Realme Smartphone: ಕೇವಲ 549 ರೂ.ಗೆ ಖರೀದಿಸಿ 13 ಸಾವಿರ ಮೌಲ್ಯದ ಸ್ಮಾರ್ಟ್‌ಫೋನ್!

ಫ್ಲಿಪ್‌ಕಾರ್ಟ್‌ನಲ್ಲಿ ಸ್ಮಾರ್ಟ್‌ಫೋನ್‌ಗಳ ಖರೀದಿಯ ಮೇಲೆ ಉತ್ತಮ ಕೊಡುಗೆ ಲಭ್ಯವಿದೆ. ಈ ಡೀಲ್‌ನಲ್ಲಿ ನೀವು 1 ಸಾವಿರ ರೂ.ಗಿಂತಲೂ ಕಡಿಮೆ ಬೆಲೆಗೆ ಪ್ರವೇಶ ಮಟ್ಟದ ಸ್ಮಾರ್ಟ್‌ಫೋನ್ ಖರೀದಿಸಬಹುದು.

Written by - Puttaraj K Alur | Last Updated : Nov 17, 2022, 01:03 PM IST
  • ಫ್ಲಿಪ್‌ಕಾರ್ಟ್‌ನಲ್ಲಿ ಸ್ಮಾರ್ಟ್‍ಫೋನ್‍ಗಳ ಮೇಲೆ ಭರ್ಜರಿ ರಿಯಾಯಿತಿ ಲಭ್ಯವಿದೆ
  • 13 ಸಾವಿರ ರೂ. ಬೆಲೆಯ ಸ್ಮಾರ್ಟ್‍ಫೋನ್‍ಅನ್ನು ಕೇವಲ 549 ರೂ.ಗೆ ಖರೀದಿಸಿ
  • Realme C33 ಪ್ರವೇಶ ಮಟ್ಟದ ಸ್ಮಾರ್ಟ್‌ಫೋನ್ ಮೇಲೆ ಭರ್ಜರಿ ಡಿಸ್ಕೌಂಟ್
Realme Smartphone: ಕೇವಲ 549 ರೂ.ಗೆ ಖರೀದಿಸಿ 13 ಸಾವಿರ ಮೌಲ್ಯದ ಸ್ಮಾರ್ಟ್‌ಫೋನ್! title=
Realme C33 ಸ್ಮಾರ್ಟ್‌ಫೋನ್

ನವದೆಹಲಿ: Realme C33 ಪ್ರವೇಶ ಮಟ್ಟದ ಸ್ಮಾರ್ಟ್‌ಫೋನ್ ಆಗಿದ್ದು, ಇದು ಗ್ರಾಹಕರಿಗೆ ತುಂಬಾ ಇಷ್ಟವಾಗಿದೆ. ಬಜೆಟ್ ಬೆಲೆಯ ಈ ಫೋನ್‍ಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ಇದೀಗ ಈ ಸ್ಮಾರ್ಟ್‌ಫೋನ್ ನೀವು ನಂಬಲು ಸಾಧ್ಯವಾಗದಂತಹ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ.

ಹೌದು, realme C33 ಸ್ಮಾರ್ಟ್‍ಫೋನ್‍ ಅತ್ಯಂತ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ಇದರ ಮೇಲೆ ಭರ್ಜರಿ ರಿಯಾಯಿತಿ ದೊರೆಯುತ್ತಿದೆ. ಹೀಗಾಗಿ ಗ್ರಾಹಕರು ಬಿಸಿ ದೋಸೆಯಂತೆ ಈ ಫೋನ್ ಖರೀದಿಸುತ್ತಿದ್ದಾರೆ. ಇಂದು ನಾವು ಈ ಫೋನ್ ಮೇಲೆ ಲಭ್ಯವಿರುವ ಕೊಡುಗೆಗಳ ಬಗ್ಗೆ ವಿವರವಾಗಿ ನಿಮಗೆ ತಿಳಿಸಿಕೊಡಲಿದ್ದೇವೆ.  

ಇದನ್ನೂ ಓದಿ: 48 ಸಾವಿರ ಮೌಲ್ಯದ Oppo ಸ್ಮಾರ್ಟ್‌ಫೋನ್ ಕೇವಲ 17,500 ರೂ.ಗೆ ಲಭ್ಯ

ಆಫರ್ ಏನು?

