲಿ ಜನ ಸಂಚಾರ ಕಡಿಮೆ ಇರುವ ಕಾರಣ ಶ್ರದ್ಧಾ ಅವರ ದೇಹವನ್ನು ವಿಲೇವಾರಿ ಮಾಡುತ್ತಿದ್ದ ಎಂದು ಆರೋಪಿಯೇ ಬಾಯಿಬಿಟ್ಟಿದ್ದಾನೆ. ಸದ್ಯ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿರುವ ಪ್ರಕರಣ ಇನ್ನೇಲ್ಲಿಗೆ ಹೋಗಿ ಮುಟ್ಟುತ್ತದೆ ಎಂದು ಕಾಯ್ದು ನೋಡಬೇಕಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.