ಈ ಸ್ಮಾರ್ಟ್‌ಫೋನ್‌ನ ಮೂಲ ಬೆಲೆ 12,999 ರೂ. ಇದೆ. ಕಂಪನಿಯು ಶೇ.23ರಷ್ಟು ರಿಯಾಯಿತಿ ನೀಡುತ್ತಿದೆ. ಈ ಡಿಸ್ಕೌಂಟ್ ಬಳಿಕ ಕೇವಲ 9,999 ರೂ.ಗೆ ಈ ಸ್ಮಾರ್ಟ್‍ಫೋನ್‍ ನಿಮಗೆ ಸಿಗುತ್ತದೆ. ಗ್ರಾಹಕರು ತಮ್ಮ ಬಜೆಟ್‌ಗೆ ತಕ್ಕಂತೆ ಈ ಫೋನ್‍ಅನ್ನು ಸುಲಭವಾಗಿ ಖರೀದಿಸಬಹುದಾಗಿದೆ.

ಭರ್ಜರಿ Exchange Bonus ಲಭ್ಯ

ಈ ಸ್ಮಾರ್ಟ್‌ಫೋನ್ ಮೇಲೆ ರಿಯಾಯಿತಿ ಜೊತೆಗೆ ಭರ್ಜರಿ Exchange Bonus ಸಹ ಲಭ್ಯವಿದೆ. ಈ ಸ್ಮಾರ್ಟ್‌ಫೋನ್ ಖರೀದಿಯ ಮೇಲೆ ಫ್ಲಿಪ್‌ಕಾರ್ಟ್‌ನಲ್ಲಿ ದೊಡ್ಡ ಮೊತ್ತದ ಎಕ್ಸ್‌ಚೇಂಜ್ ಬೋನಸ್ ನಿಮಗೆ ಸಿಗಲಿದೆ. 9,499 ರೂ. ಮೌಲ್ಯದ ಎಕ್ಸ್‌ಚೇಂಜ್ ಬೋನಸ್ ನಿಮಗೆ ದೊರೆಯಲಿದೆ. ಹೀಗೆ ನೀವು ಎಲ್ಲಾ ಆಫರ್‍ಗಳನ್ನು ಬಳಸಿಕೊಂಡು ಈ ಸ್ಮಾರ್ಟ್‍ಫೋನ್ ಖರೀದಿಸಿದಾಗ ಕೇವಲ 549 ರೂ. ಪಾವತಿಸಬೇಕಾಗುತ್ತದೆ.  

ಇದನ್ನೂ ಓದಿ: Trending News: ಅತಿ ಹೆಚ್ಚು ಭಾರತೀಯರು ಬಳಸುವ ಪಾಸ್ವರ್ಡ್ ಯಾವುದು ಗೊತ್ತಾ? ಹೊಸ ಸಂಶೋಧನೆ ಹೇಳಿದ್ದೇನು? 

ಸ್ಮಾರ್ಟ್‍ಫೋನ್ ವೈಶಿಷ್ಟ್ಯತೆಗಳು

ಈ ಸ್ಮಾರ್ಟ್‌ಫೋನ್‌ನಲ್ಲಿ 50 ಮೆಗಾಪಿಕ್ಸೆಲ್ ಕೃತಕ ಬುದ್ಧಿಮತ್ತೆ(Artificial Intelligence) ಕ್ಯಾಮೆರಾವನ್ನು ನೀಡಿದೆ. ಕಂಪನಿಯು ತನ್ನ 50 ಮೆಗಾಪಿಕ್ಸೆಲ್ ಮೋಡ್‌ನ ಕೆಲವು ಮಾದರಿಗಳ ಬಗ್ಗೆ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ Night Modeನಲ್ಲಿಯೂ ಕಾರ್ಯನಿರ್ವಹಿಸುತ್ತದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ನಲ್ಲಿ 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸಹ ಇದೆ, ಇದು AI ಬ್ಯೂಟಿಯನ್ನು ಬೆಂಬಲಿಸುತ್ತದೆ. ಭದ್ರತೆಗಾಗಿ ಈ ಫೋನ್ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್‌ನೊಂದಿಗೆ ಬರುತ್ತದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ 5000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಫೋನ್ 37 ದಿನಗಳ ಸ್ಟ್ಯಾಂಡ್‌ಬೈ ಸಮಯದೊಂದಿಗೆ ಬರುತ್ತದೆ ಎಂದು ಕಂಪನಿ ಹೇಳಿದೆ. ಫೋನ್ ಒಳಗೆ ಬ್ಯಾಟರಿ ಉಳಿಸಲು ಅಲ್ಟ್ರಾ ಸೇವಿಂಗ್ ಮೋಡ್ ಕೂಡ ಇದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News